Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಹಾಸ್ಟೇಲ್ ಪ್ರವೇಶಾತಿ ವಿಳಂಬ ಹಾಗೂ ವಿದ್ಯಾರ್ಥಿ ವೇತನ ಬಿಡುಗಡೆಗೆ ಸರ್ಕಾರಕ್ಕೆ ಆಗ್ರಹ ವಿಜಯಪುರ: ವಿದ್ಯಾರ್ಥಿಗಳ ಹಾಸ್ಟೆಲ್ ಪ್ರವೇಶಾತಿ ಆಯ್ಕೆ ಪ್ರಕ್ರಿಯೆಯಲ್ಲಿ ವಿಳಂಬ ಹಾಗೂ ವಿದ್ಯಾರ್ಥಿ ವೇತನವನ್ನು ನೀಡದ ರಾಜ್ಯ ಸರಕಾರದ ವಿರುದ್ಧ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಇವರಿಗೆ ಬುಧವಾರ ಪ್ರತಿಭಟನೆ ಮಾಡುವ ಮೂಲಕ ಮನವಿ ಸಲ್ಲಿಸಲಾಯಿತು.ಮನವಿ ಸಮಯದಲ್ಲಿ ವಿದ್ಯಾರ್ಥಿಗಳ ಮತ್ತು ಪೊಲೀಸ್ ನಡುವೆ ನೂಕು-ತಳ್ಳಾಟ ನಡೆಯಿತು.ಈ ಸಂದರ್ಭದಲ್ಲಿ ಎಬಿವಿಪಿ ರಾಜ್ಯ ಕಾರ್ಯದರ್ಶಿ ಸಚೀನ ಕುಳಗೇರಿ ಮಾತನಾಡಿ, ಗ್ರಾಮೀಣ ಭಾಗದಿಂದ ಬಡ ಮತ್ತು ಪ್ರತಿಭಾವಂತ ಸಾವಿರಾರು ವಿದ್ಯಾರ್ಥಿಗಳು ಶಿಕ್ಷಣವನ್ನು ಪಡೆಯಬೇಕೆಂಬ ಆಶಯವನ್ನ ಇಟ್ಟುಕೊಂಡು ನಗರ ಪ್ರದೇಶಗಳಿಗೆ ಬರುತ್ತಾರೆ, ಆ ವಿದ್ಯಾರ್ಥಿಗಳಿಗೆ ಸರ್ಕಾರಗಳು ಮೂಲಭೂತ ಸೌಲಭ್ಯಗಳನ್ನ ಒದಗಿಸುವುದು ಆದ್ಯ ಕರ್ತವ್ಯವಾಗಿದೆ, ಆದರೆ ಕರ್ನಾಟಕ ರಾಜ್ಯದಲ್ಲಿ ಕಾಲೇಜು ಮತ್ತು ಪ್ರೌಢ ಶಾಲೆಗಳು ಪ್ರಾರಂಭವಾದ ಮೂರು ತಿಂಗಳಗಳ ವರೆಗೆ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಪ್ರವೇಶಾತಿ ಸಿಗುತ್ತಿಲ್ಲ, ಜೂನ್ ತಿಂಗಳಲ್ಲಿ ಶಾಲೆ- ಕಾಲೇಜುಗಳು ಪ್ರಾರಂಭವಾದರೂ ಸಹಿತ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಪ್ರವೇಶಾತಿ ಸಿಗುವುದರಲ್ಲಿ…
“ಜಯ್ ನುಡಿ” (ವ್ಯಕ್ತಿತ್ವ ವಿಕಸನ ಮಾಲಿಕೆ) – ಜಯಶ್ರೀ.ಜೆ. ಅಬ್ಬಿಗೇರಿ,ಇಂಗ್ಲೀಷ್ ಉಪನ್ಯಾಸಕರು, ಬೆಳಗಾವಿ, ಮೊ: ೯೪೪೯೨೩೪೧೪೨ ಸಕಾರಾತ್ಮಕ ಮನೋಭಾವ ಎಂದರೆ,,ಸಕಾರಾತ್ಮಕ ಮನೋಭಾವದ ಕುರಿತು ರೆಮೆಜ್ ನಾಸನ್ ಹೀಗೆ ಹೇಳುತ್ತಾರೆ. ‘ಧನಾತ್ಮಕ ಚಿಂತನೆಯು ಮಾನಸಿಕ ಮತ್ತು ಭಾವನಾತ್ಮಕ ಮನೋಭಾವವಾಗಿದ್ದು. ಅದು ಜೀವನದ ಪ್ರಕಾಶಮಾನವಾದ ಭಾಗವನ್ನು ಕೇಂದ್ರೀಕರರಿಸುತ್ತದೆ ಮತ್ತು ಸಕಾರಾತ್ಮಕ ಫಲಿತಾಂಶಗಳನ್ನು ನಿರೀಕ್ಷಿಸುತ್ತದೆ.’ ಇನ್ನೊಂದು ಹೆಚ್ಚು ವಿಸ್ತೃತವಾದ ಚರ‍್ರಿಯವರು ನೀಡಿರುವ ವ್ಯಾಖ್ಯಾನವನ್ನು ನೋಡುವುದಾದರೆ ‘ ಧನಾತ್ಮಕ ಚಿಂತನೆಯು ವಾಸ್ತವವಾಗಿ ಜೀವನದ ಸವಾಲುಗಳನ್ನು ಸಕಾರಾತ್ಮಕ ದೃಷ್ಟ್ಟಿಕೋನದಿಂದ ಸಮೀಪಿಸುವುದು ಎಂದರ್ಥ. ಕೆಟ್ಟ ವಿಷಯಗಳನ್ನು ತಪ್ಪಿಸುವುದು ಅಥವಾ ನಿರ್ಲಕ್ಷಿಸುವುದು ಎಂದರ್ಥವಲ್ಲ. ಬದಲಾಗಿ ಸಂಭಾವ್ಯ ಕೆಟ್ಟ ಸನ್ನಿವೇಶಗಳನ್ನು ಹೆಚ್ಚು ಬಳಸಿಕೊಳ್ಳುವುದು. ಇತರ ಜನರಲ್ಲಿ ಉತ್ತಮವಾದುದದ್ದನ್ನು ನೋಡಲು ಪ್ರಯತ್ನಿಸುವುದು ಮತ್ತು ನಿಮ್ಮನ್ನು ನಿಮ್ಮ ಸಾಮರ್ಥ್ಯಗಳನ್ನು ಸಕಾರಾತ್ಮಕವಾಗಿ ನೋಡುವುದನ್ನು ಒಳಗೊಂಡಿರುತ್ತದೆ.’ ಧನಾತ್ಮಕವಾದ ಮನಸ್ಥಿತಿಯು ಪ್ರಕಾಶಮಾನವಾದ ಬದಿಯಲ್ಲಿ ಗಮನಹರಿಸುವ ಮತ್ತು ಸವಾಲುಗಳನ್ನು ಧನಾತ್ಮಕ ದೃಷ್ಟಿಕೋನದಿಂದ ಸಮೀಪಿಸುವ ಪ್ರವೃತ್ತಿಯೆಂದು ಈ ವ್ಯಾಖ್ಯಾನಗಳಿಂದ ತಿಳಿದು ಬರುತ್ತದೆ. ಸಕಾರಾತ್ಮಕ ಮನಸ್ಥಿತಿಯನ್ನು ಹೊಂದುವುದು ಎಂದರೆ ಧನಾತ್ಮಕ ಚಿಂತನೆಯನ್ನು ಅಭ್ಯಾಸ ಮಾಡುವುದು.…
ಬಳೂತಿ ಜಾಕವೆಲ್ ಬಳಿ ನಡೆದ ಘಟನೆ | ನದಿ ದಡದಲ್ಲಿ ಇಸ್ಪೀಟ್ ಆಟ | ಪೊಲೀಸರಿಂದ ತಪ್ಪಿಸಿಕೊಳ್ಳಲು ನೀರಿಗಿಳಿದ ಯುವಕರು ವಿಜಯಪುರ: ಜಿಲ್ಲೆಯ ಕೊಲ್ಹಾರ ತಾಲೂಕಿನ ಬಳೂತಿ ಜಾಕವೆಲ್ ಬಳಿಯ ಕೃಷ್ಣಾ ನದಿಯಲ್ಲಿ ತೆಪ್ಪ ಮಗುಚಿ 4 ಮಂದಿ ನೀರುಪಾಲಾಗಿರುವ ಘಟನೆ ನಡೆದಿದೆ.ನದಿ ತಟದಲ್ಲಿ ಇಸ್ಪೀಟ್ ಆಟವಾಡುತ್ತಿದ್ದ ಗುಂಪು ಪೊಲೀಸರನ್ನು ಕಂಡ ಕೂಡಲೇ ಭಯದಿಂದ ತೆಪ್ಪದ ಮೂಲಕ ತಪ್ಪಿಸಿಕೊಳ್ಳಲು ಮುಂದಾಗಿದ್ದರು. ಇನ್ನು ತೆಪ್ಪದಲ್ಲಿ ಹೋಗುತ್ತಿದ್ದಾಗ ಜೋರಾಗಿ ಗಾಳಿ ಬೀಸಿದ್ದು ಇದರಿಂದ ತೆಪ್ಪ ನದಿಯಲ್ಲಿ ಮುಳುಗಿದ್ದು ನಾಲ್ಕು ಮಂದಿ ಸಾವನ್ನಪ್ಪಿದ್ದು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಇಬ್ಬರು ಈಜಿ ದಡ ಸೇರಿ ಜೀವ ಉಳಿಸಿಕೊಂಡಿದ್ದಾರೆ. ಘಟನೆಯ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಕೊಲ್ಹಾರ ಪೊಲೀಸರು ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿ ಮೃತದೇಹಗಳಿಗಾಗಿ ಹುಡುಕಾಟ ನಡೆಸಿದ್ದಾರೆ. ಸದ್ಯ ಇಬ್ಬರ ಶವ ಹೊರ ತೆಗೆಯಲಾಗಿದ್ದು ಇನ್ನುಳಿದವರ ಮೃದೇಹಗಳಿಗಾಗಿ ಶೋಧಕಾರ್ಯ ಮುಂದುವರೆಸಿದ್ದಾರೆ.ಇನ್ನು ವಿಷಯ ತಿಳಿದು ಸ್ಥಳಕ್ಕೆ ಸ್ಪಿ ಋಷಿಕೇಶ ಸೋನೆವಣೆ, ಎಎಸ್ಪಿ ಶಂಕರ ಮಾರಿಹಾರ ದೌಡಾಯಿಸಿ ಪರಿಶೀಲನೆ…
ಮುದ್ದೇಬಿಹಾಳ: ಪಟ್ಟಣದ ಸಂತ ಕನಕದಾಸ ಶಾಲೆಯಲ್ಲಿ ಶಾಲಾ ಸಂಸತ್ತು ರಚಿಸಲಾಯಿತು. ಚುನಾವಣಾ ಆಯೋಗದ ನೀತಿ ನಿಯಮಗಳಂತೆ ಚುನಾವಣಾ ದಿನಾಂಕ ಘೋಷಣೆ, ನಾಮಪತ್ರ ಸಲ್ಲಿಕೆಗೆ ಗಡವು, ಹಿಂಪಡೆಯುವಿಕೆಗೆ ಅವಕಾಶ, ಚುನಾವಣಾ ಚಿಹ್ನೆ ನೀಡುವುದು, ಮತ ಪ್ರಚಾರಕ್ಕೆ ಅವಕಾಶ, ಮತದಾನ, ಫಲಿತಾಂಶ ಘೋಷಣೆ ಹೀಗೆ ನಿಯಮಬದ್ಧವಾಗಿ ಚುನಾವಣೆಯ ಎಲ್ಲ ಪ್ರಕ್ರೀಯೆಗಳನ್ನು ನಡೆಸುವ ಮೂಲಕ ವಿದ್ಯಾರ್ಥಿಗಳಿಗೆ ಚುನಾವಣೆಯ ಅರಿವು ಮೂಡಿಸಲಾಯಿತು.ಚುನಾವಣೆಯ ಬಳಿಕ ಮಂತ್ರಿಮಂಡಲ ರಚನೆ ಹಾಗೂ ಖಾತೆ ಹಂಚಿಕೆ, ಜವಾಬ್ದಾರಿ ಹಂಚಿಕೆ ಮಾಡಲಾಯಿತು. ಪ್ರಧಾನ ಮಂತ್ರಿಯಾಗಿ ಸಮರ್ಥ ಮಡಿವಾಳರ, ವಾರ್ತಾ & ಕ್ರೀಡಾ ಮಂತ್ರಿಯಾಗಿ ನಕುಲ್ ಇಂಗಳೇಶ್ವರ, ಪರಿಸರ ಸಂರಕ್ಷಣಾ ಮಂತ್ರಿಯಾಗಿ ನಿವೇದಿತಾ ದಡ್ಡಿ, ಸಂಸ್ಕೃತಿಕ & ಪ್ರವಾಸೋದ್ಯಮ ಮಂತ್ರಿಯಾಗಿ ಅಮೃತಾ ಉಪ್ಪಲದಿನ್ನಿ, ಆರೋಗ್ಯಮಂತ್ರಿಯಾಗಿ ಸಾನಿಯಾಬೇಗಂ ನಧಾಪ, ವಿರೋದ ಪಕ್ಷದ ನಾಯಕಿ ಸೃಷ್ಟಿ ಪಣೇದಕಟ್ಟಿ ಆಯ್ಕೆಯಾದರು.ಈ ಪ್ರಕ್ರೀಯೆಯಲ್ಲಿ ಶಾಲಾ ಬೋಧಕ ಸಿಬ್ಬಂದಿಗಳಾದ ಮುಖ್ಯ ಚುನಾವಣಾ ಅಧಿಕಾರಿಗಳಾಗಿ ಎಮ್.ಎನ್.ಯರಝರಿ, ಸಹ ಚುನಾವಣಾ ಅಧಿಕಾರಿ ಎಮ್.ಸಿ.ಕಬಾಡೆ, ಗೋಪಾಲ ಹೂಗಾರ, ಎಲ್.ಎಚ್.ಗುಬಚಿ, ಬಿ.ಎ.ಬರದೇನಾಳ, ಆರ್.ವಾಯ್.ಪಾಟೀಲ, ಜಿ.ಕೆ.ವಾಲಿಕಾರ, ಬಿ.ವಾಯ್.ಮಳಗೌಡರ ಕರ್ತವ್ಯ ನಿರ್ವಹಿಸಿದರು.ಶಾಲೆಯ…
ಸಿಂದಗಿ: ತಾಲೂಕಿನಲ್ಲಿಯೇ ನರೇಗಾದಡಿ ನಿರ್ಮಾಣವಾದ ಈ ಕಾಮಗಾರಿ ಉತ್ತಮವಾಗಿದೆ. ಆದ್ದರಿಂದ ತಾಲೂಕಿನ ಉಳಿದ ಗ್ರಾಮ ಪಂಚಾಯತಿಗಳಿಗೆ ಇದು ಮಾದರಿಯಾಗಲಿದೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.ತಾಲೂಕಿನ ಬಂದಾಳ ಗ್ರಾಮದಲ್ಲಿ ವಿಜಯಪುರ ಜಿಲ್ಲಾ ಪಂಚಾಯತ್, ಸಿಂದಗಿ ತಾಲೂಕು ಪಂಚಾಯತ್ ಹಾಗೂ ಬಂದಾಳ ಗ್ರಾಮ ಪಂಚಾಯತ್ ಸಹಯೋಗದಲ್ಲಿ ಹಮ್ಮಿಕೊಂಡ ನೂತನ ಎನ್.ಆರ್.ಎಲ್.ಎಮ್ ಕಟ್ಟಡ ಉದ್ಘಾಟನಾ ಸಮಾರಂಭಕ್ಕೆ ಸಸಿಗೆ ನಿರುಣಿಸುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ನರೇಗಾ ಯೋಜನೆ ಅನಿಯಮಿತ ಮತ್ತು ಬೇಡಿಕೆಗೆ ಅನುಗುಣವಾಗಿ ಕೆಲಸ ದೊರೆಯುತ್ತದೆ. ಆದ್ದರಿಂದ ಎಲ್ಲರೂ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.ಇದೇ ಸಂದರ್ಭದಲ್ಲಿ ಕನ್ನೊಳ್ಳಿಯ ಸಿದ್ದಲಿಂಗ ಶಿವಾಚಾರ್ಯರು ಸಾನಿಧ್ಯ ವಹಿಸಿದ್ದರು. ಗ್ರಾಪಂ ಅದ್ಯಕ್ಷೆ ಸುವರ್ಣ ಮಕಣಾಪುರ ಅಧ್ಯಕ್ಷತೆ ವಹಿಸಿದ್ದರು. ಜಟ್ಟೆಪ್ಪ ಉಕ್ಕಲಿ, ತಾಪಂ ಇಒ ರಾಮು ಅಗ್ನಿ, ನರೇಗಾ ಸಹಾಯಕ ನಿರ್ದೇಶಕ ನಿತ್ಯಾನಂದ ಯಲಗೋಡ, ಪಿಡಿಒ ಬಸವರಾಜ ಶಹಾಪೂರ, ಕಾರ್ಯದರ್ಶಿ ರಾಜಾಕಸಾಬ ಮುಜಾವರ, ಐಇಸಿ ಸಂಯೋಜಕರು ಭೀಮರಾಯ ಚೌಧರಿ, ಸಂತೋಷ ಪಾಸೋಡಿ, ರಾಜಶೇಖರ ಹಿರೇಕುರುಬರ ಸೇರಿದಂತೆ ಗ್ರಾಮ ಪಂಚಾಯತ್ ಸದಸ್ಯರು,…
ರೂ.೧.೨೫ ಕೋಟಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಶಾಸಕ ಮನಗೂಳಿ ಅಭಿಮತ ಸಿಂದಗಿ: ಪಟ್ಟಣ ಅತಿ ವೇಗವಾಗಿ ಬೆಳೆಯುತ್ತಿದೆ. ಆ ನಿಟ್ಟಿನಲ್ಲಿ ಸಿಂದಗಿಯ ಪ್ರಮುಖ ರಸ್ತೆಗಳನ್ನು ಅಭಿವೃದ್ದಿ ಪಡಿಸಿ ಸಿಂದಗಿ ನಗರವನ್ನು ಅತ್ಯಂತ ಸುಂದರ ನಗರವನ್ನಾಗಿ ಮಾಡುವ ಗುರಿ ನನ್ನದಾಗಿದೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ ವೃತ್ತದ ಬಳಿ ಮಂಗಳವಾರ ಲೋಕಪಯೋಗಿ ಇಲಾಖೆ, ಉಪ ವಿಭಾಗ ಸಿಂದಗಿಯ ೨೦೨೩-೨೪ ನೇ ಸಾಲಿನ ೩೦೫೪- ಜಿಲ್ಲಾ ಮುಖ್ಯ ರಸ್ತೆಗಳ ನಿರ್ವಹಣೆ ಯೋಜನೆ ಅಡಿಯಲ್ಲಿ ಸಿಂದಗಿ ಪಟ್ಟಣದ ವ್ಯಾಪ್ತಿಯ ಜೇವರ್ಗಿ-ಚಿಕ್ಕೋಡಿ ರಸ್ತೆ ಹಾಗೂ ಆಲಮೇಲ-ಸಿಂದಗಿ ರಸ್ತೆ (ಮಹಾತ್ಮಾ ಗಾಂಧಿ ವೃತ್ತದಿಂದ) ರಾಷ್ಟ್ರೀಯ ಹೆದ್ದಾರಿ-೫೦ರವರೆಗೆ, ಚಿಕ್ಕಸಿಂದಗಿ ವರ್ತುಲ ರಸ್ತೆಯವರೆಗೆ ಬಾಕಿ ಉಳಿದಿರುವ ರಸ್ತೆಗೆ ಮೀಡಿಯನ್ ಅಳವಡಿಸುವ ಕಾಮಗಾರಿಗೆ ಅಂದಾಜು ೧.೨೫ ಕೋಟಿ ಅನುದಾನದಲ್ಲಿ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.ನಗರ ಅಭಿವೃದ್ದಿಯಾಗಲು ಮೊದಲು ರಸ್ತೆಗಳು ಉತ್ತಮವಾಗಿರಬೇಕು. ಮುಂಬರುವ ದಿನಗಳಲ್ಲಿ ಸಿಂದಗಿಗೆ ಕೂಡುವ ಎಲ್ಲ ರಸ್ತೆಗಳನ್ನು ಹಾಗೂ ಪಟ್ಟಣದ ಮುಖ್ಯ ರಸ್ತೆಗಳನ್ನು ಅಭಿವೃದ್ದಿ ಪಡಿಸುವ ಕಾರ್ಯವನ್ನು…
ಸಿಂದಗಿ: ಶಿಕ್ಷಕರ ಸಮುದಾಯ ಸೇವಾ ಮತ್ತು ಅರ್ಪಣಾ ಮನೋಭಾವದಿಂದ ಕಾರ್ಯನಿರ್ವಹಿಸುವ ಮೂಲಕ ಭಾರತ ಸೇವಾದಳವನ್ನು ಉಳಿಸಿ ಬೆಳೆಸಬೇಕು ಎಂದು ಶಿಕ್ಷಣ ಸಂಯೋಜಕ ಆನಂದ ಮಾಡಗಿ ಹೇಳಿದರು.ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಪ್ರೌಢಶಾಲೆಯಲ್ಲಿ ವಿಜಯಪುರ ಜಿಲ್ಲಾ ಸಮಿತಿ ಭಾರತ ಸೇವಾದಳ, ತಾಲೂಕು ಸಮಿತಿ, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಪ್ರೌಢಶಾಲೆ ಇವರುಗಳ ಸಂಯೋಗದಲ್ಲಿ ಹಮ್ಮಿಕೊಂಡ ಸಿಂದಗಿ ತಾಲೂಕು ಮಟ್ಟದ ಭಾರತ ಸೇವಾದಳ ಶಿಕ್ಷಕರ ಪುನಃಶ್ಚೇತನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಭಾರತ ಸೇವಾದಳ ಸ್ವಾತಂತ್ರ‍್ಯ ಹೋರಾಟಗಾರರು ಮತ್ತು ದೇಶಭಕ್ತರನ್ನು ಹುಟ್ಟು ಹಾಕಿದ ಸಂಸ್ಥೆ. ಸ್ವಾತಂತ್ರ‍್ಯ ಚಳುವಳಿಯಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರಿಗೆ ಸಾತ್ ಕೊಟ್ಟ ಏಕೈಕ ಸಂಸ್ಥೆ ಎಂದರು.ಈ ವೇಳೆ ತಾಲೂಕು ಸಮಿತಿ ಮಹಿಳಾ ಪ್ರತಿನಿಧಿ ಶ್ಯಾಮಲಾ ಮಂದೇವಾಲಿ ಮಾತನಾಡಿ, ಸೇವಾದಳದ ಶಿಕ್ಷಕರು ಮಕ್ಕಳಲ್ಲಿ ರಾಷ್ಟ್ರಭಕ್ತಿ, ದೇಶಪ್ರೇಮ, ಶಿಸ್ತು, ಸೇವಾ ಮನೋಭಾವನೆ, ಮತ್ತು ನಾಯಕತ್ವ ಗುಣಗಳನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರ…
ಸಿಂದಗಿ: ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸರ್ವಾಂಗೀಣ ಪ್ರಗತಿಗೆ ನೂತನವಾಗಿ ರಚಿಸಲ್ಪಟ್ಟ ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರು ಶ್ರಮವಹಿಸಬೇಕು ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ಹಮ್ಮಿಕೊಂಡ ಕಾಲೇಜು ಅಭಿವೃದ್ಧಿ ಸಮಿತಿಯ ಪ್ರಥಮ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು, ಕಾಲೇಜಿಗೆ ಬೇಕಾಗುವ ಮೂಲಭೂತ ಸೌಕರ್ಯಗಳನ್ನು ಸರಕಾರದಿಂದ ಒದಗಿಸಲು ಪ್ರಯತ್ನಿಸುವೆ. ಕಾಲೇಜಿನ ಕಂಪೌಂಡ ನಿರ್ಮಿಸಲು ಹಣವು ಈಗಾಗಲೇ ಮಂಜೂರಾಗಿದ್ದು, ಶೀಘ್ರದಲ್ಲಿಯೇ ಕಾಮಗಾರಿ ಆರಂಭಿಸಲು ಸಂಬಂಧಿಸಿದ ಗುತ್ತಿಗೆದಾರರಿಗೆ ಸೂಚಿಸಿದರು. ನಿರ್ಮಾಣಗೊಂಡ ಕಾಲೇಜು ಕಟ್ಟಡವನ್ನು ಹಸ್ತಾಂತರಿಸಲು ಕ್ರಮಕೈಗೊಳ್ಳವುದಾಗಿ ಸಭೆಯಲ್ಲಿ ತಿಳಿಸಿದರು.ಇದೇ ಸಂದರ್ಭದಲ್ಲಿ ಸಮಿತಿ ಸದಸ್ಯ ಎಸ್.ಎಸ್.ಪಾಟೀಲ ಮಾತನಾಡಿ, ಕಾಲೇಜಿನ ಪ್ರಗತಿಗೆ ನಾವೆಲ್ಲರೂ ಸಹಕಾರ ನೀಡುತ್ತೇವೆ. ಸರಕಾರಿ ಪ್ರಥಮ ದರ್ಜೆ ಕಾಲೇಜನ್ನು ಮಾದರಿ ಮಹಾವಿದ್ಯಾಲಯವನ್ನಾಗಿ ಮಾಡಲು ನಾವೆಲ್ಲರೂ ಶ್ರಮಿಸುತ್ತೇವೆ ಎಂದು ಭರವಸೆ ನೀಡಿದರು.ಈ ವೇಳೆ ಪ್ರಾಚಾರ್ಯ ಶಿವಲಿಂಗ ಹಳೇಮನಿ ಪ್ರಾಸ್ತವಿಕವಾಗಿ ಮಾತನಾಡಿದರು. ಬಳಿಕ ನೂತನವಾಗಿ ಆಯ್ಕೆಯಾದ ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರಿಗೆ ಶಾಸಕರು ಸನ್ಮಾನಿಸಿ ಗೌರವಿಸಿದರು.ಪ್ರಾಧ್ಯಾಪಕ ಡಾ.ಮಿರಾಜ ಪಾಶ…
ದೇವರಹಿಪ್ಪರಗಿ: ಮಳೆಗಾಲದಲ್ಲಿ ಸೋರುತ್ತಿರುವ ಅಂಗನವಾಡಿ, ಶಾಲಾ ಕೋಠಡಿಗಳ ಮಾಹಿತಿ ನೀಡುವುದು ಅಗತ್ಯವಾಗಿದೆ ಎಂದು ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ(ಪಂಚಾಯತ್ ರಾಜ್) ಶಿವಾನಂದ ಮೂಲಿಮನಿ ಹೇಳಿದರು.ಪಟ್ಟಣದ ಪ್ರವಾಸಿಮಂದಿರದಲ್ಲಿ ಮಂಗಳವಾರ ಜರುಗಿದ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಜಿಲ್ಲಾ ಪಂಚಾಯಿತಿಯ ಆದೇಶದ ಅನ್ವಯ, ತಾಲ್ಲೂಕಿನ ಅಂಗನವಾಡಿ ಹಾಗೂ ಸರ್ಕಾರಿ ಪ್ರಾಥಮಿಕ, ಪ್ರೌಢಶಾಲಾ ಕೋಠಡಿಗಳಲ್ಲಿ ಮಳೆ ನೀರು ಸೋರಿಕೆ, ದುರಸ್ತಿ, ಶೌಚಾಲಯಗಳ ಕೊರತೆ, ಕುಡಿಯುವ ನೀರಿನ ಸಮಸ್ಯೆಗಳಿದ್ದಲ್ಲಿ ಕೂಡಲೇ ಮಾಹಿತಿ ನೀಡಬೇಕು. ಶಾಲೆಗಳ ಇಂಥ ನ್ಯೂನ್ಯತೆಗಳು ಮಕ್ಕಳ ಕಲಿಕೆಯ ಮೇಲೆ ವ್ಯತಿರಿಕ್ತ ಪರಿಣಾಮ ಉಂಟು ಮಾಡುತ್ತವೆ. ಆದ್ದರಿಂದ ಸಮೂಹ ಸಂಪನ್ಮೂಲ ವ್ಯಕ್ತಿಗಳು, ಅಂಗನವಾಡಿ ಮೇಲ್ವಿಚಾರಕರು ಯಾವುದೇ ತಪ್ಪು ಮಾಹಿತಿಗೆ ಅವಕಾಶ ನೀಡದೇ ಅಗತ್ಯ ಕ್ರಮವಹಿಸಲು ಸೂಚಿಸಿದರು.ಕ್ಷೇತ್ರ ಸಮನ್ವಯ ಅಧಿಕಾರಿ ಐ.ಎಸ್.ಟಕ್ಕೆ ಮಾತನಾಡಿ, ಗ್ರಾಮ ಪಂಚಾಯಿತಿ ಸಿಬ್ಬಂದಿ ಹಾಗೂ ಪಿಡಿಓ ಅವರೊಂದಿಗೆ ಸಮನ್ವಯ ಸಾಧಿಸಿ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿಯನ್ನು ಜುಲೈ ೪ರ ಒಳಗಾಗಿ ತಾಲ್ಲೂಕು ಪಂಚಾಯಿತಿಗೆ ಸಲ್ಲಿಸಬೇಕು ಎಂದರು.ಸಹಾಯಕ ನಿರ್ದೇಶಕ(ನರೇಗಾ) ಶಾಂತಗೌಡ ನ್ಯಾಮಣ್ಣವರ, ಎಸಿಡಿಪಿಓ ಜಯಶ್ರೀ ದೊಡಮನಿ,…
ಆಲಮಟ್ಟಿ: ಯಾವುದೇ ಮನೆ, ಮಠ, ದೇಗುಲಗಳಲ್ಲಿ ಪೂಜೆಗೆ ಸೀಮಿತವಾಗಿ ನಶಿಸುತ್ತಿದ್ದ ೧೨ ನೇ ಶತಮಾನದ ಶರಣರು ತಾಡೋಲೆಗಳಲ್ಲಿ ರಚಿಸಿದ್ದ ವಚನಗಳನ್ನು ಸಂಗ್ರಹಿಸಿ, ಸಂಶೋಧಿಸಿ ಕೃತಿ ಸಂಪುಟಗಳಲ್ಲಿ ಹೊರ ತಂದ ಡಾ ಫ.ಗು. ಹಳಕಟ್ಟಿ ಅವರು ಜೀವನದುದ್ಧಕ್ಕೂ ಸರಳ ಫಕೀರನಂತೆ ಬದುಕು ಸಾಗಿಸಿದರು ಎಂದು ಸಾಹಿತಿ ಮೋಹನ ಕಟ್ಟಿಮನಿ ಅಭಿಪ್ರಾಯಪಟ್ಟರು.ಆರ್‌ಬಿಪಿಜಿ ಹಳಕಟ್ಟಿ ಪ್ರೌಢಶಾಲೆಯಲ್ಲಿ ನಿಡಗುಂದಿ ತಾಲ್ಲೂಕು ಆಡಳಿತ ವಚನ ಪಿತಾಮಹ ಡಾ ಫ.ಗು. ಹಳಕಟ್ಟಿ ಅವರ ೧೪೪ ನೇ ಜನ್ಮದಿನದ ಅಂಗವಾಗಿ ಹಮ್ಮಿಕೊಂಡ ವಚನ ಸಂರಕ್ಷಣಾ ದಿನದಲ್ಲಿ ಅವರು ಉಪನ್ಯಾಸ ನೀಡಿ ಮಾತನಾಡಿದರು.ಹುಟ್ಟಿದ ಆರಂಭದಿಂದ ೮೩ ವರ್ಷಗಳಕಾಲ ನಿರಂತರವಾಗಿ ತಮ್ಮ ಸುಖವನ್ನು ಬಯಸದೆ ವಚನ ಸಾಹಿತ್ಯದ ಸಂಶೋಧನೆಗಾಗಿ ಜೀವನವನ್ನೇ ಸವೆದ ಮಹಾಪುರುಷನ ಜನ್ಮ ದಿನವನ್ನು ಸರಕಾರ ಆಚರಣೆ ಮಾಡಬೇಕಾದರೆ ೧೩೦ ವರ್ಷ ತೆಗೆದುಕೊಂಡಿತು ಅದೇ ನಮ್ಮ ದುರ್ದೈವ.ಎಂದು ವಿಷಾಧಿಸಿದರು.ಬಿಎಲ್‌ಡಿಎ ಶಿಕ್ಷಣ ಸಂಸ್ಥೆ ಮತ್ತು ಸಿದ್ದೇಶ್ವರ ಬ್ಯಾಂಕ್ ಸ್ಥಾಪಿಸಿದ ಹಳಕಟ್ಟಿಯವರು ಲಿಂಗೈಕ್ಯರಾಗಿದ್ದಾಗ ಅವರ ಸಮಾಧಿಗಾಗಿ ಯಾರೂ ಜಾಗ ನೀಡಲಿಲ್ಲ, ಕೊನೆಗೆ ಜ್ಞಾನಯೋಗಾಶ್ರಮದ ಮಲ್ಲಿಕಾರ್ಜುನ ಸ್ವಾಮೀಜಿ ತಾವು…
