Author: editor.udayarashmi@gmail.com

ರೇವತಗಾಂವ: ಮಳೆಗಾಲ ಬಂತೆಂದರೆ ಏನೋ ಒಂಥರಾ ಹರುಷ. ಬಿಸಿಲಿನ ಬೇಗೆಯಿಂದ ಬೇಸತ್ತ ಜೀವಗಳಿಗೆ ಮಳೆರಾಯ ತಂಪು ನೀಡುತ್ತಾನೆ. ಮಳೆಗಾಲ ಎಂದರೆ ಎಲ್ಲರಿಗೂ ಇಷ್ಟ, ಆದರೆ ಮಳೆರಾಯನ ಜೊತೆಗೆ ಸಂಗೀತ ಹಾಡುತ್ತಾ ಬರುವ ಸೊಳ್ಳೆರಾಯ ಯಾರಿಗೆ ಬೇಕು ಹೇಳಿ. ಮಳೆಗಾಲ ಆರಂಭವಾದಾಗಲೇ ಸೊಳ್ಳೆಗಳ ಕಾಟವೂ ಆರಂಭವಾಗುತ್ತದೆ.ಸೊಳ್ಳೆಗಳಿಂದ ಚಿಕುನ್‌ಗುನ್ನಾ, ಡೆಂಗ್ಯು, ಮಲೇರಿಯಾ ಸೇರಿದಂತೆ ನೂರಾರು ಕಾಯಿಲೆಗಳು ಹರಡುತ್ತವೆ. ಹಾಗಾಗಿ ಮನೆಯ ಸುತ್ತಲಿನ ವಾತಾವರಣ, ರೋಗ ರುಜಿನುಗಳು ಹರಡದಂತೆ ಹಾಗೂ ಸೊಳ್ಳೆಗಳು ಉತ್ಪತ್ತಿಯಾಗುವ ನೀರು ನಿಲ್ಲದಂತೆ ಜಾಗೃತಿ ವಹಿಸಿ, ಮಳೆಗಾಲ ಬರುವ ಮೊದಲೇ ಅವುಗಳನ್ನು ತೆರವುಗೊಳಿಸಿ. ಸೊಳ್ಳೆ ಕಡಿತದಿಂದ ಸಾರ್ವಜನಿಕರನ್ನು ರಕ್ಷಿಸಲು ಸೊಳ್ಳೆ ನಿವಾರಕ ಸ್ಪ್ರೇ ಅಥವಾ ಸೊಳ್ಳೆ ನಿವಾರಕ ರೋಲ್‌ಅನ್ನು ಬಳಸುವ ಕಾರ್ಯ ಸರ್ಕಾರ ಮತ್ತು ಗ್ರಾಮ ಪಂಚಾಯತಿಯವರ ಕಾರ್ಯವಾಗಿದ್ದು.ಆದರೆ ರೇವತಗಾಂವ ಗ್ರಾಮ ಪಂಚಾಯತ ವಾರ್ಡ್ ನಂ.೪ ರ ತಳವಾರ ಓಣೆಯಲ್ಲಿ ತಿಪ್ಪೆಯ ಕಸ, ಚರಂಡಿ ನೀರು ಹಾಗೂ ಮಳೆಯ ನೀರು ಸಂಗ್ರಹವಾಗಿ ಸೊಳ್ಳೆಗಳ ಕಾಟವು ವಿಪರೀತವಾಗಿದ್ದು, ಜನರು ಜೀವನ ನಡೆಸುವುದು ದುಸ್ಥರವಾಗಿದೆ ಎಂದು…

Read More

ಬಸವನಬಾಗೇವಾಡಿ: ತಾಲೂಕಿನ ಮನಗೂಳಿ ಪಟ್ಟಣದ ಬಸವೇಶ್ವರ ಜಾತ್ರಾಮಹೋತ್ಸವ ಆಗಷ್ಟ್ ೩೦ ರಂದು ನಡೆಯಲಿರುವದರಿಂದ ಆಗಷ್ಟ್ ೫ ರಂದು ಸಂಜೆ ೫ ಗಂಟೆಗೆ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಬಸವೇಶ್ವರ ದೇವಸ್ಥಾನದ ಅಧ್ಯಕ್ಷ ಸೋಮನಗೌಡ (ಅಪ್ಪುಗೌಡ) ಪಾಟೀಲ ಮನಗೂಳಿ ಅವರ ಅಧ್ಯಕ್ಷತೆಯಲ್ಲಿ ಜಾತ್ರಾಮಹೋತ್ಸವದ ಪೂರ್ವಭಾವಿ ಸಭೆಯನ್ನು ಕರೆಯಲಾಗಿದೆ.ಈ ಸಭೆಗೆ ಪಟ್ಟಣದ ಎಲ್ಲ ಗುರು-ಹಿರಿಯರು,ವಿವಿಧ ಸಂಘ-ಸಂಸ್ಥೆಯಗಳ ಪದಾಧಿಕಾರಿಗಳು, ಎಲ್ಲ ಸರ್ಕಾರಿ-ಖಾಸಗಿ ಕಾರ್ಯಾಲಯಗಳ ಸಿಬ್ಬಂದಿ, ಯುವ ಸಮೂಹ ಆಗಮಿಸಿ ಸಲಹೆ-ಸೂಚನೆ ನೀಡಿ ಜಾತ್ರಾಮಹೋತ್ಸವದ ಯಶಸ್ವಿಗೆ ಕೈಜೋಡಿಸಬೇಕೆಂದು ಪ್ರಕಟಣೆ ತಿಳಿಸಿದೆ.

Read More

ಬಸವನಬಾಗೇವಾಡಿ: ಸಾರ್ವಜನಿಕ ಪಾದಾಚಾರಿಗಳಿಗೆ, ವಾಹನಗಳ ಸಂಚಾರಕ್ಕೆ ತೊಂದರೆಯಾಗದಂತೆ ಬೀದಿ ಬದಿಯ ವ್ಯಾಪಾರಸ್ಥರು ತಮ್ಮ ವ್ಯಾಪಾರ ವಹಿವಾಟು ನಡೆಸಬೇಕೆಂದು ತಹಸೀಲ್ದಾರ ವೈ.ಎಸ್.ಸೋಮನಕಟ್ಟಿ ಹೇಳಿದರು.ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಶುಕ್ರವಾರ ಜರುಗಿದ ಬೀದಿ ಬದಿಯ ವ್ಯಾಪಾರಿಗಳ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಜೀವನೋಪಾಯ, ಸಂರಕ್ಷಣೆ ಮತ್ತು ಬೀದಿ ವ್ಯಾಪಾರಿಗಳ ನಿಯಂತ್ರಣ ನಿಯಮ-೨೦೧೯ ರ ಪ್ರಕಾರ ಶಾಲೆ,ಆಸ್ಪತ್ರೆ, ಸರ್ಕಾರಿ ಕಟ್ಟಡ, ನ್ಯಾಯಾಲಯ, ಅಗ್ನಿಶಾಮಕ ಕಚೇರಿ ಮುಂತಾದ ಪ್ರಮುಖ ಪ್ರದೇಶದಿಂದ ಕನಿಷ್ಠ ೧೦೦ ಮೀಟರ್ ದೂರದಲ್ಲಿ ಬೀದಿ ಬದಿಯ ವ್ಯಾಪಾರಸ್ಥರು ತಮ್ಮ ವ್ಯಾಪಾರ ಮಾಡಬೇಕು. ಶಾಶ್ವತ ರಚನೆ ಮಾಡಿಕೊಳ್ಳದೇ ಸಂಚಾರದ ಮೂಲಕ ಇಲ್ಲವೇ ನಿರ್ದಿಷ್ಟಪಡಿಸಿದ ಸ್ಥಳಗಳಲ್ಲಿ ತಮ್ಮ ವ್ಯಾಪಾರ ಮಾಡಬೇಕು. ಈ ನಿಯಮವನ್ನು ಬೀದಿ ಬದಿಯ ವ್ಯಾಪಾರಸ್ಥರು ಪಾಲಿಸಬೇಕು. ನಿಯಮ ಪಾಲಿಸದೇ ಇರುವ ವ್ಯಾಪಾರಸ್ಥರ ಮೇಲೆ ನಿಯಮ ಅನುಸಾರ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದರು.ಅಧ್ಯಕ್ಷತೆ ವಹಿಸಿದ್ದ ಪುರಸಭೆ ಮುಖ್ಯಾಧಿಕಾರಿ ಎಚ್.ಎಸ್.ಚಿತ್ತರಗಿ ಮಾತನಾಡಿ, ೨೦೧೯ ರಲ್ಲಿ ಬೀದಿ ಬದಿಯ ವ್ಯಾಪಾರಸ್ಥರ ಸಮೀಕ್ಷೆ ನಡೆಸಲಾಗಿದೆ. ಈಚೆಗೆ ಪಟ್ಟಣದಲ್ಲಿ ಹೆಚ್ಚು ವ್ಯಾಪಾರಿಗಳು ಕಂಡುಬರುತ್ತಿರುವದರಿಂದ ಮತ್ತೆ…

Read More

ರಾಜಸ್ಥಾನಿ ವರ್ತಕನಿಂದ ಆಶೀರ್ವಾದ ಪೈಪ್ಸ್ ಕಂಪನಿಯ ಹೆಸರಿನ ನಕಲಿ ಪೈಪುಗಳ ಮಾರಾಟ ಮುದ್ದೇಬಿಹಾಳ: ಆಶೀರ್ವಾದ ಪೈಪ್ಸ್ ಲಿಮಿಟೆಡ್ ಕಂಪನಿಯ ಹೆಸರಿನ ಸಿಪಿವಿಸಿ ಪೈಪುಗಳ ನಕಲಿ ಪೈಪುಗಳನ್ನು ತಂದು ಮಾರಾಟ ಮಾಡಿ ಸಾರ್ವಜನಿಕರಿಗೆ ಮೋಸ ಮಾಡುತ್ತಿದ್ದ ರಾಜಸ್ಥಾನಿ ವ್ಯಾಪಾರಿಯ ಮೇಲೆ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಪಟ್ಟಣದ ಆಲಮಟ್ಟಿ ರಸ್ತೆಯಲ್ಲಿರುವ ಓಂ ಸ್ಯಾನಿಟರಿ ಮತ್ತು ವಾಟರ್ ಫಿಟ್ಟಿಂಗ್ ಮಳಿಗೆಯಲ್ಲಿ ನಕಲಿ ಪೈಪುಗಳನ್ನು ತಂದು ಸಾರ್ವಜನಿಕರಿಗೆ ವಂಚಿಸಿದ್ದು ಶನಿವಾರ ಕಂಪನಿಯ ಫಿಲ್ಡ್ ಆಫೀಸರ್ ಬಂದು ಪರಿಶೀಲಿಸಿದಾಗ ಪೈಪುಗಳು ನಕಲಿಯಾಗಿರುವದು ಕಂಡು ಬಂದಿದೆ. ತಮ್ಮ ಕಂಪನಿಯ ನಕಲಿ ಪೈಪುಗಳನ್ನು ತಂದು ಸಾರ್ವಜನಿಕರಿಗೆ ಮಾರಾಟ ಮಾಡಿದ್ದು ಕಾಪಿರೈಟ್ ಕಾಯಿದೆಯ ಪ್ರಕಾರ ಅಪರಾಧವಾಗಿದ್ದು ತಪ್ಪಿತಸ್ಥರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ನೀಡಿದ ದೂರಿನ ಆಧಾರದ ಮೇಲೆ ಇಲ್ಲಿನ ಪಿಎಸ್‌ಐ ಸಂಜೀವ ತಿಪರೆಡ್ಡಿ ಇಬ್ಬರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ರಾಜಸ್ಥಾನಿ ವ್ಯಾಪಾರಿಗಳ ಬಳಿ ಯಾವುದೇ ವ್ಯಾಪಾರ ಮಾಡಬೇಕೆಂದರೂ ಸಾರ್ವಜನಿಕರು ಜಾಗರೂಕರಾಗಿರುವಂತೆ ಹಲವು ಸಾಮಾಜಿಕ ಹೋರಾಟಗಾರರು ಎಚ್ಚರಿಸಿದ್ದಾರೆ. ರಾಜಸ್ಥಾನಿ…

Read More

ಮುದ್ದೇಬಿಹಾಳ: ಸನ್ಮಾನಗಳು ಸಾಧಕರಿಗೆ ನೀಡುವ ಕಿರೀಟಗಳಲ್ಲ. ಅವರ ಜವಾಬ್ದಾರಿಯನ್ನು ಹೆಚ್ಚಿಸುತ್ತವೆ. ಸನ್ಮಾನ ಸ್ವೀಕರಿಸಿದ ವ್ಯಕ್ತಿಯ ಸಮಾಜಮುಖಿ ಕಾರ್ಯಗಳು ಇತರರಿಗೆ ಮಾದರಿಯಾಗಬೇಕೆ ಹೊರತು ಮಾರಕವಾಗಬಾರದು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಅಧ್ಯಕ್ಷ ಕಾಮರಾಜ ಬಿರಾದಾರ ಹೇಳಿದರು.ಪಟ್ಟಣದ ಹುಡ್ಕೋ ಬಡಾವಣೆಯಲ್ಲಿರುವ ಉದ್ಯಾನವನದಲ್ಲಿ ಹಸಿರು ತೋರಣ ಗೆಳೆಯರ ಬಳಗ ಹಮ್ಮಿಕೊಂಡಿದ್ದ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.ಹಸಿರು ತೋರಣ ಬಳಗದ ಸಂಘಟಿತ ಪ್ರಯತ್ನದಿಂದಾಗಿ ಪಟ್ಟಣದಲ್ಲಿ ಉದ್ಯಾನವನಗಳು ಜೀವಂತವಾಗಿವೆ. ಪಟ್ಟಣದ ಹಲವು ಸ್ಥಳಗಳು, ರಸ್ತೆಗಳಲ್ಲಿ ಸುಂದರವಾದ ಗಿಡಗಳು ಬೆಳೆಯುವಂತೆ ಬಳಗ ಕೆಲಸ ಮಾಡುತ್ತಿದೆ. ಕೆರೆ ಸುತ್ತಮುತ್ತಲಿನ ಆವರಣದಲ್ಲಿ ಸ್ವಚ್ಛಗೊಳಿಸುವ ಕೆಲಸ, ತಾಲ್ಲೂಕು ಆಡಳಿತವನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸರೂರ ಗುಡ್ಡದಲ್ಲಿ ಗಿಡಗಳನ್ನು ನೆಡಲು ಸಹ ಬಳಗ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದರು.ಇದೇ ವೇಳೆ ಮತ್ತೋರ್ವ ಸನ್ಮಾನಿತ ದಿ ಕರ್ನಾಟಕ ಕೋ.ಆಪ್ ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ಮಲ್ಲಿಕಾರ್ಜುನ ಬಿದರಕುಂದಿ ಮಾತನಾಡಿ, ಸಾರ್ವಜನಿಕರು ಮಾಡುವ ಸನ್ಮಾನಗಳು ನಮ್ಮನ್ನು ಅಹಂಕಾರದಿಂದ ಬೀಗುವಂತೆ ಮಾಡದೇ ಸಮಾಜಕ್ಕೆ ಇನ್ನಷ್ಟು ಏನಾದರೂ ಕೊಡುಗೆ…

Read More

ಉನ್ನತ ಶಿಕ್ಷಣ ಸಚಿವರು, ಸಂಗೀತ ಮತ್ತು ಪ್ರಾದೇಶಿಕ ಕಲೆಗಳ ವಿವಿ ಮೈಸೂರು ಕುಲಪತಿಗೆ ಮನವಿ ಸಲ್ಲಿಕೆ ತಾಳಿಕೋಟಿ: ಪಟ್ಟಣದ ಶ್ರೀ ಖಾಸ್ಗತೇಶ್ವರ ಸಂಗೀತ ಮಹಾವಿದ್ಯಾಲಯದಲ್ಲಿ 40 ವರ್ಷಗಳಿಂದ ನಡೆಯುತ್ತಾ ಬಂದಿರುವ ಹಿಂದುಸ್ತಾನಿ ಸಂಗೀತ ನೃತ್ಯ ತಾಳವಾದ್ಯ ಪರೀಕ್ಷಾ ಕೇಂದ್ರವನ್ನು ರದ್ದುಗೊಳಿಸಿರುವುದನ್ನು ಖಂಡಿಸಿ ಅದನ್ನು ಮತ್ತೆ ಪುನರ್ ಆರಂಭಿಸಲು ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿ ವಿವಿಧ ಸಂಗೀತ ಶಾಲೆಯ ಮುಖ್ಯಸ್ಥರು ನಾಗರಿಕರ ಬೆಂಬಲದೊಂದಿಗೆ ಶನಿವಾರ ಶಾಂತಿಯುತ ಪ್ರತಿಭಟನೆ ನಡೆಸಿ ತಹಸಿಲ್ದಾರ್ ಮೂಲಕ ಉನ್ನತ ಶಿಕ್ಷಣ ಸಚಿವರು, ಸಂಗೀತ ಮತ್ತು ಪ್ರಾದೇಶಿಕ ಕಲೆಗಳ ವಿಶ್ವವಿದ್ಯಾಲಯ ಮೈಸೂರು ಕುಲಪತಿಗಳ ಇವರಿಗೆ ಮನವಿ ಸಲ್ಲಿಸಿದರು. ಈ ಸಮಯದಲ್ಲಿ ಸಂಗೀತ ಶಾಲೆಯ ಮುಖ್ಯಸ್ಥರು ಹಾಗೂ ನಾಗರಿಕರು ಮಾತನಾಡಿ ಸುಮಾರು 40 ವರ್ಷಗಳಿಂದ ಈ ಭಾಗದಲ್ಲಿರುವ ಅಂಧರು ಅನಾಥರು ಹಾಗೂ ನಿರ್ಗತಿಕರಿಗೆ ಊಟ ವಸತಿಯ ವ್ಯವಸ್ಥೆಯನ್ನು ಕಲ್ಪಿಸಿ ಸಂಗೀತ ವಿಧ್ಯಯನ್ನು ನೀಡಿ ಅವರನ್ನು ಸ್ವಾವಲಂಬಿಗಳನ್ನಾಗಿ ಮಾಡಲು ಶ್ರಮಿಸುತ್ತಾ ಬಂದು ಸಂಗೀತ ಕಾಶಿ ಎಂದೆ ಪ್ರಸಿದ್ಧವಾಗಿರುವ ಶ್ರೀ ಖಾಸ್ಗತೇಶ್ವರ ಸಂಗೀತ ಮಾವಿದ್ಯಾಲಯದಲ್ಲಿ…

Read More

ಬಸವನಬಾಗೇವಾಡಿ: ಪಟ್ಟಣದ ಆರಾಧ್ಯದೈವ ಮೂಲನಂದೀಶ್ವರ (ಬಸವೇಶ್ವರ) ದೇವರ ಐತಿಹಾಸಿಕ ಜಾತ್ರೆ ಹಾಗೂ ಶ್ರಾವಣ ಮಾಸದಂಗವಾಗಿ ಹಮ್ಮಿಕೊಂಡಿರುವ ಪ್ರವಚನದ ಉದ್ಘಾಟನಾ ಸಮಾರಂಭ ಆಗಷ್ಟ್ ೫ ರಂದು ಸಂಜೆ ೬ ಗಂಟೆಗೆ ಬಸವೇಶ್ವರ ದೇವಾಲಯ ಅಂತರಾಷ್ಟ್ರೀಯ ಶಾಲಾ ಆವರಣದಲ್ಲಿರುವ ನಂದೀಶ್ವರ ರಂಗಮಂದಿರದಲ್ಲಿ ನಡೆಯಲಿದೆ ಎಂದು ಬಸವೇಶ್ವರ ಸೇವಾ ಸಮಿತಿ ಅಧ್ಯಕ್ಷ ಈರಣ್ಣ ಪಟ್ಟಣಶೆಟ್ಟಿ, ಬಸವೇಶ್ವರ ಜಾತ್ರಾಮಹೋತ್ಸವ ಸಮಿತಿ ಅಧ್ಯಕ್ಷ ಗುರುಲಿಂಗ(ಮುದುಕು) ಬಸರಕೋಡ ಹೇಳಿದರು.ಪಟ್ಟಣದ ಬಸವೇಶ್ವರ ದೇವಾಲಯದ ಅಂತಾರಾಷ್ಟ್ರೀಯ ಶಾಲಾ ಆವರಣದಲ್ಲಿರುವ ನಂದೀಶ್ವರ ರಂಗಮಂದಿರದ ಮುಂಭಾಗ ಪ್ರವಚನಕ್ಕಾಗಿ ಹಾಕಿರುವ ಶಾಮಿಯಾನ, ಸಿದ್ಧತೆ ಶನಿವಾರ ಸಂಜೆ ವೀಕ್ಷಿಸಿದ ನಂತರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಈ ವರ್ಷ ಕೊಪ್ಪಳ ತಾಲೂಕಿನ ಬಳೂಟಗಿ ಶಿವಕುಮಾರ ಸ್ವಾಮೀಜಿ ಅವರು ಬಸವಾದಿ ಪ್ರಮಥರ ವಚನ-ಚಿಂತನ ಕುರಿತು ಪ್ರವಚನವನ್ನು ಹೇಳಲು ಆಗಮಿಸುತ್ತಿದ್ದಾರೆ. ಪ್ರವಚನವು ಆ.೫ ರಿಂದ ಆರಂಭಗೊಂಡು ಪ್ರತಿನಿತ್ಯ ಸಂಜೆ ೬.೩೦ ಗಂಟೆಯಿಂದ ೮ ಗಂಟೆಯವರೆಗೆ ನಡೆಯಲಿದೆ. ಪ್ರವಚನವು ಸೆ.೨ ರವರೆಗೆ ನಡೆಯಲಿದೆ. ಪ್ರವಚನದ ಸದುಪಯೋಗವನ್ನು ಸದ್ಭಕ್ತರು ಮಾಡಿಕೊಂಡು ಬಸವಾದಿ ಪ್ರಮಥರ ಕೃಪೆಗೆ…

Read More

ಬಸವನಬಾಗೇವಾಡಿ: ನಾಡಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ದತ್ತಿ ಉಪನ್ಯಾಸ ಕಾರ್ಯಕ್ರಮ ಸೇರಿದಂತೆ ವಿವಿಧ ಸಾಹಿತ್ಯ ಪರ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಮೂಲಕ ಕನ್ನಡ ನಾಡು-ನುಡಿಯ ಅಸ್ಮಿತೆಯ ಕೈಂಕರ್ಯ ಮಾಡುತ್ತಿರುವುದು ಶ್ಲಾಘನೀಯ ಎಂದು ವಿರಕ್ತಮಠದ ಸಿದ್ದಲಿಂಗ ಸ್ವಾಮೀಜಿ ಹೇಳಿದರು.ಪಟ್ಟಣದ ವಿರಕ್ತಮಠದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ದಿ.ಕಸ್ತೂರಿ ಗಿರಿಮಲಪ್ಪ ಬೆಣ್ಣೂರ, ಲಿಂ.ಸಿದ್ದಪ್ಪ ಬಸಲಿಂಗಪ್ಪ ಹಂಚಲಿ ಸ್ಮರಣಾರ್ಥ ಹಮ್ಮಿಕೊಂಡಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಹಿರಿಯರ ಸ್ಮರಣೆಯನ್ನು ತಮ್ಮ ತಮ್ಮ ಮನೆಗಳಲ್ಲಿ ಬಹುತೇಕರು ಮಾಡಿಕೊಳ್ಳುತ್ತಾರೆ. ಅದೇ ಹಿರಿಯರ ಹೆಸರಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿಗೆ ದಾನಿಗಳು ನೀಡಿದ ದತ್ತಿ ನಿಧಿ ಪಡೆದು ಅವರ ಹೆಸರಿನಲ್ಲಿ ಪ್ರತಿವರ್ಷ ದತ್ತಿ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳುವ ಜೊತೆಗೆ ವಿವಿಧ ವಿಷಯಗಳನ್ನು ಜನರಿಗೆ ಮುಟ್ಟಿಸುವ ಕಾರ್ಯ ನಡೆಸುತ್ತಿರುವುದು ಮೆಚ್ಚುವಂತಹದ್ದು. ಹಿರಿಯರು ತಮ್ಮ ಮಕ್ಕಳಿಗೆ ಆಸ್ತಿ ಮಾಡದೇ ಅವರನ್ನೇ ಆಸ್ತಿಯನ್ನಾಗಿ ಮಾಡುವಂತಾದರೆ ಸಮಾಜಕ್ಕೆ ಉತ್ತಮ ವ್ಯಕ್ತಿಗಳು ಸಿಗಲು ಸಾಧ್ಯ. ಇಂದಿನ ದತ್ತಿ ಲಿಂ.ಸಿದ್ದಪ್ಪ ಬಸಲಿಂಗಪ್ಪ ಹಂಚಲಿ ಅವರ ಹೆಸರಿನಲ್ಲಿ ಅವರ…

Read More

ಆಲಮಟ್ಟಿ: ಸ್ಥಳೀಯ ಎಸ್.ವ್ಹಿ.ವ್ಹಿ. ಸಂಸ್ಥೆಯ ಮಂಜಪ್ಪ ಹರ್ಡೇಕರ ಸ್ಮಾರಕ ಸಂಯುಕ್ತ ಪ.ಪೂ ಹಾಗೂ ಪ್ರಥಮ ದರ್ಜೆ ಕಲಾ,ವಾಣಿಜ್ಯ ಕಾಲೇಜಿನ ಪ್ರಸಕ್ತ ೨೦೨೪-೨೫ ನೇ ಸಾಲಿನ ಕ್ರೀಡಾ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭ ಇದೇ ದಿ, ೫ ರಂದು ಸೋಮವಾರ ಕಾಲೇಜು ಆವರಣದಲ್ಲಿನ ಲಿಂ.ತೋಂಟದ ಡಾ,ಸಿದ್ದಲಿಂಗ ಮಹಾಸ್ವಾಮಿಗಳ ಸಭಾ ವೇದಿಕೆಯಲ್ಲಿ ಜರುಗಲಿದೆ.     ಲಿಂಗೈಕ್ಯ ತೋಂಟದ ಡಾ.ಸಿದ್ದಲಿಂಗ ಶ್ರೀಗಳ ದಿವ್ಯ ಪ್ರಕಾಶನದಲ್ಲಿ ತೋಂಟದ ಡಾ.ಸಿದ್ದರಾಮ ಮಹಾಸ್ವಾಮಿಗಳ ಕೃಪಾಶೀರ್ವಾದದಿಂದ ಹಮ್ಮಿಕೊಂಡಿರುವ ಈ ಕಾರ್ಯಕ್ರಮವನ್ನು ವಿಜಯಪುರ ಜಿಲ್ಲೆಯ ಪದವಿಪೂರ್ವ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಡಾ.ಸಿ.ಕೆ.ಹೊಸಮನಿ ಉದ್ಘಾಟಿಸಲಿದ್ದಾರೆ. ಚಿಮ್ಮಲಗಿ ಭಾಗ-೨ ಅರಳಲೆ ಕಟ್ಟಿಮನಿ ಹಿರೇಮಠದ ಸಿದ್ದರೇಣುಕ ಶಿವಾಚಾರ್ಯ ದಿವ್ಯ ಸಾನಿಧ್ಯ ವಹಿಸುವರು. ಗದುಗಿನ ಶ್ರೀ ಜಗದ್ಗುರು ತೋಂಟದಾರ್ಯ ವಿದ್ಯಾಪೀಠ ಹಾಗೂ ಆಲಮಟ್ಟಿಯ ಶ್ರೀಮದ್ ವೀರಶೈವ ವಿದ್ಯಾಲಯ ಅಸೋಸಿಯೇಷನ್ ಸಂಸ್ಥೆಯ ಕಾರ್ಯದರ್ಶಿ ಪ್ರೊ,ಶಿವಾನಂದ ಪಟ್ಟಣಶೆಟ್ಟರ ಅಧ್ಯಕ್ಷತೆ ವಹಿಸಲಿದ್ದಾರೆ.     ಮುಖ್ಯ ಅತಿಥಿಗಳಾಗಿ ಕರ್ನಾಟಕ ಪ್ರದೇಶ ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸಂಯುಕ್ತಾ ಪಾಟೀಲ, ಕೆಬಿಜೆಎನ್ಎಲ್…

Read More

ತಿಕೋಟಾ: ಪ್ರತಿ ತಿಂಗಳ ಮೊದಲ ಶನಿವಾರ ಕಂದಾಯ‌ ಇಲಾಖೆ ನೇತೃತ್ವದಲ್ಲಿ ನಡೆಯುವ ಪಿಂಚಣಿ ಅದಾಲತ್ ಕಾರ್ಯಕ್ರಮದಲ್ಲಿ‌ ಸ್ಥಳದಲ್ಲೆ 26 ಜನರಿಗೆ ಪಿಂಚಣಿ ಆದೇಶ ಪ್ರತಿಯನ್ನು ನೀಡಲಾಯಿತು.ತಾಲ್ಲೂಕಿನ ಹಂಚನಾಳ ಪಿ.ಎಚ್. ಗ್ರಾಮದಲ್ಲಿ ನಡೆದ ಪಿಂಚಣಿ ಅದಾಲತ್ ಕಾರ್ಯಕ್ರಮದಲ್ಲಿ ಆದೇಶ ಪ್ರತಿ ವಿತರಿಸಿ ಮಾತನಾಡಿದ ಗ್ರೇಡ್ 2 ತಹಶಿಲ್ದಾರ ಎಸ್.ಎಚ್.ಅರಕೇರಿ ರಾಜ್ಯ ಸರ್ಕಾರದ ವಿವಿಧ ಯೋಜನೆಗಳಾದ ಎಸ್.ಎಸ್.ವೈ, ವಿಧವಾ ವೇತನ, ಮೈತ್ರಿ, ಅಂಗವಿಕಲ, ಮನಸ್ವಿನಿ ಮುಂತಾದ ಯೋಜನೆಗಳ ಅರ್ಹ ಫಲಾನುಭವಿಗಳು ಸೂಕ್ತ ದಾಖಲೆಗಳನ್ನು ನೀಡಿದರೆ ಸ್ಥಳದಲ್ಲೆ ವಿಲೇವಾರಿ ಮಾಡಿ ಪರಿಶೀಲಿಸಿ ಆದೇಶ ಪತ್ರ ನೀಡುತ್ತೇವೆ. ಸಧ್ಯ ಪಿಂಚಣಿ ಅದಾಲತ್ ಇರುವದರಿಂದ ನಿಮ್ಮ ಗ್ರಾಮಕ್ಕೆ ಬಂದು ಅರ್ಜಿ ಪಡೆಯುತ್ತಿದ್ದೇವೆ. ಇದು ನಿರಂತರವಾಗಿ ನಡೆಯುವ ಕಾರ್ಯವಾಗಿದ್ದು ಇತರೆ ದಿನಗಳಲ್ಲಿ ನಮ್ಮ ಕಛೇರಿಗೆ ಬಂದು ಅರ್ಜಿ ಸಲ್ಲಿಸಿದರೂ ಅರ್ಹ ಫಲಾನುಭವಿಗಳಿಗೆ ಆದೇಶ ಪತ್ರ ನೀಡುತ್ತೇವೆ ಎಂದರು.ಸಂಜೆಯವರೆಗೆ ನಡೆದ ಪಿಂಚಣಿ ಅದಾಲತ್ ಕಾರ್ಯಕ್ರಮದಲ್ಲಿ ಒಟ್ಟು 40 ಅರ್ಜಿಗಳನ್ನು ಸ್ವೀಕರಿಸಿದರು. ಸ್ಥಳದಲ್ಲೆ ಇದ್ದ ಕಂದಾಯ ಅಧಿಕಾರಿಗಳು ವಿಲೇವಾರಿ ಮಾಡಿ ಪರಿಶೀಲಿಸಲಾಗಿ 14…

Read More