ತಿಕೋಟಾ: ಪ್ರತಿ ತಿಂಗಳ ಮೊದಲ ಶನಿವಾರ ಕಂದಾಯ ಇಲಾಖೆ ನೇತೃತ್ವದಲ್ಲಿ ನಡೆಯುವ ಪಿಂಚಣಿ ಅದಾಲತ್ ಕಾರ್ಯಕ್ರಮದಲ್ಲಿ ಸ್ಥಳದಲ್ಲೆ 26 ಜನರಿಗೆ ಪಿಂಚಣಿ ಆದೇಶ ಪ್ರತಿಯನ್ನು ನೀಡಲಾಯಿತು.
ತಾಲ್ಲೂಕಿನ ಹಂಚನಾಳ ಪಿ.ಎಚ್. ಗ್ರಾಮದಲ್ಲಿ ನಡೆದ ಪಿಂಚಣಿ ಅದಾಲತ್ ಕಾರ್ಯಕ್ರಮದಲ್ಲಿ ಆದೇಶ ಪ್ರತಿ ವಿತರಿಸಿ ಮಾತನಾಡಿದ ಗ್ರೇಡ್ 2 ತಹಶಿಲ್ದಾರ ಎಸ್.ಎಚ್.ಅರಕೇರಿ ರಾಜ್ಯ ಸರ್ಕಾರದ ವಿವಿಧ ಯೋಜನೆಗಳಾದ ಎಸ್.ಎಸ್.ವೈ, ವಿಧವಾ ವೇತನ, ಮೈತ್ರಿ, ಅಂಗವಿಕಲ, ಮನಸ್ವಿನಿ ಮುಂತಾದ ಯೋಜನೆಗಳ ಅರ್ಹ ಫಲಾನುಭವಿಗಳು ಸೂಕ್ತ ದಾಖಲೆಗಳನ್ನು ನೀಡಿದರೆ ಸ್ಥಳದಲ್ಲೆ ವಿಲೇವಾರಿ ಮಾಡಿ ಪರಿಶೀಲಿಸಿ ಆದೇಶ ಪತ್ರ ನೀಡುತ್ತೇವೆ. ಸಧ್ಯ ಪಿಂಚಣಿ ಅದಾಲತ್ ಇರುವದರಿಂದ ನಿಮ್ಮ ಗ್ರಾಮಕ್ಕೆ ಬಂದು ಅರ್ಜಿ ಪಡೆಯುತ್ತಿದ್ದೇವೆ. ಇದು ನಿರಂತರವಾಗಿ ನಡೆಯುವ ಕಾರ್ಯವಾಗಿದ್ದು ಇತರೆ ದಿನಗಳಲ್ಲಿ ನಮ್ಮ ಕಛೇರಿಗೆ ಬಂದು ಅರ್ಜಿ ಸಲ್ಲಿಸಿದರೂ ಅರ್ಹ ಫಲಾನುಭವಿಗಳಿಗೆ ಆದೇಶ ಪತ್ರ ನೀಡುತ್ತೇವೆ ಎಂದರು.
ಸಂಜೆಯವರೆಗೆ ನಡೆದ ಪಿಂಚಣಿ ಅದಾಲತ್ ಕಾರ್ಯಕ್ರಮದಲ್ಲಿ ಒಟ್ಟು 40 ಅರ್ಜಿಗಳನ್ನು ಸ್ವೀಕರಿಸಿದರು. ಸ್ಥಳದಲ್ಲೆ ಇದ್ದ ಕಂದಾಯ ಅಧಿಕಾರಿಗಳು ವಿಲೇವಾರಿ ಮಾಡಿ ಪರಿಶೀಲಿಸಲಾಗಿ 14 ಅರ್ಜಿಗಳು ಹೆಚ್ಚುವರಿ ಜಮೀನು ಇತರೆ ಕಾರಣಗಳಿಂದ ತಿರಸ್ಕೃತಗೊಂಡವು. ಉಳಿದ 26 ಅರ್ಜಿಗಳ ದಾಖಲೆಗಳು ಸರಿಯಾಗಿ ಇರುವದರಿಂದ ಅರ್ಹ 26 ಜನರಿಗೆ ಸ್ಥಳದಲ್ಲೆ ಆದೇಶ ಪತ್ರ ನೀಡಿದರು.
ಈ ಸಂದರ್ಭದಲ್ಲಿ ಉಪತಹಶಿಲ್ದಾರ ಎಸ್.ಎಸ್.ತಾವರಖೇಡ, ಆನಂದ ಕುಲಕರ್ಣಿ, ಶಿವರಾಯ ಸೋಲಾಪುರ, ಗ್ರಾಮ ಪಂಚಾಯತಿ ಅಧ್ಯಕ್ಷರು, ಸದಸ್ಯರು, ಗ್ರಾಮದ ಮುಖಂಡರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

