ವಿಜಯಪುರ: ಕರ್ನಾಟಕ ಸರಕಾರದಿಂದ ಕೊಡುವ 2024 ನೇ ಸಾಲಿನ ಉತ್ತಮ ಉಪನ್ಯಾಸಕ ಪ್ರಶಸ್ತಿಗೆ ವಿಜಯಪುರದ ಬಾಲಿಕೆಯರ ಸರಕಾರಿ ಪದವಿ ಪೂರ್ವ ಕಾಲೇಜಿನ ಹಿರಿಯ ಕನ್ನಡ ಉಪನ್ಯಾಸಕ ಎಸ್.ಬಿ. ಸಾವಳಸಂಗ ಆಯ್ಕೆಯಾಗಿದ್ದಾರೆ.
ಸೆ.05 ಶಿಕ್ಷಕರ ದಿನಾಚರಣೆಯಂದು ಬೆಂಗಳೂರಿನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ವಿಜಯಪುರ ಶಾಲಾ ಶಿಕ್ಷಣ ಇಲಾಖೆ (ಪ.ಪೂ) ಉಪನಿರ್ದೇಶಕರಾದ ಡಾ.ಸಿ. ಕೆ. ಹೊಸಮನಿ, ಶಾಲಾ ಶಿಕ್ಷಣ ಇಲಾಖೆ (ಪ.ಪೂ.) ಶಾಖಾಧಿಕಾರಿಗಳಾದ ಪ್ರಕಾಶ ಗೊಂಗಡಿ, ಕರ್ನಾಟಕ ರಾಜ್ಯ ಉಪನ್ಯಾಸಕರ ಸಂಘ, ವಿಜಯಪುರ ಜಿಲ್ಲಾ ಘಟಕದ ಅಧ್ಯಕ್ಷರಾದ ಎಂ.ಡಿ. ಹೆಬ್ಬಿ, ಕರ್ನಾಟಕ ರಾಜ್ಯ ಪದವಿ ಪೂರ್ವ ನೌಕರರ ಸಂಘ, ವಿಜಯಪುರ ಜಿಲ್ಲಾ ಘಟಕದ ಅಧ್ಯಕ್ಷರಾದ ಎಸ್.ಎಸ್.ಗೌರಿ, ಪ್ರಾಚಾರ್ಯರ ಮಹಾಮಂಡಳದ ಕಾರ್ಯದರ್ಶಿಗಳಾದ ಕೆ.ಎ.ಉಪ್ಪಾರ, ವಿಜಯಪುರ ಜಿಲ್ಲಾ ಸರಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಕಾಲೇಜುಗಳ ಪ್ರಾಂಶುಪಾಲರು, ಉಪನ್ಯಾಸಕರು, ಬೋಧಕೇತರ ವರ್ಗ ಹಾಗೂ ಬಾಲಿಕೆಯರ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾದ ಸಿ.ಬಿ. ನಾಟಿಕಾರ, ಮತ್ತು ಉಪನ್ಯಾಸಕರಾದ ಎಲ್.ಐ.ಹುಣಸಿಕಟ್ಟಿ, ಪಿ.ಎ. ಮೇತ್ರಿ, ಎಂ.ಬಿ. ರಜಪೂತ, ಬಿ.ಎಸ್. ಗೌರಿ, ಆರ್.ಸಿ.ಹಿರೇಮಠ ಹಾಗೂ ಕಾಲೇಜಿನ ಎಲ್ಲ ಸಿಬ್ಬಂದಿ ವರ್ಗ ಅಭಿನಂದನೆ ಸಲ್ಲಿಸಿರುತ್ತಾರೆ.
Subscribe to Updates
Get the latest creative news from FooBar about art, design and business.
Related Posts
Add A Comment

