Author: editor.udayarashmi@gmail.com

ಆಲಮೇಲದಲ್ಲಿ ರೂ.೩.೫ ಕೋಟಿ ವೆಚ್ಚದ ಕೆರೆ ಅಭಿವೃದ್ದಿ ಕಾಮಗಾರಿಗೆ ಶಾಸಕರಿಂದ ಚಾಲನೆ ಆಲಮೇಲ: ಪಟ್ಟಣದ ೫೪ ಎಕರೆ ವಿಶಾಲವಾದ ಕೆರೆಯನ್ನು ಅಭಿವೃದ್ದಿಗೊಳಿಸಿ, ಕೆರೆಯ ಸುತ್ತಲೂ ತಡೆಗೊಡೆ ನಿರ್ಮಿಸಿ ಸಾರ್ವಜನಿಕರಿಗೆ ವಾಯುವಿಹಾರದ ವ್ಯವಸ್ಥೆ ಮಾಡುವ ಮೂಲಕ ಮಾದರಿ ಕೆರೆಯನ್ನಾಗಿ ಮಾಡಲಾಗುವುದು ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.ಭಾನುವಾರ ಸಣ್ಣ ನೀರಾವರಿ ಇಲಾಖೆಯಿಂದ ೩.೫ ಕೋಟಿ ವ್ಯೆಚ್ಚದ ಕೆರೆ ಅಭಿವೃದ್ದಿ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.ಪಟ್ಟಣದ ಕೆರೆಯಲ್ಲಿನ ಹೊಳು ತಗೆದು ಮಳೆ ನೀರು ಮತ್ತು ಕಾಲುವೆ ಮೂಲಕ ಕೆರೆ ತುಂಬುವ ಯೋಜನೆ ಇದಾಗಿದ್ದು ಇದರಿಂದ ಪಟ್ಟಣದ ಜನರ ನೀರಿನ ಸಮಸ್ಯೆ ನಿವಾರಿಸಲಿದೆ ಮತ್ತು ಅಂತರ್ಜಲ ಹೆಚ್ಚಾಗಿ ಸುತ್ತಲಿನ ರೈತರಿಗೂ ಅನಕೂಲವಾಗಲಿದೆ. ೫೪ ಎಕರೆ ಕೆರೆಯ ಜಾಗದಲ್ಲಿ ಸಂಪೂರ್ಣ ಹೂಳೆತ್ತಿ ಸುತ್ತಲೂ ತಡೆಗೋಡೆಗಳನ್ನು ನಿರ್ಮಿಸಿ ವೀಕ್ಷಣೆಯ ಸ್ಥಳವನ್ನಾಗಿ ಮಾಡಲಾಗುವುದು ಎಂದರು.ನಮ್ಮ ತಂದೆ ದಿ. ಎಂ.ಸಿ. ಮನಗೂಳಿ ಅವರು ಸಿಂದಗಿ ನಗರದ ಜನರಿಗೆ ನೀರಿನ ಬವಣೆ ನೀಗಿಸಲು ಕೆರೆ ಅಭಿವೃದ್ದಿಗೊಳಿಸಿ ಬೇರೆಡೆಯಿಂದ ಪೈಪಲೈನ್ ಮೂಲಕ ಕೆರೆಗೆ…

Read More

ವಿಜಯಪುರ: ಭೂತನಾಳದ ಮೀನುಗಾರಿಕೆ ಸಂಶೋಧನಾ ಮತ್ತು ಮಾಹಿತಿ ಕೇಂದ್ರದಲ್ಲಿ ಜುಲೈ ೧೨ ರಂದು ರಾಷ್ಟ್ರೀಯ ಮೀನು ಕೃಷಿಕರ ದಿನಾಚರಣೆ ಯ ಅಂಗವಾಗಿ ಮಿಶ್ರ ಮೀನು ಸಾಕಾಣಿಕೆ ಕುರಿತು ಒಂದು ದಿನದ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈ ವೇಳೆ ಒಂದು ರೂಪಾಯಿಗೆ ಮೀನುಮರಿಗಳನ್ನು ಮಾರಾಟ ಮಾಡಲಾಗುವುದು. ರೈತರು ಇದರ ಸದುಪಯೋಗ ಪಡಿಸಿಕೊಳ್ಳವಂತೆಯೂ, ಹೆಚ್ಚಿನ ಮಾಹಿತಿಗೆ ದೂ: ೦೮೩೫೨-೨೬೪೫೧೬, ಮೊ: ೯೪೮೦೫೧೮೬೭೯, ೯೯೪೫೯೫೯೭೦೪ನ್ನು ಸಂಪರ್ಕಿಸಬೇಕು ಎಂದು ಭೂತನಾಳ ಮೀನುಗಾರಿಕೆ ಮತ್ತು ಸಂಶೋಧನಾ ಕೇಂದ್ರದ ಮುಖ್ಯಸ್ಥರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

Read More

ವಿಜಯಪುರ: ೧೧೦ ಕೆವಿ ದೇವರಹಿಪ್ಪರಗಿ ಹತ್ತಿರ ೧೧೦ ಕೆವಿ ಲಿಲೋ ಗೋಪುರದ ಮೇಲೆ ತಂತಿ ಜೋಡಿಸುವ ಕಾಮಗಾರಿ ಕೈಗೆತ್ತಿಕೊಂಡಿರುವುದರಿಂದ ೧೧೦ ಕೆವಿ ಅಥರ್ಗಾ, ೧೧೦ ಕೆವಿ ದೇವರಹಿಪ್ಪರಗಿ, ೧೧೦ ಕೆವಿ ಹಿರೇಮಸಳಿ, ೩೩ ಕಡ್ಲೇವಾಡ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ ಎಲ್ಲಾ ೧೧ ಕೆವಿ ಮಾರ್ಗಗಳಲ್ಲಿ ಜುಲೈ ೧೦ರ ಬೆಳಿಗ್ಗೆ ೭ ರಿಂದ ಬೆಳಿಗ್ಗೆ ೧೧ ಗಂಟೆಯವರೆಗೆ ವಿದ್ಯುತ್ ಪೂರೈಕೆಯಲಿ ವ್ಯತ್ಯವಾಗಲಿದ್ದು, ಗ್ರಾಹಕರು ಸಹಕರಿಸುವಂತೆ ಇಂಡಿ ಹೆಸ್ಕಾಂನ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ವಿಜಯಪುರ: ಕರ್ನಾಟಕ ಯಕ್ಷಗಾನ ಅಕಾಡೆಮಿಯು ಯಕ್ಷಗಾನದ ತೆಂಕು, ಬಡಗು ಬಡಾಬಡಗು, ಯಕ್ಷಗಾನ ಗೊಂಬೆಯಾಟ ಮೂಡಲಪಾಯ ಯಕ್ಷಗಾನ, ಕೇಳಿಕೆ, ಘಟ್ಟದಕೋರೆ ಮತ್ತು ತಾಳಮದ್ದಲೆ ಇತ್ಯಾದಿ ಕಲಾ ಪ್ರಕಾರಗಳಲ್ಲಿ ೨೦೨೨ ಹಾಗೂ ೨೦೨೩ನೇ ಸಾಲಿನ ಕ್ಯಾಲೆಂಡರ್ ವರ್ಷದಲ್ಲಿ ಪ್ರಕಟಿಸಿರುವ ಪುಸ್ತಕಗಳನ್ನು ಬಹುಮಾನಕ್ಕೆ ಆಯ್ಕೆ ಮಾಡಲು ಲೇಖಕರಿಂದ ಹಾಗೂ ಪ್ರಕಾಶಕರಿಂದ ಅರ್ಜಿ ಆಹ್ವಾನಿಸಿದೆ.ಆಯ್ಕೆಯಾದ ಪುಸ್ತಕಕ್ಕೆ ರೂ. ೨೫,೦೦೦ ಬಹುಮಾನ ನೀಡಲಾಗುವುದು. ಯಕ್ಷಗಾನದ ವಿವಿಧ ಆಯಾಮಗಳ ಬಗ್ಗೆ ಸಂಗೀತ, ಆಹರ‍್ಯ, ಅಭಿನಯ, ಸಂಶೋಧನೆ, ವಿಮರ್ಶೆ, ಜೀವನ ಚರಿತ್ರೆ, ಪ್ರಸಂಗ ಪುಸ್ತಕ ಇತ್ಯಾದಿ ಪ್ರಕಾರಗಳನ್ನು ಒಳಗೊಂಡ ಪ್ರಥಮ ಮುದ್ರಣ ಆವೃತ್ತಿಯ ಸ್ವರಚಿತ ಪುಸ್ತಕಗಳನ್ನು ಬಹುಮಾನಕ್ಕಾಗಿ ಆಹ್ವಾನಿಸಿದೆ. ಬಹುಮಾನಕ್ಕೆ ಸಲ್ಲಿಸುವ ಪುಸ್ತಕವು ಪಠ್ಯಕ್ಕಾಗಿ ಸಿದ್ಧಪಡಿಸಿರಬಾರದು ಹಾಗೂ ಸಂಪಾದಿತ ಅಥವಾ ಅಭಿನಂದನ ಕೃತಿಯಾಗಿರಬಾರದು. ಪುಸ್ತಕಗಳನ್ನು ರಿಜಿಸ್ಟಾçರ್, ಕರ್ನಾಟಕ ಯಕ್ಷಗಾನ ಅಕಾಡೆಮಿ, ಕನ್ನಡ ಭವನ, ಎರಡನೇ ಮಹಡಿ, ಚಾಲುಕ್ಯ ವಿಭಾಗ, ಜೆ.ಸಿ.ರಸ್ತೆ, ಬೆಂಗಳೂರು-೫೬೦ ೦೦೨, ಇವರಿಗೆ ೨೦೨೪ರ ಜುಲೈ ೨೫ರ ಒಳಗಾಗಿ ಅರ್ಜಿಯೊಂದಿಗೆ ಪುಸ್ತಕದ ನಾಲ್ಕು ಪ್ರತಿಗಳನ್ನು ಕಡ್ಡಾಯವಾಗಿ ಕಳುಹಿಸುವುದು. ಯಾವುದೇ ಕಾರಣಕ್ಕೂ ಪುಸ್ತಕಗಳನ್ನು ಹಿಂದಿರುಗಿಸಲಾಗುವುದಿಲ್ಲ. ಅರ್ಜಿಗಳನ್ನು…

Read More

ವಿಜಯಪೂರ: ೨೦೨೪-೨೫ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ರೈತರು ತಮ್ಮ ಜಮೀನಿನಲ್ಲಿ ಬೆಳೆದ ಬೆಳೆ ವಿವರಗಳನ್ನು ಮುಂಗಾರು ರೈತರ ಬೆಳೆ ಸಮೀಕ್ಷೆ ಆ್ಯಪ್‌ನಲ್ಲಿ ದಾಖಲಿಸಲು ಆಗಸ್ಟ್ ೩೧ರವರೆಗೆ ಕಾಲಾವಕಾಶ ವಿಸ್ತರಿಸಲಾಗಿದೆ. ರೈತರು ತಮ್ಮ ಜಮೀನಿನ ಬೆಳೆ ಸಮೀಕ್ಷೆಯನ್ನು ತಾವೇ ಕೈಗೊಳ್ಳಲು ಆಗದೇ ಇದ್ದಲ್ಲಿ ತಮ್ಮ ಜಮೀನಿನಲ್ಲಿ ಬೆಳೆದ ವಿವಿಧ ಬೆಳೆಗಳ ಮಾಹಿತಿಯನ್ನು ಖಾಸಗಿ ನಿವಾಸಿಗಳ (ಪಿಆರ್) ಮೂಲಕ ಖುದ್ದಾಗಿ ಕ್ಷೇತ್ರದಲ್ಲಿದ್ದು, ದಿನಾಂಕ:೧೫-೦೮-೨೦೨೪ ರಿಂದ ೩೦-೦೯-೨೦೨೪ರ ಒಳಗಾಗಿ ನಿಖರವಾಗಿ ಬೆಳೆ ವಿವರಗಳನ್ನು ದಾಖಲಿಸಬೇಕೆಂದು ಜಂಟಿ ಕೃಷಿ ನಿರ್ದೇಶಕರಾದ ಡಾ. ಡಿ.ಡಬ್ಲೂ ರಾಜಶೇಖರ ಅವರು ತಿಳಿಸಿದ್ದಾರೆ.ರೈತರು ಗೂಗಲ್ ಪ್ಲೇ ಸ್ಟೋರ್ ಅಥವಾ ಕ್ಯೂ ಆರ್ ಕೋಡ್‌ನಿಂದ ಮುಂಗಾರು ಬೆಳೆ ಸಮೀಕ್ಷೆ ಆ್ಯಪ್ ಡೌನ್ಲೋಡ್ ಮಾಡಿಕೊಂಡು ಸ್ವತಃ ತಾವೇ ಬೆಳೆ ಸಮೀಕ್ಷೆ ಮಾಡಿ ಬೆಳೆದ ಬೆಳೆ ವಿವರಗಳನ್ನು ದಾಖಲಿಸಬಹುದಾಗಿದೆ. ಬೆಳೆ ಸಮೀಕ್ಷೆ ಆ್ಯಪ್‌ನಲ್ಲಿ ದಾಖಲಾಗುವ ಮಾಹಿತಿಯನ್ನು ಬೆಳೆ ಸಾಲ, ಬೆಳೆ ವಿಮೆ, ಬೆಂಬಲ ಬೆಲೆ, ಖರೀದಿ, ಬೆಳೆ ಪರಿಹಾರ ಪಹಣಿಯಲ್ಲಿ ಬೆಳೆ ವಿವರಗಳನ್ನು ದಾಖಲಿಸಲು ಮತ್ತು ವಿವಿಧ ಇಲಾಖೆಗಳ…

Read More

ಬಸವನಬಾಗೇವಾಡಿ: ತಾಲೂಕಿನ ಇಂಗಳೇಶ್ವರ ರೇವಣಸಿದ್ದೇಶ್ವರ ಗುಡ್ಡದಲ್ಲಿರುವ ಸಮುದಾಯ ಭವನದಲ್ಲಿ ಜಗದ್ಗುರು ರೇವಣಸಿದ್ದೇಶ್ವರ ಬೆಳ್ಳಿಯ ಉತ್ಸವ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಹಾಗೂ ರೇವಣಸಿದ್ದೇಶ್ವರ ಗುಡ್ಡದಲ್ಲಿರುವ ಅಕ್ಕನಾಗಮ್ಮ ಗುಹೆಯಲ್ಲಿ ಅಕ್ಕನಾಗಮ್ಮ, ಚನ್ನಬಸವಣ್ಣ ಮತ್ತು ಬಸವಣ್ಣನವರ ಮೂರ್ತಿಗಳ ಪ್ರಾಣ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣದಂಗವಾಗಿ ಭಾನುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಗುಡ್ಡದಲ್ಲಿ ೨೫ ಸಾವಿರ ಸಸಿಗಳನ್ನು ನೆಟ್ಟು ಅವುಗಳ ಸಂರಕ್ಷಣೆ ಕಾರ್ಯ ಮಾಡುತ್ತಿರುವ ಕೈಲಾಸ ಬಾಗೇವಾಡಿ, ಉಮೇಶ ಹಡಪದ, ರೇವಣಸಿದ್ದ ದಳವಾಯಿ, ಸಿದ್ದು ಬೊಮ್ಮನಹಳ್ಳಿ, ದಿಲೀಪ ಯಾಳವಾರ, ಮಲ್ಲಿಕಾರ್ಜುನ ಹಳ್ಳಿ ಅವರನ್ನು ಸನ್ಮಾನಿಸಲಾಯಿತು.

Read More

ಬಸವನಬಾಗೇವಾಡಿ: ತಾಲೂಕಿನ ಸುಕ್ಷೇತ್ರ ಉತ್ನಾಳ ಗ್ರಾಮದ ಹಿರೇಮಠದ ಮಹಾಲಕ್ಷ್ಮೀದೇವಿ ಉಪಾಸಕರಾದ ಶಿವಪುತ್ರಯ್ಯ ಹಿರೇಮಠ ಅವರ ಸುಪುತ್ರ ಡಾ.ಮಹಾಂತೇಶ ಹಿರೇಮಠ ಅವರಿಗೆ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಇಂಚಲದಲ್ಲಿ ಈಚೆಗೆ ಜರುಗಿದ ಪದವಿ ಪ್ರದಾನ ಕಾರ್ಯಕ್ರಮದಲ್ಲಿ ಕೆಎಲ್ಇ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ನಿತಿನ್ ಗಂಗನೆ, ಪ್ರಾಚಾರ್ಯ ಡಾ. ಜಿ.ವಿನಯ ಮೋಹನ ಅವರು ಆಯುರ್ವೇದದ ಕಾಯಚಿಕಿತ್ಸಾ ವಿಭಾಗದ ಸ್ನಾತಕೋತ್ತರ ಪದವಿ (ಎಂಡಿ) ಪ್ರದಾನ ಮಾಡಿದರು.ಈ ಕಾರ್ಯಕ್ರಮದಲ್ಲಿ ಶಿವಾನಂದ ಭಾರತಿ ಸ್ವಾಮೀಜಿ, ಪೂರ್ಣಾನಂದ ಭಾರತಿ ಸ್ವಾಮೀಜಿ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು ಎಂದು ಪ್ರಕಟಣೆ ತಿಳಿಸಿದೆ.

Read More

ಬಸವನಬಾಗೇವಾಡಿ: ಇಂಗಳೇಶ್ವರ ಗ್ರಾಮದ ರೇವಣಸಿದ್ದೇಶ್ವರ ಗುಡ್ಡವು ಪವಿತ್ರ ಸ್ಥಳವಾಗುವ ಜೊತೆಗೆ ಇತಿಹಾಸ ಪ್ರಸಿದ್ಧವಾಗಿದೆ. ಈ ಗುಡ್ಡದಲ್ಲಿ ಹೆಚ್ಚು ಗಿಡ-ಮರಗಳನ್ನು ನೆಟ್ಟಿರುವದರಿಂದಾಗಿ ಮುಂಬರುವ ದಿನಗಳಲ್ಲಿ ಇದೊಂದು ಭಕ್ತಿ ತಾಣವಾಗುವ ಜೊತೆಗೆ ಪ್ರವಾಸಿ ತಾಣವಾಗುವದರಲ್ಲಿ ಸಂದೇಹವಿಲ್ಲ ಎಂದು ಬಸವನಬಾಗೇವಾಡಿ ಹಿರೇಮಠದ ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ ಹೇಳಿದರು.ತಾಲೂಕಿನ ಇಂಗಳೇಶ್ವರ ಗ್ರಾಮದ ರೇವಣಸಿದ್ದೇಶ್ವರ ಸಮುದಾಯ ಭವನದಲ್ಲಿ ಗ್ರಾಮದ ಆರಾಧ್ಯ ದೈವ ಜಗದ್ಗುರು ರೇವಣಸಿದ್ದೇಶ್ವರ ಬೆಳ್ಳಿಯ ಉತ್ಸವ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಹಾಗೂ ರೇವಣಸಿದ್ದೇಶ್ವರ ಗುಡ್ಡದಲ್ಲಿರುವ ಅಕ್ಕನಾಗಮ್ಮ ಗುಹೆಯಲ್ಲಿ ಅಕ್ಕನಾಗಮ್ಮ, ಚನ್ನಬಸವಣ್ಣ ಮತ್ತು ಬಸವಣ್ಣನವರ ಮೂರ್ತಿಗಳ ಪ್ರಾಣ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣದಂಗವಾಗಿ ಭಾನುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಅವರು, ನೈಸರ್ಗಿಕ ತಾಣಗಳು ಇಂದಿನ ಒತ್ತಡದ ಬದುಕಿಗೆ ಶಾಂತಿ,ನೆಮ್ಮದಿ ನೀಡುತ್ತವೆ. ಅರಣ್ಯ ಇಲಾಖೆಯ ನೆರವಿನೊಂದಿಗೆ ಇಲ್ಲಿನ ಜನರು ಈ ಗುಡ್ಡದಲ್ಲಿ ಸಸಿಗಳನ್ನು ನೆಟ್ಟಿರುವುದು ಸಂತಸದಾಯಕ ಸಂಗತಿ. ಮುಂಬರುವ ದಿನಗಳಲ್ಲಿ ಜನರು ತಮ್ಮ ಕುಟುಂಬ ಸದಸ್ಯರೊಂದಿಗೆ ಆಗಮಿಸಿ ನೈಸರ್ಗಿಕ ಸೌಂದರ್ಯ ಸವಿಯುವ ಜೊತೆಗೆ ಆಹ್ಲಾದಕರ ಭಾವ ಮೂಡಿಸಿಕೊಳ್ಳುವದರಲ್ಲಿ ಸಂದೇಹವಿಲ್ಲ.…

Read More

ಬಸವನ ಬಾಗೇವಾಡಿ: ಬಳ್ಳಾರಿ ಜಿಲ್ಲೆಯ ಕುರುಗೋಡು ತಾಲೂಕಿನ ಯರಗಳ್ಳಿ ಗ್ರಾಮದಿಂದ ಪಾದಯಾತ್ರೆ ಮೂಲಕ ಜುಲೈ ೧೭ರಂದು ಆಚರಿಸಲ್ಪಡುವ ಆಷಾಢ ಏಕಾದಶಿಯ ಪ್ರಯುಕ್ತ ಪಂಢರಾಪೂರ ವಿಠ್ಠಲ-ರುಕ್ಮಿಣಿ ದೇವರ ದರ್ಶನ ಪಡೆಯಲು ಹೊರಟ ವಿಠ್ಠಲನ ಭಕ್ತಸಮೂಹ ಭಾನುವಾರ ಬಸವನಬಾಗೇವಾಡಿ ಪಟ್ಟಣ ಮಾರ್ಗವಾಗಿ ತೆರಳಿದರು.ಇದು ಇವರ ೨೩ ನೇ ಪಾದಯಾತ್ರೆಯಾಗಿದೆ ಎಂದು ಪಾದಯಾತ್ರಿ ಯು.ಮಣಿಕಂಠ ಎಂಬುವವರು ಹೇಳಿದರು.

Read More

ಬಸವನಬಾಗೇವಾಡಿ: ತಾಲೂಕಿನ ಮಸಬಿನಾಳ ಗ್ರಾಮದಲ್ಲಿ ಮಣ್ಣೆತ್ತಿನ ಅಮವಾಸ್ಯೆ ಮರುದಿನ ಸಂಪ್ರದಾಯದಂತೆ ನಡೆದುಕೊಂಡು ಬಂದಿರುವ ರಾಮ-ಲಕ್ಷ್ಮಣ-ಸೀತಾ, ಹನುಮಂತ, ಸಿಂಧೂರ ಲಕ್ಷ್ಮಣ, ರಾಕ್ಷಸ ವೇಷಧಾರಿ ಪಾತ್ರಗಳ ಮೆರವಣಿಗೆ ಶನಿವಾರ ಗ್ರಾಮದ ಪ್ರಮುಖ ಬೀದಿಗಳಲ್ಲಿ ಜರುಗಿತು.ಸ್ವಾತಂತ್ರ್ಯ ಯೋಧರ ಗ್ರಾಮ ಮಸಬಿನಾಳ ಗ್ರಾಮದಲ್ಲಿ ಸ್ವಾತಂತ್ಯ ಹೋರಾಟ ನಡೆಯುವ ಸಂದರ್ಭದಲ್ಲಿ ಸಿಂಧೂರ ಲಕ್ಷ್ಮಣ ಅವರು ಮಣ್ಣೆತ್ತಿನ ಅಮವಾಸ್ಯೆ ದಿನ ಗ್ರಾಮಕ್ಕೆ ಬಂದಿರುತ್ತಾರೆ. ಮರುದಿನ ಆಗ ಬ್ರಿಟಿಷ ಪೊಲೀಸರು ಸಿಂಧೂರ ಲಕ್ಷ್ಮಣ ಅವರನ್ನು ಬಂಧಿಸಿಲು ಗ್ರಾಮಕ್ಕೆ ಬಂದಾಗ ಗ್ರಾಮದ ವಿರಕ್ತಮಠದ ಲಿಂ.ಶಿವಾನಂದ ಶಿವಯೋಗಿಗಳು ಸಿಂಧೂರ ಲಕ್ಷ್ಮಣ ಅವರನ್ನು ರಕ್ಷಿಸಲು ಗ್ರಾಮದ ಭಕ್ತಸಮೂಹಕ್ಕೆ ರಾಮ-ಲಕ್ಷ್ಮಣ-ಸೀತಾ, ಹನುಮಂತ, ಸಿಂಧೂರ ಲಕ್ಷ್ಮಣ, ರಾಕ್ಷಸ ವೇಷ ಧರಿಸುವಂತೆ ಸೂಚನೆ ನೀಡುತ್ತಾರೆ. ಅದರಂತೆ ಎಲ್ಲರೂ ಈ ವೇಷಗಳನ್ನು ಹಾಕಿಕೊಂಡು ಗ್ರಾಮದಲ್ಲಿ ಕಾಣಿಸಿಕೊಳ್ಳುತ್ತಾರೆ. ಸಿಂಧೂರ ಲಕ್ಷ್ಮಣ ಅವರನ್ನು ಬಂಧಿಸಲು ಬಂದ ಬ್ರಿಟಿಷರ ಪೊಲೀಸರು ಗ್ರಾಮದ ಬೀದಿ ಬೀದಿಗಳಲ್ಲಿ ರಾಮ-ಲಕ್ಷ್ಮಣ-ಸೀತಾ, ಹನುಮಂತ, ಸಿಂಧೂರ ಲಕ್ಷ್ಮಣ, ರಾಕ್ಷಸ ವಿವಿಧ ವೇಷಧಾರಿಗಳನ್ನು ಕಂಡು ಕಕ್ಕಾಬಿಕ್ಕಿಯಾಗಿ ಸಿಂಧೂರ ಲಕ್ಷ್ಮಣ ಅವರನ್ನು ಗುರುತಿಸಲು ವಿಫಲರಾಗಿ ಮರಳಿ…

Read More