ವಿಜಯಪುರ: ಸಮಾಜ ಕಲ್ಯಾಣ ಇಲಾಖೆ ಅಡಿಯಲ್ಲಿ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಗೆ ಜಿಲ್ಲೆಯಿಂದ ಇಲ್ಲಿ ಅಸ್ತಿತ್ವದಲ್ಲಿಲ್ಲದ ಆವಂತಿ ಕ್ಲಾಸಸ್ ಎಂಬ ಕೊಚ್ಚಿಂಗ್ ಸೆಂಟರ್ ಆಯ್ಕೆಗೆ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳ ಬೇಜವಾಬ್ದಾರಿ ಖಂಡಿಸಿ ದಲಿತ ವಿದ್ಯಾರ್ಥಿ ಪರಿಷತ್ ಇಲಾಖೆಯ ಜಿಲ್ಲಾ ಕಛೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿತು.
ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಗೆ ಆಯ್ಕೆಯಾದ ಪರೀಕ್ಷಾರ್ಥಿಗಳಿಗೆ ನಿಯಮದ ಪ್ರಕಾರ ತರಬೇತಿ ನೀಡದೇ ಸರ್ಕಾರದ ಅನುದಾನ ದುರ್ಬಳಕೆ ಮಾಡಿಕೊಂಡು ಮೋಸ ನಡೆಯುತ್ತಿರುವದು ಮೇಲ್ನೋಟಕ್ಕೆ ಸಾಬೀತಾಗುತ್ತದೆ. ಸದರಿ ಸಂಸ್ಥೆ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವ ಜೊತೆಗೆ ಈ ಸಂಸ್ಥೆಯನ್ನು ಕಪ್ಪು ಪಟ್ಟಿಗೆ ಸೇರಿಸಬೇಕೆಂದು ಪ್ರತಿಭಟನೆಕಾರರು ಆಗ್ರಹಿಸಿದರು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಪರಿಷತ್ ಜಿಲ್ಲಾ ಸಂಚಾಲಕ ಅಕ್ಷಯ್ ಕುಮಾರ್ ಮಾತನಾಡಿದರು.
ಪ್ರತಿಭಟನೆಕಾರರ ಆಕ್ರೋಶಕ್ಕೆ ಮಣಿದ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಗಳು, ಅಪರ ನಿರ್ದೇಶಕರು ಪರೀಕ್ಷಾ ಪೂರ್ವ ತರಬೇತಿ ಕೇಂದ್ರ ಬೆಂಗಳೂರು ಇವರಿಗೆ ದಲಿತ ವಿದ್ಯಾರ್ಥಿ ಪರಿಷತ್ ಮಾಡಿರುವ ಆರೋಪ ಆಧಾರಿಸಿ ಸದರಿ ಸಂಸ್ಥೆ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಪತ್ರದ ಮೂಲಕ ಕೋರಿದರು.
Subscribe to Updates
Get the latest creative news from FooBar about art, design and business.
ಇಲ್ಲದ ಕೋಚಿಂಗ್ ಸೆಂಟರ್ ಗೆ ಅನುಮತಿ ಖಂಡಿಸಿ ದವಿಪ ಪ್ರತಿಭಟನೆ
Related Posts
Add A Comment

