ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದ ಪ್ರತಿಷ್ಠಿತ ಬಿ. ಎಲ್. ಡಿ. ಇ ಡೀಮ್ಡ್ ವಿಶ್ವವಿದ್ಯಾಲಯದಲ್ಲಿ ಜೈನ ಧರ್ಮದ 24ನೇ ತೀರ್ಥಂಕರ ಭಗವಾನ್ ಮಹಾವೀರ ಜಯಂತಿಯನ್ನು ಆಚರಿಸಲಾಯಿತು.
ಸೋಮವಾರ ಡೀಮ್ಡ್ ವಿವಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಮಕುಲಾಧಿಪತಿ ಡಾ. ವೈ. ಎಂ. ಜಯರಾಜ ಅವರು ಭಗವಾನ ಮಹಾವೀರರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.
ಬಳಿಕ ಮಾತನಾಡಿದ ಅವರು, ಭಗವಾನ್ ಮಹಾವೀರರು ಅಹಿಂಸೆ, ಸತ್ಯ, ಅಸ್ತೇಯ, ಬ್ರಹ್ಮಚರ್ಯ ಮತ್ತು ಅಪರಿಗ್ರಹ ಎಂಬ ಪಂಚಮಹಾವ್ರತಗಳನ್ನು ಬೋಧಿಸಿದ್ದಾರೆ. ಈ ತತ್ವಗಳು ನಮ್ಮ ವ್ಯಕ್ತಿತ್ವವನ್ನು ಶೇಷ್ಠಗೋಳಿಸುವ ಮಾರ್ಗಸೂಚಿಗಳಾಗಿವೆ. ಎಲ್ಲರೂ ಅವರ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಪ್ರಯತ್ನಿಸಬೇಕು ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ವೈದ್ಯಕೀಯ ವಿಭಾಗದ ಡೀನ ಮತ್ತು ಪ್ರಾಚಾರ್ಯೆ ಡಾ. ತೇಜಸ್ವಿನಿ ವಲ್ಲಭ, ಸೂಪರ್ ಸ್ಪೆಷಿಯಾಲಿಟಿ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ವಿಜಯಕುಮಾರ ಕಲ್ಯಾಣಪ್ಪಗೋಳ, ಪರೀಕ್ಷೆ ನಿಯಂತ್ರಣಾಧಿಕಾರಿ ಡಾ. ಎಸ್. ಎಸ್. ದೇವರಮನಿ, ಉಪಪ್ರಾಂಶುಪಾಲ ಡಾ. ಆನಂದ ಪಿ. ಅಂಬಲಿ, ಆರ್. ಆ್ಯಂಡ್ ಡಿ ವಿಭಾಗದ ನಿರ್ದೇಶಲ ಡಾ. ಎಂ. ಎಂ. ಪಾಟೀಲ, ಕಾನೂನು ಶಾಲೆಯ ಪ್ರಾಚಾರ್ಯ ಡಾ. ಆರ್. ಜಿ. ಕುಲಕರ್ಣಿ, ಪೆಥಾಲಾಜಿ ವಿಭಾಗದ ಮುಖ್ಯಸ್ಥೆ ಡಾ. ಸುರೇಖಾ ಹಿಪ್ಪರಗಿ, ಉಸಿರಾಟ ಚಿಕಿತ್ಸೆ ವಿಬಾಗದ ಮುಖ್ಯಸ್ಥ ಡಾ. ಕೀರ್ತಿವರ್ಧನ ಕುಲಕರ್ಣಿ, ಡಾ. ಪ್ರಕಾಶ ಪಾಟೀಲ, ಡಾ. ಸತೀಶ ಅರಕೇರಿ, ಹಣಕಾಸು ಅಧಿಕಾರಿ ಬಿ. ಎಸ್. ಪಾಟೀಲ, ಸಹಾಯಕ ರಜಿಸ್ಟ್ರಾರ, ಡಾ. ಶ್ರೀಧರ ಬಗಲಿ, ಆನಂದ ಪಾಟೀಲ, ಬೋಧಕ ಹಾಗೂ ಬೋಧಕರ ಹೊರತಾದ ಸಿಬ್ಬಂದಿ ಉಪಸ್ಥಿತರಿದ್ದರು.

