ಇಂಡಿ: ಸೆ.೧ ಭಾನುವಾರ ಕರ್ನಾಟಕ ರಾಜ್ಯ ಕಟಬು ಕಟಬರ ಅಲೆಮಾರಿ ಒಕ್ಕೂಟದ ವತಿಯಿಂದ ಬೃಹತ್ ಜಿಲ್ಲಾ ಜಾಗೃತಿ ಸಮಾವೇಶವನ್ನು ಇಂಡಿ ಪಟ್ಟಣದ ಶಂಕರ ಪಾರ್ವತಿ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದ್ದು ಕಟಬು ಕಟಬರ ಅಲೆಮಾರಿ ಜನಾಂಗ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಸಮಾಜದ ಜಿಲ್ಲಾ ಅಧ್ಯಕ್ಷ ಶಿವಮೂರ್ತಿ ಕಾಟಕರ ಹೇಳಿದರು.
ಅವರು ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸಮಾಜ ಸಂಘಟನೆಯ ಸದುದ್ದೇಶದಿಂದ ಸರಕಾರದಲ್ಲಿ ನಮಗೂ ಪ್ರಾತಿನಿಧ್ಯ ನೀಡಲಿ ಎಂಬ ಆಶಯದೊಂದಿಗೆ ಈ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಸಾನಿಧ್ಯವನ್ನು ಹುನಗುಂದದ ಲೀಲಾಮಠದ ಕಲ್ಲಿನಾಥ ಮಹಾಸ್ವಾಮಿಗಳು, ಚಿಣಮಗೇರಾ ಮಹಾಂತೇಶ್ವರ ಮಠದ ವೀರಮಹಾಂತ ಶಿವಾಚಾರ್ಯರು ವಹಿಸಲಿದ್ದು, ಅಧ್ಯಕ್ಷತೆಯನ್ನು ಕಟಬು ಸಮಾಜದ ರಾಜ್ಯಾಧ್ಯಕ್ಷ ಜಗದೀಶ ಕ್ಷತ್ರಿಯವರು, ಮುಖ್ಯ ಅತಿಥಿಗಳಾಗಿ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ, ಸಿಂದಗಿ ಮಾಜಿ ಶಾಸಕ ರಮೇಶ ಭೂಸನೂರ ಆಗಮಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಮಹಾರಾಷ್ಟ್ರ ಕಟಬು ಸಮಾಜದ ರಾಜ್ಯಾಧ್ಯಕ್ಷ ಬಿ.ಟಿ ಮೋರೆ ಸೇರಿದಂತೆ, ಕರ್ಣ ಕ್ಷತ್ರಿ, ನಾರಾಯಣ ಶಿಂಧೆ, ಮಲ್ಲಿನಾಥ ಕ್ಷತ್ರಿ, ಡಾ. ನಾಗೇಶ ನೇಕನಾರ, ಅರುಣ ಕಟ್ಟಿಮನಿ, ರಾಜು ಪಾಚಂಗೆ, ವಿಲಾಸ ಸಿಂಧೆ, ಚಂದ್ರು ಮಡ್ನಳ್ಳಿ, ರಮೇಶ ಕಟ್ಟಿಮನಿ, ಶಿವಮೂರ್ತಿ ಕಾಟಕರ, ಮಹೇಶ ಶಿಂಧೆ, ಹಣಮಂತ ಕ್ಷತ್ರಿ ಸೇರಿದಂತೆ ಇನ್ನಿತರ ಗಣ್ಯರು ಭಾಗವಹಿಸಲಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment
