ಸಿಂದಗಿ: ಪಟ್ಟಣದ ಶ್ರೀ ಪದ್ಮರಾಜ ವಿದ್ಯಾವರ್ಧಕ ಸಂಸ್ಥೆಯ ಜಿ.ಪಿ.ಪೋರವಾಲ ಕಲಾ, ವಾಣಿಜ್ಯ ಮತ್ತು ವ್ಹಿ.ವ್ಹಿ.ಸಾಲಿಮಠ ವಿಜ್ಞಾನ ಪದವಿ ಮಹಾವಿದ್ಯಾಲಯದ ದೈಹಿಕ ನಿರ್ದೇಶಕ ಮತ್ತು ರಾಜ್ಯ, ರಾಷ್ಟ ಮಟ್ಟದಲ್ಲಿ ವಿವಿಧ ಕ್ರೀಡೆಗಳ ವಿಕ್ಷಕ ವಿವರಣೆಗಾರ ಪ್ರೊ.ರವಿ ಗೋಲಾ ಅವರಿಗೆ ಆಂದ್ರ ಪ್ರದೇಶದ ದ್ರಾವಿಡಿಯನ್ ವಿಶ್ವವಿದ್ಯಾನಿಲಯ ಕುಪ್ಪಂದಲ್ಲಿ ಅವರು ಮಂಡಿಸಿದ ಕ್ರಿಕೆಟ್ ಕ್ರೀಡೆಗೆ ಸಂಬಂಧಿಸಿದ ದಿ.ಇಂಪೆಕ್ಟ್ ಆಫ್ ಸೆಲ್ಪ್ ಎಸ್ಟಿಂ ಸಬ್ಜೆಕ್ಟಿವ ವೆಲ್ ಬೀಯಿಂಗ್ ಆಂಡ್ಯ ಸಪೋರ್ಟಿವ್ ಸ್ಪೆಕ್ಟೇಟರ್ಸ ಬಿಹೇವಿಯರ್ ಆಲ್ ದ ಪರ್ಫಾರ್ಮೇನ್ಸ್ ಆಫ್ ಕ್ರೀಕೇಟರ್ಸ ವಿಷಯದ ಮೇಲೆ ಮಂಡಿಸಿದ ಪ್ರಬಂಧಕ್ಕೆ ಡಾಕ್ಟರೇಟ್ ಪದವಿ ನೀಡಿದೆ.
ಅವರಿಗೆ ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಪ್ರೋ.ಹಣುಮಂತಯ್ಯ ಪೂಜಾರಿ ಅವರು ಮಾರ್ಗದರ್ಶನ ನೀಡಿದ್ದಾರೆ.
ಅವರ ಈ ಡಾಕ್ಟರೇಟ್ ಸಾಧನೆಗೆ ಸಂಸ್ಥೆಯ ಚೆರಮನ್ನರಾದ ಗುರುಕುಲ ಭಾಸ್ಕರ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು, ಶಾಸಕ ಅಶೋಕ ಮನಗೂಳಿ, ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಉಪಾಧ್ಯಕ್ಷ ಇಂದುಶೇಖರ ಮಣೂರ, ತಾಲೂಕಾಧ್ಯಕ್ಷ ಆನಂದ ಶಾಬಾದಿ ಹಾಗೂ ಆಡಳಿತ ಮಂಡಳಿ ನಿರ್ದೇಶಕರು ಮತ್ತು ಪ್ರಾಚಾರ್ಯ ಪ್ರೋ.ಡಿ.ಎಮ್.ಪಾಟೀಲ ಸೇರಿದಂತೆ ಕಾಲೇಜಿನ ಸಿಬ್ಬಂದಿ ಹರ್ಷ ವ್ಯಕ್ತಪಡಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment

