Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಚಡಚಣ: ಜನಪದ ಸಂಸ್ಕೃತಿ ಅರಳುವುದು ಸಂದರ್ಭಾನುಸಾರ, ತರಬೇತಿಯಿಂದಲ್ಲ. ಒಬ್ಬ ವ್ಯಕ್ತಿ ಶಕ್ತಿವಂತನೊ, ಕಲಾವಿದನೋ, ಜಾಣನೋ, ಜನಸೇವಕನೋ ಎಂದು ಗೊತ್ತಾಗುವುದು ಅವನಿಗೆಂದೆ ನಿರ್ದಿಷ್ಟವಾಗಿರುವ ಸಂದರ್ಭದಲ್ಲಿ ಮಾತ್ರ. ಶಿಷ್ಟ ಸಮಾಜದಂತೆ ಜನಪದ ಸಮಾಜದಲ್ಲಿ ಕಲಾವಿದ, ಪೈಲ್‌ವಾನ್, ಸಮಾಜ ಸುಧಾರಕ ಎಂದು ಪ್ರತ್ಯೇಕ ಇರುವುದಿಲ್ಲ. ದಿನನಿತ್ಯದ ಅವನ ಕೆಲಸದ ಜೊತೆಯಲ್ಲೇ ಅವನ ವಿಶೇಷವೆಂಬ ನೈಪುಣ್ಯ ಇರುತ್ತದೆ. ಕಲಾವಿದನಂತೆಯೆ ಜನಪದ ವೈದ್ಯರೂ ಕೂಡಾ ಸಂದರ್ಭಾನುಸಾರವಾಗಿ ರೋಗಿಯನ್ನು ಉಪಚರಿಸುತ್ತಿದ್ದರು. ಅವರು ಪ್ರತ್ಯೇಕ ಕಾಣಿಸಿಕೊಳ್ಳುವಿಕೆಯಲ್ಲಿ ಸಿಗುವುದಿಲ್ಲ. ಜನಪದ ದೇವತೆಗಳ ಪೂಜಾರಿಗಳನ್ನು ಗಮನಿಸಿ. ಅವರು ಶಿಷ್ಟ ದೇವತೆಗಳ ಪೂಜಾರಿ ಅಥವಾ ಪುರೋಹಿತರ ಥರ ಕಾಣಿಸುವುದಿಲ್ಲ. ಇಂಥವರು ಸಮಾಜದ ಹೊರಗೆ ಇಲ್ಲ, ಹೊರೆಯೂ ಅಲ್ಲ ಎಂದು ಶ್ರೀ ಸಂಗಮೇಶ್ವರ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಎಂ. ಎಸ್. ಮಾಗಣಗೇರಿ ಅಭಿಪ್ರಾಯಪಟ್ಟರು.ವಿಶ್ವ ಜಾನಪದ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜಾನಪದ ಸಂಸ್ಕೃತಿಯ ಪ್ರಮುಖ ಅಂಶವೆಂದರೆ ಮಾತನಾಡುವ ಪದ ಅಥವಾ ಭಾಷೆ, ಸಮಾಜದೊಳಗಿನ ಪ್ರಮುಖ…
ಬಸವನಬಾಗೇವಾಡಿ: ವಿದ್ಯಾರ್ಥಿಗಳಲ್ಲಿರುವ ಸುಪ್ತ ಪ್ರತಿಭೆಯನ್ನು ಗುರುತಿಸಲು ಸರ್ಕಾರ ಪ್ರತಿಭಾ ಕಾರಂಜಿ ಎಂಬ ಕಾರ್ಯಕ್ರಮ ಜಾರಿಗೆ ತಂದಿದೆ. ಈ ಕಾರ್ಯಕ್ರಮದ ಮೂಲಕ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ತಾಲೂಕು, ಜಿಲ್ಲಾ, ರಾಜ್ಯ ಮಟ್ಟಕ್ಕೆ ಹೋಗುವಂತೆ ನಿರ್ಣಾಯಕರು ತಮ್ಮ ನಿರ್ಣಯ ನೀಡಬೇಕೆಂದು ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಶಿವಾನಂದ ಮಂಗಾನವರ ಹೇಳಿದರು.ತಾಲೂಕಿನ ಅಂಬಳೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಜಿಲ್ಲಾ ಪಂಚಾಯತ, ಕ್ಷೇತ್ರಶಿಕ್ಷಣಾಧಿಕಾರಿಗಳ ಹಾಗೂ ಕ್ಷೇತ್ರ ಸಮನ್ವಾಧಿಕಾರಿಗಳ ಕಾರ್ಯಾಲಯ ಮತ್ತು ನರಸಲಗಿ ಸಮೂಹ ಸಂಪನ್ಮೂಲ ಕೇಂದ್ರದ ಸಹಯೋಗದಲ್ಲಿ ಗುರುವಾರ ಹಮ್ಮಿಕೊಂಡಿದ್ದ ನರಸಲಗಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಹೊರಹಾಕಲು ಶಿಕ್ಷಕ ಬಾಂಧವರು, ಪಾಲಕರು ಸೂಕ್ತ ಅವಕಾಶ,ಪ್ರೇರಣೆ ನೀಡುವದು ಅಗತ್ಯವಿದೆ ಎಂದ ಅವರು, ಸರ್ಕಾರ ಶಿಕ್ಷಣಕ್ಕೆ ಬಹಳ ಒತ್ತು ನೀಡುತ್ತಿದೆ.ವಿದ್ಯಾರ್ಥಿಗಳಿಗೆ ಉಚಿತ ಪಠ್ಯಪುಸ್ತಕ,ಶೂ-ಸಾಕ್ಸ್, ಬಟ್ಟೆ , ಬಿಸಿಯೂಟ ಸೇರಿದಂತೆ ಅನೇಕ ಸೌಲಭ್ಯಗಳನ್ನು ನೀಡುತ್ತಿದೆ. ಇದರ ಸದುಪಯೋಗವಾಗುವ ಮೂಲಕ…
– ಬಸವರಾಜ ನಂದಿಹಾಳಬಸವನಬಾಗೇವಾಡಿ: ಪಟ್ಟಣದ ಆರಾಧ್ಯದೈವ ಮೂಲನಂದೀಶ್ವರ (ಬಸವೇಶ್ವರ)ದೇವರ ಐತಿಹಾಸಿಕ ಜಾತ್ರಾಮಹೋತ್ಸವ ಆ.೨೬ ರಿಂದ ೩೦ ರವರೆಗೆ ಐದು ದಿನಗಳ ಕಾಲ ನಡೆಯುವ ಹಿನ್ನೆಲೆಯಲ್ಲಿ ಬಸವೇಶ್ವರ ದೇವಾಲಯದ ಅಂತರಾಷ್ಟ್ರೀಯ ಶಾಲೆಯ ಪಕ್ಕದಲ್ಲಿರುವ ಸ್ಥಳೀಯ ಗಣ್ಯ ವ್ಯಾಪಾರಸ್ಥ ಅನಿಲ(ಭರತು) ಅಗರವಾಲ ಅವರ ಜಮೀನಿನಲ್ಲಿ ವಿವಿಧೆಡೆಗಳಿಂದ ಆಗಮಿಸಿದ್ದ ವಿವಿಧ ಮಳಿಗೆಗಳ ವ್ಯಾಪಾರಸ್ಥರು ಗುರುವಾರ ತಮ್ಮ ತಮ್ಮ ಮಳಿಗೆಗಳನ್ನು ಹಾಕಲು ಭರದಿಂದ ಸಿದ್ಧತೆ ಕೈಗೊಂಡಿದ್ದು ಕಂಡುಬಂದಿತ್ತು.ಈ ಜಾಗೆಯಲ್ಲಿ ಮಳಿಗೆಗಳಿಗೆ ಜನರು ಬರಲು ವಿವಿಧೆಡೆ ರಸ್ತೆ ವ್ಯವಸ್ಥೆ ಮಾಡಲಾಗಿದೆ. ಜಮೀನಿನಲ್ಲಿ ಗರಸು ಹಾಕಿ ರಸ್ತೆ ಮಾಡಲಾಗಿದೆ. ಇದರಿಂದಾಗಿ ಮಳೆ ಬಂದರೂ ರಾಡಿಯಾಗುವ ಪ್ರಮೇಯ ಇರುವುದಿಲ್ಲ. ಸುವ್ಯವಸ್ಥಿತ ಮಳಿಗೆಗಳನ್ನು ಹಾಕಲು ವ್ಯವಸ್ಥೆ ಮಾಡಲಾಗಿದೆ.ಬಸವೇಶ್ವರ ಜಾತ್ರಾ ಉತ್ಸವ ಸಮಿತಿ, ಬಸವೇಶ್ವರ ಸೇವಾ ಉತ್ಸವ ಸಮಿತಿ ಪದಾಧಿಕಾರಿಗಳು ಜಾತ್ರೆಗೆ ಹಾಕಲಾಗುವ ತಾತ್ಕಲಿಕ ಮಳಿಗೆಗಳಿಗೆ ಭರತು ಅಗರವಾಲ ಜಮೀನಿನಲ್ಲಿ ಮಳಿಗೆ ಹಾಕುವವರಿಗೆ ಹಂಚಿಕೆ ಮಾಡಿದ್ದರಿಂದಾಗಿ ತಮ್ಮ ತಮ್ಮ ಮಳಿಗೆಗಳನ್ನು ಹಾಕುವ ಸಿದ್ಧತೆ ಕೈಗೊಂಡಿದ್ದಾರೆ. ಮಧ್ಯಾನ್ಹ, ಸಂಜೆ ಬಂದ ಮಳೆಯು ಮಳಿಗೆ ಹಾಕಲು ಅವಕಾಶ…
ಬಸವನಬಾಗೇವಾಡಿ: ಪಟ್ಟಣದ ಉತ್ತರಾದಿ ಮಠದಲ್ಲಿ ಕಲಿಯುಗದ ಕಾಮಧೇನು, ಕಲ್ಪವೃಕ್ಷ ರಾಘವೇಂದ್ರ ಸ್ವಾಮಿಗಳ ಆರಾಧನೆ ಮಹೋತ್ಸವದಂಗವಾಗಿ ಗುರುವಾರ ಉತ್ತರಾರಾಧನೆ ನಿಮಿತ್ತ ಬೆಳಗ್ಗೆ ಸುಪ್ರಭಾತ, ರಾಘವೇಂದ್ರ ಸ್ವಾಮಿಗಳ ಅಷ್ಟೋತ್ತರ, ಮಹಾಪಂಚಾಮೃತ ಅಭಿಷೇಕ, ಬೃಂದಾನವನದ ಅಲಂಕಾರ ಪೂಜೆ, ಸತ್ಯನಾರಾಯಣ ಪೂಜೆ, ತೀರ್ಥ ಪ್ರಸಾದ ಜರುಗಿತು. ಮಧ್ಯಾನ್ಹ ಸಂಭ್ರಮದಿಂದ ಪಲ್ಲಕ್ಕಿ ಉತ್ಸವ ಜರುಗಿತು.ಪೂಜಾ ಕಾರ್ಯಕ್ರಮದಲ್ಲಿ ವಾದಿರಾಜಆಚಾರ್ಯ ಯಜುರ್ವೇದಿ, ರಾಮಾಚಾರ್ ಜೋಶಿ, ವಸಂತಆಚಾರ್ಯ ಇಂಗಳೇಶ್ವರ, ವಸಂತ ಕುಲಕರ್ಣಿ, ಶ್ರೀಧರಆಚಾರ್ಯ ಚಿಮ್ಮಲಗಿ, ಆನಂದಆಚಾರ್ಯ ಚಿಮ್ಮಲಗಿ, ವಿಠ್ಠಲಆಚಾರ್ ಜೋಶಿ, ರಾಮಾಚಾರಿ ಯಜುರ್ವೇದಿ, ಯಲಗೂರೇಶಆಚಾರ್ಯ ಯಜುರ್ವೇದಿ, ಅನಂತ ಕುಲಕರ್ಣಿ, ಅಜಿತ ಉಮರ್ಜಿ, ನಾರಾಯಣ ಕುಲಕರ್ಣಿ ಇತರರು ಇದ್ದರು.
ಬಸವನಬಾಗೇವಾಡಿ: ಪಟ್ಟಣದ ಗೌರಿ-ಶಂಕರ ಗುಡಿ ಹತ್ತಿರವಿರುವ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಮೂರು ದಿನಗಳ ಕಾಲ ರಾಘವೇಂದ್ರ ಸ್ವಾಮಿಗಳ ೩೫೩ ನೇ ರಾಯರ ಆರಾಧನಾ ಮಹೋತ್ಸವ ಸಂಭ್ರಮದಿಂದ ಜರುಗಿತು.ಮೊದಲ ದಿನ ಪೂರ್ವಾ ಆರಾಧನೆ, ಎರಡನೇ ದಿನ ಮಧ್ಯಾ ಆರಾಧನೆ, ಕೊನೆ ದಿನವಾದ ಗುರುವಾರ ಉತ್ತಾರಾರಾಧನೆಯಂಗವಾಗಿ ಬೆಳಗ್ಗೆ ಅಷ್ಟೋತ್ತರ, ರಾಯರ ಬೃಂದಾವನ ಅಲಂಕಾರ ಪೂಜೆ, ಸತ್ಯನಾರಾಯಣ ಪೂಜೆ, ಮಧ್ಯಾನ್ಹ ರಥೋತ್ಸವ, ಮಹಾಪ್ರಸಾದ, ಸಂಜೆ ಪಲ್ಲಕ್ಕಿ ಉತ್ಸವ, ಪ್ರವಚನ ಭಜನೆ ಭಕ್ತಿಪೂರ್ವಕ ಸಡಗರ, ಸಂಭ್ರಮದಿಂದ ಜರುಗಿತು.ರಾಯರ ರಥೋತ್ಸವದಲ್ಲಿ ಭಜನಾ ಪದಗಳನ್ನು ಭಕ್ತರು ಸುಶ್ರಾವ್ಯವಾಗಿ ಹಾಡಿದರು. ಭಜನಾ ಪದಗಳಿಗೆ ನೃತ್ಯ ಸೇವೆ ಮಾಡುವ ಮೂಲಕ ರಾಯರಿಗೆ ಭಕ್ತಿ ಸಮರ್ಪಿಸಿದರು.ರಥೋತ್ಸವದಲ್ಲಿ ರಾಯರ ಮಠದ ಅಧ್ಯಕ್ಷ ಅನಿಲ ಹಣಮಂತರಾಯ ಕುಲಕರ್ಣಿ, ಮಧುಕರ ಚೌಧರಿ, ಮುಕುಂದ ದೇಶಪಾಂಡೆ, ಅನಿಲ ದೇಶಪಾಂಡೆ, ವಿಠ್ಠಲ ಕುಲಕರ್ಣಿ, ಶಿರಿಷ್ ಇಂಗಳೇಶ್ವರ, ಬಂಡಾಚಾರ್ಯ ಇಂಗಳೇಶ್ವರ, ವಿಠ್ಠಲ ದೇಶಪಾಂಡೆ, ರಮೇಶ ಇನಾಮದಾರ,ವಿನಾಯಕ ದೇಶಪಾಂಡೆ, ಸಂಜೀವ ದೇಶಪಾಂಡೆ, ಸಂಜೀವ ಕುಲಕರ್ಣಿ, ರವಿಚಂದ್ರ ಜೋಶಿ, ಭಾರತಿ ಕುಲಕರ್ಣಿ, ಪುಷ್ಪಾ ಕುಲಕರ್ಣಿ, ನಾಗವೇಣಿ…
ವಿಜಯಪುರ: ವಿಜಯಪುರ ನಗರ ವ್ಯಾಪ್ತಿಯಲ್ಲಿನ ವಾರ್ಡ ಸಂ.೧ ರಿಂದ ೩೫ ರವರೆಗಿನ ಖಾಸಗಿ ಮಾಲೀಕತ್ವದ ಖಾಲಿ ನಿವೇಶನಗಳ ಮಾಲೀಕರು-ಸಾರ್ವಜನಿಕರು ತಮ್ಮ ಖಾಲಿ ನಿವೇಶನಗಳಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳುವಂತೆ ಮಹಾನಗರ ಪಾಲಿಕೆ ಆಯುಕ್ತರು ತಿಳಿಸಿದ್ದಾರೆ.ಖಾಲಿ ನಿವೇಶನಗಳಲ್ಲಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದು ಮಾಲೀಕರ ಜವಾಬ್ದಾರಿಯಾಗಿರುತ್ತದೆ. ಕರ್ನಾಟಕ ಮಹಾನಗರ ಪಾಲಿಕೆಗಳ ಅಧಿನಿಯಮ ೧೯೭೬ರ ಕಲಂ ೨೫೬, ೨೫೭, ೩೩೨, ೩೩೩, ೩೩೪ ಮತ್ತು ೩೩೫ರಡಿಯಲ್ಲಿ ಖಾಲಿ ನಿವೇಶನಗಳಲ್ಲಿ ಕಸದ ರಾಶಿ, ಕಟ್ಟಡ ಭಗ್ನಾವಶೇಷಗಳನ್ನು ಸುರಿಯುವುದರಿಂದ ನಿವೇಶನಗಳಲ್ಲಿ ಕಸ ಗಿಡಕಂಟಿ ಬೆಳೆದು ಸಾರ್ವಜನಿಕರ ಆರೋಗ್ಯಕ್ಕೆ ಹಾನಿಯಾಗುತ್ತದೆ ಹಾಗೂ ಸ್ವಚ್ಛ ಪರಿಸರಕ್ಕೆ ಧಕ್ಕೆ ಉಂಟಾಗುತ್ತದೆ. ಈ ಕುರಿತು ಪಾಲಿಕೆಯಿಂದ ಹಲವು ಬಾರಿ ನಿವೇಶನ ಮಾಲೀಕರಿಗೆ ಸೂಚನೆ ನೀಡಲಾಗಿದ್ದರೂ ಸಹ ಆದೇಶ ಪಾಲನೆ ಮಾಡದೇ, ಶುಚಿತ್ವ ಕಾಪಾಡಿಕೊಳ್ಳದಿರುವ ಕುರಿತು ಸಾಕಷ್ಟು ದೂರುಗಳು ಪಾಲಿಕೆಗೆ ಸಲ್ಲಿಕೆಯಾಗಿವೆ ಎಂದು ಅವರು ತಿಳಿಸಿದ್ದಾರೆ.ಪಾಲಿಕೆ ವತಿಯಿಂದ ವಾರ್ಡವಾರು ಮುಖ್ಯ ರಸ್ತೆಗಳ ಸ್ವಚ್ಛತೆ, ವೃತ್ತಗಳ ಸ್ವಚ್ಛತೆ, ಹಾಗೂ ವಾರ್ಡಗಳಲ್ಲಿನ ಕಸದ ರಾಶಿಗಳನ್ನು ಸ್ವಚ್ಛಗೊಳಿಸುವ ಕಾರ್ಯಗಳನ್ನು ಕೈಗೊಳ್ಳಲಾಗುವುದು. ನಗರದ ಸಾರ್ವಜನಿಕರು ವರ್ತಕರು,…
ವಿಜಯಪುರ: ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದಿ ನಿಗಮದ ವತಿಯಿಂದ ಅರಿವು (ರಿನ್ಯೂವಲ್) ಸಾಲ ಯೋಜನೆಯಡಿ ವಿದ್ಯಾಭ್ಯಾಸ ಸಾಲಕ್ಕಾಗಿ ಮತೀಯ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.ಈ ಯೋಜನೆಯಡಿ ಮತೀಯ ಅಲ್ಪಸಂಖ್ಯಾತ ವರ್ಗಕ್ಕೆ ಸೇರಿದ ವಿದ್ಯಾರ್ಥಿಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಮದ ಸಿಇಟಿ, ಡಿಸಿಇಟಿ, ಪಿಜಿಸಿಇಟಿ, ನೀಟ್ ಮೂಲಕ ಪದವಿ ಮತ್ತು ಸ್ನಾತಕೋತ್ತರ ಕೋರ್ಸ್ಗಳಾದ ವೈದ್ಯಕೀಯ, ದಂತ ವೈದ್ಯಕೀಯ, ಇಂಜಿನೀಯರಿಂಗ್ & ಟೆಕ್ನಾಲಜಿ, ಬ್ಯಾಚುಲರ್ ಆಫ್ ಆರ್ಕಿಟೆಕ್ಚರ್, ಅಗ್ರಿಕಲ್ಚರ್ ಇಂಜಿನೀಯರಿಂಗ್ ಸೇರಿದಂತೆ ವಿವಿಧ ಕೋರ್ಸ್ಗಳಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳು ಅರಿವು (ರಿನ್ಯೂವಲ್) ಸಾಲ ಯೋಜನೆಯಡಿ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸುವಾಗ ನಿಗಮದಿಂದ ಈ ಹಿಂದಿನ ವರ್ಷದಲ್ಲಿ ಪಡೆದಿರುವ ಸಾಲದ ಮೊತ್ತದ ಶೇ.೧೨% ರಷ್ಟು ಪಾವತಿಸಬೇಕಾಗಿರುತ್ತದೆ. ಶೆ.೧೨% ರಷ್ಟು ಮೊತ್ತವನ್ನು ಆನ್‌ಲೈನ್ ಮೂಲಕ ಪಾವತಿಸಬೇಕು.ಈ ಹಿಂದೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಆಯ್ಕೆಯಾಗಿ, ಬೇರೆ ಬೇರೆ ವರ್ಷಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು ಅರಿವು ವಿದ್ಯಾಭ್ಯಾಸ ಸಾಲ ಪಡೆಯದಿದ್ದಲ್ಲಿ ಅಂತಹ ವಿದ್ಯಾರ್ಥಿಗಳು ಸಹ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.ಅರ್ಜಿ ಸಲ್ಲಿಸಲು…
ಸಿಂದಗಿ: ಆ.೨೫ ರವಿವಾರದಂದು ಬೆಳಿಗ್ಗೆ ೧೦:೦೦ ಗಂಟೆಗೆ ಪಟ್ಟಣದ ರಾಜರಾಜೇಶ್ವರಿ ಕಲ್ಯಾಣ ಮಂಟಪದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಜಯಂತಿ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ಸಮಾರಂಭ ಜರುಗಲಿದೆ. ಬೆಳಿಗ್ಗೆ ೯ಗಂಟೆಗೆ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಿಂದ ರಾಜರಾಜೇಶ್ವರಿ ಕಲ್ಯಾಣ ಮಂಟಪದವರೆಗೆ ಸಂಗೊಳ್ಳಿ ರಾಯಣ್ಣ ಅವರ ಭಾವಚಿತ್ರ ಮೆರವಣಿಗೆ ಜರುಗುವದು. ಮೆರವಣಿಗೆಯ ಉದ್ದಕ್ಕೂ ಗುಂದಗಿ ಗ್ರಾಮದ ರೆಬಕಮ್ಮದೇವಿ ಡೊಳ್ಳಿನ ವಾಲಗ ಸಂಘ ಹಾಗೂ ಕೆರೂರ ಗ್ರಾಮದ ಬೀರಲಿಂಗೇಶ್ವರ ಡೊಳ್ಳಿನ ವಾಲಗ ಸಂಘದವರಿಂದ ಡೊಳ್ಳು ವಾದ್ಯ ವಾಲಗ ಸೇವೆ ಜರುಗಲಿದೆ ಎಂದು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನೌಕರರ ಸಂಘದ ತಾಲೂಕಾಧ್ಯಕ್ಷ ರಾಯಪ್ಪ ಇವಣಗಿ ತಿಳಸಿದ್ದಾರೆ.ಕಾರ್ಯಕ್ರಮದಲ್ಲಿ ಕಾಗಿನೆಲೆ ಮಹಾಸಂಸ್ಥಾನದ ತಿಂಥಣಿ ಬ್ರಿಡ್ಜ್ನ ಶಾಖಾಮಠದ ಸಿದ್ಧರಾಮಾನಂದಪುರಿ ಮಹಾಸ್ವಾಮಿಗಳು, ಗೋಳಸಾರದ ಅಭಿನವ ಪುಂಡಲಿಂಗ ಮಹಾಶಿವಯೋಗಿಗಳು ಕಾರ್ಯಕ್ರಮದ ದಿವ್ಯಸಾನಿಧ್ಯವನ್ನು ವಹಿಸುವರು. ವಿಜಯಪುರದ ಶಾಲಾಶಿಕ್ಷಣ ಇಲಾಖೆಯ ಉಪ-ನಿರ್ದೇಶಕ ಎನ್.ಎಚ್.ನಾಗೂರ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಗೊಳ್ಳಿ ರಾಯಣ್ಣ ನೌಕರರ ಸಂಘದ ತಾಲೂಕಾಧ್ಯಕ್ಷ ರಾಯಪ್ಪ ಇವಣಗಿ ವಹಿಸುವರು. ವಿಜಯಪುರ ವಿಭಾಗೀಯ ಕೆ.ಕೆ.ಆರ್.ಟಿ.ಸಿ ನಿಯಂತ್ರಣಾಧಿಕಾರಿ ನಾರಾಯಣಪ್ಪ…
ಡಾ.ಪ್ರಭುಸಾರಂಗದೇವ ಶಿವಾಚಾರ್ಯರ ಜನ್ಮದಿನದ ಪ್ರಯುಕ್ತ ರಕ್ತದಾನ ಶಿಬಿರ ಸಿಂದಗಿ: ರಕ್ತವನ್ನು ಉತ್ಪಾದಿಸಲು ಸಾಧ್ಯವಿಲ್ಲ. ಮಾನವ ದಾನ ಮಾಡಿದರಷ್ಟೆ ರಕ್ತದ ಉತ್ಪಾದನೆ ಸಾಧ್ಯ ಎಂದು ಜಮಖಂಡಿಯ ಕೊಣ್ಣೂರಿನ ಹೊರಗಿನ ಮಠದ ಡಾ.ವಿಶ್ವಪ್ರಭುದೇವ ಶಿವಾಚಾರ್ಯರು ಹೇಳಿದರು.ಪಟ್ಟಣದ ಸಾರಂಗಮಠದಲ್ಲಿ ಪೂಜ್ಯ ಶ್ರೀ ಚೆನ್ನವೀರ ಸ್ವಾಮೀಜಿ ಪ್ರತಿಷ್ಠಾನ, ಶ್ರೀ ಪದ್ಮರಾಜ ವಿದ್ಯಾವರ್ಧಕ ಸಂಸ್ಥೆ ಸಾರಂಗಮಠದ ಆಶ್ರಯದಲ್ಲಿ ಸಾರಂಗಮಠದ ಡಾ.ಪ್ರಭುಸಾರಂಗದೇವ ಶಿವಾಚಾರ್ಯರ ಜನ್ಮದಿನದ ಪ್ರಯುಕ್ತ ಆರ್.ಡಿ.ಪಾಟೀಲ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಪಪೂ ಕಾಲೇಜ, ಜಿ.ಪಿ.ಪೋರವಾಲ್ ಕಲಾ, ವಾಣಿಜ್ಯ ಹಾಗೂ ವ್ಹಿ.ವ್ಹಿ.ಸಾಲಿಮಠ ವಿಜ್ಞಾನ ಪದವಿ ಕಾಲೇಜ ಶ್ರೀಪದ್ಮರಾಜ ಮಹಿಳಾ ಪಪೂ ಹಾಗೂ ಪದವಿ ಕಾಲೇಜ, ಶ್ರೀಪದ್ಮರಾಜ ಶಿಕ್ಷಣ ಮಹಾವಿದ್ಯಾಲಯದ ಸಹಯೋಗದಲ್ಲಿ ವಿಜಯಪುರದ ಶ್ರೀ ಬಿ.ಎಂಪಾಟೀಲ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಸಂಶೋಧನಾ ಕೇಂದ್ರ ಹಮ್ಮಿಕೊಂಡ ಸ್ವಯಂ ಪ್ರೇರಿತ ರಕ್ತದಾನ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದ ಅವರು, ದಾನಗಳಲ್ಲಿ ರಕ್ತದಾನ ಮಹಾದಾನ. ಆನರ ಜೀವ ರಕ್ಷಣೆಗೆ ರಕ್ತ ಅತ್ಯಗತ್ಯವಾಗಿದ್ದು, ರಕ್ತದ ಅವಶ್ಯಕತೆಯಿರುವ ವ್ಯಕ್ತಿಗಳಿಗೆ ರಕ್ತದಾನ ಮಾಡುವುದರ ಮುಖಾಂತರ ಎಲ್ಲರೂ ಜನರ ಅಮೂಲ್ಯವಾದ ಜೀವ…
ಸಿಂದಗಿ: ಪಟ್ಟಣದ ಶ್ರೀ ಪದ್ಮರಾಜ ವಿದ್ಯಾವರ್ಧಕ ಸಂಸ್ಥೆಯ ಜಿ.ಪಿ.ಪೋರವಾಲ ಕಲಾ, ವಾಣಿಜ್ಯ ಮತ್ತು ವ್ಹಿ.ವ್ಹಿ.ಸಾಲಿಮಠ ವಿಜ್ಞಾನ ಪದವಿ ಮಹಾವಿದ್ಯಾಲಯದ ದೈಹಿಕ ನಿರ್ದೇಶಕ ಮತ್ತು ರಾಜ್ಯ, ರಾಷ್ಟ ಮಟ್ಟದಲ್ಲಿ ವಿವಿಧ ಕ್ರೀಡೆಗಳ ವಿಕ್ಷಕ ವಿವರಣೆಗಾರ ಪ್ರೊ.ರವಿ ಗೋಲಾ ಅವರಿಗೆ ಆಂದ್ರ ಪ್ರದೇಶದ ದ್ರಾವಿಡಿಯನ್ ವಿಶ್ವವಿದ್ಯಾನಿಲಯ ಕುಪ್ಪಂದಲ್ಲಿ ಅವರು ಮಂಡಿಸಿದ ಕ್ರಿಕೆಟ್ ಕ್ರೀಡೆಗೆ ಸಂಬಂಧಿಸಿದ ದಿ.ಇಂಪೆಕ್ಟ್ ಆಫ್ ಸೆಲ್ಪ್ ಎಸ್ಟಿಂ ಸಬ್ಜೆಕ್ಟಿವ ವೆಲ್ ಬೀಯಿಂಗ್ ಆಂಡ್ಯ ಸಪೋರ್ಟಿವ್ ಸ್ಪೆಕ್ಟೇಟರ್ಸ ಬಿಹೇವಿಯರ್ ಆಲ್ ದ ಪರ್ಫಾರ್ಮೇನ್ಸ್ ಆಫ್ ಕ್ರೀಕೇಟರ್ಸ ವಿಷಯದ ಮೇಲೆ ಮಂಡಿಸಿದ ಪ್ರಬಂಧಕ್ಕೆ ಡಾಕ್ಟರೇಟ್ ಪದವಿ ನೀಡಿದೆ.ಅವರಿಗೆ ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಪ್ರೋ.ಹಣುಮಂತಯ್ಯ ಪೂಜಾರಿ ಅವರು ಮಾರ್ಗದರ್ಶನ ನೀಡಿದ್ದಾರೆ.ಅವರ ಈ ಡಾಕ್ಟರೇಟ್ ಸಾಧನೆಗೆ ಸಂಸ್ಥೆಯ ಚೆರಮನ್ನರಾದ ಗುರುಕುಲ ಭಾಸ್ಕರ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು, ಶಾಸಕ ಅಶೋಕ ಮನಗೂಳಿ, ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಉಪಾಧ್ಯಕ್ಷ ಇಂದುಶೇಖರ ಮಣೂರ, ತಾಲೂಕಾಧ್ಯಕ್ಷ ಆನಂದ ಶಾಬಾದಿ ಹಾಗೂ ಆಡಳಿತ ಮಂಡಳಿ ನಿರ್ದೇಶಕರು ಮತ್ತು ಪ್ರಾಚಾರ್ಯ ಪ್ರೋ.ಡಿ.ಎಮ್.ಪಾಟೀಲ ಸೇರಿದಂತೆ ಕಾಲೇಜಿನ…
