Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಉದಯರಶ್ಮಿ ಇಂದಿನ ದಿನಪತ್ರಿಕೆ ಆಗಸ್ಟ್ 27, 2026

ಸಿಂದಗಿ: ಆಕಸ್ಮಿಕ ಬೆಂಕಿಗೆ ಸುಟ್ಟು ಕರಕಲಾದ ಕಾರು

ಶಾಶ್ವತ ಗಣೇಶ ವಿಸರ್ಜನೆ ಹೊಂಡ ನಿರ್ಮಾಣಕ್ಕೆ ಕ್ರಮ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»ವಿಶೇಷ ಲೇಖನ»ಸೆಕೆಂಡಿನ ಮಹತ್ವ ಕೂದಲೆಳೆ ಅಂತರದಲ್ಲಿ ಅಪಘಾತದಿಂದ ಪಾರಾದವನಿಗೆ ಕೇಳಿ
ವಿಶೇಷ ಲೇಖನ

ಸೆಕೆಂಡಿನ ಮಹತ್ವ ಕೂದಲೆಳೆ ಅಂತರದಲ್ಲಿ ಅಪಘಾತದಿಂದ ಪಾರಾದವನಿಗೆ ಕೇಳಿ

By No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಲೇಖನ- ಸಂತೋಷ್ ರಾವ್ ಪೆರ್ಮುಡಪೆರ್ಮುಡ ಮನೆಪಟ್ರಮೆ ಗ್ರಾಮ ಮತ್ತು ಅಂಚೆಬೆಳ್ತಂಗಡಿ ತಾಲೂಕುದ.ಕ ಜಿಲ್ಲೆ-೫೭೪೧೯೮ದೂ: ೯೭೪೨೮೮೪೧೬೦

ಉದಯರಶ್ಮಿ ದಿನಪತ್ರಿಕೆ

ಕ್ರಾಂತಿಕಾರಿಗಳ ಸಾಲಿನಲ್ಲಿ ಚಾಪೆಕರ್ ಸಹೋದರರ ಹೆಸರು ಅಜರಾಮರವಾಗಿದೆ.
ಈ ಮೂರು ಮಂದಿ ಚಾಪೆಕರ್ ಸಹೋದರರು ದೇಶಕ್ಕಾಗಿ ನಗುನಗುತ್ತಲೇ ನೇಣುಗಂಬಕ್ಕೆ ಏರಿದ್ದರು. ಇದೇ ರೀತಿ ಅದೊಂದು ದಿನ ದಾಮೋದರ ಚಾಪೆಕರ್ ಅವರನ್ನು ಸರವರಾ ಜೈಲಿನಲ್ಲಿ ನೇಣಿಗೇರಿಸಲು ಬ್ರಿಟೀಷರು ಕರೆದುಕೊಂಡು ಬಂದಿದ್ದರು. ದಾಮೋದರ ಚಾಪೆಕರರು ಮಾತ್ರ ಆ ದಿನ ನಗು ಮುಖದಿಂದ ಮತ್ತು ಆನಂದದಿಂದಿದ್ದರು. ಅವರ ಕೈಯಲ್ಲಿ ಭಗವದ್ಗೀತೆಯ ಪುಸ್ತಕವಿದ್ದು, ಅವರು ಭಗವದ್ಗೀತೆಯನ್ನು ಓದುತ್ತಲೇ ನೇಣಿನ ಶಿಕ್ಷೆಗಾಗಿ ಸಿದ್ಧರಾಗಿದ್ದರು. ನೇಣುಗಂಬಕ್ಕೆ ಏರುವ ಸಮಯವಾದರೂ ಬ್ರಿಟೀಷ್ ಅಧಿಕಾರಿಗಳು ಅವರನ್ನು ನೇಣು ಕಂಬಕ್ಕೆ ಕರೆದೊಯ್ಯಲು ಬರಲೇ ಇಲ್ಲ. ಚಾಪೇಕರರು ಜೈಲಿನ ಕೋಣೆಯಲ್ಲಿ ಬ್ರಿಟೀಷ್ ಜೈಲು ಅಧಿಕಾರಿಗಳ ಆಗಮನಕ್ಕಾಗಿ ಕಾಯುತ್ತಾ ಇದ್ದರು.
ಕೊನೆಗೂ ಐದು ನಿಮಿಷ ತಡವಾಗಿ ಜೈಲಧಿಕಾರಿಗಳು ದಾಮೋದರ ಬಳಿಗೆ ಬಂದರು. ಬ್ರಿಟೀಷ್ ಜೈಲು ಅಧಿಕಾರಿಗಳ ಈ ಬೇಜವಾಬ್ದಾರಿಯನ್ನು ನೋಡಿದಂತಹ ದಾಮೋದರ ಚಾಪೇಕರ್ ಕೋಪಗೊಂಡರು. ಅವರು ಅತ್ಯಂತ ಚಾಣಾಕ್ಷತನದಿಂದ ಬ್ರಿಟೀಷ್ ಜೈಲು ಅಧಿಕಾರಿಗಳಿಗೆ ಅವರ ತಪ್ಪನ್ನು ತೋರಿಸಿಕೊಟ್ಟರು. ‘ನಾನು ಯಾವ ಸಮಾಜದಿಂದ ಬಂದಿದ್ದೇನೆಯೋ ಅಲ್ಲಿನ ಜನರೆಲ್ಲರೂ ಬ್ರಿಟೀಷರೆಂದರೆ ತುಂಬಾ ಕಟ್ಟುನಿಟ್ಟಾಗಿ ಸಮಯ ಪಾಲನೆಯನ್ನು ಮಾಡುತ್ತಾರೆ ಎಂದು ತಿಳಿದಿದ್ದಾರೆ. ಆದರೆ ಇಂದು ಆ ಮಾತು ಸುಳ್ಳು ಎಂದು ತಿಳಿಯಿತು’ ಎಂದು ಬ್ರಿಟೀಷ್ ಜೈಲು ಅಧಿಕಾರಿಗಳಿಗೆ ಹೇಳಿದರು.


ನೇಣಿನ ಕಂಬಕ್ಕೆ ಏರಲು ಸಿದ್ಧನಾಗಿ ನಿಂತಿದ್ದ ವ್ಯಕ್ತಿಯನ್ನೂ ಕಾಯುವಂತೆ ಮಾಡಿದ ಬ್ರಿಟೀಷ್ ಜೈಲಧಿಕಾರಿಗಳು ದಾಮೋದರ ಚಾಪೇಕರರ ಮುಂದೆ ನಾಚಿಕೆಯಿಂದ ತಲೆತಗ್ಗಿಸಿದರು.
ಸಮಯದ ಮಹತ್ವ ಕುರಿತು ತಜ್ಞರು ಈ ರೀತಿಯಾಗಿ ಹೇಳುತ್ತಾರೆ, ಒಂದು ವರ್ಷದ ಮಹತ್ವವನ್ನು ತಿಳಿಯಲು ಪರೀಕ್ಷೆಯಲ್ಲಿ ಅನುತ್ತೀರ್ಣನಾದ ವಿದ್ಯಾರ್ಥಿಯನ್ನು ಕೇಳಬೇಕು. ಒಂದು ತಿಂಗಳ ಮಹತ್ವವನ್ನು ತಿಳಿಯಲು ಅವಧಿ ಪೂರ್ವದಲ್ಲಿ ಮಗುವಿಗೆ ಜನ್ಮ ನೀಡಿದ ತಾಯಿಯಲ್ಲಿ ಕೇಳಬೇಕು. ಒಂದು ವಾರದ ಮಹತ್ವವನ್ನು ತಿಳಿಯಲು ವಾರಪತ್ರಿಕೆಯ ಸಂಪಾದಕನನ್ನು ಕೇಳಬೇಕು. ಒಂದು ದಿನದ ಮಹತ್ವವನ್ನು ತಿಳಿಯಲು ದಿನಗೂಲಿಯನ್ನೇ ನಂಬಿರುವ ಕೂಲಿ ಕಾರ್ಮಿಕನನ್ನು ಕೇಳಬೇಕು. ಒಂದು ಗಂಟೆಯ ಮಹತ್ವ ತಿಳಿಯಲು ಆಪ್ತರಿಗಾಗಿ ಕಾಯುತ್ತಾ ಕುಳಿತಿರುವವರನ್ನು ಕೇಳಬೇಕು. ಒಂದು ನಿಮಿಷದ ಮಹತ್ವವನ್ನು ತಿಳಿಯಲು ರೈಲಿಗೆ ಟಿಕೆಟ್ ತೆಗೆದುಕೊಂಡು ರೈಲು ತಪ್ಪಿಸಿಕೊಂಡ ಪ್ರಯಾಣಿಕನನ್ನು ಕೇಳಬೇಕು. ಒಂದು ಸೆಕೆಂಡಿನ ಮಹತ್ವವನ್ನು ತಿಳಿಯಲು ಅಪಘಾತದಲ್ಲಿ ಕೂದಲೆಳೆಯಲ್ಲಿ ತಪ್ಪಿಸಿಕೊಂಡು ಬದುಕಿದವನನ್ನು ಕೇಳಬೇಕು, ಒಂದು ಮಿಲಿ ಸೆಕೆಂಡಿನ ಮಹತ್ವವನ್ನು ತಿಳಿಯಲು ಒಲಿಂಪಿಕ್ಸ್ ಕ್ರೀಡೆಯಲ್ಲಿ ಚಿನ್ನದ ಪದಕವನ್ನು ಕಳೆದುಕೊಂಡು ಬೆಳ್ಳಿ ಪದಕವನ್ನು ಪಡೆದ ಕ್ರೀಡಾಪಟುವನ್ನು ಕೇಳಬೇಕು ಎಂದಿದ್ದಾರೆ.
ಸಮಯದ ಮಹತ್ವವನ್ನು ಅರಿಯಲು ಇಷ್ಟು ಉದಾಹರಣೆಗಳು ಸಾಕು.

BIJAPUR NEWS bjp public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಉದಯರಶ್ಮಿ ಇಂದಿನ ದಿನಪತ್ರಿಕೆ ಆಗಸ್ಟ್ 27, 2026

ಸಿಂದಗಿ: ಆಕಸ್ಮಿಕ ಬೆಂಕಿಗೆ ಸುಟ್ಟು ಕರಕಲಾದ ಕಾರು

ಶಾಶ್ವತ ಗಣೇಶ ವಿಸರ್ಜನೆ ಹೊಂಡ ನಿರ್ಮಾಣಕ್ಕೆ ಕ್ರಮ

ಇಂದು ಎಸ್.ಬಿ.ಆರ್ಟ್ಸ್ & ಕೆ.ಸಿ.ಪಿ. ಸೈನ್ಸ್ ಕಾಲೇಜ್ನಲ್ಲಿ ಖೇಲೋ ಇಂಡಿಯಾ ಸಂವಾದ

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಉದಯರಶ್ಮಿ ಇಂದಿನ ದಿನಪತ್ರಿಕೆ ಆಗಸ್ಟ್ 27, 2026
    In ದಿನಪತ್ರಿಕೆ
  • ಸಿಂದಗಿ: ಆಕಸ್ಮಿಕ ಬೆಂಕಿಗೆ ಸುಟ್ಟು ಕರಕಲಾದ ಕಾರು
    In (ರಾಜ್ಯ ) ಜಿಲ್ಲೆ
  • ಶಾಶ್ವತ ಗಣೇಶ ವಿಸರ್ಜನೆ ಹೊಂಡ ನಿರ್ಮಾಣಕ್ಕೆ ಕ್ರಮ
    In (ರಾಜ್ಯ ) ಜಿಲ್ಲೆ
  • ಇಂದು ಎಸ್.ಬಿ.ಆರ್ಟ್ಸ್ & ಕೆ.ಸಿ.ಪಿ. ಸೈನ್ಸ್ ಕಾಲೇಜ್ನಲ್ಲಿ ಖೇಲೋ ಇಂಡಿಯಾ ಸಂವಾದ
    In (ರಾಜ್ಯ ) ಜಿಲ್ಲೆ
  • ಐವರು ಮಕ್ಕಳೊಂದಿಗೆ ಕೆರೆಗೆ ಹಾರಿ ಸಾವಿಗೆ ಶರಣಾದ ತಾಯಿ!
    In (ರಾಜ್ಯ ) ಜಿಲ್ಲೆ
  • ಫುಲ್ ಮ್ಯಾರಾಥಾನ ನಡೆಸಲು ಈಗಿನಿಂದಲೇ ಸಿದ್ಧತೆ
    In (ರಾಜ್ಯ ) ಜಿಲ್ಲೆ
  • ಆದೇಶವಿದ್ದರೂ ನಿಯಮ ಪಾಲಿಸದ ಸಾರಿಗೆ ಸಿಬ್ಬಂದಿ :ಆರೋಪ
    In (ರಾಜ್ಯ ) ಜಿಲ್ಲೆ
  • ಆ.೨೭ರಂದು ಅಥಣಿ ತಾಲೂಕು ಮಟ್ಟದ ಕ್ರೀಡಾಕೂಟ
    In (ರಾಜ್ಯ ) ಜಿಲ್ಲೆ
  • ವಿಜಯಪುರ ಭೂತನಾಳ ಕೆರೆಯಲ್ಲಿ 6 ಶವ ಪತ್ತೆ!
    In (ರಾಜ್ಯ ) ಜಿಲ್ಲೆ
  • ಆಲಮಟ್ಟಿ-ಯಾದಗೀರ ರೈಲ್ವೇ‌ ಮಾರ್ಗದ ಸರ್ವೇ ಕಾರ್ಯಕ್ಕೆ ಟೆಂಡರ್
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.