ಉನ್ನತ ಶಿಕ್ಷಣ ಸಚಿವರು, ಸಂಗೀತ ಮತ್ತು ಪ್ರಾದೇಶಿಕ ಕಲೆಗಳ ವಿವಿ ಮೈಸೂರು ಕುಲಪತಿಗೆ ಮನವಿ ಸಲ್ಲಿಕೆ
ತಾಳಿಕೋಟಿ: ಪಟ್ಟಣದ ಶ್ರೀ ಖಾಸ್ಗತೇಶ್ವರ ಸಂಗೀತ ಮಹಾವಿದ್ಯಾಲಯದಲ್ಲಿ 40 ವರ್ಷಗಳಿಂದ ನಡೆಯುತ್ತಾ ಬಂದಿರುವ ಹಿಂದುಸ್ತಾನಿ ಸಂಗೀತ ನೃತ್ಯ ತಾಳವಾದ್ಯ ಪರೀಕ್ಷಾ ಕೇಂದ್ರವನ್ನು ರದ್ದುಗೊಳಿಸಿರುವುದನ್ನು ಖಂಡಿಸಿ ಅದನ್ನು ಮತ್ತೆ ಪುನರ್ ಆರಂಭಿಸಲು ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿ ವಿವಿಧ ಸಂಗೀತ ಶಾಲೆಯ ಮುಖ್ಯಸ್ಥರು ನಾಗರಿಕರ ಬೆಂಬಲದೊಂದಿಗೆ ಶನಿವಾರ ಶಾಂತಿಯುತ ಪ್ರತಿಭಟನೆ ನಡೆಸಿ ತಹಸಿಲ್ದಾರ್ ಮೂಲಕ ಉನ್ನತ ಶಿಕ್ಷಣ ಸಚಿವರು, ಸಂಗೀತ ಮತ್ತು ಪ್ರಾದೇಶಿಕ ಕಲೆಗಳ ವಿಶ್ವವಿದ್ಯಾಲಯ ಮೈಸೂರು ಕುಲಪತಿಗಳ ಇವರಿಗೆ ಮನವಿ ಸಲ್ಲಿಸಿದರು. ಈ ಸಮಯದಲ್ಲಿ ಸಂಗೀತ ಶಾಲೆಯ ಮುಖ್ಯಸ್ಥರು ಹಾಗೂ ನಾಗರಿಕರು ಮಾತನಾಡಿ ಸುಮಾರು 40 ವರ್ಷಗಳಿಂದ ಈ ಭಾಗದಲ್ಲಿರುವ ಅಂಧರು ಅನಾಥರು ಹಾಗೂ ನಿರ್ಗತಿಕರಿಗೆ ಊಟ ವಸತಿಯ ವ್ಯವಸ್ಥೆಯನ್ನು ಕಲ್ಪಿಸಿ ಸಂಗೀತ ವಿಧ್ಯಯನ್ನು ನೀಡಿ ಅವರನ್ನು ಸ್ವಾವಲಂಬಿಗಳನ್ನಾಗಿ ಮಾಡಲು ಶ್ರಮಿಸುತ್ತಾ ಬಂದು ಸಂಗೀತ ಕಾಶಿ ಎಂದೆ ಪ್ರಸಿದ್ಧವಾಗಿರುವ ಶ್ರೀ ಖಾಸ್ಗತೇಶ್ವರ ಸಂಗೀತ ಮಾವಿದ್ಯಾಲಯದಲ್ಲಿ ನಡೆಯುತ್ತಾ ಬಂದಿರುವ ಪರೀಕ್ಷಾ ಕೇಂದ್ರವನ್ನು ಏಕಾಏಕಿ ರದ್ದುಗೊಳಿಸಿ ಅದನ್ನು ಮೈಸೂರಿನ ಡಾ. ಗಂಗೂಬಾಯಿ ಹಾನಗಲ್ ವಿಶ್ವವಿದ್ಯಾಲಯಕ್ಕೆ ವರ್ಗಾಯಿಸಿರುವುದು ಖಂಡನೀಯವಾಗಿದೆ ಇದರಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಸಾಕಷ್ಟು ತೊಂದರೆಯಾಗುತ್ತದೆ ಕಾರಣ ಇದನ್ನು ರದ್ದುಗೊಳಿಸಿ ಮತ್ತೆ ಮೊದಲಿನಂತೆ ತಾಳಿಕೋಟಿ ಸಂಗೀತ ಮಹಾವಿದ್ಯಾಲಯದಲ್ಲಿ ಪರೀಕ್ಷಾ ಕೇಂದ್ರವನ್ನು ನಡೆಸಲು ಅನುವು ಮಾಡಲು ಕೊಡಬೇಕೆಂದು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಬೆಂಗಳೂರು ಇವರಲ್ಲಿ ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಖಾಸ್ಗತೇಶ್ವರ ಮಠ ಮುಖ್ಯಸ್ಥ ವೇ.ಮೂ.ಮುರಗೇಶ ವಿರಕ್ತ ಮಠ, ಆದಯ್ಯ ಹಿರೇಮಠ ಭಂಟನೂರ, ಸಂಗಮೇಶ್ ಶಿವಣಗಿ, ಈಶ್ವರ್ ಬಡಿಗೇರ, ನಿಂಗಣ್ಣ ಪತ್ತಾರ ಕೊಡೆಕಲ್, ಪ್ರವೀಣ ಪತ್ತಾರ ಹುಣಸಗಿ, ಗುರು ಬಿರಾದಾರ ಹುಣಸಗಿ, ಬಸವರಾಜ್ ಸಾವಳಗಿ ಮುದ್ದೇಬಿಹಾಳ, ಶ್ವೇತಾ ಯರಗಲ್, ಕಾಶಿನಾಥ್ ಕಾರಗನೂರು, ಗೋಪಾಲ್ ಕಟ್ಟಿಮನಿ, ದಿಲೀಪಸಿಂಗ ಹಜೇರಿ, ದೇವರಾಜ್ ಏರ್ಕಾಳ್, ಅಮರೇಶ್ ಇಂಗಳಗಿ, ಪರುಶುರಾಮ್ ಚಳ್ಳಗಿ, ಎಲ್ಲಪ್ಪ. ನಾಗರಾಜ್ ಹೂಗಾರ, ಸುರೇಶ್ ಹೂಗಾರ, ವಿನೋದ ಕುಮಾರ ಚಿಕ್ಕಮಠ, ವೀರೇಶ್ ಬಡಿಗೇರ ಹನುಮಂತ ಭಂಟನೂರ, ರಿಯಾಜ್ ಮುಲ್ಲಾ ಹಾಗೂ ವಿವಿಧ ಸಮಾಜದ ಗಣ್ಯರು ಪಾಲ್ಗೊಂಡಿದ್ದರು.
ಪ್ರತಿಭಟನೆಯಲ್ಲಿ ಕೈಯಲ್ಲಿ ಫ್ಲೆಕಾಡ್ಸ ಹಿಡಿದುಕೊಂಡು ಸಾರ್ವಜನಿಕರ ಗಮನ ಸೆಳೆದರು.

