ಮುದ್ದೇಬಿಹಾಳ: ಕಳೆದ ಮೂರು ವರ್ಷಗಳಿಂದ ಮುದ್ದೇಬಿಹಾಳದಿಂದ ಬಸವೇಶ್ವರರ ಐಕ್ಯ ಭೂಮಿ ಕೂಡಲ ಸಂಗಮಕ್ಕೆ ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗಿದ್ದು, ಪಾದಯಾತ್ರೆಯನ್ನು ಆ.೮ ರ ಬೆಳಿಗ್ಗೆ ೧೧ಕ್ಕೆ ಪಟ್ಟಣದ ಬಜಾರನಲ್ಲಿರುವ ಶ್ರೀ ದ್ಯಾಮವ್ವ ದೇವಿ ದೇವಸ್ತಾನದಿಂದ ಆರಂಭಿಸಲಾಗುತ್ತಿದೆ. ಸಂಗಮದಲ್ಲಿ ರವಿವಾರ ರಾತ್ರಿ ಉಳಿದುಕೊಳ್ಳಲು ಮಹಿಳೆಯರಿಗೂ ಸೇರಿ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಪಾದಯಾತ್ರೆಯ ನೇತೃತ್ವ ವಹಿಸಿರುವ ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಪ್ರಭುರಾಜ ಕಲಬುರ್ಗಿ ತಿಳಿಸಿದರು.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಯಾತ್ರೆಗೆ ಬರುವವರು, ಹೊದಿಕೆ ಮತ್ತು ನಿತ್ಯೋಪಯೋಗಿ ವಸ್ತುಗಳನ್ನು ತರಬೇಕು. ಮಾರ್ಗದಲ್ಲಿ ಉಪಹಾರ, ಊಟದ ವ್ಯವಸ್ಥೆ ಇರುತ್ತದೆ. ಸಂಗಮದಲ್ಲಿಯೂ ರಾತ್ರಿ ಊಟ, ಮರುದಿನ ಬೆಳಿಗ್ಗೆ ಉಪಹಾರ ವ್ಯವಸ್ಥೆ, ಸೋಮವಾರ ಸಂಗಮನಾಥನಿಗೆ ರುದ್ರಾಭಿಷೇಕ ನೆರವೇರಿಸಿ ಮರಳಿ ಬರಲು ಮುದ್ದೇಬಿಹಾಳ ಘಟಕದಿಂದ ಬಸ್ ವ್ಯವಸ್ಥೆ ಇರಲಿದೆ. ಲಗೇಜ ಹೊತ್ತೊಯ್ಯಲು ಗೂಡ್ಸ್ ವಾಹನದ ವ್ಯವಸ್ಥೆಯನ್ನು ವಿಜಯ ಬೆಲ್ಲದ ಕಲ್ಪಿಸಿದ್ದು, ಸಂಗಮದಲ್ಲಿ ರಾತ್ರಿ ವಸತಿ ಸೇವೆಯನ್ನು ಅರವಿಂದ ಜಮಖಂಡಿ, ಮಾರ್ಗದಲ್ಲಿ ಕುಡಿಯುವ ನೀರಿನ ವ್ಯವಸ್ಥೆಯನ್ನು ಸಂತೋಷ ಪಾಟೀಲ ಮತ್ತು ಕುಂಟೋಜಿಯ ಬಸಯ್ಯ ಮಠ, ತಂಗಡಗಿಯ ನೀಲಮ್ಮನ ಗುಡಿ ಹತ್ತಿರ ಮಜ್ಜಿಗೆ ಸೇವೆಯನ್ನು ರಾಘು ಸಿಂದಗಿ ಮತ್ತು ಪಾದಯಾತ್ರಿಗಳಿಗೆ ೨೦೦ ಬಿಳಿ ಪಂಚೆಗಳನ್ನು ಮತ್ತು ೨೦೦ ಶಾಲುಗಳನ್ನು ನಾಲತವಾಡದ ಅಮರಪ್ಪ ಗಂಗನಗೌಡ್ರ (ಎಂ.ಎ.ಜಿ) ಇವರು ವಿತರಿಸಲಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸುವಂತೆ ವಿನಂತಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment
