ವಿಜಯಪುರ: ವಿಜಯಪುರದಿಂದ ಮುಳಸಾವಳಗಿಗೆ ಹೊರಡುವ ವಿಜಯಪುರ ಘಟಕ-೧ರ ಬಸ್ ಸಂಖ್ಯೆ ಕೆಎ೨೮ ಎಫ್-೧೭೦೩ರಲ್ಲಿ ಪ್ರಯಾಣಿಕರೋರ್ವರು ಮರೆತು ಹೋದ ಲ್ಯಾಪ್‌ಟಾಪ್‌ನ್ನು ಚಾಲಕ ಶೇಖರ ಬೋಗಂ ಹಾಗೂ ನಿರ್ವಾಹಕ ಗುಂಡೂರಾವ ರಾಠೋಡ ಅವರು ಪ್ರಯಾಣಿಕರು ಮರಳಿಸುವ ಮೂಲಕ ಪ್ರಾಮಾಣಿಕತೆ ಮೆರೆದಿರುವ ಘಟನೆ ಜರುಗಿದೆ.
ವಿಜಯಪುರದಿಂದ ಮುಳಸಾವಳಗಿಗೆ ಪ್ರಯಾಣಿಸುತ್ತಿದ್ದ ನೂರಲಿಶಾ ಮಕಾಂದಾರ ಅವರು ಮುಳಸಾವಳಗಿಗೆ ಇಳಿಯುವ ಸಂದರ್ಭದಲ್ಲಿ ತನ್ನ ೫೦ ಸಾವಿರ ಬೆಲೆಬಾಳುವ ಲ್ಯಾಪಟಾಪ್ ಬಸ್ಸಿನಲ್ಲಿಯೇ ಮರೆತು ಬಿಟ್ಟು ಹೋಗಿದ್ದರು. ಬಸ್ಸಿನ ಚಾಲಕ ಹಾಗೂ ನಿರ್ವಾಹಕರು ಲ್ಯಾಪಟಾಪ್‌ನ್ನು ಮೂಲ ಮಾಲೀಕರಿಗೆ ಒಪ್ಪಿಸುವ ಮೂಲಕ ಇತರರಿಗೂ ಮಾದರಿಯಾಗಿದ್ದಾರೆ. ಇವರ ಕಾರ್ಯಕ್ಕೆ ಲ್ಯಾಪಟಾಪ್ ಮಾಲೀಕರಾದ ನೂರಲಿಶಾ ಮಕಾಂದಾರ ಅವರು ಬಹುಮಾನ ನೀಡಲು ಮುಂದೆ ಹೋದಾಗ ನಯವಾಗಿ ತಿರಸ್ಕರಿಸುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾರೆ. ಇವರ ಕಾರ್ಯಕ್ಕೆ ವಿವಿಧ ಸಾರ್ವಜನಿಕರು ಕೊಂಡಾಡಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment

