ಬಸವನಬಾಗೇವಾಡಿ: ಪಟ್ಟಣದ ಗೌರಿ-ಶಂಕರ ಗುಡಿ ಹತ್ತಿರವಿರುವ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಮೂರು ದಿನಗಳ ಕಾಲ ರಾಘವೇಂದ್ರ ಸ್ವಾಮಿಗಳ ೩೫೩ ನೇ ರಾಯರ ಆರಾಧನಾ ಮಹೋತ್ಸವ ಸಂಭ್ರಮದಿಂದ ಜರುಗಿತು.
ಮೊದಲ ದಿನ ಪೂರ್ವಾ ಆರಾಧನೆ, ಎರಡನೇ ದಿನ ಮಧ್ಯಾ ಆರಾಧನೆ, ಕೊನೆ ದಿನವಾದ ಗುರುವಾರ ಉತ್ತಾರಾರಾಧನೆಯಂಗವಾಗಿ ಬೆಳಗ್ಗೆ ಅಷ್ಟೋತ್ತರ, ರಾಯರ ಬೃಂದಾವನ ಅಲಂಕಾರ ಪೂಜೆ, ಸತ್ಯನಾರಾಯಣ ಪೂಜೆ, ಮಧ್ಯಾನ್ಹ ರಥೋತ್ಸವ, ಮಹಾಪ್ರಸಾದ, ಸಂಜೆ ಪಲ್ಲಕ್ಕಿ ಉತ್ಸವ, ಪ್ರವಚನ ಭಜನೆ ಭಕ್ತಿಪೂರ್ವಕ ಸಡಗರ, ಸಂಭ್ರಮದಿಂದ ಜರುಗಿತು.
ರಾಯರ ರಥೋತ್ಸವದಲ್ಲಿ ಭಜನಾ ಪದಗಳನ್ನು ಭಕ್ತರು ಸುಶ್ರಾವ್ಯವಾಗಿ ಹಾಡಿದರು. ಭಜನಾ ಪದಗಳಿಗೆ ನೃತ್ಯ ಸೇವೆ ಮಾಡುವ ಮೂಲಕ ರಾಯರಿಗೆ ಭಕ್ತಿ ಸಮರ್ಪಿಸಿದರು.
ರಥೋತ್ಸವದಲ್ಲಿ ರಾಯರ ಮಠದ ಅಧ್ಯಕ್ಷ ಅನಿಲ ಹಣಮಂತರಾಯ ಕುಲಕರ್ಣಿ, ಮಧುಕರ ಚೌಧರಿ, ಮುಕುಂದ ದೇಶಪಾಂಡೆ, ಅನಿಲ ದೇಶಪಾಂಡೆ, ವಿಠ್ಠಲ ಕುಲಕರ್ಣಿ, ಶಿರಿಷ್ ಇಂಗಳೇಶ್ವರ, ಬಂಡಾಚಾರ್ಯ ಇಂಗಳೇಶ್ವರ, ವಿಠ್ಠಲ ದೇಶಪಾಂಡೆ, ರಮೇಶ ಇನಾಮದಾರ,ವಿನಾಯಕ ದೇಶಪಾಂಡೆ, ಸಂಜೀವ ದೇಶಪಾಂಡೆ, ಸಂಜೀವ ಕುಲಕರ್ಣಿ, ರವಿಚಂದ್ರ ಜೋಶಿ, ಭಾರತಿ ಕುಲಕರ್ಣಿ, ಪುಷ್ಪಾ ಕುಲಕರ್ಣಿ, ನಾಗವೇಣಿ ಇನಾಮದಾರ, ವಿದ್ಯಾ ಕುಲಕರ್ಣಿ, ಅನಿತಾ ದೇಶಪಾಂಡೆ, ಸುಜಾತಾ ಜೋಶಿ, ಕಾವೇರಿ ಜೋಶಿ, ವಿಜಯಲಕ್ಷ್ಮೀ ಜೋಶಿ, ಅಂಜನಾ ಕುಲಕರ್ಣಿ, ರಜನಿ ಅಥಣಿ, ಮಾಧವಿ ಚೌಧರಿ, ಸುಧಾ ಚೌಧರಿ, ಸುರೇಖಾ ಕುಲಕರ್ಣಿ, ವೈಷ್ಣವಿ ಕುಲಕರ್ಣಿ, ಅನಿತಾ ಕುಲಕರ್ಣಿ, ನಂದಾ ಇಂಗಳೇಶ್ವರ, ನಂದಾ ಬೇಲೇರಿ, ವೈಷ್ಣವಿ ಕಿರಣ ಕುಲಕರ್ಣಿ ಸೇರಿದಂತೆ ಇತರರು ಭಾಗವಹಿಸಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

