Author: editor.udayarashmi@gmail.com

ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರಿಂದ ವಿಜಯಪುರ ನಗರ ಪರಿವೀಕ್ಷಣೆ ವಿಜಯಪುರ: ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ನಗರ ಪರಿವೀಕ್ಷಣೆ ನಡೆಸಿ, ನಗರದ ವಿವಿಧ ರಸ್ತೆಗಳ ಅಭಿವೃದ್ದಿ, ಅತಿಕ್ರಮ ತೆರವುಗೊಳಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.ಶುಕ್ರವಾರ ಬೆಳ್ಳಂಬೆಳಿಗ್ಗೆ ವಿಜಯಪುರ ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿನ ಬಾಗಲಕೋಟ ರಸ್ತೆ, ಅತಾವುಲ್ಲಾ ಚೌಕ ಹತ್ತಿರ ಕಂದಕ ಹಾಗೂ ನೌಬಾಗ ರಸ್ತೆಯಲ್ಲಿ ನಡೆಯುತ್ತಿರುವ ರಸ್ತೆ ಅಭಿವೃದ್ಧಿ ಹಾಗೂ ಅಗಲೀಕರಣ ಕಾಮಗಾರಿಗಳ ಪರಿವೀಕ್ಷಣೆ ಕೈಗೊಂಡಿದ್ದು, ನವಬಾಗ ರಸ್ತೆಯ ಅಗಲೀಕರಣ ಬಗ್ಗೆ ಸರ್ವೇ ಕಾರ್ಯವನ್ನು ಕೈಗೊಂಡು ಅತೀಕ್ರಮಣವನ್ನು ತೆರವುಗೊಳಿಸಲು ಅಗತ್ಯ ಕ್ರಮಕೈಗೊಳ್ಳಲು, ಪಾಲಿಕೆಯ ಆಯುಕ್ತರು ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.ವಾರ್ಡ ಸಂ.೨೮ರ ಸರ್ಕಾರಿ ಪದವಿ ಪೂರ್ವ ಕಾಲೇಜಗೆ ಸಂಪರ್ಕ ಕಲ್ಪಿಸುವ ರಸ್ತೆ ಕಾಮಗಾರಿಯನ್ನು ಪರಿಶೀಲಿಸಿ, ಸದರಿ ಕಾಮಗಾರಿಯನ್ನು ೧೫ ದಿನಗಳ ಒಳಗಾಗಿ ಪೂರ್ಣಗೊಳಿಸಲು ಸೂಚನೆ ನೀಡಿದರು.ನಗರದಲ್ಲಿರುವ ಬೇಗಂ ತಾಲಾಬ ಕೆರೆ ಪರಿವೀಕ್ಷಣೆ ಕೈಗೊಂಡು, ವಾಯು ವಿಹಾರಕ್ಕೆ ಬರುವ ಸಾರ್ವಜನಿಕರಿಗೆ ಉತ್ತಮ ವಾತಾವರಣ ಕಲ್ಪಿಸುವ ನಿಟ್ಟಿನಲ್ಲಿ, ಉದ್ಯಾನವನದಲ್ಲಿರುವ ಮೂಲಭೂತ ಸೌಕರ್ಯಗಳು, ಫೋಡ್ ಕೋರ್ಟ ಹಾಗೂ ಇತರೆ ಸೌಲಭ್ಯಗಳನ್ನು…

Read More

ದೇವರಹಿಪ್ಪರಗಿ: ಪಟ್ಟಣದ ಬಿಎಸ್‌ಎನ್‌ಎಲ್ ಕಚೇರಿಯ ಕಿರಿಯ ಸಹಾಯಕ ಯಾಸಿನ್ ಪಿರಾನ್ ಇವರು ಬಿಎಸ್‌ಎನ್‌ಎಲ್ ವಲಯ ಅಂತರರಾಜ್ಯ ವಾಲಿಬಾಲ್ ಕ್ರೀಡಾಕೂಟದಲ್ಲಿ ಕರ್ನಾಟಕ ತಂಡದ ಸರ್ವಿಸ್ ಆಟಗಾರನಾಗಿ ಭಾಗವಹಿಸಿ, ಕರ್ನಾಟಕ ತಂಡದ ಗೆಲುವಿಗೆ ಕಾರಣರಾದ ಹಿನ್ನೆಲೆಯಲ್ಲಿ ಸನ್ಮಾನಿಸಲಾಯಿತು.ಈ ಸಂದರ್ಭದಲ್ಲಿ ಉಪಮಂಡಲ ಅಧಿಕಾರಿ ಬಿಪುಲ್‌ಕುಮಾರ, ಇಮ್ತಿಯಾಜ್ ಮುಲ್ಲಾ, ಸುಮಿತ್ರಾ ಹಂಜಗಿ, ಪರಶುರಾಮ ಹೊಸಮನಿ, ರವಿ ಸಜ್ಜನ ಇದ್ದರು.

Read More

ವಿಜಯಪುರ: ಕನ್ನಡ ರಂಗಭೂಮಿಯ ದಿಗ್ಗಜರು ಡಾ.ಚಂದ್ರಶೇಖರ ಕಂಬಾರ, ಜಾನಪದ ಕ್ಷೇತ್ರದ ವಿವಿಧ ದೇಶದಲ್ಲಿ ಅಧ್ಯಯನ ಮಾಡಿದ ಮಾಡಿದವರು. ಇವರ ಜಾನಪದ ನಾಟಕ “ಬೆಪ್ತಕ್ಕಡಿ ಬೋಳೇಶಂಕರ” ನಾಟಕ ವಿದ್ಯಾರ್ಥಿಗಳು ವೀಕ್ಷಿಸಿ ಇದರ ಸದುಪಯೋಗ ಪಡೆದುಕೊಳ್ಳಬೇಕು, ರಂಗಭೂಮಿ ನಾಟಕಗಳಿಂದ ಸಾಮಾಜಿಕ ಜಾಗೃತಿ ಹೆಚ್ಚುತ್ತದೆ ಎಂದು ವಿಶ್ರಾಂತ ಉಪನ್ಯಾಸಕ ಬಿ ಎಮ್ ಗೋಡಂಕಿನಮಠ ಹೇಳಿದರು.ಗುರುವಾರ ಮಾಂಗಲ್ಯ ಭವನದಲ್ಲಿ ಜರುಗಿದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ.ಚಂದ್ರಶೇಖರ ಕಂಬಾರರ ಜಾನಪದ ನಾಟಕ, ರಂಗ ನಿರ್ದೇಶಕ ಚಿದಂಬರ ಕುಲಕರ್ಣಿ ನೇತೃತ್ವದ “ಬೆಪ್ತಕ್ಕಡಿ ಬೋಳೇಶಂಕರ” ಹಾಗೂ ಪೂರ್ಣಚಂದ್ರ ತೇಜಸ್ವಿ ಅವರ ಪ್ರಸಿದ್ಧ ಕೃತಿ “ಕೃಷ್ಣೇಗೌಡನ ಆನೆ” ರಂಗಭೂಮಿ ನಾಟಕ ಉದ್ಘಾಟಿಸಿ ಮಾತನಾಡಿದರು.ಚಂದ್ರಶೇಖರ ಕಂಬಾರರ ಕುರಿತು ಸವಿಸ್ತಾರವಾಗಿ ವಿದ್ಯಾರ್ಥಿಗಳಿಗೆ ತಿಳಿಸಿದ ಅವರು ಸರಳತೆ ಸತ್ಯ ಈ ನಾಟಕದಲ್ಲಿದೆ. ಇಂದಿನ ಯುವ ಪೀಳಿಗೆ ಭಾರತೀಯ ಸಾಂಸ್ಕೃತಿಕ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ತಂದೆ ತಾಯಿಗೆ ಒಳ್ಳೆಯ ಮಕ್ಕಳು ಎನಿಸಿಕೊಂಡು ಸಾಧನೆ ಮಾಡಬೇಕಾದದ್ದು ಆದ್ಯ ಕರ್ತವ್ಯವಾಗಿದೆ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.ಪ್ರಾಚಾರ್ಯ ಬಿ ಎಮ್ ಸಿಂಗನಳ್ಳಿ, ಎಸ್ ಆರ್…

Read More

ವಿಧಾನಸೌಧದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ತೀವ್ರ ಆಕ್ರೋಶ! ಬೆಂಗಳೂರು: ಛಲವಾದಿ ನಾರಾಯಣಸ್ವಾಮಿ ‘ಹರಿಶ್ಚಂದ್ರ’ ಅಲ್ಲ, ಒಬ್ಬ ಶೆಡ್ ಗಿರಾಕಿ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರ ರಾಹುಲ್ ಖರ್ಗೆ ಅವರ ಸಿದ್ಧಾರ್ಥ ವಿಹಾರ ಟ್ರಸ್ಟ್ ಗೆ ಏರೋಸ್ಪೇಸ್ ಪಾರ್ಕಿನಲ್ಲಿ 5 ಎಕರೆ ಸಿ.ಎ. ನಿವೇಶನ ಕೊಟ್ಟಿದ್ದಕ್ಕೆ ಎಗರಾಡುತ್ತಿರುವ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಸತ್ಯ ಹರಿಶ್ಚಂದ್ರರೇನಲ್ಲ. 2006ರಲ್ಲಿ ಮೈಸೂರಿನ ಹೆಬ್ಬಾಳದಲ್ಲಿ 2 ಎಕರೆ ಜಾಗ ಪಡೆದುಕೊಂಡಿರುವ ಅವರು 18 ವರ್ಷಗಳಾದರೂ ಅಲ್ಲಿ ಏನೂ ಮಾಡದೆ ಕಾಟಾಚಾರಕ್ಕೆ ಒಂದು ಶೆಡ್ ಹಾಕಿಕೊಂಡು ಕೂತಿರುವ ಆಸಾಮಿ. ಅವರೊಬ್ಬ ಶೆಡ್ ಗಿರಾಕಿಯೇ ವಿನಾ ರಾಹುಲ್ ಖರ್ಗೆ ಅವರಂತೆ ಉದ್ಯಮಶೀಲರಲ್ಲ. ಇಂಥವರು ನಮಗೆ ಪಾಠ ಮಾಡಲು ಬರುತ್ತಾರೆ ಎಂದು ಕಿಡಿಕಾರಿದ್ದಾರೆ.ಗುರುವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಎರಡು ಗಂಟೆ ಕಾಲ ದಾಖಲೆ ಸಮೇತ…

Read More

ಮುದ್ದೇಬಿಹಾಳ: ಪತ್ರಿಕಾ ಮಾಧ್ಯಮಕ್ಕೆ ಇರುವ ಗೌರವ ಕಳಚಿ ಬಿದ್ದಿದೆ. ಇಂದಿನ ಮಾಧ್ಯಮಗಳು ಯಾವುದಕ್ಕೆ ಎಷ್ಟು ಮಹತ್ವ ಕೊಡಬೇಕು ಅದಕ್ಕೆ ಮಹತ್ವ ಕೊಡುತ್ತಿಲ್ಲ ಎಂದು ಶಾಸಕ, ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಸಿ.ಎಸ್.ನಾಡಗೌಡ ಅಪ್ಪಾಜಿ ಬೇಸರ ವ್ಯಕ್ತಪಡಿಸಿದರು.ಪಟ್ಟಣದ ಎಪಿಎಂಸಿಯಲ್ಲಿರುವ ದಿ ಕರ್ನಾಟಕ ಕೋ ಅಪ್ ಬ್ಯಾಂಕ್ ನ ಸಭಾ ಭವನದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ಶ್ರೀ ಕುಮಾರೇಶ್ವರ ಜೀವನ ವಿಕಾಸ ಫೌಂಡೇಶನ್, ಅಸ್ಕಿ ಫೌಂಡೇಶನ್, ಕನ್ನಡ ಸಾಹಿತ್ಯ ಪರಿಷತ್ತು, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ಅಖಿಲ ಭಾರತ ವೀರಶೈವ ಮಹಾಸಭೆ, ಮನೆಯಲ್ಲಿ ಮಹಾಮನೆ ಬಳಗ, ವಿಕಲಚೇತನರ ಒಕ್ಕೂಟ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ವತಿಯಿಂದ ೭೮ನೇ ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ ನಡೆದ ಪ್ರತಿಭಾ ಪುರಸ್ಕಾರ, ಪ್ರಶಸ್ತಿ ಪ್ರಧಾನ, ಸೌಲಭ್ಯ ವಿತರಣೆ, ಸಾಧಕರಿಗೆ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಇಂದಿನ ದಿನಮಾನಗಳಲ್ಲಿ ಟಿವಿ ಮಾಧ್ಯಮಗಳು ಬರೀ ಜೈಲಿನ ಬಗ್ಗೆಯೇ ತೋರಿಸುತ್ತಿವೆ. ಯಾವುದನ್ನು ತೋರಿಸಬೇಕು ಯಾವುದನ್ನ ತೋರಿಸಬಾರದು ಎಂಬ ಬಗ್ಗೆ ಪರಿಶೀಲಿಸುತ್ತಿಲ್ಲ.…

Read More

ಆಲಮಟ್ಟಿ: ನಿಡಗುಂದಿ ಬಿ ವಲಯ ಮಟ್ಟದ ಪ್ರೌಢಶಾಲಾ ಕ್ರೀಡಾಕೂಟದಲ್ಲಿ ಮಣಗೂರ ಸರಕಾರಿ ಪ್ರೌಢಶಾಲಾ ಕ್ರೀಡಾಪಟುಗಳು ಅಮೋಘ ಪಾರುಪಥ್ಯ ಮೆರೆದಿದ್ದಾರೆ.ಹಲವಾರು ಸ್ಪರ್ಧೆಗಳಲ್ಲಿ ಜಯದಾಖಲಿಸಿ ಕೂಟದಲ್ಲಿ ಮಿಂಚಿದ್ದಾರೆ. ಬಾಲಕರ ವಿಭಾಗದ ಖೋಖೋ ಅಂತಿಮ ಪಂದ್ಯದಲ್ಲಿ ಈ ಶಾಲಾ ತಂಡ ಗೆಲವು ಸಾಧಿಸಿ ಪ್ರಥಮ ಸ್ಥಾನ ಪಡೆದಿದೆ. ಬಾಲಕಿಯರ ವಿಭಾಗದ ನಾಲ್ಕು ಹಾಗೂ ಬಾಲಕರ ವಿಭಾಗದಲ್ಲಿ ಒಂದು ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಪಡೆಯುವ ಮೂಲಕ ಕ್ರೀಡಾಪಟುಗಳು ತಮ್ಮ ಕ್ರೀಡಾ ಕೌಶಲ್ಯ ಅಂಕಣದಲ್ಲಿ ಪ್ರದರ್ಶಿಸಿ ಗಮನ ಸೆಳೆದಿದ್ದಾರೆ.ಬಾಲಕಿಯರ ವಿಭಾಗದ ರೀಲೆ ಸ್ಪರ್ಧೆಯಲ್ಲಿ ಶಾಲಾ ತಂಡ ದ್ವೀತಿಯ ಸ್ಥಾನ ಪಡೆದಿದೆ. ೪೦೦ ಮೀ.ಓಟದಲ್ಲಿ ಅನಿತಾ ಹೂಗಾ, ೮೦೦ ಓಟದಲ್ಲಿ ಬೊರಮ್ಮ ಸುನಗದ,೧೫೦೦ ಮೀ.ಓಟದಲ್ಲಿ ಬೊರಮ್ಮ ಬುಲಾತಿ ಹಾಗೂ ಎತ್ತರ ಜಿಗಿತ ಸ್ಪರ್ಧೆಯಲ್ಲಿ ಶಶಿಕಲಾ ಬೂದಿಹಾಳ ಪ್ರಥಮ ಸ್ಥಾನ ಪಡೆದು ಮಿನುಗಿದ್ದಾರೆ.೧೦೦ ಮೀ.ಓಟದಲ್ಲಿ ಶಶಿಕಲಾ ಬೂದಿಹಾಳ, ೮೦೦ ಮೀ.ಓಟದಲ್ಲಿ ದಿವ್ಯಾ ಮಠ,ಎತ್ತರ ಜಿಗಿತದಲ್ಲಿ ಬೊರಮ್ಮ ಸುನಗದ ಕ್ರಮವಾಗಿ ಎಲ್ಲರೂ ದ್ವೀತಿಯ ಸ್ಥಾನ ಪಡೆದು ಮಿಂಚಿದರೆ ೨೦೦ ಮೀ.ಓಟದಲ್ಲಿ ಸುಕನ್ಯಾ ಪಾಟೀಲ,…

Read More

ಮುದ್ದೇಬಿಹಾಳ: ರಾಷ್ಟ್ರೀಯ ಕ್ರೀಡೆಯನ್ನು ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಪರಿಚಯಿಸಿದ ಮೇಜರ್ ಧ್ಯಾನಚಂದ್ ಅವರ ಸೇವೆ ಸದಾ ಅವಿಸ್ಮರಣೀಯ ಎಂದು ಪ್ರೌಢ ಶಾಲಾ ಮುಖ್ಯಗುರು ರಾಮಚಂದ್ರ ಹೆಗಡೆ ಹೇಳಿದರು.ಪಟ್ಟಣದ ಜ್ಞಾನ ಭಾರತಿ ವಿದ್ಯಾ ಮಂದಿರದಲ್ಲಿ ಆಯೋಜಿಸಿರುವ ರಾಷ್ಟ್ರೀಯ ಕ್ರೀಡಾ ದಿನಾಚರಣೆಯಲ್ಲಿ ಅವರು ಮಾತನಾಡಿದರು.ಮನಷ್ಯನ ದೈಹಿಕ, ಮಾನಸಿಕ, ಸಾಮಾಜಿಕ ಮತ್ತು ಆಧ್ಯಾತ್ಮಿಕ ಸುಸ್ಥಿರ ಅಡಿಪಾಯವೇ ಕ್ರೀಡೆಯಾಗಿದೆ. ಆರೋಗ್ಯದ ಗುಟ್ಟು ಕ್ರೀಡೆಯಲ್ಲಿದೆ. ಇವತ್ತಿನ ದಿನಗಳಲ್ಲಿ ಸೋಲು-ಗೆಲವನ್ನು ಸಮಾನವಾಗಿ ಸ್ವೀಕರಿಸುವ ಮನೋಭಾವನೆ ಮಗುವಿನಲ್ಲಿ ಬೆಳೆಸಬೇಕಾಗಿರುವುದು ತೀರಾ ಅವಶ್ಯಕವಾಗಿದೆ. ಮಗುವಿನಲ್ಲಿ ಒತ್ತಡ ನಿರ್ವಹಣೆಯನ್ನು ನಿರ್ವಹಿಸುವ ಸಾಮರ್ಥ್ಯ ಹೆಚ್ಚಿಸ ಬೇಕಾದ ಅವಶ್ಯಕತೆ ಪ್ರಸ್ತುತ ದಿನಮಾನದಲ್ಲಿದೆ. ಮೇಜರ್ ಧ್ಯಾನಚಂದರವರು ಸ್ವಾತಂತ್ರ ಪೂರ್ವ ಘಟ್ಟದಲ್ಲಿಯೇ ನಮ್ಮ ದೇಶಕ್ಕೆ ವಿಶ್ವ ಓಲಂಪಿಕ್ಸ್ನಲ್ಲಿ ೩ ಬಾರಿ ಬಂಗಾರದ ಪದಕ ತಂದುಕೊಟ್ಟಿರುತ್ತಾರೆ ಎಂದರು.ಈ ವೇಳೆ ದೈಹಿಕ ಶಿಕ್ಷಕ ಬಿ.ಟಿ.ಭಜಂತ್ರಿ, ಪ್ರಾಥಮಿಕ ವಿಭಾಗದ ಮುಖ್ಯ ಗುರುಮಾತೆ ಸರಸ್ವತಿ ಮಡಿವಾಳರ್, ಆಂಗ್ಲ ಮಾಧ್ಯಮ ಮುಖ್ಯ ಗುರುಮಾತೆ ರಂಜಿತಾ ಭಟ್ಟ, ಶಿಕ್ಷಕರಾದ ಶಿವಶಂಕರಯ್ಯ ಹಿರೇಮಠ, ಎಸ್.ಎಸ್.ಹಂಜಗಿ, ಆರ್.ಜೆ.ಸಾಗರ, ಮಂಜುನಾಥ ಪಡದಾಳಿ, ಕಿರಣ ಕಡಿ,…

Read More

ತಾಳಿಕೋಟಿ: ಕ್ರೀಡೆಗಳಿಂದ ದೈಹಿಕ ಮತ್ತು ಮಾನಸಿಕ ವಿಕಸನ ವಾಗುವುದರೊಂದಿಗೆ ಉತ್ತಮ ವ್ಯಕ್ತಿತ್ವದ ನಿರ್ಮಾಣವು ಆಗುತ್ತದೆ ಒಂದು ಸದೃಢ ಸಮಾಜದ ನಿರ್ಮಾಣದಲ್ಲಿ ಕ್ರೀಡೆಗಳು ಮಹತ್ವದ ಪಾತ್ರ ನಿರ್ವಹಿಸುತ್ತವೆ ಎಂದು ಕೊಡಗಾನೂರ ಸಿಆರ್ ಪಿ ಸಂಗಮೇಶ ಪಾಲ್ಕಿ ಹೇಳಿದರು. ತಾಲೂಕಿನ ಗೊಟಖಂಡಕಿ ಗ್ರಾಮದ ಇಂದಿರಾ ಗಾಂಧಿ ವಸತಿ ಶಾಲೆಯಲ್ಲಿ ಕೊಡಗಾನೂರ ಕ್ಲಸ್ಟರ್ ಮಟ್ಟದ 2024-25 ನೇ ಸಾಲಿನ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮಕ್ಕಳಿಗೆ ಪಾಠ ಎಷ್ಟು ಮುಖ್ಯ ವೋ ಆಟವು ಅಷ್ಟೇ ಮುಖ್ಯವಾಗಿದೆ ಕ್ರೀಡೆಯಲ್ಲಿ ಸೋಲು ಗೆಲುವು ಮುಖ್ಯವಲ್ಲ ಭಾಗವಹಿಸುವಿಕೆ ಮುಖ್ಯವಾಗಿದೆ ಎಂದರು. ಗಡಿ ಸೋಮನಾಳ ಪ್ರಾಥಮಿಕ ಶಾಲೆಯ ಮುಖ್ಯ ಗುರುಗಳಾದ ಟಿ.ಎಸ್.ಲಮಾಣಿ ಅಧ್ಯಕ್ಷತೆ ವಹಿಸಿದ್ದರು. ಕ್ರೀಡಾಕೂಟದಲ್ಲಿ 15 ಹಿರಿಯ ಪ್ರಾಥಮಿಕ ಶಾಲೆಗಳ ಸುಮಾರು 250ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸಿದ್ದರು. ವಿಶೇಷ ಕ್ರೀಡಾಪಟುಗಳಿಗೆ ಪ್ರಥಮ ದ್ವಿತೀಯ ಪದಕ ಹಾಗೂ ಪ್ರಶಸ್ತಿ ಪತ್ರಗಳನ್ನು ವಿತರಿಸಲಾಯಿತು. ಕ್ರೀಡಾಕೂಟದಲ್ಲಿ ಆರ್.ಎಸ್. ಹಿಪ್ಪರಗಿ. ಶ್ರೀಮತಿ ಅಂಬಿಕಾ.ಡಿ.ಸಿ.ಕಲಾಲ. ಬಿ.ಸಿ.ಗೋಗಿ ಹಾಗೂ ತಾಳಿಕೋಟಿ ವಲಯದ ದೈಹಿಕ…

Read More

ತಾಳಿಕೋಟಿ: ಮಕ್ಕಳಲ್ಲಿರುವ ಸೂಪ್ತ ಪ್ರತಿಭೆಯನ್ನು ಅನಾವರಣ ಗೊಳಸಿ ಅವರನ್ನು ಪ್ರೋತ್ಸಾಹಿಸಲು ಪ್ರತಿಭಾ ಕಾರಂಜಿ ಅಂತಹ ಕಾರ್ಯಕ್ರಮಗಳು ಸೂಕ್ತ ವೇದಿಕೆಯಾಗಿವೆ ಎಂದು ಮುದ್ದೇಬಿಹಾಳ ಕ್ಷೇತ್ರ ಸಮನ್ವಯಾಧಿಕಾರಿ ಯು.ಬಿ.ಧರಿಕಾರ ಹೇಳಿದರು. ತಾಲೂಕಿನ ಚೋಕಾವಿ ಗ್ರಾಮದಲ್ಲಿ ಕೊಣ್ಣೂರ ಕ್ಲಸ್ಟರ್ ಮಟ್ಟದ 2024 -25 ನೇ ಸಾಲಿನ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಅವರು ಮಾತನಾಡಿದರು. ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿ ತನ್ನದೇ ಆದ ವಿಶೇಷ ಪ್ರತಿಭೆ ಇರುತ್ತದೆ ಅದನ್ನು ಗುರುತಿಸಿ ಪ್ರೋತ್ಸಾಹಿಸುವುದು ಶಿಕ್ಷಕರ ಜವಾಬ್ದಾರಿಯಾಗಿದೆ ಎಂದರು. ಹಿರೂರ ಅನ್ನದಾನೇಶ್ವರ ಮಠದ ಚನ್ನಮಲ್ಲಯ್ಯ ಹಿರೇಮಠ ಪಟ್ಟದೇವರು ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದರು.ಎಸ್‌ಡಿಎಂಸಿ ಅಧ್ಯಕ್ಷ ಆರ್. ಎಸ್. ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಸದಸ್ಯರು. ಎಸ್ ಡಿ ಎಂ ಸಿ ಉಪಾಧ್ಯಕ್ಷ ಹಾಗೂ ಸದಸ್ಯರು, ಕೊಣ್ಣೂರ ಕ್ಲಸ್ಟರ್ ಮಟ್ಟದ ಶಾಲೆಗಳ ಮುಖ್ಯಗುರುಗಳು, ಗ್ರಾಮದ ಗಣ್ಯರು ಯುವಕರು ಹಾಗೂ ವಿದ್ಯಾರ್ಥಿಗಳು ಇದ್ದರು. ಸಹಶಿಕ್ಷಕ ಎಂ.ಆರ್.ಸುಣದಳ್ಳಿ ಸ್ವಾಗತಿಸಿದರು. ಶ್ರೀಮತಿ ಸುರೇಖಾ ಜಾಲವಾದಿ ನಿರೂಪಿಸಿದರು. ಮುಖ್ಯಗುರು ಮಾತೆ ಶ್ರೀಮತಿ ಕೆ.ಎ. ಹಿರೇಗೌಡರ…

Read More

ಮುದ್ದೇಬಿಹಾಳ : ಪಟ್ಟಣದ ಪುರಸಭೆಯ ೧೦ನೇ ಅವಧಿಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ಚುನಾವಣೆ ನಡೆಸಲು ದಿನಾಂಕವನ್ನು ಪ್ರಕಟಿಸುವಂತೆ ಒತ್ತಾಯಿಸಿ ಇಲ್ಲಿನ ಪುರಸಭೆಯ ಬಿಜೆಪಿ ಸದಸ್ಯರು ಗುರುವಾರ ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.ಪುರಸಭೆಯ ೧೦ನೇ ಅವಧಿಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆ ನಡೆಸಲು ರಾಜ್ಯ ಸರಕಾರ ಮೀಸಲಾತಿ ನಿಗದಿ ಪಡಿಸಿ ಆದೇಶ ಮಾಡಿ ೨೪ ದಿನ ಹಾಗೂ ಜಿಲ್ಲಾಧಿಕಾರಿಗಳೂ ಆದೇಶ ಮಾಡಿ ೨೦ ದಿನ ಕಳೆದಿದ್ದರೂ ಸಹ ಚುನಾವಣೆ ನಡೆಸಲು ದಿನಾಂಕವನ್ನು ಪ್ರಕಟಗೊಳಿಸಿರುವದಿಲ್ಲ. ಕಾರಣ ಕೂಡಲೇ ರಾಜ್ಯ ಸರಕಾರದ ಹಾಗೂ ಜಿಲ್ಲಾಧಿಕಾರಿಗಳ ಆದೇಶದಂತೆ ಚುನಾವಣೆ ನಡೆಸಲು ದಿನಾಂಕವನ್ನು ನಿಗದಿಪಡಿಸಿ ಅಧ್ಯಕ್ಷ ಉಪಾಧ್ಯಕ್ಷರನ್ನು ಆಯ್ಕೆ ಮಾಡುವ ಮೂಲಕ ರಾಜ್ಯ ಸರ್ಕಾರದ ಆದೇಶವನ್ನು ಪಾಲನೆ ಮಾಡಬೇಕು. ೨ದಿನಗಳಲ್ಲಿ ಚುನಾವಣಾ ದಿನಾಂಕ ಆದೇಶ ಮಾಡದೇ ಇದ್ದಲ್ಲಿ ವಿಳಂಬ ನೀತಿ ಖಂಡಿಸಿ ತಹಶೀಲ್ದಾರ ಕಚೇರಿಯ ಎದುರು ಸತ್ಯಾಗ್ರಹ ಹಮ್ಮಿಕೊಳ್ಳುವದಾಗಿ ಪತ್ರದಲ್ಲಿ ನಮೂದಿಸಲಾಗಿದೆ.ಮನವಿ ಪತ್ರಕ್ಕೆ ಸದಸ್ಯರುಗಳಾದ ಸದಾಶಿವ ಮಾಗಿ, ಸಂಗಮ್ಮ ದೇವರಳ್ಳಿ, ಅಶೋಕ ವನಹಳ್ಳಿ, ಶಾಂತಾಬಾಯಿ ಪೂಜಾರಿ, ಬಸವರಾಜ ಮುರಾಳ,…

Read More