ಮುದ್ದೇಬಿಹಾಳ: ತಾಲೂಕಿನ ಕಂದಗನೂರು ಗ್ರಾಮದ ಕಬ್ಬಿನ ಹೊಲಗಳಲ್ಲಿ ಚಿರತೆಯೊಂದು ಅಲೆದಾಡುತ್ತಿರುವ ಬಗ್ಗೆ ವದಂತಿ ಹಬ್ಬಿದ್ದು ಈ ಬಗ್ಗೆ ಅಧಿಕಾರಿಗಳು ಭೇಟಿ ನೀಡಿ ಹೆಜ್ಜೆ ಗುರುತುಗಳನ್ನು ಪರಿಶೀಲಿಸಿ ಚಿರತೆಯ ಹೆಜ್ಜೆ ಗುರುತುಗಳನ್ನು ಹೋಲುವ ಕಾಡುಪ್ರಾಣಿ ಅಲೆದಾಡಿದ ಬಗ್ಗೆ ಖಚಿತ ಪಡಿಸಿ ಅದನ್ನು ಸೆರೆಹಿಡಿಯಲು ಪಂಜರವನ್ನು ಮತ್ತು ಸಿಸಿಟಿವಿ ಅಳವಡಿಸಿದ್ದರು.
ಕಳೆದ ಎರಡು ದಿನಗಳಿಂದ ಯಾವುದೇ ಯಾವುದೇ ಪ್ರಾಣಿ ಅಲೆದಾಡಿದ ಬಗ್ಗೆ ಸಿಸಿಟಿವಿಯಲ್ಲಿ ಸೆರೆಯಾಗಿಲ್ಲ ಎಂದು ಅರಣ್ಯಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಜನಗಳು ಹೆಚ್ಚಾಗಿ ಓಡಾಡುವದರಿಂದ ಕಾಡುಪ್ರಾಣಿ ಮತ್ತೆ ಕಾಡಿನತ್ತ ಹೋಗಿರಬಹುದು ಎಂದು ಅಂದಾಜಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment
