ಆಲಮಟ್ಟಿ: ಖಾಸಗಿ ಶಾಲಾ ಬಸ್, ಸರ್ಕಾರಿ ಅಂಗನವಾಡಿಗೆ ಹೊರಟಿದ್ದ ಮಗುವಿಗೆ ಡಿಕ್ಕಿ ಹೊಡೆದು ಐದು ವರ್ಷz ಮಗು ಸಾವನ್ನಪ್ಪಿದ ಘಟನೆ ಮಂಗಳವಾರ ಅರಳದಿನ್ನಿ ಗ್ರಾಮದಲ್ಲಿ ಜರುಗಿದೆ.
ಮೃತ ಮಗು ಅರಳದಿನ್ನಿ ಗ್ರಾಮದ ಬಸವರಾಜ ಮಂಜುನಾಥ ಚೋಪಡೆ. (೫). ಬಾಲಕ ಬಸವರಾಜ ಅದೇ ಗ್ರಾಮದ ಅಂಗನವಾಡಿಯಲ್ಲಿ ಕಲಿಯುತ್ತಿದ್ದ. ಎಂದಿನಂತೆ ಶಾಲೆಗೆ ಮಂಗಳವಾರ ಬೆಳಿಗ್ಗೆ ಹೊರಟಿದ್ದ. ಆದರೆ ಅದೇ ಸಮಯಕ್ಕೆ ಗ್ರಾಮಕ್ಕೆ ಬಂದ ನಿಡಗುಂದಿ ಪಟ್ಟಣದ ಬಿ.ಎಂ.ಎಸ್. ಶಿಕ್ಷಣ ಸಂಸ್ಥೆಯ ಶಾಲಾ ಬಸ್ ಆ ಮಗುವಿಗೆ ಡಿಕ್ಕಿ ಹೊಡೆದಿದೆ. ನೆಲಕ್ಕುರುಳಿದ ಬಾಲಕನ ತಲೆ ಮೇಲೆ ಗಾಲಿ ಹಾಯ್ದು ಸ್ಥಳದಲ್ಲಿಯೇ ಮಗು ಮೃತಪಟ್ಟಿದೆ. ಚಾಲಕನ ನಿರ್ಲಕ್ಷವೇ ಘಟನೆಗೆ ಕಾರಣ ಎಂದು ನಿಡಗುಂದಿ ಪೊಲೀಸರು ತಿಳಿಸಿದ್ದಾರೆ.
ಮಗು ಸಾವಿನಿಂದ ನೊಂದು, ಆಕ್ರೋಶಗೊಂಡ ಗ್ರಾಮಸ್ಥರು ಬಸ್ ಎದುರು ಮಗುವಿನ ಶವ ಇಟ್ಟು ಪ್ರತಿಭಟಿಸಿದರು. ನಿಡಗುಂದಿ ಪೊಲೀಸರು ಸ್ಥಳಕ್ಕೆ ಬಂದು ಪ್ರತಿಭಟನಾಕಾರರನ್ನು ಸಮಾಧಾನಪಡಿಸಿದರು. ಸಂಬಂಧಿಗಳ ಆಕ್ರಂದನ ಮುಗಿಲುಮುಟ್ಟಿತ್ತು. ತಾಯಿಯ ರೋಧನ ಹೇಳತೀರದಾಗಿತ್ತು.
ಪೊಲೀಸರ ನಿರ್ಲಕ್ಷ ಆರೋಪ:
ನಿಡಗುಂದಿ ಭಾಗದಲ್ಲಿ ೫೦ ಕ್ಕೂ ಹೆಚ್ಚು ಖಾಸಗಿ ಶಾಲೆಗಳಿದ್ದು ಹಲವಾರು ಶಾಲಾ ಬಸ್ ಗಳಿವೆ. ಆಯಾ ಶಾಲಾ ವಾಹನಗಳ ಚಾಲಕರ ಪೊಲೀಸ್ ತಪಾಸಣೆ, ವಾಹನ ಚಾಲನಾ ಲೈಸನ್ಸ್ ನಿಡಗುಂದಿ ಪೊಲೀಸರು ಕಾಲ ಕಾಲಕ್ಕೆ ತಪಾಸಣೆ ನಡೆಸುತ್ತಿಲ್ಲ. ಚಾಲಕರಿಗೆ, ಶಾಲಾ ಮುಖ್ಯಸ್ಥರ ಸಭೆ ನಡೆಸಿ ಅವರಿಗೆ ಸುರಕ್ಷತೆ, ಮಕ್ಕಳ ಹಕ್ಕುಗಳ ಬಗ್ಗೆ ಯಾವುದೇ ತಿಳುವಳಿಕೆ ಸಭೆ ನಡೆಸುವುದಿಲ್ಲ. ಪ್ರತಿ ಶಾಲಾ ವಾಹನ ಯಾವಾಗಲಾದರೊಮ್ಮೆ ನಿಲ್ಲಿಸಿ ತಪಾಸಣೆ ನಡೆಸಿ ಮಕ್ಕಳ ಸುರಕ್ಷತೆಯ ಬಗ್ಗೆ ಪರಿಶೀಲನೆಯನ್ನು ನಡೆಸುವುದಿಲ್ಲ, ಶಾಲಾ ಸುರಕ್ಷತೆ ಪಾಲಿಸದ ಶಾಲಾ ವಾಹನಗಳನ್ನು ಜಪ್ತಿ ಮಾಡಬೇಕು ಎಂದು ಅರಳದಿನ್ನಿ ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ಬಸವರಾಜ ಹೆರಕಲ್ ಆಗ್ರಹಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment

