ಸಿಂದಗಿ: ನಾಡಿನ ಸಂಸ್ಕೃತಿ ಬಿಂಬಿಸುವ ಅಪ್ಪಟ ಗ್ರಾಮೀಣ ಕ್ರೀಡೆಗಳು ದಿನದಿಂದ ದಿನಕ್ಕೆ ನಶಿಸುತ್ತಿವೆ. ಮುಂಬರುವ ದಿನಮಾನಗಳಲ್ಲಿ ಆಧುನಿಕ ಅಬ್ಬರದ ಆಟಗಳ ಪ್ರವಾಹದಿಂದ ಗ್ರಾಮೀಣ ಆಟಗಳು ಮರೆಯಾಗಲಿವೆ. ಅವುಗಳನ್ನು ಉಳಿಸಿ ಬೆಳೆಸುವ ಕಾರ್ಯ ನಿಮ್ಮಿಂದಾಗಬೇಕು. ಇದರ ಜೊತೆಗೆ ಗ್ರಾಮೀಣ ಕ್ರೀಡೆಗಳ ಬಗ್ಗೆ ಅರಿವು ಮೂಡಿಸಬೇಕು ಎಂದು ಮಲಘಾಣ ಎಸ್.ಬಿ.ಪಪೂ ಕಾಲೇಜಿನ ಪ್ರಾಚಾರ್ಯ ಎಸ್.ಬಿ.ಜಾಧವ ಹೇಳಿದರು.
ತಾಲೂಕಿನ ರಾಂಪುರ ಪಿಎ ಗ್ರಾಮದ ಸರ್ವೋದಯ ಶಿಕ್ಷಣ ಸಂಸ್ಥೆಯ ಜ್ಞಾನ ಸಿಂಚನ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಪಪೂ ಕಾಲೇಜಿನಲ್ಲಿ ಹಮ್ಮಿಕೊಂಡ ೨೦೨೪-೨೫ನೆಯ ಸಾಲಿನ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಹಾಗೂ ಪಠ್ಯಪೂರಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಕೇವಲ ಪಠ್ಯಕ್ಕೆ ಸೀಮಿತವಾಗದೆ ಸಾಮಾನ್ಯ ಜ್ಷಾನದೆಡೆಗೆ ಗಮನ ಹರಿಸಬೇಕು. ಈ ನಿಟ್ಟಿನಲ್ಲಿ ಮಕ್ಕಳು ಪಠ್ಯಪೂರಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು. ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ಕೇವಲ ಪಠ್ಯಬೋಧನೆ ಮಾಡಿದರೆ ಸಾಲದು. ಎಂದರು.
ಈ ವೇಳೆ ಮಲಘಾಣ ಎಸ್.ಬಿ.ಪಪೂ ಕಾಲೇಜಿನ ಉಪನ್ಯಾಸಕ ವ್ಹಿ.ಕೆ.ಪಾಟೀಲ, ಕಸಾಪ ನಿಕಟಪೂರ್ವ ತಾಲೂಕಾಧ್ಯಕ್ಷ, ಶಿಕ್ಷಕ ಸಿದ್ದಲಿಂಗ ಚೌಧರಿ ಮಾತನಾಡಿ, ಈ ಜಗತ್ತಿನಲ್ಲಿ ನಾವು ಗಳಿಸಿದ ಹಣ, ಕೂಡಿಡುವ ಆಹಾರ ಖಾಲಿಯಾಗುತ್ತದೆ ಆದರೆ ಶಿಕ್ಷಕರಿಂದ ಪಡೆದ ಜ್ಞಾನ ಕಲಿತಂತೆ ಕಲಿಸಿದಂತೆ ಹೆಚ್ಚುತ್ತದೆ. ಸೋಲು-ಗೆಲುವು, ಸುಖ-ದುಃಖ ಎರಡನ್ನು ಸಮಾನವಾಗಿ ಸ್ವೀಕರಿಸಿ ಬಂದಿದ್ದನ್ನು ಎದುರಿಸಿ ಮೆಟ್ಟಿ ನಿಲ್ಲಬೇಕು. ಯಾವುದೇ ದುಷ್ಚಟಗಳಿಗೆ ಒಳಗಾಗದೇ ವಿದ್ಯಾರ್ಥಿಗಳು ಉತ್ತಮ ರೀತಿಯಲ್ಲಿ ಅಧ್ಯಯನ ಮಾಡಿ ಕಾಲೇಜಿನ ಮತ್ತು ತಂದೆ-ತಾಯಿಗಳ ಕನಸನ್ನು ನನಸಾಗಿಸಬೇಕು. ಜ್ಞಾನ ಸಿಂಚನ ಕಾಲೇಜು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಿರುವುದು ಶ್ಲಾಘನೀಯ. ಈ ಸಮಾಜದಲ್ಲಿ ನಾವು ರಣಹೆಡಿಗಳಾಗದೇ ಧೈರ್ಯಶಾಲಿಗಳಾಗಬೇಕು. ವಿದ್ಯಾರ್ಥಿಗಳಿಗೆ ಪಾಠ ಪುಸ್ತಕದ ತಿಳುವಳಿಕೆ ಜೊತೆಗೆ ಗುರು ಹಿರಿಯರನ್ನು ಗೌರವಿಸುವುದು. ಸಮಾಜದಲ್ಲಿ ಘನತೆಯಿಂದ ಬದುಕುವ ರೀತಿಯನ್ನು ಕಲಿಸಬೇಕು. ಮಕ್ಕಳಲ್ಲಿ ಬದುಕಿನ ಪರಿಕಲ್ಪನೆಯನ್ನು ಮೂಡಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ನಿವೃತ್ತರಾದ ಸರಕಾರಿ ಶಾಲೆಯ ಶಿಕ್ಷಕಿ ಆರ.ಪಿ.ಕುಲಕರ್ಣಿ, ಎಸ್.ಎಂ.ಬಿರಾದಾರ, ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕಾಧ್ಯಕ್ಷ ಆನಂದ ಶಾಬಾದಿ, ಪತ್ರಕರ್ತರಾದ ಮಹಾಂತೇಶ ನೂಲಾನವರ, ವಸಿಂ ಗೋಗಿ, ಕಸಾಪ ನಿಕಟಪೂರ್ವ ತಾಲೂಕಾಧ್ಯಕ್ಷ ಸಿದ್ದಲಿಂಗ ಚೌಧರಿ ಅವರನ್ನು ಸಂಸ್ಥೆಯ ವತಿಯಿಂದ ಸಂಸ್ಥೆಯ ಕಾರ್ಯದರ್ಶಿ ವಾಯ್.ಜೆ.ಬೋಳೆಗಾಂವ ಪ್ರಾಚಾರ್ಯ ಆರ್.ವಿ.ಭಿಂಗೆ ಅವರು ಸನ್ಮಾನಿಸಿ ಗೌರವಿಸಿದರು. ಪ್ರಾಚಾರ್ಯ ಆರ.ವಿ.ಭಿಂಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಸ್ಥೆಯ ಕಾರ್ಯದರ್ಶಿ ವಾಯ್.ಜೆ.ಬೋಳೆಗಾಂವ ಅಧ್ಯಕ್ಷೀಯ ನುಡಿಗಳನ್ನಾಡಿದರು. ಕಾರ್ಯಾಧ್ಯಕ್ಷ ವಸಂತ ಪಾಟೀಲ ಸ್ವಾಗತಿಸಿದರು. ಭೂಮಿಕಾ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ವಿದ್ಯಾರ್ಥಿನಿ ರಾಧಿಕಾ ನಿರೂಪಿಸಿದರು. ಉಪನ್ಯಾಸಕರ ಬಸವರಾಜ ವಂದಿಸಿದರು.
ಈ ವೇಳೆ ಸಂಸ್ಥೆಯ ಅಧ್ಯಕ್ಷೆ ಅಂಬಿಕಾ ಬೋಳೆಗಾಂವ, ಎಸ್.ಬಿ.ಕಲ್ಲೂರ, ಭಾಗ್ಯಶ್ರೀ ಪೂಜಾರಿ, ಅಣುಸಿದ್ಧ ದೇವರನಾವದಗಿ, ಡಾ.ಬಾಹುಬಲಿ ಒಣಕುದರಿ, ಯಮನಪ್ಪ ದಿಂಡವಾರ, ಮಹೇಶ ಕಣಮೂಸ, ವಿಜಯಲಕ್ಷ್ಮಿ ವಾಗದರಿ, ಜಿ.ಆರ್.ಬಡಿಗೇರ, ಶಿವಲಿಂಗ ನಾಯಕ, ಶರಣಮ್ಮ ಭೀಮಳ್ಳಿ, ಪರಿಮಳ ಯಲಗೋಡ ಸೇರಿದಂತೆ ಸಂಸ್ಥೆಯ ಆಡಳಿತ ಮಂಡಳಿ, ಬೋಧಕ-ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

