ತಾಳಿಕೋಟಿ: ಮಕ್ಕಳಲ್ಲಿರುವ ಸೂಪ್ತ ಪ್ರತಿಭೆಯನ್ನು ಅನಾವರಣ ಗೊಳಸಿ ಅವರನ್ನು ಪ್ರೋತ್ಸಾಹಿಸಲು ಪ್ರತಿಭಾ ಕಾರಂಜಿ ಅಂತಹ ಕಾರ್ಯಕ್ರಮಗಳು ಸೂಕ್ತ ವೇದಿಕೆಯಾಗಿವೆ ಎಂದು ಮುದ್ದೇಬಿಹಾಳ ಕ್ಷೇತ್ರ ಸಮನ್ವಯಾಧಿಕಾರಿ ಯು.ಬಿ.ಧರಿಕಾರ ಹೇಳಿದರು. ತಾಲೂಕಿನ ಚೋಕಾವಿ ಗ್ರಾಮದಲ್ಲಿ ಕೊಣ್ಣೂರ ಕ್ಲಸ್ಟರ್ ಮಟ್ಟದ 2024 -25 ನೇ ಸಾಲಿನ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಅವರು ಮಾತನಾಡಿದರು. ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿ ತನ್ನದೇ ಆದ ವಿಶೇಷ ಪ್ರತಿಭೆ ಇರುತ್ತದೆ ಅದನ್ನು ಗುರುತಿಸಿ ಪ್ರೋತ್ಸಾಹಿಸುವುದು ಶಿಕ್ಷಕರ ಜವಾಬ್ದಾರಿಯಾಗಿದೆ ಎಂದರು. ಹಿರೂರ ಅನ್ನದಾನೇಶ್ವರ ಮಠದ ಚನ್ನಮಲ್ಲಯ್ಯ ಹಿರೇಮಠ ಪಟ್ಟದೇವರು ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದರು.
ಎಸ್‌ಡಿಎಂಸಿ ಅಧ್ಯಕ್ಷ ಆರ್. ಎಸ್. ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಸದಸ್ಯರು. ಎಸ್ ಡಿ ಎಂ ಸಿ ಉಪಾಧ್ಯಕ್ಷ ಹಾಗೂ ಸದಸ್ಯರು, ಕೊಣ್ಣೂರ ಕ್ಲಸ್ಟರ್ ಮಟ್ಟದ ಶಾಲೆಗಳ ಮುಖ್ಯಗುರುಗಳು, ಗ್ರಾಮದ ಗಣ್ಯರು ಯುವಕರು ಹಾಗೂ ವಿದ್ಯಾರ್ಥಿಗಳು ಇದ್ದರು. ಸಹಶಿಕ್ಷಕ ಎಂ.ಆರ್.ಸುಣದಳ್ಳಿ ಸ್ವಾಗತಿಸಿದರು. ಶ್ರೀಮತಿ ಸುರೇಖಾ ಜಾಲವಾದಿ ನಿರೂಪಿಸಿದರು. ಮುಖ್ಯಗುರು ಮಾತೆ ಶ್ರೀಮತಿ ಕೆ.ಎ. ಹಿರೇಗೌಡರ ವಂದಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

