Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಇಂಡಿ: ತಾಲ್ಲೂಕಿನ ತಡವಲಗಾ ಗ್ರಾಮದ ಕೆರೆಗೆ ನೀರು ಹರಿದು ಬಂದ ಹಿನ್ನೆಲೆ ರೈತರು ಹರ್ಷ ವ್ಯಕ್ತ ಪಡಿಸಿದ್ದಾರೆ.ತಾಲೂಕಿನ ತಡವಲಗಾ ಗ್ರಾಮದ ಜೋಡುಗುಡಿ ಹತ್ತೀರ ರಾಷ್ಟ್ರೀಯ ಹೆದ್ದಾರಿ ತಡೆದು ಶುಕ್ರವಾರ ಪ್ರತಿಭಟನೆ ಮಾಡಲಾಗಿತ್ತು. ಜನ- ಜಾನುವಾರುಗಳಿಗೆ ಕುಡಿಯಲು ನೀರು ಇಲ್ಲ. ಈ ಭಾಗದಲ್ಲಿ ಕುಡಿಯುವ ನೀರಿನ ದೊಡ್ಡ ಪ್ರಮಾಣದ ಹಾಹಾಕಾರವಿದ್ದು, ರೈತರು ತುಂಬಾ ಸಂಕಷ್ಟದಲ್ಲಿದ್ದಾರೆ. ಕೂಡಲೇ ಗುತ್ತಿ ಬಸವಣ್ಣ ಮತ್ತು ತಿಡಗುಂದಿ ಶಾಖಾ ಕಾಲುವೆ ಕೊನೆಯ ಭಾಗದ ಕೆರೆಕಟ್ಟೆಗಳಿಗೆ ಹಾಗೂ ಕಾಲುವೆಗಳಿಗೆ ನೀರು ಹರಿಸಬೇಕು ಎಂದು ಪ್ರತಿಭಟನೆ ಮಾಡಲಾಗಿತ್ತು.ತಡವಲಗಾ, ಅರ್ಥಗಾ, ಕೊಟ್ನಾಳ, ನಿಂಬಾಳ, ಸೇರಿದಂತೆ ಇನ್ನಿತರ ಕೆರೆಗಳಿಗೆ ಹಾಗೂ ಗುತ್ತಿ ಬಸವಣ್ಣ ಕಾಲುವೆಯ ಕೊನೆಯ ಭಾಗದ ರೈತರಿಗೆ ರೂಗಿ, ಹಂಜಗಿ, ಚಿಕ್ಕಬೇವನೂರ, ಬೋಳೆಗಾಂವ, ಗಣವಲಗಾ, ತೆನ್ನೆಳ್ಳ್ಳಿಗ್ರಾಮಗಳ ರೈತರಿಗೆ ಹಾಗೂ ಜಾನುವಾರುಗಳಿಗೆನೀರಿಲ್ಲದೆ ಸಾಕಷ್ಟು ತೊಂದರೆ ಉಂಟಾಗುತ್ತಿದೆ ಈಗಕೆರೆಗಳನ್ನು ತುಂಬಿದರೆ ಆಯಾ ಗ್ರಾಮಗಳ ರೈತರಿಗೆ ಅನುಕೂಲವಾಗುತ್ತದೆ ಎಂದು ರೈತರು ತಿಳಿಸಿದರು.ಈ ಸಂದರ್ಭದಲ್ಲಿ ಧರಣಿ ನಿರತ ಸ್ಥಳಕ್ಕೆ ಕೆಬಿಜೆಎನ್‍ಎಲ್ ಅಧಿಕಾರಿ ಮನೋಜಕುಮಾರ ಗಡಬಳ್ಳಿ, ಕಂದಾಯ ಉಪವಿಭಾಗಾಧಿಕಾರಿ ಅಬೀದ್…
ದೇವರಹಿಪ್ಪರಗಿ: ಹುಣಶ್ಯಾಳ ಗ್ರಾಮದ ಕೆರೆಗೆ, ಕೆರೆ ತುಂಬುವ ಯೋಜನೆಯಡಿ ನೀರು ಹರಿಸಿ ಭರ್ತಿ ಮಾಡುವುದರ ಮೂಲಕ ಜನತೆಯ ಬಹುದಿನದ ಬೇಡಿಕೆ ಈಡೇರಿಸುವಂತೆ ರೈತರು, ಸಾರ್ವಜನಿಕರು ಜಿಲ್ಲಾಡಳಿತಕ್ಕೆ ಆಗ್ರಹಿಸಿದ್ದಾರೆ.ತಾಲ್ಲೂಕಿನ ಹುಣಶ್ಯಾಳ ಕೆರೆಗೆ ನೀರು ಹರಿಸುವ ಮೂಲಕ ಈ ಭಾಗದ ಜನ, ಜಾನುವಾರುಗಳ ನೀರಿನ ತಾಪತ್ರಯಕ್ಕೆ ಪರಿಹಾರ ಕಂಡುಕೊಳ್ಳಬಹುದಾಗಿದ್ದು, ಈ ಕುರಿತು ಗ್ರಾಮದ ಮೈನುದ್ದೀನ ಬಾಗವಾನ ಮಾತನಾಡಿ, ನಮ್ಮ ಗ್ರಾಮದ ಕೆರೆ ತುಂಬುವ ಯೋಜನೆ ಜಾರಿಗಾಗಿ ಕಲಕೇರಿಯಲ್ಲಿ ೩೧ ದಿನ ಧರಣಿ ಸತ್ಯಾಗ್ರಹ ಹಾಗೂ ಹೋರಾಟ ಮಾಡಲಾಗಿತ್ತು. ಸತ್ಯಾಗ್ರಹ ಹಾಗೂ ಹೋರಾಟದ ಫಲವಾಗಿ ಅಂದಿನ ಶಾಸಕ ಸೋಮನಗೌಡ ಪಾಟೀಲ ಸಾಸನೂರ ಸ್ಥಳಕ್ಕೆ ಭೇಟಿ ನೀಡಿ, ಕೆರೆ ತುಂಬುವ ಯೋಜನೆಯಡಿ ಕಾರ್ಯಕ್ಕೆ ಮಂಜೂರಾತಿ ದೊರಕಿಸಿ, ಅದ್ದೂರಿಯಾಗಿ ಪೂಜೆ ಕೈಗೊಳ್ಳುವುದರ ಮೂಲಕ ಕಾಮಗಾರಿಗೆ ಚಾಲನೆ ನೀಡಿದರು. ನಂತರ ಕಾಮಗಾರಿ ಪ್ರಾರಂಭವಾಗಿತ್ತು. ಆದರೆ ಏಕಾಏಕಿ ಗುತ್ತಿಗೆದಾರರು ಅರ್ಧಕ್ಕೆ ಬಿಟ್ಟು ಹೋಗಿದ್ದರಿಂದ ಕಾಮಗಾರಿ ಪೂರ್ಣಗೊಳ್ಳದ ಕಾರಣ ಕೆರೆಯಲ್ಲಿ ನೀರು ಬರಲಿಲ್ಲ.ನಂತರ ಶಾಸಕ ರಾಜುಗೌಡ ಪಾಟೀಲರು ಡಿಸೆಂಬರ್ ಅಂತ್ಯದಲ್ಲಿ ಕೆರೆಗೆ ನೀರು…
ಬಸವನಬಾಗೇವಾಡಿ: ಚುಟುಕು ಸಾಹಿತ್ಯ ಪ್ರಕಾರಕ್ಕೆ ಸಲ್ಲಿಸಿದ ಗಣನೀಯ ಸೇವೆಯನ್ನು ಗುರುತಿಸಿ ಕರ್ನಾಟಕ ಚುಟುಕು ಸಾಹಿತ್ಯ ಕೇಂದ್ರ ಸಮಿತಿ ಹುಬ್ಬಳ್ಳಿ ಸ್ಥಳೀಯ ತಾಲೂಕು ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪ್ರಭಾಕರ ಖೇಡದ ಅವರಿಗೆ ಚುಟುಕು ದಾಸೋಹಿ ಪ್ರಶಸ್ತಿಯನ್ನು ಶಿರಸಿಯ ನೆಮ್ಮದಿ ಆವರಣದ ರಂಗಧಾಮದಲ್ಲಿ ಭಾನುವಾರ ಹಮ್ಮಿಕೊಂಡಿದ್ದ 12ನೆಯ ಕರ್ನಾಟಕ ಚುಟುಕು ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮೇಳನದ ಸರ್ವಾಧ್ಯಕ್ಷ ಡಾ. ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಅವರು ನೀಡಿ ಗೌರವಿಸಿದರು.ಈ ಸಂದರ್ಭದಲ್ಲಿ ಗವಿಮಠ ಬಸವಕಲ್ಯಾಣ, ಕಚುಸಾಪ ಸಂಚಾಲಕ ಕೃಷ್ಣಮೂರ್ತಿ ಕುಲಕರ್ಣಿ, ಶಿರಸಿ ಶೈಕ್ಷಣಿಕ ಜಿಲ್ಲಾಧ್ಯಕ್ಷ ಮನೋಹರ ಮೇಲ್ಮನೆ, ಶಿರಸಿ ಜಿಲ್ಲಾ ಸಾಹಿತ್ಯ ಸಂಚಲನಾಧ್ಯಕ್ಷ ಕೃಷ್ಣ ದತ್ತಾತ್ರೇಯ ಪದಕಿ, ಜಿಲ್ಲಾಧ್ಯಕ್ಷ ಜಿ. ಯು. ನಾಯ್ಕ, ಹುಬ್ಬಳ್ಳಿಯ ಕಚುಸಾಪ ಪ್ರಸಾರಂಗ ನಿರ್ದೇಶಕ ಚನ್ನಬಸಪ್ಪ ಧಾರವಾಡ ಶೆಟ್ರು,ತಾಲೂಕು ಅಧ್ಯಕ್ಷ ಮಂಜುನಾಥ್ ಹೆಗಡೆ ಮತ್ತು ಗಣ್ಯಮಾನ್ಯರಿದ್ದರು ಎಂದು ಪ್ರಕಟಣೆ ತಿಳಿಸಿದೆ.
ಬಸವನಬಾಗೇವಾಡಿ: ತಾಲೂಕಿನ ದೇಗಿನಾಳ ಗ್ರಾಮದ ಅಂಬಿಗರ ಚೌಡಯ್ಯ ದೇವಸ್ಥಾನ ಹತ್ತಿರವಿರುವ ಶುದ್ಧ ನೀರಿನ ಘಟಕ ಭಾನುವಾರ ಸಂಜೆ ಅಬ್ಬರದ ಗಾಳಿ-ಮಳೆಗೆ ಸಂಪೂರ್ಣವಾಗಿ ಹಾನಿಯಾಗಿದೆ. ೨೦೧೯-೨೦ ರಲ್ಲಿ ನಿರ್ಮಿಸಲಾದ ಶುದ್ಧ ನೀರಿನ ಘಟಕವು ಅಬ್ಬರದ ಗಾಳಿ-ಮಳೆಗೆ ಸಂಪೂರ್ಣ ಕಿತ್ತುಹೋಗಿದೆ.ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗದ ಎಇಇ ವ್ಹಿ.ಬಿ.ಗೊಂಗಡಿ, ಮಸಬಿನಾಳ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶ್ರೀಶೈಲ ತಳವಾರ ಸೋಮವಾರ ಭೇಟಿ ನೀಡಿ ಪರಿಶೀಲಿಸಿ ಮುಂದಿನ ಕ್ರಮಕ್ಕಾಗಿ ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸಿದ್ದಾರೆ.ಗ್ರಾಮದಲ್ಲಿ ಮೂರು ವಿದ್ಯುತ್ ಕಂಬಗಳು, ದೊಡ್ಡ ಮರಗಳು ಬಿದ್ದಿವೆ. ಗ್ರಾಮದ ಕೆಲ ಕುಟುಂಬದವರು ಹಾಕಿಕೊಂಡು ವಾಸವಾಗಿದ್ದ ಪತ್ರಾಸ್ ಶೆಡ್ ಅಬ್ಬರದ ಗಾಳಿಗೆ ಹಾರಿ ಹೋಗಿವೆ. ಇದರಿಂದಾಗಿ ಈ ಕುಟುಂಬದವರು ಬೀದಿ ಪಾಲಾಗಿದ್ದಾರೆ ಎಂದು ಗ್ರಾಮ ಪಂಚಾಯಿತಿ ಸದಸ್ಯ ದ್ಯಾವನಗೌಡ ಪಾಟೀಲ ಹೇಳಿದರು.ಅಬ್ಬರದ ಗಾಳಿಗೆ ವಿದ್ಯುತ್ ಕಂಬಗಳು ನೆಲಕ್ಕೆ ಉರುಳಿವೆಃ ಪಟ್ಟಣ ಸೇರಿದಂತೆ ವಿವಿಧೆಡೆ ಅಬ್ಬರದ ಗಾಳಿಗೆ ವಿದ್ಯುತ್ ಕಂಬಗಳು ಬಿದ್ದಿವೆ. ಎಷ್ಟು ಕಂಬಗಳು ಎಂಬ ಮಾಹಿತಿ ಇನ್ನೂ ಸಂಪೂರ್ಣವಾಗಿ ತಿಳಿದುಬಂದಿಲ್ಲ. ಮಾಹಿತಿ…
ಬಸವನಬಾಗೇವಾಡಿ: ಪಟ್ಟಣದ ಸೇರಿದಂತೆ ತಾಲೂಕಿನಲ್ಲಿ ಭಾನುವಾರ ಸಂಜೆ ೬.೫೦ ಗಂಟೆಗೆ ಅಬ್ಬರದ ಗಾಳಿ, ಮಿಂಚು-ಸಿಡಿಲಿನೊಂದಿಗೆ ಆರಂಭವಾದ ಮಳೆ ಅರ್ಧ ಗಂಟೆ ಕಾಲಕ್ಕಿಂತಲೂ ಜೋರಾಗಿ ನಂತರ ಜಿಟಿ ಜಿಟಿ ಮಳೆ ರಾತ್ರಿ ೯ ಗಂಟೆಗೆಯವರೆಗೂ ಮಳೆ ಸುರಿಯಿತು.ಪಟ್ಟಣದ ನಂದಿ ಬಡಾವಣೆ ರಸ್ತೆಯಲ್ಲಿರುವ ಮರ ಸೇರಿದಂತೆ ಪಟ್ಟಣ ಸೇರಿದಂತೆ ವಿವಿದೆಢೆ ವಿವಿಧ ಮರಗಳು, ಟೆಂಗಿನ ಮರಗಳು ಅಬ್ಬರದ ಗಾಳಿಗೆ ಧರೆಗುಳಿದಿವೆ. ಅಬ್ಬರದ ಗಾಳಿಗೆ ಕೆಲವೆಡೆ ಶೆಡ್ ಮೇಲಿನ ಪತ್ರಾಸ್ ಗಳು ಹಾರಿ ಹೋದ ವರದಿಯಾಗಿವೆ.ತಾಲೂಕಿನ ಜಾಲಿಹಾಳ ತಾಂಡಾದ ಕಿಸಾನ ಲಿಂಬು ನಾಯಕ ಅವರ ಆಕಳು ಸಿಡಿಲು ಬಡಿದು ಮೃತ ಪಟ್ಟಿದೆ. ಬಸವನಬಾಗೇವಾಡಿಯ ಶಂಕರ ಸಾಬು ಲಮಾಣಿ ಅವರ ದ್ರಾಕ್ಷಿ, ಉಕ್ಕಲಿಯ ಭೀಮಾಬಾಯಿ ಶಂಕರ ರಾಠೋಡ ಅವರ ಲಿಂಬೆ ಬೆಳೆ, ಜಾಲಿಹಾಳ ತಾಂಡಾದ ಪ್ರಕಾಶ ಬೆಣ್ಣೂರ ಅವರ ಟೆಂಗಿನ ಮರಗಳು, ಮನಗೂಳಿಯ ಮಾರುತಿ ದ್ಯಾಮಣ್ಣ ಕಾರಜೋಳ ಅವರ ಪಪ್ಪಾಯ ಗಿಡಗಳು ಗಾಳಿ-ಮಳೆಗೆ ಹಾನಿಯಾಗಿವೆ.ಬಸವನಬಾಗೇವಾಡಿಯ ಪರಸಪ್ಪ ಮುತ್ತಪ್ಪ ಒಡೆಯರ ,ಹುಣಶ್ಯಾಳ ಪಿಬಿಯ ರಾಜಮಾ ರಾಜೇಸಾಬ ಚಪ್ಪರಬಂದ, ಉಕ್ಕಲಿಯ…
ವಿಜಯಪುರ: ಭಾರತದ ಪ್ರಥಮ ಮಾಜಿ ಪ್ರಧಾನಿ ದಿ. ಶ್ರೀ ಪಂಡಿತ ಜವಾಹರಲಾಲ ನೆಹರುಜಿಯವರ 60ನೇ ಪುಣ್ಯತಿಥಿಯನ್ನು ವಿಜಯಪುರ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಆಚರಿಸಲಾಯಿತು.ಪಂಡಿತ ಜವಾಹರಲಾಲ ನೆಹರುಜಿಯವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ಮುಖಂಡರು ಮಾತನಾಡಿ, ಜವಾಹರಲಾಲ ನೆಹರುಜಿಯವರು ದೇಶಕ್ಕಾಗಿ ಮಾಡಿದ ಸೇವೆಯನ್ನು ಸ್ಮರಿಸಿಕೊಳ್ಳಲಾಯಿತು.ಜವಾಹರಲಾಲ ನೆಹರುಜಿಯವರು ಮಕ್ಕಳ ಚಾಚಾ ನೆಹರು ಆಗಿದ್ದರು. ಭಾರತದ ಸ್ವಾತಂತ್ರ್ಯ ಪಡೆದ ಸಮಯದಲ್ಲಿ ಭಾರತದ “ನವಭಾರತ ಶಿಲ್ಪಿ” ಎಂದು ಕರೆಯಲ್ಪಟ್ಟರು. ಅವರೊಬ್ಬ ದೂರದೃಷ್ಠಿಯುಳ್ಳ ನಾಯಕರಾಗಿದ್ದರು. ಜವಾಹರಲಾಲ ನೆಹರುರವರು ದೇಶವನ್ನು ಮುನ್ನಡೆಸಿದ ನೆಹರುರವರ ಸ್ಮರಣೆಗಿಂತ ಭವ್ಯ ಭಾರತದ ಕನಸನ್ನು ನನಸು ಮಾಡುವುದೇ ನಿಜವಾಗಿಯೂ ನಾವೆಲ್ಲರು ಅವರಿಗೆ ತೋರುವ ಕೃತಜ್ಞತೆ. ಮಕ್ಕಳನ್ನು ತುಂಬಾ ಹೃದಯದಿಂದ ಪ್ರೀತಿಸುತ್ತಿದ್ದ ನೆಹರು ಅವರು ತಮ್ಮ ಹುಟ್ಟು ಹಬ್ಬ ನವೆಂಬರ್ ೧೪ ತಾರೀಖನ್ನು ಅವರ ಹೆಸರಿನಲ್ಲಿ ಆಚರಿಸದೇ ಮಕ್ಕಳ ದಿನಾಚರಣೆ ಎಂದು ಆಚರಿಸಲು ಕೋರಿದವರು. ಜವಾಹರಲಾಲ ನೆಹರು ಅವರು ೧೯೨೯ ರಲ್ಲಿ ಮೊದಲ ಬಾರಿಗೆ ಐ.ಎನ್.ಸಿ. ಅಧ್ಯಕ್ಷರಾಗಿದ್ದರು.ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ವೈಜನಾಥ ಕರ್ಪೂರಮಠ, ಚಾಂದಸಾಬ…
ವಿಜಯಪುರ: ಜಿಲ್ಲಾಧಿಕಾರಿ ಟಿ. ಭೂ ಬಾಲನ್ ಅವರು ವಿಜಯಪುರ ನಗರ ವ್ಯಾಪ್ತಿಯ ಭೂತನಾಳ ಗ್ರಾಮದ ಹತ್ತಿರ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಡಿ ನಿರ್ಮಾಣವಾಗುರುವ ಸೈಕ್ಲಿಂಗ್ ವೆಲೋಡ್ರೊಮ್ ಕಾಮಗಾರಿ ಮತ್ತು ನಿರ್ಮಿತಿ ಕೇಂದ್ರದಡಿ ನಿರ್ಮಾಣದ ಡಾರ್ಮಿಟರಿ ಕಾಮಗಾರಿಯನ್ನು ಪರಿಶೀಲನೆ ನಡೆಸಿದರು.ಕೊನೆಯ ಹಂತದಲ್ಲಿರುವ ಸೈಕ್ಲಿಂಗ್ ವೆಲೋಡ್ರೊಮ್ ಕಾಮಗಾರಿಯನ್ನು ಸಂಪೂರ್ಣ ಪರಿಶೀಲನೆ ನಡೆಸಿ, ಈ ಕಾಮಗಾರಿ ಈಗಾಗಲೇ ವಿಳಂಬವಾಗಿದ್ದು, ಬೇಗ ಪೂರ್ಣಗೊಳಿಸಿ , ಅಗಸ್ಟ್ ೧೫ ಸ್ವತಂತ್ರ ದಿನಾಚರಣೆ ಒಳಗಾಗಿ ಉದ್ಘಾಟನೆ ಮಾಡಬೇಕು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ತಾಂತ್ರಿಕ ಅಧಿಕಾರಿಗಳಿಗೆ ಹಾಗೂ ನಿರ್ಮಿತಿ ಕೇಂದ್ರದ ವ್ಯವಸ್ಥಾಪಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.ಈ ಸಂದರ್ಭದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಎಸ್.ಜಿ. ಲೋಣಿ, ನಿರ್ಮಿತಿ ಕೇಂದ್ರದ ವ್ಯವಸ್ಥಾಪಕ ನಿರ್ದೇಶಕರಾದ ಮಲಜಿ, ಸೈಕ್ಲಿಂಗ್ ಆಸೋಸಿಯೇಶನ್ ಅಧ್ಯಕ್ಷರಾದ ರಾಜು ಬಿರಾದಾರ್, ಕಾರ್ಯದರ್ಶಿ ಸಂಜೀವ ಫಡತರೆ, ತರಬೇತುದಾರರದ ಅಲಕಾ ಫಡತರೆ, ಅನಂತ ದೇಸಾಯಿ, ಎಸ್.ಬಿ ಕಡಕಲ್ ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು.
ವಿಜಯಪುರ: ಜಿಲ್ಲಾಸ್ಪತ್ರೆಗೆ ಶನಿವಾರ ಜಿಲ್ಲಾಧಿಕಾರಿ ಟಿ.ಭೂಬಾಲನ್ ಭೇಟಿ ನೀಡಿ ಆಸ್ಪತ್ರೆಯ ಕಾರ್ಯವೈಖರಿ ಹಾಗೂ ಅಲ್ಲಿನ ವ್ಯವಸ್ಥೆ ಬಗ್ಗೆ ಪರಿಶೀಲಿಸಿ ವೈದ್ಯರು ಹಾಗೂ ರೋಗಿಗಳಿಂದ ಆಸ್ಪತ್ರೆಯ ಮಾಹಿತಿ ಪಡೆದುಕೊಂಡರು.ಒಪಿಡಿ, ಆಪರೇಶನ್ ಥೀಯೆಟರ್, ಚಿಕ್ಕಮಕ್ಕಳ ವಿಭಾಗ, ಮೆಡಿಸಿನ್ ವ್ಯವಸ್ಥೆ, ಸರ್ಜರಿ ವಿಭಾಗ, ಅರ್ಥೋಪೆಡಿಸ್, ಕಣ್ಣಿನ ವಿಭಾಗ, ಇಎನ್‌ಟಿ ವಿಭಾಗ, ಪ್ರಯೋಗಾಲಯಕ್ಕೆ ಭೇಟಿ ನೀಡಿ ಪರಿಶೀಲಿಸಿ, ಅಲ್ಲಿನ ಸ್ವಚ್ಚತೆ ಹಾಗೂ ನಿರ್ವಹಣೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಡಾ.ಶಿವಾನಂದ ಮಾಸ್ತಿಹೊಳ್ಳಿ ಅವರು, ಮಕ್ಕಳ ವಿಭಾಗ, ಹೆರಿಗೆ ವಿಭಾಗಗಳಲ್ಲಿ ಕಷ್ಟಕರವಾದ ಚಿಕಿತ್ಸೆಗಳನ್ನು ಮಾಡಿದ ಹಾಗೂ ಪರಿಹರಿಸಿದ ಪ್ರಕರಣಗಳ ಬಗ್ಗೆ ಮಾಹಿತಿ ನೀಡಿದರು.ಹೊಸದಾಗಿ ನಿರ್ಮಾಣವಾಗುತ್ತಿರುವ ೨೫೦ ಹಾಸಿಗೆಯುಳ್ಳ ಆಸ್ಪತ್ರೆಗೆ ಭೇಟಿ ನೀಡಿ ಆದಷ್ಟು ಬೇಗ ನಿರ್ಮಾಣಕಾರ್ಯ ಪೂರ್ಣಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು.ಜಿಲ್ಲಾಸ್ಪತ್ರೆಯಲ್ಲಿ ನಡೆಯುತ್ತಿರುವ ಡಿಎನ್‌ಬಿಯ ತರಬೇತಿಯಲ್ಲಿ ೩೫ ಜನ ವಿದ್ಯಾರ್ಥಿಗಳಿದ್ದು, ಅವರಿಗೆ ಹಾಸ್ಟೇಲ್ ವ್ಯವಸ್ಥೆ ಮಾಡುವಂತೆ ಸೂಚಿಸಿದರು.ಹೋರರೋಗಿಗಳ ವಿಭಾಗದಲ್ಲಿ ಸರತಿ ಸಾಲನ್ನು ತಪ್ಪಿಸಲು ಕ್ಯೂಆರ್ ಕೋಡ್ ಮೂಲಕ ಅಭಾ ಆ್ಯಪ್‌ಮೂಲಕ ನೋಂದಣಿ ಮಾಡುವ ಕಾರ್ಯವೈಖರಿಯನ್ನು ಪರೀಶೀಲಿಸಿ ಸ್ವತಹ…
ಚಡಚಣ: ಸಮೀಪದ ಭೀಮಾನದಿಯ ದಡದಲ್ಲಿರುವ ಹೊಳೆ ಉಮರಾಣಿಯ ಖಾಜಾ ಬಂದೇನವಾಜ ದೇವರ ಉರುಸು ಭಾವೈಕ್ಯತೆಗೆ ಸಾಕ್ಷಿಯಾಗಿದೆ. ಸರ್ವಧರ್ಮೀಯರು ಉರುಸಿನಲ್ಲಿ ಭಾಗಿಯಾಗಿ ತಮ್ಮ ತನುಮನಧನ ಅರ್ಪಿಸಿ ಜಾತ್ರೆಯನ್ನು ಯಶಸ್ವಿಗೊಳಿಸಿದರು. ಸೂಫಿ ಸಂತ ಬಂದೇನವಾಜರು ಪವಾಡ ಪುರುಷರಾಗಿದ್ದರು. ಮಾನವಧರ್ಮ ಜಾಗೃತಿಗಾಗಿ ಊರೂರು ಸಂಚರಿಸುತ್ತಾ ಉಮರಾಣಿಯ ಹೊಳೆಯ ದಡದಲ್ಲಿ ವಿಶ್ರಾಂತಿ ಪಡೆದು ಅಲ್ಲಿಯ ಭಕ್ತರಿಗೆ ಕೆಲವೊಂದು ಪವಾಡ ಮಾಡಿ ತಮ್ಮ ಕುರುಹನ್ನು ಬಿಟ್ಟು ಹೋದರಂತೆ. ಅಂದಿನಿಂದ ಇಂದಿನ ವರೆಗೆ ಗ್ರಾಮಸ್ಥರು ಭಕ್ತಿಭಾವದಿಂದ ಅವರ ಉರುಸನ್ನು ವಿಜೃಂಭಣೆಯಿಂದ ಆಚರಿಸುತ್ತಾ ಬಂದಿರುತ್ತಾರೆ. ಇದು ಗ್ರಾಮಕ್ಕೆ ದೊಡ್ಡ ಜಾತ್ರೆಯಾಗಿದ್ದು, ಎಲ್ಲರೂ ಹಬ್ಬದಂತೆ ಆಚರಿಸುವರು. ಕರ್ನಾಟಕ ಮಹಾರಾಷ್ಟ್ರ ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸುವರು. ಆಗಮಿಸಿದ ಭಕ್ತಾದಿಗಳಿಗೆ ಉರುಸು ಕಮೀಟಿ ಪ್ರಸಾದ ವ್ಯವಸ್ಥೆ ಮಾಡಿದ್ದರು.ಗುರುವಾರ ರಾತ್ರಿ ೮ ಗಂಟೆಗೆ ಸುಣ್ಣ ಲೇಪನ ಹಾಗೂ ವಿದ್ಯುತ್ ಅಲಂಕಾರ ಜರುಗಿತು. ಶುಕ್ರವಾರ ರಾತ್ರಿ ೮ ಗಂಟೆಗೆ ಗಂಧ ಲೇಪನ ಜರುಗಿತು.ಶನಿವಾರ ಮುಂಜಾನೆ ೯ ಗಂಟೆಗೆ ಹೊಸ ಉಮರಾಣಿಯಲ್ಲಿ ಬಸವೇಶ್ವರ ಹರದೇಶಿ ಗೀಗೀ ಮೇಳ ಸಾ||…
ಕಲಕೇರಿ: ಕಾಂಗ್ರೆಸ್ ಪಕ್ಷದಲ್ಲಿ ಸುಮಾರು ೪೦ ವರ್ಷಗಳಿಂದ ತಮ್ಮ ಅನರ್ಘ್ಯ ಸೇವೆ ಸಲ್ಲಿಸಿದ, ಪಕ್ಷದ ಪ್ರಾಮಾಣಿಕ ಕಾರ್ಯಕರ್ತರಾಗಿ ಹಂತ ಹಂತವಾಗಿ ಬೆಳೆದು ೧೫ ವರ್ಷಗಳ ಕಾಲ ಸಿಂದಗಿ ತಾಲೂಕ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ತಳಮಟ್ಟದಲ್ಲಿ ಪಕ್ಷವನ್ನು ಸಂಘಟಿಸಿರುವ ಮತ್ತು ಪಿ.ಎಲ್.ಡಿ ಬ್ಯಾಂಕಿನ ಅಧ್ಯಕ್ಷರಾಗಿ ರೈತಮುಖಿ ಕೆಲಸಗಳನ್ನು ಮಾಡಿ ರೈತರ ಮನ ಗೆದ್ದು ರೈತನಾಯಕರಾಗಿ ಹೊರಹಮ್ಮಿರುವ ಮತ್ತು ೧೯೯೯ ರಲ್ಲಿ ನಡೆದ ವಿಧಾನ ಸಭೆ ಚುನಾವಣೆಯಲ್ಲಿ ಪ್ರಥಮ ಭಾರಿಗೆ ಸ್ಪರ್ಧಿಸಿ ಮೊದಲ ಪ್ರಯತ್ನದಲ್ಲೇ ಸಿಂದಗಿ ಮತಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿ ೫ ವರ್ಷ ಜನಪರ ಕೆಲಸಗಳನ್ನು ಮಾಡಿರುವ ಜನಾನುರಾಗಿಗಳಾದ ಶರಣಪ್ಪ ತಿಪ್ಪಣ್ಣ ಸುಣಗಾರ ಮಾಜಿ ಶಾಸಕರು, ಸಿಂದಗಿ ಇವರನ್ನು ವಿಧಾನಸಭೆಯಿಂದ ವಿಧಾನಪರಿಷತ್ತಿಗೆ ನಡೆಯುವ ಚುನಾವಣೆಗೆ ಆಯ್ಕೆ ಮಾಡಬೇಕು ಎಂದು ಕಲಕೇರಿ ಆದರ್ಶ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳು ಮತ್ತು ಕಾಂಗ್ರೆಸ್ ಮುಖಂಡರು ಆದ ಜಹಾಂಗೀರಬಾಶಾ ಸಿರಸಗಿ ಅವರು ಪಕ್ಷದ ವರಿಷ್ಟರಿಗೆ ಆಗ್ರಹಪಡಿಸಿದ್ದಾರೆ.೨೦೦೮ ರಲ್ಲಿ ವಿಜಯಪುರ ಜಿಲ್ಲೆಯ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿ ೧೨ ವರ್ಷ ಸೇವೆ ಸಲ್ಲಿಸಿದ,…
