ಬಸವನಬಾಗೇವಾಡಿ: ಪಟ್ಟಣದ ಉತ್ತರಾದಿ ಮಠದಲ್ಲಿ ಕಲಿಯುಗದ ಕಾಮಧೇನು, ಕಲ್ಪವೃಕ್ಷ ರಾಘವೇಂದ್ರ ಸ್ವಾಮಿಗಳ ಆರಾಧನೆ ಮಹೋತ್ಸವದಂಗವಾಗಿ ಗುರುವಾರ ಉತ್ತರಾರಾಧನೆ ನಿಮಿತ್ತ ಬೆಳಗ್ಗೆ ಸುಪ್ರಭಾತ, ರಾಘವೇಂದ್ರ ಸ್ವಾಮಿಗಳ ಅಷ್ಟೋತ್ತರ, ಮಹಾಪಂಚಾಮೃತ ಅಭಿಷೇಕ, ಬೃಂದಾನವನದ ಅಲಂಕಾರ ಪೂಜೆ, ಸತ್ಯನಾರಾಯಣ ಪೂಜೆ, ತೀರ್ಥ ಪ್ರಸಾದ ಜರುಗಿತು. ಮಧ್ಯಾನ್ಹ ಸಂಭ್ರಮದಿಂದ ಪಲ್ಲಕ್ಕಿ ಉತ್ಸವ ಜರುಗಿತು.
ಪೂಜಾ ಕಾರ್ಯಕ್ರಮದಲ್ಲಿ ವಾದಿರಾಜಆಚಾರ್ಯ ಯಜುರ್ವೇದಿ, ರಾಮಾಚಾರ್ ಜೋಶಿ, ವಸಂತಆಚಾರ್ಯ ಇಂಗಳೇಶ್ವರ, ವಸಂತ ಕುಲಕರ್ಣಿ, ಶ್ರೀಧರಆಚಾರ್ಯ ಚಿಮ್ಮಲಗಿ, ಆನಂದಆಚಾರ್ಯ ಚಿಮ್ಮಲಗಿ, ವಿಠ್ಠಲಆಚಾರ್ ಜೋಶಿ, ರಾಮಾಚಾರಿ ಯಜುರ್ವೇದಿ, ಯಲಗೂರೇಶಆಚಾರ್ಯ ಯಜುರ್ವೇದಿ, ಅನಂತ ಕುಲಕರ್ಣಿ, ಅಜಿತ ಉಮರ್ಜಿ, ನಾರಾಯಣ ಕುಲಕರ್ಣಿ ಇತರರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

