Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ಇಂಡಿ: ಕಬ್ಬು ಬೆಳೆಗೆ ಕೃತಕ ತಂತ್ರಜ್ಞಾನ ಬಳಸಿದರೆ ಮಣ್ಣಿನ ತೇವಾಂಶ, ಮಳೆಯ ಮುನ್ಸೂಚನೆ, ನೀರು ಬಿಡುವ ಪ್ರಮಾಣ, ಮಣ್ಣಿನಲ್ಲಿರುವ ನ್ಯೂಟ್ರಿಯಂಟ್ಸಗಳು, ನೀರಿನ ಪಿಎಚ್ ಬೆಲೆ, ಕಬ್ಬಿಗೆ ಬರುವ ರೋಗಗಳು, ಕೀಟಗಳು, ಕಳೆ, ಗೊಬ್ಬರ ಎಷ್ಟು ಹಾಕಬೇಕು ಇತ್ಯಾದಿ ಮಾಹಿತಿ ದೊರೆಯುತ್ತದೆ. ಹೀಗಾಗಿ ಕಬ್ಬು ಬೆಳೆ ಅಧಿಕ ಬೆಳೆಯಲು ಸಾಧ್ಯ ಎಂದು ಕೃಷಿ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ ಹೇಳಿದರು.ತಾಲೂಕಿನ ಹಿರೇಬೇವನೂರ ಗ್ರಾಮದ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಕೃಷಿ ಇಲಾಖೆಯಿಂದ ೨೦೨೬-೨೭ ನೇ ಸಾಲಿನ ಪಿಎಂ ಆರ್ ಕೆ ವಿ ವಾಯ್ ಯೋಜನೆ ಅಡಿಯಲ್ಲಿ ಹಿರೇಬೇವನೂರ ಸಕ್ಕರೆ ಕಾರ್ಖಾನೆ ಸಹಯೋಗದಲ್ಲಿ ಕಬ್ಬಿನ ಅರ್ಥಿಕ ಇಳುವರಿಗಾಗಿ ಸುಧಾರಿತ ಬೇಸಾಯ ಕೃತಕ ತಂತ್ರಜ್ಞಾನ ಬಳಕೆ ಕುರಿತು ಹಮ್ಮಿಕೊಂಡ ಕಾರ್ಯಾಗಾರದಲ್ಲಿ ಮಾತನಾಡಿದರು.ಕೃಷಿ ವಿಶ್ವವಿದ್ಯಾಲಯದ ಪ್ರಾದ್ಯಾಪಕ ಎ.ಪಿ.ಬಿರಾದಾರ ಮಾತನಾಡಿ ಕೃತಕ ತಂತ್ರಜ್ಞಾನ ಬಳಕೆಯಿಂದ ಕಬ್ಬು ೨೦ ರಿಂದ ೩೦ ಪ್ರತಿಶತ ಇಳುವರಿ ಹೆಚ್ಚು ಬರುತ್ತದೆ. ಜಗತ್ತಿನಲ್ಲಿ ಬ್ರೇಜಿಲ್ ಕಬ್ಬು ಬೆಳೆಯುವಲ್ಲಿ ಪ್ರಥಮ ಸ್ಥಾನದಲ್ಲಿದ್ದರೆ ಭಾರತ ದ್ವೀತಿಯ ಸ್ಥಾನದಲ್ಲಿದೆ.…
ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಮನುಷ್ಯ ತನ್ನ ಬದುಕನ್ನು ತಾನೇ ಕಟ್ಟಿಕೊಳ್ಳಬೇಕಲ್ಲದೇ ಬೇರಾರಿಂದಲೂ ಕಟ್ಟಿಕೊಡಲು ಸಾಧ್ಯವಿಲ್ಲ. ಜೀವನದ ಉಜ್ವಲ ಭವಿಷ್ಯಕ್ಕೆ ಶಿಕ್ಷಣ ಅವಶ್ಯವೆಂದು ಬಾಳೇಹೊನ್ನೂರು ಶ್ರೀರಂಭಾಪುರಿ ಜಗದ್ಗುರು ಡಾ.ವೀರಸೋಮೇಶ್ವರಶ್ರೀಗಳು ಹೇಳಿದರು.ತಾಲ್ಲೂಕಿನ ಯಾಳವಾರ ಗ್ರಾಮದ ಶ್ರೀಸೋಮೇಶ್ವರ ವಿದ್ಯಾವರ್ಧಕ ಸಂಘದ ಸುವರ್ಣ ಮಹೋತ್ಸವ ಅಂಗವಾಗಿ ಭಾನುವಾರ ಜರುಗಿದ ನೂತನ ಪ್ರೌಢಶಾಲಾ ಕಟ್ಟಡ ಮತ್ತು ವಿದ್ಯಾರ್ಥಿ ನಿಲಯ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ ಮಾತನಾಡಿದರು.ಮೌಲ್ಯಗಳ ಉಳಿವು ಅಳಿವು ಮಾನವನ ಆಚರಣೆಯಲ್ಲಿವೆ. ನೀತಿ ಸಂಹಿತೆಯನ್ನು ಅರಿತವನಿಗೆ ನೆಮ್ಮದಿಯ ಫಲ. ವಿಚಾರ ವಿಮರ್ಶೆಗಳು ಸಂಸ್ಕೃತಿಯ ಮೇಲೆ ಹೊಸ ಬೆಳಕು ಮೂಡಿಸಬೇಕೇ ಹೊರತು ಜನರನ್ನು ನಾಸ್ತಿಕರನ್ನಾಗಿ ಮಾಡಬಾರದು. ತಾಳ್ಮೆ ಮತ್ತು ಸಹನೆಯ ಗುಣ ಮನುಷ್ಯನಲ್ಲಿ ಇಲ್ಲದಿರುವುದೇ ಇಂದಿನ ಅಶಾಂತಿ ಮತ್ತು ಅತೃಪ್ತಿಗೆ ಕಾರಣವೆಂದರೆ ತಪ್ಪಾಗದು. ಹೊರಗಿನ ಮಾಲಿನ್ಯ ಕಳೆಯಲು ಹೊರಟ ಮನುಷ್ಯ ತನ್ನ ಅಂತರಂಗದಲ್ಲಿಯೇ ಕತ್ತಲೆ ತುಂಬಿಕೊಂಡಿದ್ದಾನೆ. ಗೊತ್ತು ಗುರಿಗಳಿಲ್ಲದ ಜೀವನ ಹಣ ಸಂಪಾದನೆಯನ್ನು ಗುರಿಯಾಗಿಟ್ಟುಕೊಂಡ ಮನುಷ್ಯ ಬದುಕಲು ಬೇಕಾದ ಜ್ಞಾನವನ್ನು ಪಡೆಯುತ್ತಿಲ್ಲ. ಶಿಕ್ಷಣದಿಂದ ಬುದ್ಧಿ ಶಕ್ತಿ ಬೆಳೆದರೆ…
ಡಾ.ಅಂಬೇಡ್ಕರ್ ಭವನ ನಿರ್ಮಾಣ ಭೂಮಿಪೂಜೆ | ಶಾಸಕ ಅಶೋಕ ಮನಗೂಳಿ ಮನವಿ ಉದಯರಶ್ಮಿ ದಿನಪತ್ರಿಕೆ ಮೋರಟಗಿ: ನಮ್ಮ ಸರ್ಕಾರ ಐದು ಉಚಿತ ಗ್ಯಾರಂಟಿ ಯೋಜನೆಗಳನ್ನು ನೀಡುವುದರ ಜೊತೆಗೆ ವಿವಿಧ ಯೋಜನೆಗಳ ಅಡಿಯಲ್ಲಿ ಹಣ ಮಂಜೂರು ಮಾಡಿ ಅಭಿವೃದ್ಧಿಯತ್ತ ದಾಪುಗಾಲು ಹಾಕುತ್ತಿದೆ ಸುಸಜ್ಜಿತ ಕಟ್ಟಡ ಕಾಮಗಾರಿಗಳಿಗೆ ತಾವೆಲ್ಲರೂ ಕೈಜೋಡಿಸಬೇಕು ಎಂದು ಶಾಸಕ ಅಶೋಕ ಮನಗೂಳಿ ಮನವಿ ಮಾಡಿದರು.ಗ್ರಾಮದ ದಲಿತ ಕಾಲೋನಿಯಲ್ಲಿ ೨೦೨೫-೨೬ ನೇ ಸಾಲಿನ ಮುಖ್ಯಮಂತ್ರಿ ಮುಲಸೌಕರ್ಯ ಅಭಿವೃದ್ಧಿ ಯೋಜನೆ ಅಡಿಯಲ್ಲಿ ೫೦ ಲಕ್ಷ ರು ವೆಚ್ಚದ ಡಾ, ಬಿ ಆರ್ ಅಂಬೇಡ್ಕರ್ ಭವನ ನಿರ್ಮಾಣ ಕಾಮಗಾರಿಯ ಭೂಮಿ ಪೂಜೆ ಹಾಗೂ ೨೫ ಲಕ್ಷ ವೆಚ್ಚದ ಸಿಸಿ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೇರವಾರಿಸಿ ಅವರು ಮಾತನಾಡಿದರು.೩೧ ಸಾವಿರ ಮತಗಳ ಅಂತರದಲ್ಲಿ ಸೊಲು ಕಂಡಿದ್ದ ನನಗೆ ಮರಳಿ ಶಾಸಕನಾಗಿ ಆಯ್ಕೆ ಮಾಡಿ ಮರುಜನ್ಮ ನೀಡಿದ್ದಾರೆ. ಈ ಮೂರು ವರ್ಷದ ಅವಧಿಯಲ್ಲಿ ಮೋರಟಗಿ ಗ್ರಾಮದಲ್ಲಿ ಸಿಸಿ ರಸ್ತೆ ಕೆರೆ ಅಭಿವೃದ್ಧಿ ಭವನಗಳು ಸೇರಿದಂತೆ ೫…
ದಾಖಲಾತಿ ನೀಡಲು ಕಾರ್ಯದರ್ಶಿ ಮೀನಾಮೇಷ | ಕೋರ್ಟ್ ಮೊರೆಹೋಗಲು ನಿರ್ದೇಶಕ ನಿರ್ಧಾರ ಉದಯರಶ್ಮಿ ದಿನಪತ್ರಿಕೆ ಎಚ್ ಡಿ ಕೋಟೆ: ತಾಲೂಕು ವ್ಯವಸಾಯ ಉತ್ಪನ್ನ ಮಾರುಕಟ್ಟೆ ಸಹಕಾರ ಸಂಘದ ಆಡಳಿತ ಮಂಡಳಿ ಚುನಾವಣೆಗೆ ಸಂಬಂಧಿಸಿದಂತೆ 2026-27ನೇ ಸಾಲಿನ ಅರ್ಹ ಅಂತಿಮ ಮತದಾರರ ಪಟ್ಟಿಯಿಂದ ನನ್ನನ್ನುಉದ್ದೇಶಪೂರ್ವಕವಾಗಿ ಕೈಬಿಡಲಾಗಿದೆ. ಮಾದಾಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ಬಹುಮತದಿಂದ ನನ್ನನ್ನ ಪ್ರತಿನಿಧಿಯಾಗಿ ಆಯ್ಕೆ ಮಾಡಿ ಕಳುಹಿಸಿದರೂ ನಡವಳಿಯಲ್ಲಿ ಸದಸ್ಯತ್ವ ಸಂಬಂಧ ಪೂರ್ಣವಾಗಿ ಬರೆದಿಲ್ಲ, ಮಧ್ಯದಲ್ಲಿ ಹೆಸರು ಸೇರಿಸಲಾಗಿದೆ ಎಂಬ ಕುಂಟು ನೆಪವೊಡ್ಡಿ ಕಾರ್ಯದರ್ಶಿ ಬಿ.ಎನ್ ನಿಂಗರಾಜುರವರು ನನ್ನನ್ನ ಅನರ್ಹಗೊಳಿಸಲಾಗಿದೆ ಎಂದು ಸೂಚನಾ ಫಲಕದಲ್ಲಿ ಪ್ರಕಟಿಸಿದ್ದಾರೆ ಎಂದು ನಿರ್ದೇಶಕ ಎಂ.ಡಿ. ಮಂಚಯ್ಯ ಆರೋಪ ಮಾಡಿದ್ದಾರೆ.ಪಟ್ಟಣದ ತಾಲೂಕು ವ್ಯವಸಾಯ ಉತ್ಪನ್ನ ಮಾರುಕಟ್ಟೆ ಸಹಕಾರ ಸಂಘದ ಕಚೇರಿಯಲ್ಲಿ ಮಾತನಾಡಿದ ಅವರು ನಡಾವಳಿ ಅರ್ಜಿ ಭರ್ತಿ ಮಾಡಿರುವವವರು ಕಾರ್ಯದರ್ಶಿಗಳು. ಇದರಲ್ಲಿ ನನ್ನ ತಪ್ಪು ಏನಿದೆ?. ನಡವಳಿಯಲ್ಲಿ ಏನು ತಪ್ಪಾಗಿ ಬರೆಯಲಾಗಿದೆ ಸೇರಿದಂತೆ ಜುಲೈ ನಾಲ್ಕರಂದು ಕಚೇರಿಗೆ ಬಂದು ಚುನಾವಣೆಗೆ ಬೇಕಾದ ಪೂರಕ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ತಿಕೋಟಾ ತಾಲ್ಲೂಕಿನ ಕೋಟ್ಯಾಳ ಗ್ರಾಮದ ಸರ್ಕಾರಿ ಶಾಲೆಯ ನೂತನ, ಸುಸಜ್ಜಿತ ಕಟ್ಟಡವನ್ನು ಲೋಕಾರ್ಪಣೆಗೊಳಿಸಿದ್ದು ಗ್ರಾಮಸ್ತರಲ್ಲಿ ಸಂತಸ ತರಿಸಿದೆ.ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಫೌಂಡೇಶನ್ ನ ಸಿಎಸ್ಆರ್ ಅನುದಾನದಡಿ, ಸುಮಾರು ₹3.25 ಕೋಟಿ ವೆಚ್ಚದಲ್ಲಿ 7,000 ಚದರ ಅಡಿ ವಿಸ್ತೀರ್ಣದ ಅತ್ಯಾಧುನಿಕ ಹಾಗೂ ಸುಸಜ್ಜಿತ ಶಾಲಾ ಕಟ್ಟಡ ನಿರ್ಮಿಸಲಾಗಿದೆ. ಜೊತೆಗೆ, 800 ಚದರ ಅಡಿ ವಿಸ್ತೀರ್ಣದ ಹಳೆಯ ಶಾಲಾ ಕಟ್ಟಡಕ್ಕೂ ಪುನಶ್ಚೇತನ ನೀಡಿ, ಸಂಪೂರ್ಣ ಶೈಕ್ಷಣಿಕ ಆವರಣವನ್ನು ಆಧುನಿಕ ಸೌಲಭ್ಯಗಳೊಂದಿಗೆ ಅಭಿವೃದ್ಧಿಪಡಿಸಲಾಗಿದೆ.ಶಾಲೆಯಲ್ಲಿ 1 ರಿಂದ 10ನೇ ತರಗತಿವರೆಗಿನ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸುಸಜ್ಜಿತ ಕೊಠಡಿಗಳನ್ನು ಸಿದ್ಧಪಡಿಸಲಾಗಿದೆ. ಮಕ್ಕಳಲ್ಲಿ ನಾವೀನ್ಯತೆ ಮತ್ತು ಚಟುವಟಿಕೆ ಆಧಾರಿತ ಕಲಿಕೆಯನ್ನು ಪ್ರೋತ್ಸಾಹಿಸಲು ಸ್ಟೇಮ್’ಲ್ಯಾಬ್ ಹಾಗೂ ‘ನಲಿ-ಕಲಿ’ ಕೊಠಡಿಗಳನ್ನು ವಿಶೇಷವಾಗಿ ಸ್ಥಾಪಿಸಲಾಗಿದೆ.ವಿದ್ಯಾರ್ಥಿಗಳ ಸುಲಭ ಕಲಿಕೆಗೆ ಪೂರಕವಾಗಿ 135 ಹೊಸ ಪೀಠೋಪಕರಣಗಳು, ಬಾಲಕ ಮತ್ತು ಬಾಲಕಿಯರಿಗಾಗಿ ಪ್ರತ್ಯೇಕ 10 ಸುಸಜ್ಜಿತ ಶೌಚಾಲಯ ಸೇರಿದಂತೆ ಆಧುನಿಕ ಸೌಲಭ್ಯವುಳ್ಳ ಅಡುಗೆ ಕೊಠಡಿ ಹಾಗೂ ವಿಶಾಲವಾದ ಊಟದ ಸಭಾಂಗಣವನ್ನು ಇಲ್ಲಿ ನಿರ್ಮಿಸಲಾಗಿದೆ.ಕೋಟ್ಯಾಳದಲ್ಲಿಯೇ…
ಲೇಖನ- ಡಾ. ರಾಜಶೇಖರ ನಾಗೂರಸಂಚಾಲಕರು’ನಮ್ಮ ಕಥಾ ಅರಮನೆ’ ಉದಯರಶ್ಮಿ ದಿನಪತ್ರಿಕೆ ಒಂದು ಇಮೇಲ್, ಒಂದು ಸಭೆ, ಕೆಲವು ನಿಮಿಷಗಳ ಸಂಭಾಷಣೆ.. ನಂತರ ಒಂದು ವಾಕ್ಯ “ನಿಮ್ಮ ಸೇವೆ ಇನ್ನು ಮುಂದೆ ಅಗತ್ಯವಿಲ್ಲ.”ಅಷ್ಟರಲ್ಲೇ ವರ್ಷಗಳ ಪರಿಶ್ರಮ, ಕನಸುಗಳು ಮತ್ತು ಭದ್ರತೆಯ ಭಾವನೆ ಕುಸಿದು ಹೋಗುತ್ತದೆ. ಉದ್ಯೋಗ ಕಳೆದುಕೊಳ್ಳುವುದು ಕೇವಲ ಆದಾಯವನ್ನು ಕಳೆದುಕೊಳ್ಳುವುದಲ್ಲ. ಅದು ಆತ್ಮವಿಶ್ವಾಸಕ್ಕೂ, ಭವಿಷ್ಯದ ಯೋಜನೆಗಳಿಗೂ, ಕುಟುಂಬದ ನೆಮ್ಮದಿಗೂ ದೊಡ್ಡ ಸವಾಲಾಗಬಹುದು.ಆದರೆ ಒಂದು ಸಂಗತಿ ನೆನಪಿರಲಿ. Layoff ನಿಮ್ಮ ಸಾಮರ್ಥ್ಯದ ತೀರ್ಪಲ್ಲ. ಅದು ಕಂಪನಿಯ ವ್ಯವಹಾರಿಕ ನಿರ್ಧಾರ.ಇತಿಹಾಸವನ್ನು ನೋಡಿದರೆ, ಅನೇಕ ಯಶಸ್ವಿ ಉದ್ಯಮಿಗಳು, ಸಂಶೋಧಕರು ಮತ್ತು ನಾಯಕರು ತಮ್ಮ ಬದುಕಿನಲ್ಲಿ ಒಂದು ಹಂತದಲ್ಲಿ ದೊಡ್ಡ ಹಿನ್ನಡೆಯನ್ನು ಅನುಭವಿಸಿದ್ದಾರೆ. ಆ ಹಿನ್ನಡೆಯೇ ಅವರನ್ನು ಹೊಸ ದಾರಿಯತ್ತ ಕರೆದೊಯ್ದಿದೆ. ಆದ್ದರಿಂದ, ಈ ಕ್ಷಣವನ್ನು ಅಂತ್ಯವೆಂದು ನೋಡಬೇಡಿ, ಹೊಸ ಆರಂಭವೆಂದು ನೋಡಿ.ನಿಮ್ಮ ನಿಜವಾದ ಸಂಪತ್ತು ಉದ್ಯೋಗವಲ್ಲನಿಮ್ಮ ನಿಜವಾದ ಸಂಪತ್ತು ನಿಮ್ಮ ಕೌಶಲ್ಯ, ಅನುಭವ, ಸಮಸ್ಯೆ ಪರಿಹರಿಸುವ ಸಾಮರ್ಥ್ಯ, ಕಲಿಯುವ ಮನೋಭಾವ ಮತ್ತು ಶಿಸ್ತು. ಕಂಪನಿಯು ನಿಮ್ಮ…
ವಿಡಿಯೋ ಕಾನ್ಫರೆನ್ಸ್ ಮೂಲಕ ಜಿಲ್ಲೆಯ ಎಲ್ಲಾ ತಾಲೂಕು ತಹಶೀಲ್ದಾರರೊಂದಿಗೆ ಸಭೆ | ತಹಶೀಲ್ದಾರ್‌ಗಳಿಗೆ ಜಿಲ್ಲಾಧಿಕಾರಿ ಡಾ. ಆನಂದ ಸೂಚನೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಮತದಾರರ ಪಟ್ಟಿ ಪರಿಷ್ಕರಣೆಯ ಸಂದರ್ಭದಲ್ಲಿ ಗಣತಿ ನಮೂನೆ ಭರ್ತಿ ಮಾಡುವ ಸಂದರ್ಭ ಮಾಹಿತಿ ದಾಖಲಿಸುವಾಗ ಬಹು ಎಚ್ಚರಿಕೆ ವಹಿಸಬೇಕು. ಪ್ರಸ್ತುತ ಮತದಾರರ ಕುಟುಂಬದ ಮಾಹಿತಿಯನ್ನು ತಪ್ಪಾಗಿ ನಮೂದಿಸದಾಗದಂತೆ ಎಚ್ಚರಿಕೆಯಿಂದ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿಗಳಾದ ಡಾ. ಆನಂದ ಕೆ. ಅವರು ತಹಶೀಲ್ದಾರ್ ಅವರಿಗೆ ಸೂಚಿಸಿದರು.ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್)-೨೦೨೬ರ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ವಿಡಿಯೋ ಕಾನ್ಫರೆನ್ಸ್ ಮೂಲಕ ಜಿಲ್ಲೆಯ ಎಲ್ಲಾ ತಾಲೂಕು ತಹಶೀಲ್ದಾರರೊಂದಿಗೆ ಸಭೆ ನಡೆಸಿ ಅವರು ಮಾತನಾಡಿದರು.ಮಾಹಿತಿ ನಮೂದಿಸುವಾಗ ಯಾವುದೇ ಅನಗತ್ಯ ಸಮಸ್ಯೆಗಳು ಎದುರಾಗದಂತೆ ನೋಡಿಕೊಳ್ಳಬೇಕು. ಗಣತಿ ನಮೂನೆಯ ಎರಡನೇ ಕಾಲಂನ ಎರಡನೇ ಪಟ್ಟಿಯಲ್ಲಿ ಕೇವಲ ೨೦೦೨ರ ಮತದಾರರ ಪಟ್ಟಿಯಲ್ಲಿರುವ ಮಾಹಿತಿಯನ್ನೇ ದಾಖಲಿಸಬೇಕು. ಒಂದು ವೇಳೆ ೨೦೦೨ರ ಮಾಹಿತಿಯು ಲಭ್ಯವಿಲ್ಲದಿದ್ದರೆ ಆ ಕಾಲಂ ಅನ್ನು ಖಾಲಿ ಬಿಡಬೇಕು. ಎಂದು ಜಿಲ್ಲಾಧಿಕಾರಿಗಳು ಸ್ಪಷ್ಟ ಸೂಚನೆ ನೀಡಿದರು.ಗಣತಿ ನಮೂನೆಗಳ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ೨೦೨೬-೨೭ನೇ ಸಾಲಿನಲ್ಲಿ ಶಾಲೆ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ಸೌಲಭ್ಯವನ್ನು ಕರ್ನಾಟಕ ಸರ್ಕಾರ ಜಾರಿಗೊಳಿಸಿದೆ. ಆದರೆ, ಈ ಸರ್ಕಾರದ ಆದೇಶ ಹೊರಬರುವ ಮುನ್ನವೇ ಕೆಲವು ವಿದ್ಯಾರ್ಥಿಗಳು ಹಣ ಪಾವತಿಸಿ ಬಸ್ ಪಾಸ್ ಪಡೆದಿದ್ದು, ಅಂತಹ ವಿದ್ಯಾರ್ಥಿಗಳಿಗೆ ಅವರು ಪಾವತಿಸಿದ ಮೊತ್ತವನ್ನು ಮರುಪಾವತಿಸಲು ಇದೀಗ ಕ್ರಮ ಕೈಗೊಳ್ಳಲಾಗಿದೆ.ಈಗಾಗಲೇ ಬಸ್ ಪಾಸ್‌ಗಾಗಿ ಹಣ ಪಾವತಿಸಿರುವ ಅರ್ಹ ವಿದ್ಯಾರ್ಥಿಗಳು ತಮಗೆ ಸಂಬಂಧಿಸಿದ ಬಸ್ ಪಾಸ್ ಕೌಂಟರ್‌ಗಳಿಗೆ ಖುದ್ದಾಗಿ ಭೇಟಿ ನೀಡುವ ಮೂಲಕ ಅಥವಾ ಆನ್‌ಲೈನ್‌ನಲ್ಲಿ ಲಭ್ಯವಿರುವ ಅಧಿಕೃತ ಲಿಂಕ್ ಬಳಸಿ ಅರ್ಜಿ ಸಲ್ಲಿಸಿ ತಮ್ಮ ಹೆಸರನ್ನು ಮರುಪಾವತಿಗಾಗಿ ನೋಂದಾಯಿಸಿಕೊಳ್ಳಬಹುದಾಗಿದೆ. ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ವಿದ್ಯಾರ್ಥಿಗಳು ತಮ್ಮ ಬ್ಯಾಂಕ್ ಖಾತೆಯ ವಿವರಗಳನ್ನು ಅತ್ಯಂತ ಜಾಗರೂಕತೆಯಿಂದ ಮತ್ತು ಸರಿಯಾಗಿ ನಮೂದಿಸಬೇಕಾಗುತ್ತದೆ. ಸಲ್ಲಿಕೆಯಾದ ಅರ್ಜಿಗಳ ಸೂಕ್ತ ಪರಿಶೀಲನೆಯ ನಂತರ, ವಿದ್ಯಾರ್ಥಿಗಳು ಪಾವತಿಸಿದ್ದ ಬಸ್ ಪಾಸ್ ಮೊತ್ತವನ್ನು ನೇರವಾಗಿ ಅವರ ಬ್ಯಾಂಕ್ ಖಾತೆಗೆ ಜಮಾ (ಡಿಬಿಟಿ) ಮಾಡಲಾಗುತ್ತದೆ. ಈ ಯೋಜನೆಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗಾಗಿ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ, ಕರ್ನಾಟಕ ಉದ್ಯಮಶೀಲತಾಭಿವೃದ್ಧಿ ಕೇಂದ್ರ (ಸಿಡಾಕ್) ಮತ್ತು ಜಿಲ್ಲಾ ಕೈಗಾರಿಕಾ ಕೇಂದ್ರ ಸಹಯೋಗದಲ್ಲಿ ಒಂದು ದಿನದ ಉದ್ಯಮಶೀಲತಾ ಅರಿವು ಕಾರ್ಯಕ್ರಮಜು. ೭ರಂದು ಬೆಳಗ್ಗೆ ೧೦ ಗಂಟೆಗೆ ಜಿಲ್ಲಾ ಕೈಗಾರಿಕಾ ಕೇಂದ್ರದ ಆವರಣದಲ್ಲಿ ನಡೆಯಲಿದೆ.ಕಾರ್ಯಕ್ರಮದಲ್ಲಿ ಉದ್ಯಮಶೀಲತೆ, ಸ್ಥಾಪಿಸಬಹುದಾದ ಉದ್ಯಮಗಳು, ಕೈಗಾರಿಕಾ ಇಲಾಖೆ ಮತ್ತು ಬ್ಯಾಂಕಿನಿಂದ ದೊರೆಯುವ ಸಹಾಯ ಮತ್ತು ಯಶಸ್ವಿ ಉದ್ಯಮದಾರರೊಂದಿಗೆ ಚರ್ಚೆ ಏರ್ಪಡಿಸಲಾಗುವುದು. ಆಸಕ್ತರು ಮೊಬೈಲ್ ಸಂಖ್ಯೆ: ೯೧೦೮೭೧೬೬೧೮ ಹಾಗೂ ೮೭೬೨೪೮೩೪೭೮ ಸಂಖ್ಯೆಗೆ ಕರೆ ಮಾಡಿ ಮಾಹಿತಿ ಪಡೆಯಬಹುದೆಂದು ಸಿಡಾಕ್‌ನ ಜಂಟಿ ನಿರ್ದೇಶಕರ ಪ್ರಕಟಣೆ ತಿಳಿಸಿದೆ.
