Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಹುಣಶ್ಯಾಳ ಗ್ರಾಮದ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೂತನ ಎಲ್‌ಕೆಜಿ ಹಾಗೂ ಯುಕೆಜಿ ತರಗತಿಗಳ ಪ್ರಾರಂಭೋತ್ಸವ ಹಾಗೂ ಉದ್ಘಾಟನಾ ಕಾರ್ಯಕ್ರಮ ಜರುಗಿತು.ತಾಲ್ಲೂಕಿನ ಹುಣಶ್ಯಾಳ ಗ್ರಾಮದ ಶಾಲಾ ಆವರಣದಲ್ಲಿ ಇತ್ತೀಚಿಗೆ ಜರುಗಿದ ಕಾರ್ಯಕ್ರಮದಲ್ಲಿ ಕಲಕೇರಿ ಟಿಇಎಮ್ ಉರ್ದು ಪ್ರೌಢಶಾಲೆಯ ನಿವೃತ್ತ ಮುಖ್ಯಶಿಕ್ಷಕ ಬಿ.ಡಿ.ಬಾಣಕಾರ ಮಾತನಾಡಿ, ಸರ್ಕಾರ ಶಿಕ್ಷಣ ಇಲಾಖೆಯ ಆದೇಶ ಹಾಗೂ ನಿರ್ದೇಶನದಂತೆ ಯೋಜನೆಯ ಸದುಪಯೋಗ ಪಡಿಸಿಕೊಳ್ಳುವ ನಿಟ್ಟಿನಲ್ಲಿ ಸರ್ಕಾರದ ಕ್ರಮದಂತೆ ಎಲ್ಲ ಸೌಲಭ್ಯಗಳ ಮುಖಾಂತರ ಗ್ರಾಮದ ಮಕ್ಕಳಿಗೆ ಉಚಿತವಾಗಿ ಶಿಕ್ಷಣ ನೀಡಲು ಪೂರ್ವ ಪ್ರಾಥಮಿಕ ತರಗತಿಗಳನ್ನು ಆರಂಭಿಸುತ್ತಿರುವುದು ಸಂತಸದ ವಿಷಯವಾಗಿದೆ. ಈ ಭಾಗದ ಪಾಲಕರು, ಶಿಕ್ಷಣ ಪ್ರೇಮಿಗಳು ಇದರ ಸದುಪಯೋಗ ಪಡೆದು ತಮ್ಮ ಮಕ್ಕಳಿಗೆ ಸರ್ಕಾರಿ ಶಾಲೆಯಲ್ಲಿ ಪ್ರವೇಶ ಪಡೆದುಕೊಳ್ಳುವುದರ ಮೂಲಕ ಮಕ್ಕಳ ಸರ್ವಾಂಗೀಣ ಪ್ರಗತಿಗೆ ಕೈಜೋಡಿಸಬೇಕು. ಈಗಾಗಲೇ ೨೦ ಕ್ಕೂ ಹೆಚ್ಚು ಮಕ್ಕಳು ಎಲ್‌ಕೆಜಿ ಮತ್ತು ಯುಕೆಜಿ ತರಗತಿಗಳಿಗೆ ಪ್ರವೇಶ ಪಡೆದುಕೊಂಡಿದ್ದು ತರಗತಿಗಳು ಪ್ರಾರಂಭವಾಗಲು ಈ ಶಾಲೆಯ ಮುಖ್ಯಶಿಕ್ಷಕರು, ಈ ಭಾಗದ ಸಿಆರ್‌ಪಿ ಅವರ…

Read More

ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಚಿಕ್ಕರೂಗಿ ಗ್ರಾಮದಲ್ಲಿ ರೈತ ಮಲ್ಲಪ್ಪ ರೊಟ್ಟಿ ಅವರು ಒಂದೇ ದಿನ ಸತತ ೧೧ ಗಂಟೆಯಲ್ಲಿ ೧೮ ಎಕರೆ ಜಮೀನು ಬಿತ್ತನೆ ಮಾಡುವುದರ ಮೂಲಕ ಸಾಧನೆ ಮಾಡಿದ್ದಾರೆತಾಲ್ಲೂಕಿನಲ್ಲಿ ಮಳೆಯ ಅಭಾವದ ನಡುವೆಯೂ ರೈತನ ಸಾಧನೆ ಗ್ರಾಮದ ರೈತರಿಗೆ ಹೊಸ ಹುರುಪು ನೀಡಿದಂತಾಗಿದೆ. ಬಿತ್ತನೆ ಮಾಡಿದ ನಂತರ ಗ್ರಾಮದಲ್ಲಿ ರೈತ ದಂಪತಿ ಮತ್ತು ಎತ್ತುಗಳನ್ನು ಮೆರವಣಿಗೆ ಮಾಡಲಾಯಿತು.ಈ ಸಂದರ್ಭದಲ್ಲಿ ಗ್ರಾಮದ ಪ್ರಗತಿಪರ ರೈತ ಹಾಗೂ ಪಿಕೆಪಿಎಸ್ ಅಧ್ಯಕ್ಷ ನಾಗಣ್ಣ ಮುಳಜಿ ರೈತ ದಂಪತಿಗಳಿಗೆ ಸತ್ಕರಿಸಿ ಮಾತನಾಡಿ, ಗ್ರಾಮದ ರೈತನ ಸಾಧನೆ ಗ್ರಾಮದ ಮತ್ತಷ್ಟು ರೈತರಿಗೆ ಹೊಸ ಹುರುಪು, ಹರ್ಷ ನೀಡಿದಂತಾಗಿದೆ. ಇಂದಿನ ಕಾಲದಲ್ಲಿ ಕೃಷಿಯಿಂದ ದೂರ ಉಳಿಯುತ್ತಿರುವ ಸಂದರ್ಭದಲ್ಲಿ ಯುವ ಸಮುದಾಯಕ್ಕೆ ಇದೊಂದು ಪ್ರೇರಣೆಯಾಗಿದೆ ಎಂದರುಗ್ರಾಮದ ರೈತ ಮುಖಂಡ ಹಣಮಂತ್ರಾಯ ಮುಳಜಿ ಅವರ ಅಪೇಕ್ಷೆಯಂತೆ ಗ್ರಾಮದ ಅಶೋಕಗೌಡ ಪಾಟೀಲ ಅವರ ಜಮೀನಿನಲ್ಲಿ ಭಿತ್ತನೆ ಕಾರ್ಯವಾಗಿದ್ದು, ನೀಲಕಂಠ ಬೆನಕನಹಳ್ಳಿ, ಬಸವರಾಜ ಹೊಸಮನಿ, ಮಹಾಂತೇಶ ಉಡಗಿ, ಸಿಂಧೂರ ಪೂಜಾರಿ, ಲಗಮಣ್ಣ ಪೂಜಾರಿ, ಹಣಮಂತ…

Read More

ಉದಯರಶ್ಮಿ ದಿನಪತ್ರಿಕೆ ಆಲಮಟ್ಟಿ: ಕುಸಿತಗೊಂಡಿದ್ದಆಲಮಟ್ಟಿ ಜಲಾಶಯಕ್ಕೆ ತಡವಾಗಿಯಾದರೂ ಸೋಮವಾರ ಒಳಹರಿವು ಆರಂಭಗೊಂಡಿದ್ದು, ಅವಳಿ ಜಿಲ್ಲೆಯ ಜನರಿಗೆ ಸಂತಸ ಮೂಡಿಸಿದೆ.ಗರಿಷ್ಠ ೫೧೯.೬೦ ಮೀಟರ್ ಎತ್ತರದಲ್ಲಿ ೧೨೩.೦೮೧ ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ ಸೋಮವಾರ ಬೆಳಗ್ಗೆ ೫೦೭.೭೯ ಮೀಟರ್ ಎತ್ತರದಲ್ಲಿ ೨೦.೬೫೪ ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ. ಒಳಹರಿವು ೧,೨೩೨ ಕ್ಯೂಸೆಕ್ ಇದೆ. ಕೆಪಿಸಿಎಲ್ ಮೂಲಕ ೧೦೦ ಕ್ಯೂಸೆಕ್ ಹಾಗೂ ಕುಡಿವ ನೀರು, ಹಿನ್ನೀರು ಬಳಕೆಗೆಂದು ೭೨೨ ಕ್ಯೂಸೆಕ್ ಸೇರಿ ೮೨೨ ಕ್ಯೂಸೆಕ್ ಹೊರಹರಿವು ಇತ್ತು.ಜುಲೈ ಮೊದಲವಾರ ಬಂದರೂ ಆಲಮಟ್ಟಿ ಜಲಾಶಯಕ್ಕೆ ಒಳಹರಿವು ಕಂಡು ಬಂದಿರಲಿಲ್ಲ. ಹೀಗಾಗಿ ಡೆಡ್‌ಸ್ಟೋರೇಜ್ ಹೊರತು ಪಡಿಸಿ ೨.೯೨೭ ಟಿಎಂಸಿ ನೀರನ್ನೇ ನಂಬುವಂತಾಗಿತ್ತು. ಇನ್ನೂ ಕೆಲ ದಿನಗಳು ಕಳೆದಿದ್ದರೆ ಅವಳಿ ಜಿಲ್ಲೆಯಲ್ಲಿ ಕುಡಿವ ನೀರಿಗೆ ತೊಂದರೆಯಾಗುವ ಸಾಧ್ಯತೆ ಇತ್ತು. ಆದರೆ ಸೋಮವಾರದಿಂದ ಆಲಮಟ್ಟಿ ಜಲಾಶಯಕ್ಕೆ ಒಳಹರಿವು ಆರಂಭವಾಗಿದ್ದು, ಅವಳಿ ಜಿಲ್ಲೆಯ ಕೃಷ್ಣಾ ಅಚ್ಚುಕಟ್ಟು ಪ್ರದೇಶದ ಜನರಿಗೆ ಸಂಭ್ರಮಿಸುವಂತೆ ಮಾಡಿದೆ.ಈ ವರ್ಷ ಅಧಿಕ ಮಾಸ ಬಂದಿದ್ದು, ಈಗ ನಮಗೆ ಜೂನ್…

Read More

ಉದಯರಶ್ಮಿ ದಿನಪತ್ರಿಕೆ ತಿಕೋಟಾ: ರಾಜ್ಯ ಸರ್ಕಾರ ಜಾರಿಗೆ ತಂದಿರುವ ಶಿಕ್ಷಕರ ಆನ್ ಲೈನ್ ಹಾಜರಾತಿಯೊಂದಿಗೆ ಮಕ್ಕಳ ಹಾಜರಾತಿ ಕೂಡಾ ನಿರಂತರ ಆ್ಯಪ್ ಮೂಲಕ ನೊಂದಣಿ ಮಾಡಿಕೊಳ್ಳಬೇಕು ಎಂದು ಶಿಕ್ಷಣ ಸಂಯೊಜಕ ಜಿ.ಟಿ.ಕಾಗವಾಡ ಹೇಳಿದರು.ಪಟ್ಟಣದ ಪಿಎಂಶ್ರೀ ಸರ್ಕಾರಿ ಕನ್ನಡ ಮತ್ತು ಆಂಗ್ಲ ಮಾದ್ಯಮ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಹಮ್ಮಿಕೊಂಡ ವಲಯದ ಮುಖ್ಯೋಪಾಧ್ಯಾಯರುಗಳ ಸಭೆಯಲ್ಲಿ ಅವರು ಮಾತನಾಡಿದರು.ಮಕ್ಕಳ‌ ಮುಖಚರ್ಯೆ ಮೂಲಕ ಮಕ್ಕಳ‌ ಹಾಜರಾತಿಗೆ ರಾಜ್ಯ ಸರ್ಕಾರ ಮೊಬೈಲ ಮೂಲಕ ಮಕ್ಳಳ ನಿಖರ ಹಾಜರಾತಿಯನ್ನು ದಿನಕ್ಕೆ ಎರಡು ಬಾರಿ ತೆಗೆದುಕೊಳ್ಳಬೇಕು. ನೊಂದಣಿ ಕಾರ್ಯ ಬಹಳ ಕಡಿಮೆ ಇದ್ದು ಎಲ್ಲ ಶಿಕ್ಷಕರು ಕಡ್ಡಾಯವಾಗಿ ಬೇಗನೆ ಮಾಡಬೇಕು ಎಂದರು.ಒಂದನೇ ತರಗತಿಗೆ ದಾಖಲಾದ ಮಕ್ಕಳ ವಿವರವನ್ನು ಎಸ್ಎಟಿಎಸ್ ತಂತ್ರಾಂಶದಲ್ಲಿ ಹಾಕಬೇಕು. ಶಾಲಾ ಯುಡೈಸ್ ಕಾರ್ಯವನ್ನು ಪೂರ್ಣಗೋಳಿಸಬೇಕು. ಮಕ್ಕಳ ಆಧಾರ ಪರಿಶೀಲನೆ ಕಾರ್ಯ ಪೂರ್ಣವಾಗಬೇಕು. ಆಧಾರ ಕಾರ್ಡ ಇಲ್ಲದ ಮಕ್ಕಳಿಗೆ ಅವರ ಪಾಲಕರಿಗೆ ತಿಳಿಸಿ ಆಧಾರ ಕಾರ್ಡ ತೆಗೆಯಲು ತಿಳಿಸಬೇಕು.ಬಿಆರ್ಪಿ ಪಿ.ಡಿ.ಕಾಂಬಳೆ ಮಾತನಾಡಿ, ಮುಖ್ಯೋಪಾಧ್ಯಾಯರುಗಳು ಎದುರಿಸುತ್ತಿರುವ ಆನಲೈನ್ ಸಮಸ್ಯೆ ಕುರಿತು ಪರಿಹಾರ…

Read More

ಭಾರತೀಯ ಜನತಾ ಪಕ್ಷದ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಧರಣಿ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಮಹಾನಗರದಲ್ಲಿ ಎಸ್.ಐ.ಆರ್ ಕಾರ್ಯದಲ್ಲಿ ಲೋಪಗಳನ್ನು ಸರಿಪಡಿಸಿ, ನಗರದ ಪ್ರಮುಖ ಸ್ಥಳಗಳಲ್ಲಿ ಸಹಾಯವಾಣಿ ಕೇಂದ್ರಗಳನ್ನು ಆರಂಭಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಭಾರತೀಯ ಜನತಾ ಪಕ್ಷದ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಧರಣಿ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಎಸ್.ಐ.ಆರ್. ಒಂದು ಮಹತ್ವದ ಸಾಂವಿಧಾನಿಕ ಪ್ರಕ್ರಿಯೆಯಾಗಿದೆ, ಆದರೆ ಕೆಲವರು ಈ ಆಶಯ ಬುಡಮೇಲು ಮಾಡುವ ಷಡ್ಯಂತ್ರದಲ್ಲಿ ತೊಡಗಿಸಿಕೊಂಡಿದ್ದಾರೆ,ವಿಜಯಪುರ ಮಹಾನಗರದಲ್ಲಿ ನಡೆಯುತ್ತಿರುವ ಎಸ್.ಐ.ಆರ್. ಕಾರ್ಯವು ಅತ್ಯಂತ ಅವ್ಯವಸ್ಥೆಯಿಂದ ಕೂಡಿದ್ದು, ಸಮರ್ಪಕವಾಗಿ ನಡೆಯುತ್ತಿಲ್ಲ ಎಂದು ದೂರಿದರು.ಚುನಾವಣಾ ಆಯೋಗದ ನಿಯಮಗಳ ಪ್ರಕಾರ, ಸರ್ಕಾರದಿಂದ ನೇಮಕವಾಗಿರುವ ಬಿ.ಎಲ್.ಒ ಗಳು ಕಡ್ಡಾಯವಾಗಿ ಮನೆ-ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು, ಆದರೆ, ನಮ್ಮ ನಗರದಲ್ಲಿ ಬಹಳಷ್ಟು ಬಿ.ಎಲ್.ಓಗಳು ಮನೆಮನೆಗೆ ಭೇಟಿ ನೀಡುತ್ತಿಲ್ಲ, ಬದಲಾಗಿ, ಒಂದೇ ಕಡೆ ದೇವಸ್ಥಾನ, ಮಸೀದಿಗಳಲ್ಲಿ ಹಾಗೂ ಶಾಲೆಗಳಲ್ಲಿ…

Read More

ಡಾ. ಬಾಬು ಜಗಜೀವನ ರಾಮ ಅವರ ೪೦ನೇ ಪುಣ್ಯದಿನ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ. ಆನಂದ ಕೆ. ಅಭಿಮತ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ದೇಶದ ಕೃಷಿ, ರಕ್ಷಣೆ ಹಾಗೂ ಸಾಮಾಜಿಕ ಸಮಾನತೆಯ ಕ್ಷೇತ್ರಗಳಲ್ಲಿ ಮಾಜಿ ಉಪಪ್ರಧಾನಿ ಡಾ. ಬಾಬು ಜಗಜೀವನ ರಾಮ ಅವರ ಕೊಡುಗೆ ಅನನ್ಯವಾಗಿದ್ದು, ಅವರ ಸೇವೆ ಸದಾ ಸ್ಮರಣೀಯ ಎಂದು ಜಿಲ್ಲಾಧಿಕಾರಿ ಡಾ. ಆನಂದ ಕೆ. ಹೇಳಿದರು.ಡಾ. ಬಾಬು ಜಗಜೀವನ ರಾಮ ಅವರ ೪೦ನೇ ಪುಣ್ಯದಿನ ಅಂಗವಾಗಿ ನಗರದ ಸ್ಯಾಟ್‌ಲೈಟ್ ಬಸ್ ನಿಲ್ದಾಣದ ಮುಂಭಾಗದಲ್ಲಿರುವ ಅವರ ಪ್ರತಿಮೆಗೆ ಮಾಲಾರ್ಪಣೆ ಹಾಗೂ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.ದೇಶದಲ್ಲಿ ಆಹಾರದ ಕೊರತೆ ಇದ್ದ ಸಂದರ್ಭದಲ್ಲಿ ಅವರು ಕೈಗೊಂಡ ಕ್ರಮಗಳು ಹಸಿರು ಕ್ರಾಂತಿಗೆ ಬುನಾದಿ ಹಾಕಿ, ದೇಶವನ್ನು ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬಿಯನ್ನಾಗಿ ಮಾಡಿವೆ ಎಂದು ಹೇಳಿದರು.ರಕ್ಷಣಾ ಸಚಿವರಾಗಿ ಅವರು ಸಮರ್ಥ ನಾಯಕತ್ವ ನೀಡಿದ್ದರು. ಅಲ್ಲದೆ, ದೇಶದ ಮೊದಲ ಕಾರ್ಮಿಕ ಸಚಿವರಾಗಿ ಕಾರ್ಮಿಕರ ಕಲ್ಯಾಣಕ್ಕೆ ಮಹತ್ವದ ಕೊಡುಗೆ ನೀಡಿದ್ದಾರೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಪಾಲಿಕೆ ಮೇಯರ್…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ಜುಲೈ ೯ರ ಗುರುವಾರ ಸಂಜೆ ೬ ಗಂಟೆಗೆ ‘ಸ್ವಾತಂತ್ರ‍್ಯದ ಓಟ’ ನಾಟಕ ಪ್ರದರ್ಶನ ಆಯೋಜಿಸಲಾಗಿದೆ. ಶಿವಮೊಗ್ಗ ರಂಗಾಯಣದ ಪ್ರಸ್ತುತಿಯಾದ ಈ ನಾಟಕವು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಬೋಳುವಾರು ಮಹಮ್ಮದ್ ಕುಂಞ ಅವರ ಕಾದಂಬರಿಯನ್ನು ಆಧರಿಸಿದೆ. ಈ ಕಾರ್ಯಕ್ರಮವನ್ನು ವಿಜಯಪುರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ವಿಜಯಪುರದ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಶಿವಮೊಗ್ಗ ರಂಗಾಯಣ ಜಂಟಿಯಾಗಿ ಹಮ್ಮಿಕೊಳ್ಳಲಾಗಿದೆ.ನಾಟಕಕ್ಕೆ ನಟರಾಜ್ ಹೊನ್ನವಳ್ಳಿ ಅವರು ನಿರ್ದೇಶನ ಮಾಡಿದ್ದು, ರಾಘವ ಕಮ್ಮಾರ ಅವರ ಸಂಗೀತ ನಿರ್ದೇಶನ ನೀಡಿದ್ದಾರೆ. ಈ ರಂಗ ಪ್ರಯೋಗದ ಕಾರ್ಯಕ್ರಮದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಹಾಸಿಂಪೀರ ವಾಲಿಕಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಸಂತೋಷ್ ಭೋವಿ, ಇಳಕಲ್ ರಂಗಸಮಾಜದ ಸದಸ್ಯರಾದ ಮಹಾಂತೇಶ್ ಗಜೇಂದ್ರಗಡ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ಮಹೇಶ್ ಪೋತದಾರ್ ಅವರು ಉಪಸ್ಥಿತರಿರಲಿದ್ದಾರೆ. ಎಂದು ಶಿವಮೊಗ್ಗ ರಂಗಾಯಣದ ಆಡಳಿತಾಧಿಕಾರಿಗಳಾದ ಡಾ.…

Read More

ಉದಯರಶ್ಮಿ ದಿನಪತ್ರಿಕೆ ಅಥಣಿ: ನಗರದ ಜತ್ತ ರಸ್ತೆಯಲ್ಲಿರುವ ಹೊಸ ಸೂಪರ್ ಬಜಾರ ಮಳಿಗೆಯು ಸುತ್ತಮುತ್ತಲಿನ ಜನರಿಗೆ ಅತ್ಯಂತ ಅನುಕೂಲಕರವಾಗಿದೆ ಗ್ರಾಮೀಣ ಪ್ರದೇಶದಿಂದ ಬರುವ ಜನರಿಗೆ ಒಂದೆ ಸ್ಥಳದಲ್ಲಿ ಎಲ್ಲಾ ಸರಕುಗಳನ್ನು ಖರೀದಿಸಲು ಇದು ಕೇಂದ್ರವಾಗಿ ಮಾರ್ಪಟ್ಟಿದೆ ಹಲವು ಯುವಕರಿಗೆ ಉದ್ಯೋಗಾವಕಾಶವನ್ನೂ ಕಲ್ಪಿಸಿದೆ ಎಂದು ಕಾಂಗ್ರೆಸ್ ಯುವ ನಾಯಕ ಚಿದಾನಂದ ಸವದಿ ಹೇಳಿದರು.ಅವರು‌ ಭಾನುವಾರ ನಡೆದ ಸೂಪರ್ ಬಜಾರ್ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ಹಿಂದೆ ಜನರು ಬೇರೆ ಬೇರೆ ಅಂಗಡಿಗಳಿಗೆ ಅಲೆಯಬೇಕಿತ್ತು ಆದರೆ ಈಗ ದಿನಸಿ, ಗೃಹೋಪಯೋಗಿ ವಸ್ತುಗಳು ಸೇರಿದಂತೆ ಎಲ್ಲಾ ಸರಕುಗಳನ್ನು ಒಂದೇ ಸೂರಿನಡಿ ಪಡೆಯಬಹುದು ಸಾರ್ವಜನಿಕರು ಈ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.ಈ ಸಂದರ್ಭದಲ್ಲಿ ಶಟ್ಟರ ಮಠದ ಮರುಳಸಿದ್ಧ ಸ್ವಾಮೀಜಿಯವರು ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.ಈ ವೇಳೆ ಪುರಸಭೆ ಅಧ್ಯಕ್ಷೆ ಶ್ರೀಮತಿ ಶಿವಲೀಲಾ ಭೂಟಾಳಿ, ಪುರಸಭೆ ನಗರ ಸ್ಥಾಯಿ ಸಮಿತಿ ಅಧ್ಯಕ್ಷ ದತ್ತಾ ವಾಸ್ವಾರ, ಸದಾಶಿವ ಭೂಟಾಳಿ, ಪುರಸಭೆ ಸದಸ್ಯರಾದ ರಾವಸಾಬ ಐಹೊಳೆ, ರವಿ ಬಡಕಂಬಿ, ನರಸು ಬಡಕಂಬಿ, ರವಿ…

Read More

ಉದಯರಶ್ಮಿ ದಿನಪತ್ರಿಕೆ ಇಂಡಿ: ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞರಿಲ್ಲದೆ ಬಡ ಗರ್ಭಿಣಿಯರು ತೊಂದರೆ ಪಡುತ್ತಿದ್ದರು. ಆರೋಗ್ಯ ಇಲಾಖೆ ಚುರುಕುಗೊಂಡು ಡೆಪುಟೇಷನ್ (ನಿಯೋಜನೆ) ಮೇಲೆ ನಿಯೋಜನೆಗೊಂಡಿರುವ ಸ್ತ್ರೀರೋಗ ತಜ್ಞರು ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು ಇನ್ನು ಮುಂದೆ ಸಾರ್ವಜನಿಕರಿಗೆ ವಾರದ ಮೂರು ಪ್ರಮುಖ ದಿನಗಳಲ್ಲಿ ತಜ್ಞರ ಸೇವೆ ಸಿಗಲಿದೆ.ಮಂಗಳವಾರ, ಗುರುವಾರ, ಶನಿವಾರ ಈ ಮೂರು ದಿನಗಳಂದು ಸ್ತ್ರೀರೋಗ ಹಾಗೂ ಪ್ರಸೂತಿ ತಜ್ಞರು ಬೆಳಿಗ್ಗೆಯಿಂದಲೇ ಆಸ್ಪತ್ರೆಯಲ್ಲಿ ಲಭ್ಯವಿರಲಿದ್ದು, ಗರ್ಭಿಣಿಯರ ನಿಯಮಿತ ತಪಾಸಣೆ, ತುರ್ತು ಹೆರಿಗೆ ಹಾಗೂ ಸಿಜೇರಿಯನ್ (ಶಸ್ತ್ರಚಿಕಿತ್ಸೆ) ಸೇವೆಗಳನ್ನು ಉಚಿತವಾಗಿ ನೀಡಲಿದ್ದಾರೆ.ಇಂಡಿ ಮತ್ತು ಸುತ್ತಮುತ್ತಲಿನ ಹಳ್ಳಿಗಳ ಬಡ ಜನರಿಗೆ ಹೆರಿಗೆ ಸೌಲಭ್ಯವಿಲ್ಲದೆ, ಅನಿವಾರ್ಯವಾಗಿ ವಿಜಯಪುರ ಹಾಗೂ ಸೋಲಾಪೂರದ ಖಾಸಗಿ ಆಸ್ಪತ್ರೆಗಳಿಗೆ ಅಲೆದಾಡಿ ಸಾವಿರಾರು ರೂಪಾಯಿ ಹಣ ಖರ್ಚು ಮಾಡುವ ಪರಿಸ್ಥಿತಿ ಇತ್ತು. ಇಲಾಖೆಯ ಈ ಹೊಸ ವೇಳಾಪಟ್ಟಿ ಪ್ರಕಟಣೆಯಿಂದಾಗಿ, ಗರ್ಭಿಣಿಯರು ತಮಗೆ ಅನುಕೂಲವಾಗುವ ದಿನದಂದೇ ಬಂದು ತಪಾಸಣೆ ಮಾಡಿಸಿಕೊಳ್ಳಬಹುದು. ಇಲಾಖೆಯ ಆದೇಶ ಹೊರಡಿಸಿರುವುದಕ್ಕೆ ಇಂಡಿ ತಾಲೂಕಿನ ಜನಸಾಮಾನ್ಯರು ಹಾಗೂ ಗರ್ಭಿಣಿಯರ…

Read More