ವಿಜಯಪುರ: ದೇಶದ್ಯಾಂತ ಇಂಡಿಯಾ ಟುಡೆ ಆಂಗ್ಲ ವಾರಪತ್ರಿಕೆ ಮತ್ತು ಎಂ. ಡಿ. ಆರ್. ಎ ಸಂಸ್ಥೆ ಜಂಟಿಯಾಗಿ ನಡೆಸಿದ ವೈದ್ಯಕೀಯ ವಿವಿಗಳ ಸಮೀಕ್ಷೆಯಲ್ಲಿ ಅತ್ಯುತ್ತಮ ವಿವಿ ಗಳ ಪಟ್ಟಿ ಸಿದ್ದಪಡಿಸಿದ್ದು, ದೆಹಲಿಯ ಏಮ್ಸ್ ಸಂಸ್ಥೆ ಪ್ರಥಮ ಸ್ಥಾನ, ಪಾಂಡಿಚೇರಿಯ ಜಿಪ್‌ಮೇರ್ ವಿವಿ ದ್ವಿತೀಯ, ಲಕ್ನೋದ ಕಿಂಗ್ ಜಾರ್ಜ್ ತೃತೀಯ ಸ್ಥಾನ ಹಾಗೂ ಬೆಂಗಳೂರಿನ ನಿಮಾನ್ಸ್ ಚಥುರ್ತ ಸ್ಥಾನ ಪಡೆದುಕೊಂಡಿದೆ. ಇದೇ ಪಟ್ಟಿಯಲ್ಲಿ ಇಡೀ ದೇಶದಲ್ಲಿಯೇ ವಿಜಯಪುರದ ಬಿ.ಎಲ್.ಡಿ.ಇ ಡೀಮ್ಡ್ ವಿವಿ 13ನೇ ಸ್ಥಾನ ಪಡೆದಿರುವುದು ಸಂತಸ ತಂದಿದೆ.
ವೈದ್ಯಕೀಯ ಕ್ಷೇತ್ರದಲ್ಲಿನ ಸಂಶೋಧನೆಗಳು, ವಿಶ್ವವಿದ್ಯಾಲಯ ಅಗತ್ಯ ಮೂಲಭೂತ ಸೌಕರ್ಯಗಳು, ಸುಸಜ್ಜಿತ ಆಸ್ಪತ್ರೆ, ವಿದ್ಯಾರ್ಥಿಗಳ ಕಲಿಕೆ ಕ್ರಮ, ನುರಿತ ಬೋಧಕರು, ರಾಷ್ಟ್ರೀಯ, ಅಂತರ್ ರಾಷ್ಟ್ರೀಯ ಎಲ್ಲ ಮಾನದಂಡಗಳನ್ನು ಅಳವಡಿಸಿಕೊಂಡಿರುವದು ಈ ಸಾಧನೆಗೆ ಕಾರಣವಾಗಿದೆ ಎಂದು ಉಪಕುಲಪತಿ ಡಾ.ಆರ್. ಎಸ್. ಮುಧೋಳ ಹರ್ಷ ವ್ಯಕ್ತಪಡಿಸಿದ್ದಾರೆ.
ಹಿರಿಯ ನಾಗರಿಕರಿಗೆ ಪ್ರತ್ಯೇಕ ಚಿಕಿತ್ಸಾ ವಿಭಾಗಕ್ಕೆ ರಾಜ್ಯ ಸರಕಾರದಿಂದ ಹಾಗೂ ವಿಕಲಚೇತನರಿಗೆ ಪ್ರತ್ಯೇಕ ಕೃತಕ ಅಂಗಾಂಗ ಜೋಡಣೆ ಕೇಂದ್ರಕ್ಕೆ ರಾಜ್ಯ ಹಾಗೂ ಕೇಂದ್ರ ಸರಕಾರದ ಪ್ರಶಸ್ತಿ ದೊರೆತಿದೆ. ಇತ್ತೀಚೆಗೆ ಅತ್ಯಾಧುನಿಕ ವೈಜ್ಞಾನಿಕ ಸೌಲಭ್ಯಗಳನ್ನು ಒಳಗೊಂಡ 150 ಹಾಸಿಗೆಯುಳ್ಳ ಟ್ರಾಮಾ ಸೆಂಟರ್ ಪ್ರಾರಂಭಿಸಲಾಗಿದೆ. ಮುಂಬರುವ ದಿನಗಳಲ್ಲಿ ವೈದ್ಯಕೀಯ ಸಂಶೋಧನೆ, ಕಲಿಕಾ ಕ್ರಮಗಳು ಹಾಗೂ ನಿರಂತರ ಚಿಕಿತ್ಸಾ ಸೌಲಭ್ಯಗಳನ್ನು ಒದಗಿಸುವುದಾಗಿ ಹಾಗೂ ದೇಶದ ಅತ್ಯುತ್ತಮ ವಿವಿಗಳ ಪಟ್ಟಿಯಲ್ಲಿ ಉತ್ತಮ ಸ್ಥಾನ ಪಡೆಯಲು ಸಾಧ್ಯವಾಗಿದೆ.
ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಸಚಿವ, ಬಿ.ಎಲ್.ಡಿ.ಇ ಡೀಮ್ಡ್ ವಿವಿ ಕುಲಾಧಿಪತಿ, ಎಂ.ಬಿ.ಪಾಟೀಲ್, ಆಡಳಿತ ಮಂಡಳಿ ಸದಸ್ಯರು ವಿಶ್ವವಿದ್ಯಾಲಯದ ಸಾಧನೆಗೆ ಹರ್ಷ ವ್ಯಕ್ತಪಡಿಸಿದ್ದಾರೆ.
Subscribe to Updates
Get the latest creative news from FooBar about art, design and business.
ವೈದ್ಯಕೀಯ ವಿವಿಗಳ ಸಮೀಕ್ಷೆ: ದೇಶದಲ್ಲಿ ಬಿ.ಎಲ್.ಡಿ.ಇ ಡೀಮ್ಡ್ ವಿವಿಗೆ 13ನೇ ಸ್ಥಾನ
Related Posts
Add A Comment

