ಮುದ್ದೇಬಿಹಾಳ: ಪಟ್ಟಣದ ತಾಲೂಕು ಆಸ್ಪತ್ರೆಯಲ್ಲಿ ಸುಮಾರು ೩೬ ವರ್ಷಗಳ ಸುದೀರ್ಘ ಕಾಲ ಸೇವೆಸಲ್ಲಿಸಿದ ಶುಶ್ರೂಷಕ ಅಧಿಕಾರಿ ಕಮಲಾಕ್ಷಿ ಕುಲಕರ್ಣಿ ಅವರು ಸೇವಾ ನಿವೃತ್ತಿ ಹೊಂದಿದ ಪ್ರಯುಕ್ತ ಅವರನ್ನು ಆಸ್ಪತ್ರೆಯ ಎಲ್ಲ ಅಧಿಕಾರಿ ಹಾಗೂ ಸಿಬ್ಬಂದಿಯವರು ಬಿಳ್ಕೊಟ್ಟರು.
ಈ ವೇಳೆ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಅನೀಲಕುಮಾರ ಶೇಗುಣಸಿ ಮಾತನಾಡಿ, ಕುಲಕರ್ಣಿ ಅವರಿಂದ ಕಲಿಯುವುದು ಸಾಕಷ್ಟಿದೆ. ಅವರ ಸಮಯಪ್ರಜ್ಞೆ ಹಾಗೂ ಕಟ್ಟುನಿಟ್ಟಿನ ದಾಖಲಾತಿಗಳನ್ನು ಜೋಡಿಸುವುದು ಕಿರಿಯರಾದ ನಾವು ನಮ್ಮ ವೃತಿಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಆಸ್ಪತ್ರೆಯ ವೈದ್ಯಾಧಿಕಾರಿಗಳಾದ ಡಾ. ಪರಶುರಾಮ ವಡ್ಡರ, ಡಾ. ಬಸವರಾಜ ಚೌದರಿ, ಹಸನ ಬಿಳಗಿ, ದಂತವೈದ್ಯಾಧಿಕಾರಿ ರಿಪತ್ ಇನಾಮದಾರ, ಹಿರಿಯ ಶುಶ್ರೂಷಕ ಅಧಿಕಾರಿ ಸಂಜಯ ಭೋಸಲೆ, ಹರಿ ದೇಶಪಾಂಡೆ, ಮಹಮ್ಮದರಫೀಕ ಬಾಗವಾನ, ಯಲಗೂರೇಶ ತೊನಶ್ಯಾಳ, ವಿಟ್ಟಲ್ ಕಿಲಾರಟ್ಟಿ, ಶಿವಣ್ಣ ಮಾಗಿ, ಕಾಶಿನಾಥ್ ವಗದುರ್ಗಿ, ಮುತ್ತು ಸಂಗಮ, ಸಚಿನ್ ರಾಥೋಡ, ಬಸಮ್ಮ ಸಾರವಾಡ, ರೇಣುಕಾ ಅರ್ಧವೂರ, ರೇಖಾ ಪಾಟೀಲ, ಅಖಿಲ ಬೇಗಂ, ಸಂತೋಷ ಅಂಗಡಿಗೇರಿ, ಪ್ರಬಂಜನ್ ಕುಂಟೋಜಿ, ಎಂ.ಎಸ್.ಗೌಡರ, ಬಸವರಾಜ ಹಾವೇರಿ, ವಿ.ವಿ.ಪವಾಡಶೆಟ್ಟಿ ಸೇರಿದಂತೆ ಮತ್ತೀತರರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

