– ಗುಲಾಬಚಂದ ಜಾಧವ
ಜಮಖಂಡಿ: ತಾಲೂಕಿನ ಚಿಕ್ಕಪಡಸಲಗಿ ಗ್ರಾಮದ ಸನಿಹದಲ್ಲೇ ಹರಿಯುತ್ತಿರುವ ಕೃಷ್ಣಾನದಿಯಲ್ಲಿ ಮಂಗಳವಾರ ಸಂಜೆ ಜಲರಾಶಿಯ ವ್ಯಯಾರ ಬಲು ಜೋರಾಗಿದೆ.ಇದರಿಂದ ಶ್ರಮಬಿಂದು ಡ್ಯಾಂ ನೀರಿನಿಂದ ತುಂಬಿ ತುಳುಕುತ್ತಿದೆ. ವಿಜಯಪುರ-ಜಮಖಂಡಿ ಮಧ್ಯೆ ಸಂಪರ್ಕ ಕಲ್ಪಿಸವ ಹಳೆಯದಾದ ಈ ಸೇತುವೆ ಕೆಳಗೆ ಈಗ ಜಲ ವೈಭವದ ಮೋಹಕ ನೋಟ ಹೃನ್ಮನ ತಣಿಸುತ್ತಿದೆ. ಅಪಾರ ಪ್ರಮಾಣದ ನೀರು ಕೃಷ್ಣಾನದಿಯಲ್ಲಿ ಕಂಗೊಳಿಸುತ್ತಿದೆ. ಸೇತುವೆ ಕೆಳಗೆ ನೀರಿನ ಅಲೆಗಳ ಸದ್ದು ಕ್ಷಣಕ್ಷಣವೂ ಹೆಚ್ಚಾಗಿದೆ. ಸೇತುವೆ ಮೇಲೆ ನೀರು ಬರಲು ಇನ್ನೂ ಭಾಗಶಃ 2.5 ಅಡಿ ಮಾತ್ರ ಬಾಕಿ ಇದೆ ಎನ್ನಲಾಗುತ್ತಿದೆ. ರಭಸದಿಂದ ಹರಿಯುತ್ತಿರುವ ನೀರಿನ ಅಲೆಗಳು ಪುಟಿದೆದ್ದು ಸೇತುವೆಗೆ ಅಪ್ಪಳಿಸುತ್ತಿದೆ. ಸೇತುವೆ ಮೇಲೆ ಜಲ ಸಿಂಚನದ “ಸ್ಪ್ರೈ” ಹನಿಗಳ ಚಿತ್ತಾರ ಅಗಾಗ ಮೂಡಿ ಬರುತ್ತಿದ್ದು ನೋಡುಗರ ಕಣ್ಮನ ಹಸಿಗೊಳಿಸಿ ಉಲ್ಲಾಸಮಯದಿಂದ ತೇಲುವಂತೆ ಮಾಡುತ್ತಿದೆ. ಗ್ರಾಮದ ಜಲ ಪ್ರೇಮಿಗಳು ಖುಷಿಯಿಂದ ಸೇತುವೆಯತ್ತ ತೆರಳಿ ಜಲರಾಶಿಯ ವೈವಿಧ್ಯಮಯ ದೃಶ್ಯ ಕಾವ್ಯವನ್ನು ತಮ್ಮ ಕಂಗಳಲ್ಲಿ ಸೆರೆ ಹಿಡಿದು ಸಂತಸದಿಂದ ನಿಟ್ಟುಸಿರು ಬಿಡುತ್ತಿದ್ದಾರೆ. ಅಬ್ಬಬ್ಬಾ ಏನಿದು ಮುಂಗಾರು ಹಂಗಾಮಾದ ಜಲ ಸೊಗಡಿನ ಲೀಲೆ ? ಕೃಷ್ಣೆ ಒಡಲಿನಲ್ಲಿ ಚಿಮ್ಮುತ್ತಿರುವ ಹೊಸ ನೀರಿನ ಸಿಂಗಾರ ಭರಿತ ಅಬ್ಬರ ಅಂತ ಹರಿಯುತ್ತಿರುವ ಹೊಸ ನೀರಿನ ಕಳೆ, ಸೆಲೆಗೆ ಮೂಕ ವಿಸ್ಮಯರಾಗಿ ಫಿದಾಗೊಂಡಿದ್ದಾರೆ. ಮನದಲ್ಲಿ ಈ ಜಲರೂಪದ ಸಮೃದ್ಧಿ ಹರುಷದಿಂದ ಮೇಳೈಸಿಕೊಂಡಿದ್ದಾರೆ. ಮೈದುಂಬಿಕೊಂಡ ಕೃಷ್ಣೆಯ ಒಡಲಿನ ಜಲಪರಿಯ ಗುಣಗಾನ ಗುಣಗುತ್ತಲ್ಲಿದ್ದಾರೆ.
ಜಲ ಪ್ರೇಮಿಗಳಾದ ಬಸವರಾಜ ಅನಂತಪುರ, ಈರಣ್ಣ ದೇಸಾಯಿ ಇಂದು ಮಂಗಳವಾರ ಸಂಜೆ ದೂರದಿಂದಲೇ ಕೃಷ್ಣಾನದಿ ಸೇತುವೆ ಕೆಳಗೆ ಹರಿಯುತ್ತಿರುವ ಜಲ ನರ್ತನದ ರಮಣೀಯ ದೃಶ್ಯಗಳನ್ನು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದು ಪತ್ರಿಕೆಗೆ ಕಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment

