ದೇವರಹಿಪ್ಪರಗಿ: ಶಿಕ್ಷಕ ವೃತ್ತಿ ಅತ್ಯಂತ ಶ್ರೇಷ್ಠವಾಗಿದ್ದು, ನಾವೆಲ್ಲ ಬದ್ಧತೆಯಿಂದ ಕಾರ್ಯ ನಿರ್ವಹಿಸೋಣ ಎಂದು ಮುಖ್ಯಶಿಕ್ಷಕ ಎಸ್.ಪಿ.ಇಂಗಳೇಶ್ವರ ಹೇಳಿದರು.
ತಾಲ್ಲೂಕಿನ ಪಡಗಾನೂರ ಎಲ್‌ಟಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಗಂಗಾಬಾಯಿ ಗುಡಿಮನಿ ಸೇವಾನಿವೃತ್ತಿ ಹೊಂದಿದ ನಿಮಿತ್ಯ ಜರುಗಿದ ಸನ್ಮಾನ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು. ಸಮಾಜಮುಖಿ ಚಿಂತನೆಗಳ ಮೂಲಕ ಸಧೃಢ ಸಮಾಜ ನಿರ್ಮಾಣಕ್ಕೆ ಕೈ ಜೋಡಿಸಿ ಪ್ರಾಥಮಿಕ ಶಾಲಾ ಸಹಶಿಕ್ಷಕಿಯಾಗಿ, ಶಿಕ್ಷಕ ಸಂಘಟನೆಯ ಪದಾಧಿಕಾರಿಯಾಗಿ ಗ್ರಾಮಸ್ಥರೆಲ್ಲರೂ ಮೆಚ್ಚುವಂತಹ ಕರ್ತವ್ಯವನ್ನು ನಿರ್ವಹಿಸಿದ ಗುಡಿಮನಿ ಶಿಕ್ಷಕಿಯ ಸೇವೆ ಶ್ಲಾಘನೀಯ ಎಂದರು.
ನಿವೃತ್ತ ಶಿಕ್ಷಕಿ ಗಂಗಾಬಾಯಿ ಗುಡಿಮನಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಶಿಕ್ಷಕ ವೃತ್ತಿ ಅತ್ಯಂತ ತೃಪ್ತಿದಾಯಕ ಕಾಯಕ. ಮಕ್ಕಳ ಮನಗೆದ್ದು ಕಾರ್ಯನಿರ್ವಹಿಸಿದಾಗ ಯಶಸ್ವಿಯಾಗಲು ಸಾಧ್ಯ. ತಮ್ಮ ಸೇವಾವಧಿಯಲ್ಲಿ ಸಹಕರಿಸಿದ ಸರ್ವರನ್ನೂ ಸ್ಮರಿಸಿ ಧನ್ಯವಾದ ತಿಳಿಸಿದರು.
ತಾಲ್ಲೂಕು ಶಿಕ್ಷಕರ ಸಂಘದ ಅಧ್ಯಕ್ಷ ಎ.ಎಚ್.ವಾಲೀಕಾರ, ಸಂಘಟನಾ ಕಾರ್ಯದರ್ಶಿ ನಾಗೇಶ ನಾಗೂರ, ಗ್ರಾಮದ ಪ್ರಮುಖರಾದ ಗುರುರಾಜ ಆಕಳವಾಡಿ, ಶ್ರೀಕಾಂತ ರಾಠೋಡ, ಬಾಳು ರಾಠೋಡ, ಶಿಕ್ಷಕರಾದ ಎಮ್. ಎಚ್.ಖಾದ್ರಿ, ಮಲ್ಲಿಕಾರ್ಜುನ ತಳಕೇರಿ, ನಿವೃತ್ತಶಿಕ್ಷಕ ವಾಯ್.ಜಿ.ತಾವರಖೇಡ ಮಾತನಾಡಿದರು.
ಸಹಶಿಕ್ಷಕಿ ಕೆ.ಎಸ್.ಬ್ಯಾಳಿ ಕಾರ್ಯಕ್ರಮ ನಿರೂಪಿಸಿದರು.
ಎಸ್‌ಡಿಎಮ್‌ಸಿ ಅಧ್ಯಕ್ಷ ಜಿ.ಎಚ್.ರಾಠೋಡ, ಸುರೇಶ ರಾಠೋಡ, ರಾಜು ರಾಠೋಡ, ಶ್ರೀಶೈಲ ರಾಠೋಡ, ಜಿ.ಪಿ.ಬಿರಾದಾರ, ಅಶೋಕ ಲಮಾಣಿ, ಅಮೃತಾ ಕರಾಬಿ, ಶೃತಿ ಪಾಟೀಲ, ರೂಪಾ ಖಾದ್ರಿ ಸೇರಿದಂತೆ ಗ್ರಾಮಸ್ಥರು ಇದ್ದರು.
Subscribe to Updates
Get the latest creative news from FooBar about art, design and business.
ಶಿಕ್ಷಕ ವೃತ್ತಿ ಅತ್ಯಂತ ಶ್ರೇಷ್ಠ, ಬದ್ಧತೆಯಿಂದ ಕಾರ್ಯ ನಿರ್ವಹಿಸೋಣ :ಇಂಗಳೇಶ್ವರ
Related Posts
Add A Comment

