ರೇವತಗಾಂವ: ಮಳೆಗಾಲ ಬಂತೆಂದರೆ ಏನೋ ಒಂಥರಾ ಹರುಷ. ಬಿಸಿಲಿನ ಬೇಗೆಯಿಂದ ಬೇಸತ್ತ ಜೀವಗಳಿಗೆ ಮಳೆರಾಯ ತಂಪು ನೀಡುತ್ತಾನೆ. ಮಳೆಗಾಲ ಎಂದರೆ ಎಲ್ಲರಿಗೂ ಇಷ್ಟ, ಆದರೆ ಮಳೆರಾಯನ ಜೊತೆಗೆ ಸಂಗೀತ ಹಾಡುತ್ತಾ ಬರುವ ಸೊಳ್ಳೆರಾಯ ಯಾರಿಗೆ ಬೇಕು ಹೇಳಿ. ಮಳೆಗಾಲ ಆರಂಭವಾದಾಗಲೇ ಸೊಳ್ಳೆಗಳ ಕಾಟವೂ ಆರಂಭವಾಗುತ್ತದೆ.
ಸೊಳ್ಳೆಗಳಿಂದ ಚಿಕುನ್‌ಗುನ್ನಾ, ಡೆಂಗ್ಯು, ಮಲೇರಿಯಾ ಸೇರಿದಂತೆ ನೂರಾರು ಕಾಯಿಲೆಗಳು ಹರಡುತ್ತವೆ. ಹಾಗಾಗಿ ಮನೆಯ ಸುತ್ತಲಿನ ವಾತಾವರಣ, ರೋಗ ರುಜಿನುಗಳು ಹರಡದಂತೆ ಹಾಗೂ ಸೊಳ್ಳೆಗಳು ಉತ್ಪತ್ತಿಯಾಗುವ ನೀರು ನಿಲ್ಲದಂತೆ ಜಾಗೃತಿ ವಹಿಸಿ, ಮಳೆಗಾಲ ಬರುವ ಮೊದಲೇ ಅವುಗಳನ್ನು ತೆರವುಗೊಳಿಸಿ. ಸೊಳ್ಳೆ ಕಡಿತದಿಂದ ಸಾರ್ವಜನಿಕರನ್ನು ರಕ್ಷಿಸಲು ಸೊಳ್ಳೆ ನಿವಾರಕ ಸ್ಪ್ರೇ ಅಥವಾ ಸೊಳ್ಳೆ ನಿವಾರಕ ರೋಲ್‌ಅನ್ನು ಬಳಸುವ ಕಾರ್ಯ ಸರ್ಕಾರ ಮತ್ತು ಗ್ರಾಮ ಪಂಚಾಯತಿಯವರ ಕಾರ್ಯವಾಗಿದ್ದು.
ಆದರೆ ರೇವತಗಾಂವ ಗ್ರಾಮ ಪಂಚಾಯತ ವಾರ್ಡ್ ನಂ.೪ ರ ತಳವಾರ ಓಣೆಯಲ್ಲಿ ತಿಪ್ಪೆಯ ಕಸ, ಚರಂಡಿ ನೀರು ಹಾಗೂ ಮಳೆಯ ನೀರು ಸಂಗ್ರಹವಾಗಿ ಸೊಳ್ಳೆಗಳ ಕಾಟವು ವಿಪರೀತವಾಗಿದ್ದು, ಜನರು ಜೀವನ ನಡೆಸುವುದು ದುಸ್ಥರವಾಗಿದೆ ಎಂದು ಮಹಿಳೆಯರು ಆಕ್ರೋಶ ಹೊರಹಾಕುತ್ತಿದ್ದಾರೆ.
ಇಲ್ಲಿ ಮಹಿಳೆಯರು, ಮಕ್ಕಳು, ವೃದ್ಧರು ಮೂಗು ಮುಚ್ಚಿಕೊಂಡು ತಿರುಗುವ ಸ್ಥಿತಿ ನಿರ್ಮಾಣವಾಗಿದೆ. ಇನ್ನಾದರೂ ಸಂಬಂಧಿಸಿದ ಅಧಿಕಾರಿಗಳು ಗಮನ ಹರಿಸಿ ಸಮಸ್ಯೆಯನ್ನು ಬಗೆಹರಿಸಬೇಕಾಗಿದೆ.
ವಾರ್ಡ್ ನಿವಾಸಿ ರೇಣುಕಾ ಕೋಳಿಯವರು ಮಾತನಾಡುತ್ತ. ಈ ವಾಸನೆಯಿಂದ ಹಲವಾರು ಸಾಂಕ್ರಾಮಿಕ ರೋಗಗಳು ಹರಡುವ ಬೀತಿ ಉಂಟಾಗಿದೆ. ರಾತ್ರಿ ಸೊಳ್ಳೆಗಳ ಕಾಟ ವಿಪರೀತವಾಗಿದ್ದು. ಇಲ್ಲಿ ಜೀವನ ನಡೆಸುವುದು ದುಸ್ಥರವಾಗುತ್ತಿದೆ ಎಂದು ಅಧಿಕಾರಿಗಳ ವಿರುದ್ಧ ಮಹಿಳೆಯರು ಹಿಡಿಶಾಪ ಹಾಕುತ್ತಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment

