ವಿಜಯಪುರ: ಕನ್ನಡ ರಂಗಭೂಮಿಯ ದಿಗ್ಗಜರು ಡಾ.ಚಂದ್ರಶೇಖರ ಕಂಬಾರ, ಜಾನಪದ ಕ್ಷೇತ್ರದ ವಿವಿಧ ದೇಶದಲ್ಲಿ ಅಧ್ಯಯನ ಮಾಡಿದ ಮಾಡಿದವರು. ಇವರ ಜಾನಪದ ನಾಟಕ “ಬೆಪ್ತಕ್ಕಡಿ ಬೋಳೇಶಂಕರ” ನಾಟಕ ವಿದ್ಯಾರ್ಥಿಗಳು ವೀಕ್ಷಿಸಿ ಇದರ ಸದುಪಯೋಗ ಪಡೆದುಕೊಳ್ಳಬೇಕು, ರಂಗಭೂಮಿ ನಾಟಕಗಳಿಂದ ಸಾಮಾಜಿಕ ಜಾಗೃತಿ ಹೆಚ್ಚುತ್ತದೆ ಎಂದು ವಿಶ್ರಾಂತ ಉಪನ್ಯಾಸಕ ಬಿ ಎಮ್ ಗೋಡಂಕಿನಮಠ ಹೇಳಿದರು.
ಗುರುವಾರ ಮಾಂಗಲ್ಯ ಭವನದಲ್ಲಿ ಜರುಗಿದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ.ಚಂದ್ರಶೇಖರ ಕಂಬಾರರ ಜಾನಪದ ನಾಟಕ, ರಂಗ ನಿರ್ದೇಶಕ ಚಿದಂಬರ ಕುಲಕರ್ಣಿ ನೇತೃತ್ವದ “ಬೆಪ್ತಕ್ಕಡಿ ಬೋಳೇಶಂಕರ” ಹಾಗೂ ಪೂರ್ಣಚಂದ್ರ ತೇಜಸ್ವಿ ಅವರ ಪ್ರಸಿದ್ಧ ಕೃತಿ “ಕೃಷ್ಣೇಗೌಡನ ಆನೆ” ರಂಗಭೂಮಿ ನಾಟಕ ಉದ್ಘಾಟಿಸಿ ಮಾತನಾಡಿದರು.
ಚಂದ್ರಶೇಖರ ಕಂಬಾರರ ಕುರಿತು ಸವಿಸ್ತಾರವಾಗಿ ವಿದ್ಯಾರ್ಥಿಗಳಿಗೆ ತಿಳಿಸಿದ ಅವರು ಸರಳತೆ ಸತ್ಯ ಈ ನಾಟಕದಲ್ಲಿದೆ. ಇಂದಿನ ಯುವ ಪೀಳಿಗೆ ಭಾರತೀಯ ಸಾಂಸ್ಕೃತಿಕ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ತಂದೆ ತಾಯಿಗೆ ಒಳ್ಳೆಯ ಮಕ್ಕಳು ಎನಿಸಿಕೊಂಡು ಸಾಧನೆ ಮಾಡಬೇಕಾದದ್ದು ಆದ್ಯ ಕರ್ತವ್ಯವಾಗಿದೆ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಪ್ರಾಚಾರ್ಯ ಬಿ ಎಮ್ ಸಿಂಗನಳ್ಳಿ, ಎಸ್ ಆರ್ ಬೂದಿಹಾಳ ಮಾತನಾಡಿದರು.
ಪ್ರಾಚಾರ್ಯ ಬಿ ಎನ್ ಸಿಂಗನಳ್ಳಿ, ಉಪ ಪ್ರಾಚಾರ್ಯ ಪ್ರಭು ವಿ ಮಹಲಿನಮಠ, ಚಲನಚಿತ್ರ ನಟ ವಿಶ್ವಪ್ರಕಾಶ ಟಿ ಮಲಗೊಂಡ, ಎಸ್ ಬಿ ಹೊಸಮನಿ, ಎಸ್ ಆರ್ ಬೂದಿಹಾಳ, ಕನ್ನಡ ಉಪನ್ಯಾಸಕಿ ಹೇಮಾ ಹಿರೇಮಠ, ಎಸ್ ಎಸ್ ತಾಳಿಕೋಟಿ, ಸುನಿಲ ಪಾಟೀಲ, ಜಿ ಎಸ್ ಆನೆಗುಂದಿ, ಎಸ್ ಎಸ್ ಹೂಗಾರ, ಎನ್ ಬಿ ಪೂಜಾರಿ, ಬಿ ಬಿ ಜಮಾದಾರ, ರಾಹುಲ್ ನಾರಾಯಣಕರ, ಶಿವಯೋಗಿ ತಾಳಿಕೋಟಿ, ಪಿ ಎಸ್ ಸರನಾಡಗೌಡ , ವ್ಹಿ ಕೆ ಹಿರೇಮಠ, ಜಿ ಎಂ ಗಾಣಿಗೇರ, ಎಮ್ ಐ ಮುಜಾವರ, ಡಾ.ವಿಶ್ವನಾಥ ನಂದಿಕೋಲ, ಪಿ ಬಿ ಜೋಗುರ, ಸಂಗಮೇಶ ಚಾವರ್, ನವೀನ ಎಂ ಶೆಳ್ಳಗಿ, ಆರ್ ಎಂ ಕೊಳ್ಳುರೆ, ನೀಲಕಂಠ ಮೇತ್ರಿ, ಪ್ರೀಯಾಂಕಾ ಪಡಶೆಟ್ಟಿ, ರೋಹಿತ್ ಸುಲ್ಪಿ, ರಾಹುಲ್ ದಾಸರ್, ಸೇರಿದಂತೆ ಇನ್ನಿತರರು ಇದ್ದರು.
ರಂಗಸಿರಿ ಪ್ರತಿಷ್ಠಾನ ತಂಡದ ನಿರ್ದೇಶಕ ಚಿದಂಬರ ಕುಲಕರ್ಣಿ ನಿರೂಪಿಸಿ ವಂದಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

