ಸಿಂದಗಿ: ಆ.೨೫ ರವಿವಾರದಂದು ಬೆಳಿಗ್ಗೆ ೧೦:೦೦ ಗಂಟೆಗೆ ಪಟ್ಟಣದ ರಾಜರಾಜೇಶ್ವರಿ ಕಲ್ಯಾಣ ಮಂಟಪದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಜಯಂತಿ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ಸಮಾರಂಭ ಜರುಗಲಿದೆ. ಬೆಳಿಗ್ಗೆ ೯ಗಂಟೆಗೆ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಿಂದ ರಾಜರಾಜೇಶ್ವರಿ ಕಲ್ಯಾಣ ಮಂಟಪದವರೆಗೆ ಸಂಗೊಳ್ಳಿ ರಾಯಣ್ಣ ಅವರ ಭಾವಚಿತ್ರ ಮೆರವಣಿಗೆ ಜರುಗುವದು. ಮೆರವಣಿಗೆಯ ಉದ್ದಕ್ಕೂ ಗುಂದಗಿ ಗ್ರಾಮದ ರೆಬಕಮ್ಮದೇವಿ ಡೊಳ್ಳಿನ ವಾಲಗ ಸಂಘ ಹಾಗೂ ಕೆರೂರ ಗ್ರಾಮದ ಬೀರಲಿಂಗೇಶ್ವರ ಡೊಳ್ಳಿನ ವಾಲಗ ಸಂಘದವರಿಂದ ಡೊಳ್ಳು ವಾದ್ಯ ವಾಲಗ ಸೇವೆ ಜರುಗಲಿದೆ ಎಂದು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನೌಕರರ ಸಂಘದ ತಾಲೂಕಾಧ್ಯಕ್ಷ ರಾಯಪ್ಪ ಇವಣಗಿ ತಿಳಸಿದ್ದಾರೆ.
ಕಾರ್ಯಕ್ರಮದಲ್ಲಿ ಕಾಗಿನೆಲೆ ಮಹಾಸಂಸ್ಥಾನದ ತಿಂಥಣಿ ಬ್ರಿಡ್ಜ್ನ ಶಾಖಾಮಠದ ಸಿದ್ಧರಾಮಾನಂದಪುರಿ ಮಹಾಸ್ವಾಮಿಗಳು, ಗೋಳಸಾರದ ಅಭಿನವ ಪುಂಡಲಿಂಗ ಮಹಾಶಿವಯೋಗಿಗಳು ಕಾರ್ಯಕ್ರಮದ ದಿವ್ಯಸಾನಿಧ್ಯವನ್ನು ವಹಿಸುವರು. ವಿಜಯಪುರದ ಶಾಲಾಶಿಕ್ಷಣ ಇಲಾಖೆಯ ಉಪ-ನಿರ್ದೇಶಕ ಎನ್.ಎಚ್.ನಾಗೂರ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಗೊಳ್ಳಿ ರಾಯಣ್ಣ ನೌಕರರ ಸಂಘದ ತಾಲೂಕಾಧ್ಯಕ್ಷ ರಾಯಪ್ಪ ಇವಣಗಿ ವಹಿಸುವರು. ವಿಜಯಪುರ ವಿಭಾಗೀಯ ಕೆ.ಕೆ.ಆರ್.ಟಿ.ಸಿ ನಿಯಂತ್ರಣಾಧಿಕಾರಿ ನಾರಾಯಣಪ್ಪ ಕುರಬರ ಫೋಟೊ ಪೂಜೆಯನ್ನು ನೆರವೇರಿಸುವರು. ಸಿಂದಗಿಯ ಕೆ.ಪಿ.ಟಿ.ಸಿ.ಎಲ್ ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್ ಡಿ.ಎಂ.ಮೂಲಿಮನಿ ಮೆರವಣಿಗೆಗೆ ಚಾಲನೆ ನೀಡುವರು. ಅತಿಥಿಗಳಾಗಿ ಎಚ್.ಎಲ್.ಸಂಕ ಎಂ.ಎಂ.ತಡಲಗಿ, ಎ.ಆರ್.ಹೆಗ್ಗಣದೊಡ್ಡಿ, ಡಾ. ಬಿ.ಎಸ್.ಅಳ್ಳಿಚಂಡಿ ಹಾಗೂ ಬಿ.ವಾಯ್.ಗೌಡರ ಭಾಗವಹಿಸುವರು.
ಡೊಳ್ಳಿನ ಗಾಯನ ಕಲಾ ಸಂಘದ ರಾಜ್ಯಾಧ್ಯಕ್ಷ ಜಕ್ಕಣ್ಣ ಮಾಸ್ತರ ಮೀಸಿ ಉಪನ್ಯಾಸ ನೀಡುವರು.
ಕಾರಣ ತಾಲೂಕಿನ ಸಮಸ್ತ ನಾಗರಿಕರು ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದು ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment
