ಇಂಡಿ: ಜೊತೆಗೂಡಿ ಶಾಲೆ ಕಲಿತು ಇತೀಚೆಗಷ್ಟೇ ಮರಣ ಹೊಂದಿದ್ದ ತಾಲೂಕಿನ ಸಂಗೋಗಿ ಗ್ರಾಮದ ಬಸವರಾಜ ಕುಂಬಾರ ಅವರ ನೆನಪಿಗಾಗಿ ೨೦೦೮ ರ ಎಸ್.ಎಸ್.ಎಲ್.ಸಿ ಗೆಳೆಯರ ಬಳಗದಿಂದ ೨೫ ಸಾವಿರ ರೂಪಾಯಿ ಸಂಗ್ರಹಿಸಿ ವಾರ್ಷಿಕವಾಗಿ ಸ್ಮರಣ ಬಹುಮಾನ ವಿತರಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲು ಮಂಗಳವಾರ ಶಿರಶ್ಯಾಡ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ಗೆಳೆಯರ ಬಳಗದಿಂದ ಠೇವಣಿ ಮಾಡಿಸಲಾಯಿತು.
ಗೆಳೆಯನ ಅಗಲಿಕೆಯ ನೋವು ಅಮರವಾಗುವಂತೆ ಅವರ ಗೆಳೆಯರ ಬಳಗ ವಿನೂತನವಾದ ಆಲೋಚನೆಯೊಂದಿಗೆ ಸ್ಮರಣ ಬಹುಮಾನ ನೀಡುವುದರೊಂದಿಗೆ ಮೃತ ಗೆಳೆಯನ ನೆನಪು ಮಾಡಿಕೊಳ್ಳುವ ಕಾರ್ಯ ಮಾಡಿದರು.
ಗೆಳೆಯರ ಬಳಗದ ನಾಯಕ ಬಾಳು ಮುಳಜಿ ಹಾಗೂ ಮುಖ್ಯಗುರುಗಳ ಹೆಸರಿನಲ್ಲಿ ಜಂಟಿ ಖಾತೆಯನ್ನು” ಶ್ರೀ ಗುರು ಗಂಗಾಧರೇಶ್ವರ ಸೌಹಾರ್ದ ಪತ್ತಿನ ಸಹಕಾರಿ ನಿಯಮಿತ ಶಿರಶ್ಯಾಡ ಬ್ಯಾಂಕಿನಲ್ಲಿ ತೆಗೆದು ೨೫೦೦೦ ಗೆ ಪ್ರತಿ ವರ್ಷ ಬರುವ ಬಡ್ಡಿ ಹಣವನ್ನು ಪ್ರಥಮ ಹಾಗೂ ದ್ವಿತೀಯ ಸ್ಥಾನದಲ್ಲಿ ಪಾಸಾದ ಪ್ರತಿಭಾನ್ವಿತ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ಸ್ಮರಣ ಬಹುಮಾನ ನೀಡುವುದಾಗಿ ಮುಳಜಿ ಘೋಷಿಸಿದರು.
ಈ ಕಾರ್ಯಕ್ರಮದಲ್ಲಿ ಪ್ರೌಢಶಾಲಾ ಮುಖ್ಯಶಿಕ್ಷಕ ಆರ್.ಕೆ. ದುದಗಿ, ಪ್ರಾಥಮಿಕ ಶಾಲಾ ಶಿಕ್ಷಕ ಎ.ಎಮ್ ಬಿರಾದಾರ, ಗೆಳೆಯರ ಒಕ್ಕೂಟದ ಸದಸ್ಯ ಟೋಪಣ್ಣ ಬಿರಾದಾರ, ಎಸ್‌ಡಿಎಂಸಿ ಅಧ್ಯಕ್ಷ ಪುಂಡಲಿಂಗ ಹೊಸಮನಿ, ಬಸವರಾಜ ತಳವಾರ, ಶ್ರೀಕಾಂತ ಮುಳಜಿ, ಶಿವುಕುಮಾರ ಬಿರಾದಾರ, ಉಮೇಶ್ ನಾದ, ಆನಂದ ಮುಳಜಿ, ಬಸವರಾಜ ಗೋಖಲೆ, ಸಿದ್ಧರಾಮ ಕುಂಬಾರ, ಮಲ್ಲಿಕಾರ್ಜುನ ಕುಂಬಾರ, ಚೌಡಪ್ಪ ಕುಂಬಾರ, ಸಂಜೀವ ಪುರದಾಳ, ಮಹಾದೇವ ಭಜಂತ್ರಿ, ರಮೇಶ್ ನಾದ, ಪುಂಡಲೀಕ ಹೊಸಮನಿ ಸೇರಿದಂತೆ ಪ್ರೌಢಶಾಲಾ ಶಿಕ್ಷಕರು, ಊರಿನ ಪ್ರಮುಖರು ,ವಿದ್ಯಾರ್ಥಿ/ವಿದ್ಯಾರ್ಥಿನಿಯರು ಭಾಗವಹಿಸಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

