ಮುದ್ದೇಬಿಹಾಳ: ಬಿಸಿಲಿನಲ್ಲಿ ದುಡಿಯುವ ರೈತ ಮತ್ತು ದಿನನಿತ್ಯ ನಾವು ಕಣ್ತುಂಬ ನಿದ್ದೆ ಮಾಡ್ತೇವೆ ಅಂದರೆ ಅದಕ್ಕೆ ಕಾರಣ ಗಡಿ ಕಾಯುವ ಯೋಧ ಇವರು ನಿಜವಾದ ಭಾರತ ರತ್ನರು. ಪ್ರತಿನಿತ್ಯ ಊಟ ಮಾಡುವಾಗ ಇವರಿಬ್ಬರನ್ನು ನೆನೆದು ಊಟ ಮಾಡಬೇಕು ಎಂದು ಮಸೂತಿಯ ಡಾ.ಶಿವಲಿಂಗಯ್ಯ ಪುರಾಣಿಕಮಠ ಹೇಳಿದರು.
ಪಟ್ಟಣದ ಶಿರೋಳ ರಸ್ತೆಯಲ್ಲಿರುವ ಶ್ರೀ ಫಕೀರೇಶ್ವರರ ಜಾತ್ರಾ ಮಹೋತ್ಸವದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಧರ್ಮಸಭೆಯಲ್ಲಿ ದಿವ್ಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ಸೈನಿಕರು ಮತ್ತು ರೈತರು ನಾಡಿನ ಒಳಿತಿಗಾಗಿ ನಾಡಿನ ಜನರ ಸುಖಕ್ಕಾಗಿ ದುಡಿಯುತ್ತಾರೆ ಅವರನ್ನು ಗೌರವಿಸುವ ಕಾರ್ಯ ನಮ್ಮಿಂದಾಗಬೇಕು ಎಂದರು.
ಇಟಗಿಯ ಭೂ ಕೈಲಾಸ ಮೇಲ್ಗುದ್ದುಗೆ ಮಠದ ಶಾಂತವೀರ ಶಿವಾಚಾರ್ಯರು ೧೨ ಜಂಗಮ ವಟುಗಳಿಗೆ ಅಯ್ಯಾಚಾರ ದೀಕ್ಷೆ ನೀಡಿದರು. ಕಣಕಾಲದ ಗುರು ಮೂರ್ತಿ ದೇವರು, ಪ್ರವಚನಕಾರ ಸಂಗಯ್ಯ ಶಾಸ್ತ್ರಿಗಳು, ಬಸವರಾಜ ನಂದಿಕೇಶ್ವರಮಠ, ಡಾ.ಸಿ.ಕೆ.ಶಿವಯೋಗಿಮಠ, ಶಾಂತು ಶಿವಯೋಗಿಮಠ, ಸಿದ್ದಯ್ಯ ಪುರಾಣಿಕಮಠ, ಕುಮಾರಸ್ವಾಮಿ ಶಿವಯೋಗಿಮಠ, ಗೌರಿ ಶಿವಯೋಗಿಮಠ, ಅಭಿಶೇಕ ಶಿವಯೋಗಿಮಠ, ಶಿವನಗೌಡ ಪಾಟೀಲ, ರಾಯನಗೌಡ ಬಿರಾದಾರ, ಸೋಮು ಕುರಿ, ದ್ಯಾವಪ್ಪ ಹುಣಶ್ಯಾಳ, ಅಭಿ ಶಿವಯೋಗಿಮಠ, ಲಕ್ಷ್ಮೀ ಶಿವಯೋಗಿಮಠ, ಈರಮ್ಮ ಶಿವಯೋಗಿಮಠ, ನಾಗರತ್ನಾ ಶಿವಯೋಗಿಮಠ, ಮಂಜುಲಾ ಶಿವಯೋಗಿಮಠ, ದಾನಮ್ಮ ಶಿವಶಿಂಪಿ, ಜಯಶ್ರೀ ಶಿವಯೋಗಿಮಠ ಸೇರಿದಂತೆ ಮತ್ತೀತರರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

