ಮುದ್ದೇಬಿಹಾಳ: ರಾಷ್ಟ್ರೀಯ ಕ್ರೀಡೆಯನ್ನು ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಪರಿಚಯಿಸಿದ ಮೇಜರ್ ಧ್ಯಾನಚಂದ್ ಅವರ ಸೇವೆ ಸದಾ ಅವಿಸ್ಮರಣೀಯ ಎಂದು ಪ್ರೌಢ ಶಾಲಾ ಮುಖ್ಯಗುರು ರಾಮಚಂದ್ರ ಹೆಗಡೆ ಹೇಳಿದರು.
ಪಟ್ಟಣದ ಜ್ಞಾನ ಭಾರತಿ ವಿದ್ಯಾ ಮಂದಿರದಲ್ಲಿ ಆಯೋಜಿಸಿರುವ ರಾಷ್ಟ್ರೀಯ ಕ್ರೀಡಾ ದಿನಾಚರಣೆಯಲ್ಲಿ ಅವರು ಮಾತನಾಡಿದರು.
ಮನಷ್ಯನ ದೈಹಿಕ, ಮಾನಸಿಕ, ಸಾಮಾಜಿಕ ಮತ್ತು ಆಧ್ಯಾತ್ಮಿಕ ಸುಸ್ಥಿರ ಅಡಿಪಾಯವೇ ಕ್ರೀಡೆಯಾಗಿದೆ. ಆರೋಗ್ಯದ ಗುಟ್ಟು ಕ್ರೀಡೆಯಲ್ಲಿದೆ. ಇವತ್ತಿನ ದಿನಗಳಲ್ಲಿ ಸೋಲು-ಗೆಲವನ್ನು ಸಮಾನವಾಗಿ ಸ್ವೀಕರಿಸುವ ಮನೋಭಾವನೆ ಮಗುವಿನಲ್ಲಿ ಬೆಳೆಸಬೇಕಾಗಿರುವುದು ತೀರಾ ಅವಶ್ಯಕವಾಗಿದೆ. ಮಗುವಿನಲ್ಲಿ ಒತ್ತಡ ನಿರ್ವಹಣೆಯನ್ನು ನಿರ್ವಹಿಸುವ ಸಾಮರ್ಥ್ಯ ಹೆಚ್ಚಿಸ ಬೇಕಾದ ಅವಶ್ಯಕತೆ ಪ್ರಸ್ತುತ ದಿನಮಾನದಲ್ಲಿದೆ. ಮೇಜರ್ ಧ್ಯಾನಚಂದರವರು ಸ್ವಾತಂತ್ರ ಪೂರ್ವ ಘಟ್ಟದಲ್ಲಿಯೇ ನಮ್ಮ ದೇಶಕ್ಕೆ ವಿಶ್ವ ಓಲಂಪಿಕ್ಸ್ನಲ್ಲಿ ೩ ಬಾರಿ ಬಂಗಾರದ ಪದಕ ತಂದುಕೊಟ್ಟಿರುತ್ತಾರೆ ಎಂದರು.
ಈ ವೇಳೆ ದೈಹಿಕ ಶಿಕ್ಷಕ ಬಿ.ಟಿ.ಭಜಂತ್ರಿ, ಪ್ರಾಥಮಿಕ ವಿಭಾಗದ ಮುಖ್ಯ ಗುರುಮಾತೆ ಸರಸ್ವತಿ ಮಡಿವಾಳರ್, ಆಂಗ್ಲ ಮಾಧ್ಯಮ ಮುಖ್ಯ ಗುರುಮಾತೆ ರಂಜಿತಾ ಭಟ್ಟ, ಶಿಕ್ಷಕರಾದ ಶಿವಶಂಕರಯ್ಯ ಹಿರೇಮಠ, ಎಸ್.ಎಸ್.ಹಂಜಗಿ, ಆರ್.ಜೆ.ಸಾಗರ, ಮಂಜುನಾಥ ಪಡದಾಳಿ, ಕಿರಣ ಕಡಿ, ಲೋಹಿತ ಜೈನಾಪೂರ, ರಾಧಾ ಕೋಲಕಾರ, ಶಾಹಿನ ನಾಲತವಾಡ, ನೇತ್ರಾ ವಡವಡಗಿ, ರೂಪಾ ನಾಟೆಕಾರ, ಅನ್ನಪೂರ್ಣ ಹೊಸಮನಿ, ವರ್ಷಾ ಹುನಗುಂದ, ಗುರುಬಾಯಿ ತಂಗಡಗಿ, ಮೀನಾಕ್ಷಿ ಗಣಾಚಾರಿ, ಭಾಗ್ಯ ಸಿದ್ದಾಪೂರ, ಇಂದು ನಾಯಕ, ತ್ರಿವೇಣಿ ಕುಲಕರ್ಣಿ ಸೇರಿದಂತೆ ಇತರರು ಹಾಜರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

