Author: editor.udayarashmi@gmail.com

ಆರೋಪ ಸತ್ಯಕ್ಕೆ ದೂರ: ಕೆ.ಎಸ್.ಆರ್.ಟಿ.ಸಿ. ಸ್ಟಾಪ್ & ವರ್ಕರ್ಸ್ ಪದಾಧಿಕಾರಿಗಳ ಸ್ಪಷ್ಠನೆ ವಿಜಯಪುರ: ಅಖಿಲ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಮಹಾಮಂಡಳಿ ವಿಜಯಪುರ ವಿಭಾಗದ ಪದಾಧಿಕಾರಿಗಳು ಆ.೦೨ ರಂದು ವಿಜಯಪುರ ವಿಭಾಗಕ್ಕೆ ವಿಭಾಗೀಯ ನಿಯಂತ್ರಣಾಧಿಕಾರಿಗಳಾಗಿ ವರ್ಗಾವಣೆಗೊಂಡು ಬಂದಿರುವ ನಾರಾಯಣಪ್ಪ ಕುರಬರ ಇವರ ಮೇಲೆ ಗುರುತರ ಆರೋಪವನ್ನು ಮಾಡಿ ಇವರ ಬಗ್ಗೆ ಇಲ್ಲ ಸಲ್ಲದ ಅನೇಕ ಸುಳ್ಳು ಸಂಗತಿಗಳನ್ನು ನೈಜ ಸಂಗತಿಗಳೆಂದು ಬಿಂಬಿಸಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಉನ್ನತ ಮಟ್ಟದ ಅಧಿಕಾರಿಗಳಿಗೆ ಹಾಗೂ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಸಚಿವರಿಗೆ ನಾರಾಯಣಪ್ಪ ಕುರುಬರ ಇವರ ವಿರುದ್ಧ ಸತ್ಯಕ್ಕೆ ದೂರವಾದ ಗುರುತರ ಆರೋಪವನ್ನು ಮಾಡಿರುತ್ತಾರೆ. ಸದರಿಯವರು ಮಾಡಿದ ಆರೋಪದಲ್ಲಿ ಯಾವುದೇ ತರಹದ ಸತ್ಯಾಂಶ ಇರುವುದಿಲ್ಲ. ವೈಯಕ್ತಿಕ ಲಾಭದ ಆಸೆಗಾಗಿ ತಮಗೆ ವಿಭಾಗೀಯ ನಿಯಂತ್ರಣಾಧಿಕಾರಿಗಳು ಅನುಕೂಲಕರವಾಗಿಲ್ಲವೆಂಬ ಸಂಗತಿಯನ್ನು ಮನಸ್ಸಿನಲ್ಲಿಟ್ಟುಕೊಂಡು ಅವರ ತೇಜೋವಧೆಗಾಗಿ ಪ್ರಯತ್ನಿಸಿ, ಆ.೦೪ ರಂದು ವಿಜಯಪಥ ದಲ್ಲಿ ಗಂಭೀರವಾದ ಸುಳ್ಳು ಆರೋಪವನ್ನು ಮಾಡಿರುತ್ತಾರೆ.ನಾರಾಯಣಪ್ಪ ಕುರುಬರ ರವರು ಬೆಳಗಾವಿಯ ೨೦೨೧ರ…

Read More

ಉಜನಿ ಜಲಾಶಯದಿಂದ 1.20 ಲಕ್ಷ ಕ್ಯುಸೆಕ್ ನೀರು ಬಿಡುಗಡೆ ಚಡಚಣ: ಮಹಾರಾಷ್ಟ್ರದಲ್ಲಿ ಧಾರಕಾರ ಮಳೆಯಿಂದ ಮಹಾರಾಷ್ಟ್ರ ಉಜನಿ ಜಲಾಶಯದಿಂದ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿರುವುದರಿಂದ ಗಡಿಭಾಗದಲ್ಲಿರುವ ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಪ್ರವಾಹದ ಭೀತಿ ಬರಬಹುದು ಮುನ್ನೆಚರಿಕೆಯಿಂದ ಗ್ರಾಮಸ್ಥರು ಇರಬೇಕು ಎಂದು ಚಡಚಣ ತಹಶೀಲ್ದಾರ ಸಂಜಯ ಇಂಗಳೆ ಧೂಳಖೇಡ, ಶಿರನಾಳ ಭೇಟಿ ನೀಡಿ ನದಿ ಪಾತ್ರದ ನೀರಿನ ಮಟ್ಟ ಪರಿಶೀಲನೆ ಮಾಡಿದ ನಂತರ ಗ್ರಾಮಸ್ಥರಿಗೆ ತಿಳಿ ಹೇಳಿದರು.ಮಹಾರಾಷ್ಟ್ರ ಉಜನಿ ಜಲಾಶಯದಿಂದ ಸೋಮವಾರ 1.20 ಲಕ್ಷ ಕ್ಯುಸಕ್ ನೀರು ಈಗಾಗಲೇ ಬಿಡಗಡೆ ಮಾಡಲಾಗಿದೆ. ಮಹಾರಾಷ್ಟ್ರದಲ್ಲಿ ಸತತವಾಗಿ ಮಳೆ ಇರುವುದರಿಂದ ಯಾವ ಕ್ಷಣವಾದರೂ ನೀರಿನ ಪ್ರಮಾಣ ಹೆಚ್ಚಗಬಹುದು ಎಂದು ಮಾಹಿತಿಯಿದೆ. ಹೀಗಾಗಿ ಪ್ರವಾಹ ಹೆಚ್ಚಾಗುವ ಸಾಧ್ಯತೆ ಇದೆ. ಮುನ್ನೆಚರಿಕೆ ಕ್ರಮವಾಗಿ ನದಿ ತೀರದ ಜನರಿಗೆ ತಿಳಿಸಲಾಗಿದೆ. ಜನ ಜಾನುವಾರುಗಳು ಸುರಕ್ಷಿತ ಸ್ಥಳಕ್ಕೆ ಸಾಗಿಸಲು ಹೇಳಲಾಗಿದೆ ಎಂದರು.ಈ ಸಂದರ್ಭದಲ್ಲಿ ನೋಡಲ್ ಅಧಿಕಾರಿ ಕುಂಬಾರ, ತಾಪಂ ಇಒ ಸಂಜಯ ಖಡಗೇಕರ್, ಕಂದಾಯ ನಿರೀಕ್ಷಕ…

Read More

ವಿಜಯಪುರ: ಜನಪರ ನಾಯಕ ಭೀಮಸಿ ಕಲಾದಗಿ ಅವರ ನಿಧನಕ್ಕೆ ಬೃಹತ್ ಮತ್ತು ಕೈಗಾರಿಕೆ, ಮೂಲಸೌಕರ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಅಲ್ಲದೇ, ಸಕಲ ಸರಕಾರಿ ಗೌರವಗಳೊಂದಿಗೆ ಮೃತರ ಅಂತ್ಯಕ್ರಿಯೆ ಕೈಗೊಳ್ಳಲು ಮುಖ್ಯಮಂತ್ರಿಗಳೊಂದಿಗೆ ಮಾತನಾಡಿ ಕ್ರಮ ಕೈಗೊಂಡಿದ್ದಾರೆ.ಭೀಮಸಿ ಕಲಾದಗಿ ಅವರು ವಯೋಸಹಜ ಕಾರಣಗಳಿಂದ ನಿಧನರಾಗಿದ್ದರು. ಈ ವಿಷಯ ತಿಳಿದ ತಕ್ಷಣ ಸಚಿವರು ಸಿಎಂ ಎಸ್. ಸಿದ್ಧರಾಮಯ್ಯ ಅವರೊಂದಿಗೆ ಮಾತನಾಡಿ, ಭೀಮಸಿ ಕಲಾದಗಿ ಅವರು ಕಳೆದ 50 ವರ್ಷಗಳಿಂದ ಸಾರ್ವಜನಿಕ ಸೇವೆಯಲ್ಲಿ ತೊಡಗಿಸಿಕೊಂಡು ರೈತರು, ಕಾರ್ಮಿಕರು ಮತ್ತು ಮಹಿಳೆಯರ ಹಕ್ಕುಗಳಿಗಾಗಿ ಕ್ರಿಯಾಶೀಲರಾಗಿ ನಡೆಸಿದ ಹೋರಾಟದ ಕುರಿತು ಮಾಹಿತಿ ನೀಡಿದರು. ಅಲ್ಲದೇ, ಸಕಲ ಸರಕಾರಿ ಗೌರವಗಳೊಂದಿಗೆ ಅವರ ಅಂತ್ಯಕ್ರಿಯೆ ನೆರವೇರಿಸಿ ಅವರಿಗೆ ನಿಜವಾದ ಶೋಕಗೌರವ ನೀಡದಂತಾಗುತ್ತದೆ ಎಂದು ಮನವರಿಕೆ ಮಾಡಿಕೊಟ್ಟರು. ಈ ಹಿನ್ನೆಲೆಯಲ್ಲಿ ಸರಕಾರ ಸಕಲ ಸರಕಾರಿ ಗೌರವಗಳೊಂದಿಗೆ ಮೃತರ ಅಂತ್ಯಕ್ರಿಯೆ ನೆರವೇರಿಸಲು ಆದೇಶ ಹೊರಡಿಸಿದೆ.ಈ ಮಧ್ಯೆ, ಭೀಮಸಿ ಕಲಾದಗಿ ವಯೋಸಹಜ ಕಾರಣಗಳಿಂದ ಭೀಮಸಿ ಕಲಾದಗಿ…

Read More

ಇಂಡಿ: ರೈಲಿಗೆ ತಲೆ ಕೊಟ್ಟು ವ್ಯಕ್ತಿಯೋರ್ವ ಆತ್ಮಹತ್ಯೆಗೆ ಶರಣಾಗಿರುವ ಘಟನೆವಿಜಯಪುರ ಜಿಲ್ಲೆಯ ಇಂಡಿ ರೈಲು ನಿಲ್ದಾಣದಲ್ಲಿ ನಡೆದಿದೆ.ವಿಜಯಪುರದಿಂದ ಸೋಲಾಪುರಕ್ಕೆ ಹೋಗುವ ಡೆಮೋ ರೈಲ್ವೆ ಹಳಿಯಲ್ಲಿ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇನ್ನು ವ್ಯಕ್ತಿಯ ದೇಹ ಎರಡು ತುಂಡಾಗಿದ್ದು, ಮೃತಪಟ್ಟಿರುವ ವ್ಯಕ್ತಿಯ ಹೆಸರು ತಿಳಿದುಬಂದಿಲ್ಲ. ಘಟನಾ ಸ್ಥಳಕ್ಕೆ ವಿಜಯಪುರ ರೈಲ್ವೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸ್ಥಳ ದಲ್ಲಿ ಒಂದು ಮೊಬೈಲ್ ಪತ್ತೆಯಾಗಿದೆವಿಜಯಪುರ ರೈಲ್ವೆ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದ್ದು ಪ್ರಕರಣ ದಾಖಲಾಗಿದೆ.

Read More

ತಾಳಿಕೋಟಿ: ಆ.15 ರಂದು ತಾಲೂಕಿನಾದ್ಯಂತ ಸ್ವಾತಂತ್ರೋತ್ಸವ ದಿನಾಚರಣೆಯನ್ನು ಸಡಗರ ಸಂಭ್ರಮ ಹಾಗೂ ಅರ್ಥಪೂರ್ಣವಾಗಿ ಆಚರಿಸಲು ಮಂಗಳವಾರ ತಹಸಿಲ್ದಾರ್ ಚಾಲಕ್ ಇವರ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ನಿರ್ಧರಿಸಲಾಯಿತು. ಸ್ವಾತಂತ್ರ್ಯ ದಿನಾಚರಣೆ ರಾಷ್ಟ್ರೀಯ ಹಬ್ಬವಾಗಿರುವುದರಿಂದ ತಾಲೂಕಿನ ಎಲ್ಲಾ ಸರ್ಕಾರಿ ಕಚೇರಿ ಹಾಗೂ ಶಿಕ್ಷಣ ಸಂಸ್ಥೆಗಳಲ್ಲಿ ರಾಷ್ಟ್ರಪಿತ ಮಹಾತ್ಮಗಾಂಧಿ,ಸಂವಿಧಾನ ಶಿಲ್ಪಿ ಡಾ.ಬಿ. ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪೂಜೆ ಮತ್ತು ನಮನ ಜೊತೆಗೆ ರಾಷ್ಟ್ರಧ್ವಜಾರೋಹಣ ಮಾಡುವಂತೆ ಅವರು ಅಧಿಕಾರಿಗಳಿಗೆ ಸೂಚಿಸಿದರು. ಸ್ವಾತಂತ್ರ್ಯೋತ್ಸವ ದಿನಾಚರಣೆಯ ಸಿದ್ಧತೆಗಳ ಕುರಿತು ಪಟ್ಟಣದ ಗಣ್ಯರೊಂದಿಗೆ ಚರ್ಚಿಸಿದ ಅವರು ಅವರ ಸಲಹೆ ಸೂಚನೆಗಳನ್ನು ಪಡೆದುಕೊಂಡರು.ಅಂದು ಮುಂಜಾನೆ ಒಂಬತ್ತು ಗಂಟೆ ಒಳಗಾಗಿ ಪಟ್ಟಣದ ಸರ್ಕಾರಿ ಶಾಲಾ ಮೈದಾನದಲ್ಲಿ ಧ್ವಜಾರೋಹಣ ಕಾರ್ಯಕ್ರಮ ನೆರವೇರುವುದು ಮುದ್ದೇಬಿಹಾಳ ಶಾಸಕ ಸಿ.ಎಸ್.ನಾಡಗೌಡ (ಅಪ್ಪಾಜಿ) ಅವರು ಧ್ವಜಾರೋಹಣ ನೆರವೇರಿಸುವರು. ಪೊಲೀಸ್ ಇಲಾಖೆ ವತಿಯಿಂದ ಪಥ ಸಂಚಲನ ಗೌರವ ವಂದನೆ, ಶಾಲಾ ಮಕ್ಕಳಿಂದ ಸಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲು ಜವಾಬ್ದಾರಿಯನ್ನು ವಹಿಸಿಕೊಡಲಾಯಿತು. ವೇದಿಕೆ ಸಿದ್ಧತೆ ಅಲಂಕಾರ ಆಸನ ವ್ಯವಸ್ಥೆ ಕುಡಿಯುವ ನೀರಿನ ವ್ಯವಸ್ಥೆ…

Read More

ವಿಜಯಪುರ: ವಿಜಯಪುರದಿಂದ ಮುಳಸಾವಳಗಿಗೆ ಹೊರಡುವ ವಿಜಯಪುರ ಘಟಕ-೧ರ ಬಸ್ ಸಂಖ್ಯೆ ಕೆಎ೨೮ ಎಫ್-೧೭೦೩ರಲ್ಲಿ ಪ್ರಯಾಣಿಕರೋರ್ವರು ಮರೆತು ಹೋದ ಲ್ಯಾಪ್‌ಟಾಪ್‌ನ್ನು ಚಾಲಕ ಶೇಖರ ಬೋಗಂ ಹಾಗೂ ನಿರ್ವಾಹಕ ಗುಂಡೂರಾವ ರಾಠೋಡ ಅವರು ಪ್ರಯಾಣಿಕರು ಮರಳಿಸುವ ಮೂಲಕ ಪ್ರಾಮಾಣಿಕತೆ ಮೆರೆದಿರುವ ಘಟನೆ ಜರುಗಿದೆ.ವಿಜಯಪುರದಿಂದ ಮುಳಸಾವಳಗಿಗೆ ಪ್ರಯಾಣಿಸುತ್ತಿದ್ದ ನೂರಲಿಶಾ ಮಕಾಂದಾರ ಅವರು ಮುಳಸಾವಳಗಿಗೆ ಇಳಿಯುವ ಸಂದರ್ಭದಲ್ಲಿ ತನ್ನ ೫೦ ಸಾವಿರ ಬೆಲೆಬಾಳುವ ಲ್ಯಾಪಟಾಪ್ ಬಸ್ಸಿನಲ್ಲಿಯೇ ಮರೆತು ಬಿಟ್ಟು ಹೋಗಿದ್ದರು. ಬಸ್ಸಿನ ಚಾಲಕ ಹಾಗೂ ನಿರ್ವಾಹಕರು ಲ್ಯಾಪಟಾಪ್‌ನ್ನು ಮೂಲ ಮಾಲೀಕರಿಗೆ ಒಪ್ಪಿಸುವ ಮೂಲಕ ಇತರರಿಗೂ ಮಾದರಿಯಾಗಿದ್ದಾರೆ. ಇವರ ಕಾರ್ಯಕ್ಕೆ ಲ್ಯಾಪಟಾಪ್ ಮಾಲೀಕರಾದ ನೂರಲಿಶಾ ಮಕಾಂದಾರ ಅವರು ಬಹುಮಾನ ನೀಡಲು ಮುಂದೆ ಹೋದಾಗ ನಯವಾಗಿ ತಿರಸ್ಕರಿಸುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾರೆ. ಇವರ ಕಾರ್ಯಕ್ಕೆ ವಿವಿಧ ಸಾರ್ವಜನಿಕರು ಕೊಂಡಾಡಿದ್ದಾರೆ.

Read More

ಬಸವನಬಾಗೇವಾಡಿ: ನಾಡಿನಲ್ಲಿ ಶ್ರಾವಣ ಮಾಸದ ಆರಂಭವಾಗುತ್ತಿದ್ದಂತೆ ಪಟ್ಟಣ ಸೇರಿದಂತೆ ತಾಲೂಕಿನಲ್ಲಿರುವ ಎಲ್ಲ ದೇವಸ್ಥಾನಗಳಲ್ಲಿ ಶ್ರಾವಣ ಮಾಸದ ವಿಶೇಷ ಪೂಜೆ, ರುದ್ರಾಭಿಷೇಕ,ದೇವರಿಗೆ ಭಕ್ತರು ಹರಕೆ ಸಲ್ಲಿಸುವುದು, ಪುರಾಣ-ಪ್ರವಚನ ಆರಂಭ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಶ್ರಾವಣ ಮಾಸದ ಮೊದಲ ದಿನವಾದ ಸೋಮವಾರ ಆರಂಭವಾದವು.ಎಲ್ಲ ಮಾಸಗಳಲ್ಲಿ ಶ್ರಾವಣ ಮಾಸ ಹಿಂದುಗಳಿಗೆ ಪವಿತ್ರ ಮಾಸವಾಗಿದೆ. ಈ ಮಾಸದಲ್ಲಿ ಜನರು ಉಪವಾಸ ವ್ರತ ಮಾಡುವದು ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ಸಹಜ. ಈ ಮಾಸದಲ್ಲಿ ಹಬ್ಬಗಳು ಸಾಲು ಸಾಲಾಗಿ ಆರಂಭವಾಗುತ್ತವೆ. ಈ ಮಾಸದಲ್ಲಿ ನಾಗರಪಂಚಮಿ ಮೊದಲ ಬರುವ ಹಬ್ಬವಾಗಿದೆ. ನಂತರ ವರಮಹಾಲಕ್ಷ್ಮೀ ಪೂಜೆ, ಕೃಷ್ಣ ಜನ್ಮಾಷ್ಟಮಿ, ನೂಲ ಹುಣ್ಣಿಮೆಯಂದು ರಕ್ಷಾ ಬಂಧನ ಹಬ್ಬ, ರಾಘವೇಂದ್ರ ಸ್ವಾಮೀಜಿಗಳ ಆರಾಧನೆ ಸೇರಿದಂತೆ ಅನೇಕ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತವೆ. ಶ್ರಾವಣ ಮಾಸದಲ್ಲಿನ ಪ್ರತಿ ಶುಕ್ರವಾರ ಸುಮಂಗಲೆಯರು ಲಕ್ಷ್ಮೀ ಪೂಜೆ ಮಾಡುವುದು ವಿಶೇಷ.ಪಟ್ಟಣದ ಆರಾಧ್ಯದೈವ ಮೂಲನಂದೀಶ್ವರ (ಬಸವೇಶ್ವರ) ದೇವರಿಗೂ ಸಹ ಪ್ರತಿ ಶ್ರಾವಣ ಮಾಸದಲ್ಲಿ ಒಂದು ತಿಂಗಳ ಕಾಲ ಬೆಳಗ್ಗೆ ವಿಶೇಷ…

Read More

ಬಸವನಬಾಗೇವಾಡಿ: ಪಟ್ಟಣದ ಆರಾಧ್ಯದೈವ ಮೂಲನಂದೀಶ್ವರ (ಬಸವೇಶ್ವರ) ಜಾತ್ರಾಮಹೋತ್ಸವ ಹಾಗೂ ಶ್ರಾವಣ ಮಾಸದಂಗವಾಗಿ ಒಂದು ತಿಂಗಳ ಕಾಲ ಹಮ್ಮಿಕೊಂಡಿರುವ ಬಸವಾದಿ ಪ್ರಮಥರ ವಚನ ಚಿಂತನ ಪ್ರವಚನ ಕಾರ್ಯಕ್ರಮದ ಸದುಪಯೋಗವನ್ನು ಜನತೆ ಪಡೆದುಕೊಂಡು ಬಸವಾದಿ ಪ್ರಮಥರ ವಿಚಾರಧಾರೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಸುಂದರ ಜೀವನ ಸಾಗಿಸಬೇಕೆಂದು ಕೂಡಲಸಂಗಮ ಅಭಿವೃದ್ಧಿ ಮಂಡಳಿಯ ಆಯುಕ್ತ ಬಸಪ್ಪ ಪೂಜಾರಿ ಹೇಳಿದರು.ಪಟ್ಟಣದ ಬಸವೇಶ್ವರ ದೇವಾಲಯದ ಅಂತರಾಷ್ಟ್ರೀಯ ಶಾಲಾ ಆವರಣದಲ್ಲಿರುವ ನಂದೀಶ್ವರ ರಂಗಮಂದಿರದಲ್ಲಿ ಸೋಮವಾರ ಪಟ್ಟಣದ ಆರಾಧ್ಯದೈವ ಮೂಲನಂದೀಶ್ವರ(ಬಸವೇಶ್ವರ) ಜಾತ್ರಾಮಹೋತ್ಸವ ಹಾಗೂ ಶ್ರಾವಣ ಮಾಸದಂಗವಾಗಿ ಕೂಡಲಸಂಗಮ ಅಭಿವೃದ್ಧಿ ಮಂಡಳಿ, ಬಸವೇಶ್ವರ ಜಾತ್ರಾಮಹೋತ್ಸವ ಸಮಿತಿ, ಬಸವೇಶ್ವರ ಸೇವಾ ಸಮಿತಿ ಸಹಯೋಗದಲ್ಲಿ ಹಮ್ಮಿಕೊಂಡಿರುವ ಬಸವಾದಿ ಪ್ರಮಥರ ವಚನ ಚಿಂತನ ಪ್ರವಚನ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯಅತಿಥಿ ಸ್ಥಾನ ವಹಿಸಿ ಮಾತನಾಡಿದ ಅವರು, ೧೨ ನೇ ಶತಮಾನದ ಬಸವಾದಿ ಶರಣರು ಬದುಕಿನ ಮೌಲ್ಯಗಳನ್ನು ತಮ್ಮ ವಚನಗಳ ಮೂಲಕ ನಮಗೆ ನೀಡಿದ್ದಾರೆ. ವಚನಗಳಲ್ಲಿರುವ ಈ ಮೌಲ್ಯಗಳನ್ನು ನಾವೆಲ್ಲರೂ ಅರಿತುಕೊಂಡು ಸನ್ಮಾರ್ಗದಲ್ಲಿ ನಡೆಯುವ ಮೂಲಕ ಅವರಿಗೆ ಗೌರವ ಸಲ್ಲಿಸಬೇಕೆಂದರು.ಪ್ರವಚನಕಾರ ಬಳೂಟಗಿಯ…

Read More

ಆಲಮಟ್ಟಿ: ಖಾಸಗಿ ಶಾಲಾ ಬಸ್, ಸರ್ಕಾರಿ ಅಂಗನವಾಡಿಗೆ ಹೊರಟಿದ್ದ ಮಗುವಿಗೆ ಡಿಕ್ಕಿ ಹೊಡೆದು ಐದು ವರ್ಷz ಮಗು ಸಾವನ್ನಪ್ಪಿದ ಘಟನೆ ಮಂಗಳವಾರ ಅರಳದಿನ್ನಿ ಗ್ರಾಮದಲ್ಲಿ ಜರುಗಿದೆ.ಮೃತ ಮಗು ಅರಳದಿನ್ನಿ ಗ್ರಾಮದ ಬಸವರಾಜ ಮಂಜುನಾಥ ಚೋಪಡೆ. (೫). ಬಾಲಕ ಬಸವರಾಜ ಅದೇ ಗ್ರಾಮದ ಅಂಗನವಾಡಿಯಲ್ಲಿ ಕಲಿಯುತ್ತಿದ್ದ. ಎಂದಿನಂತೆ ಶಾಲೆಗೆ ಮಂಗಳವಾರ ಬೆಳಿಗ್ಗೆ ಹೊರಟಿದ್ದ. ಆದರೆ ಅದೇ ಸಮಯಕ್ಕೆ ಗ್ರಾಮಕ್ಕೆ ಬಂದ ನಿಡಗುಂದಿ ಪಟ್ಟಣದ ಬಿ.ಎಂ.ಎಸ್. ಶಿಕ್ಷಣ ಸಂಸ್ಥೆಯ ಶಾಲಾ ಬಸ್ ಆ ಮಗುವಿಗೆ ಡಿಕ್ಕಿ ಹೊಡೆದಿದೆ. ನೆಲಕ್ಕುರುಳಿದ ಬಾಲಕನ ತಲೆ ಮೇಲೆ ಗಾಲಿ ಹಾಯ್ದು ಸ್ಥಳದಲ್ಲಿಯೇ ಮಗು ಮೃತಪಟ್ಟಿದೆ. ಚಾಲಕನ ನಿರ್ಲಕ್ಷವೇ ಘಟನೆಗೆ ಕಾರಣ ಎಂದು ನಿಡಗುಂದಿ ಪೊಲೀಸರು ತಿಳಿಸಿದ್ದಾರೆ.ಮಗು ಸಾವಿನಿಂದ ನೊಂದು, ಆಕ್ರೋಶಗೊಂಡ ಗ್ರಾಮಸ್ಥರು ಬಸ್ ಎದುರು ಮಗುವಿನ ಶವ ಇಟ್ಟು ಪ್ರತಿಭಟಿಸಿದರು. ನಿಡಗುಂದಿ ಪೊಲೀಸರು ಸ್ಥಳಕ್ಕೆ ಬಂದು ಪ್ರತಿಭಟನಾಕಾರರನ್ನು ಸಮಾಧಾನಪಡಿಸಿದರು. ಸಂಬಂಧಿಗಳ ಆಕ್ರಂದನ ಮುಗಿಲುಮುಟ್ಟಿತ್ತು. ತಾಯಿಯ ರೋಧನ ಹೇಳತೀರದಾಗಿತ್ತು.ಪೊಲೀಸರ ನಿರ್ಲಕ್ಷ ಆರೋಪ:ನಿಡಗುಂದಿ ಭಾಗದಲ್ಲಿ ೫೦ ಕ್ಕೂ ಹೆಚ್ಚು ಖಾಸಗಿ ಶಾಲೆಗಳಿದ್ದು…

Read More

ಮುದ್ದೇಬಿಹಾಳ: ಗಾಂಧೀಜಿಯವರೊಬ್ಬರು ವ್ಯಕ್ತಿಯಾಗಿರಲಿಲ್ಲ ದೊಡ್ಡ ಶಕ್ತಿಯಾಗಿದ್ದರು. ಸ್ವಾತಂತ್ರ ಹೋರಾಟದಲ್ಲಿ ಅವರ ಪಾತ್ರ ಊಹಿಸಲೂ ಸಾಧ್ಯವಿಲ್ಲ ಎಂದು ಎಂಜಿವಿಸಿ ಕಾಲೇಜಿನ ಪ್ರಾಧ್ಯಾಪಕ ಡಾ.ಆರ್.ಎಚ್.ಸಜ್ಜನ ಹೇಳಿದರು.ಪಟ್ಟಣದ ಆಲಮಟ್ಟಿ ರಸ್ತೆಯಲ್ಲಿರುವ ಶಾ ಎಸರ್.ಪಿ.ಓಸ್ವಾಲ್ ಸರ್ಕಾರಿ ಪ್ರಥಮ ದರ್ಜೆ ಕಾಳೇಜಿನಲ್ಲಿ ನಡೆದ ರಾಷ್ಟçಪಿತ ಮಹಾತ್ಮ ಗಾಂಧೀಜಿಯವರ ಜೀವನದಲ್ಲಿ ನೈತಿಕ ಮೌಲ್ಯಗಳು ಕುರಿತಾದ ರಾಜ್ಯ ಮಟ್ಟದ ವಿಶೇಷ ಉಪನ್ಯಾಸ, ರಸಪ್ರಶ್ನೆ, ಒಂದು ದಿನದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.ಆಗಿನ ಕಾಲದಲ್ಲಿ ಭಾರತೀಯರು ಗುಲಾಮರಾಗಿದ್ದರು. ಬ್ರಿಟೀಷರು ಭಾರತೀಯರನ್ನ ಅತ್ಯಂತ ಕೀಳಾಗಿ ಕಾಣುತ್ತಿದ್ದರು. ಸ್ವಾತಂತ್ರ್ಯ ಹೋರಾಟದಲ್ಲಿ ಮುಂಚೂಣಿಯ ಪಾತ್ರ ವಹಿಸಿದ್ದ ಗಾಂಧೀಜಿಯವರು ಎಂದಿಗೂ ಅಧಿಕಾರಕ್ಕೆ ಆಸೆ ಪಟ್ಟವರಲ್ಲ. ಆಗಿನ ಗಾಂಧಿಯುಗ ಮತ್ತೆ ಮರುಕಳಿಸಬೇಕಿದೆ. ಗಾಂಧಿಯವರ ಬಗ್ಗೆ ಮಕ್ಕಳಲ್ಲಿ ಇಲ್ಲ ಸಲ್ಲದ್ದನ್ನು ಹೇಳಿ ತಪ್ಪು ಕಲ್ಪನೆ ಮೂಡಿಸಲಾಗುತ್ತಿದೆ. ಅದನ್ನು ಹೋಗಲಾಡಿಸಬೇಕು ಎಂದರು.ಕಾನಿಪ ರಾಜ್ಯ ಕಾರ್ಯಕಾರಿಣಿ ಸದಸ್ಯ ಡಿ.ಬಿ.ವಡವಡಗಿ ಮಾತನಾಡಿ, ಗಾಂಧೀಜಿಯವರಲ್ಲಿ ನಾಯಕತ್ವದ ಗುಣಗಳಿದ್ದವು. ಸತ್ಯ, ಅಹಿಂಸೆ ಬಲವಾಗಿ ಪ್ರತಿಪಾದಿಸಿದ್ದರು. ಇಂದಿನ ವಿದ್ಯಾರ್ಥಿಗಳು ಗಾಂಧೀಜಿ ಅವರನ್ನು ಸಂಪೂರ್ಣ ಅರಿತುಕೊಂಡು ಅವರಲ್ಲಿನ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂದರು.ಬೇನಾಳ ಆರ್‌ಎಸ್‌ನ…

Read More