ಜುಲೈ ೩೧: ರೈತರಿಗೆ ಆನ್‌ಲೈನ್ ತರಬೇತಿ
ವಿಜಯಪುರ: ಜಿಲ್ಲಾ ಕೃಷಿ ತರಬೇತಿ ಕೇಂದ್ರದ ವತಿಯಿಂದ ಜುಲೈ ೩೧ರಂದು ಮಧ್ಯಾಹ್ನ ೧೨ಕ್ಕೆ ‘೨೦೨೪-೨೫ನೇ ಸಾಲಿನ ರೈತರ ಬೆಳೆ ಸಮೀಕ್ಷೆ ಆ್ಯಪ್ ಕುರಿತು ಆನ್‌ಲೈನ್ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಆಸಕ್ತರು ಕ್ಯೂಆರ್ ಕೋಡ್, ಗೂಗಲ್ ಮೀಟ್ ಲಿಂಕ್ ಬಳಸಿ(https://meet.google.com/xyj-juqo-mxy) ತರಬೇತಿಗೆ ಹಾಜರಾಗಬಹುದು, ಹೆಚ್ಚಿನ ಮಾಗಿತಿಗಾಗಿ ಕೃಷಿ ಅಧಿಕಾರಿ ಶ್ರೀಮತಿ ಫಾತೀಮಾ ಬಾನು ಸುತಾರ (ಮೊ:೯೮೮೬೧೩೪೩೧೦) ಸಂಪರ್ಕಿಸಬಹುದೆಂದು ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಉಪ ಕೃಷಿ ನಿರ್ದೇಶಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
