Subscribe to Updates
Get the latest creative news from FooBar about art, design and business.
Author: editor.udayarashmi@gmail.com
– ಮಹಾಂತೇಶ ನೂಲಾನವರಸಿಂದಗಿ: ಹಲವು ತಿಂಗಳುಗಳಿಂದ ಇಂಡಿ ಉಪ ವಿಭಾಗಾಧಿಕಾರಿ ಅಬೀದ್ ಗದ್ಯಾಳ ಅವರು ಆಡಳಿತಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಸಿಂದಗಿ ಪುರಸಭೆಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಸ್ಥಾನಕ್ಕೆ ಮೀಸಲು ಪ್ರಕಟ ಮಾಡಿ ಸರ್ಕಾರ ಆದೇಶ ಹೋರಡಿಸಿದೆ. ಪುರಸಭೆಗೆ ಮೀಸಲು ಪ್ರಕಟವಾಗುತ್ತಿದಂತೆ ಬಿಜೆಪಿ3, ಜೆಡಿಎಸ್6, ಪಕ್ಷೇತರ3, ಕಾಂಗ್ರೆಸ್11 ಸದಸ್ಯರಲ್ಲಿ ಯಾರಾಗ್ತಾರೆ ಅಧ್ಯಕ್ಷ ಎಂಬ ಕೂತೂಹಲ ಸಾರ್ವಜನಿಕರಲ್ಲಿ ಮೂಡಿದೆ.ಪಟ್ಟಣದ ಮುಂದಿನ ಅವಧಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಸ್ಥಾನಕ್ಕೆ ಮೀಸಲು ಪ್ರಕಟಗೋಳುತ್ತಿದಂತೆ ಸದಸ್ಯರ ನಡುವೆ ಹಲವಾರು ಹೊಂದಾಣಿಕೆಯ ಮಾತುಕತೆಗಳು ಪ್ರಾರಂಭಗೊಂಡಿವೆ. ಅಧ್ಯಕ್ಷ ಮತ್ತು ಉಪಾಧ್ಯಕ್ಷ ಎರಡು ಇತರೆ ಮೀಸಲಾತಿ ಪ್ರಕಟಗೊಂಡಿರುವುದರಿಂದ 23 ಸದಸ್ಯರಿಗೂ ಅಧ್ಯಕ್ಷರಾಗುವ ಅವಕಾಶವಿದೆ. ಬಲಾ-ಬಲ ನೋಡಿದರೆ ಜೆಡಿಎಸ್ ನ 6 ಸದಸ್ಯರಲ್ಲಿ ಮಾಜಿ ಅಧ್ಯಕ್ಷ ಡಾ.ಶಾಂತವೀರ ಮನಗೂಳಿ ಹಾಗೂ ಶಾಂತವೀರ ಬಿರಾದಾರ ಇವರ ಮಧ್ಯ ಪ್ರಬಲ ಪೈಪೋಟಿ ನಡೆಯುತ್ತಿದ್ದು, ಶಾಸಕ ಅಶೋಕ ಮನಗೂಳಿ ಅವರು ತಮ್ಮ ತಮ್ಮನಿಗೆ ಬೆಂಬಲ ಸೂಚಿಸುತ್ತಾರೋ ಅಥವಾ ಅಳಿಯನಿಗೆ ಬೆಂಬಲಿಸುತ್ತಾರೋ ಎಂಬುದು ಕುತೂಹಲವಾಗಿದೆ.ಇದರ ಮಧ್ಯ ಶಾಸಕರ ಆಪ್ತರಾದ ವಾರ್ಡ್ ನಂ…
ವಿಜಯಪುರ: ೨೦೨೪-೨೫ನೇ ಸಾಲಿನಲ್ಲಿ ನೈಸರ್ಗೀಕ ವಿಕೋಪಗಳಾದ ಪ್ರವಾಹ, ಅತೀವೃಷ್ಟಿಯಿಂದ ಜಿಲ್ಲೆಯಲ್ಲಿ ಉಂಟಾದ ಬೆಳೆ ಹಾನಿ ಪರಿಹಾರವನ್ನು ಪಾವತಿಸುವ ಕುರಿತಂತೆ ಬೆಳೆಹಾನಿಯಾದ ರೈತರ ಪಟ್ಟಿಯನ್ನು ಜಿಲ್ಲಾಧಿಕಾರಿ,ಉಪವಿಭಾಗಾಧಿಕಾರಿ,ತಹಶೀಲ್ದಾರ, ಗ್ರಾಮ ಪಂಚಾಯತ್, ರೈತ ಸಂಪರ್ಕ ಕೇಂದ್ರದಲ್ಲಿ ಸೆ.೫ರಂದು ಪ್ರಕಟಿಸಲಾಗಿದೆ.ಈ ಕುರಿತಂತೆ ಯಾವುದೇ ಆಕ್ಷೇಪಣೆಗಳಿದ್ದಲ್ಲಿ, ಸಂಬಂಧಿಸಿದ ತಹಶೀಲ್ದಾರ್, ಕೃಷಿ, ತೋಟಗಾರಿಕಾ ಇಲಾಖೆಗಳ ತಾಲೂಕಾ ಕಚೇರಿಯಲ್ಲಿ ೦೭ ದಿನಗಳ ಒಳಗಾಗಿ (ಅಂದರೆ ದಿನಾಂಕ ೧೧-೦೯-೨೦೨೪) ರೊಳಗಾಗಿ ಆಕ್ಷೇಪಣೆ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾಧಿಕಾರಿಗಳ ವೆಬ್‌ಸೈಟ್ https://vijayapura.nic.inದಲ್ಲಿ ಪರಿಶೀಲಿಸಿಕೊಳ್ಳಬಹುದು ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.
ಮುದ್ದೇಬಿಹಾಳ: ದೇಶದ ಸರ್ವತೋಮುಖ ಬೆಳವಣಿಗೆಗೆ ಶಿಕ್ಷಣ ಮಹತ್ವದ ಪಾತ್ರ ವಹಿಸುತ್ತದೆ. ಸರ್ಕಾರ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ತಂದಲ್ಲಿ ನಮ್ಮ ದೇಶ ಇನ್ನಷ್ಟು ವೇಗವಾಗಿ ಅಭಿವೃದ್ಧಿ ಹೊಂದಬಹುದು ಎಂದು ಕುಂಟೋಜಿ ಸಂಸ್ಥಾನ ಭಾವೈಕ್ಯತಾ ಹಿರೇಮಠದ ಡಾ.ಚನ್ನವೀರ ಶಿವಾಚಾರ್ಯರು ಅಭಿಪ್ರಾಯ ಪಟ್ಟರು.ಪಟ್ಟಣದ ಹುಡ್ಕೋ ಬಡಾವಣೆಯಲ್ಲಿರುವ ಟಾಪ್-ಇನ್-ಟೌನ್ ಹಾಲ್ ನಲ್ಲಿ ಜಿಲ್ಲಾ ಪಂಚಾಯತ, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನೋತ್ಸವ, ಶಿಕ್ಷಕರ ದಿನಾಚರಣೆ ಹಾಗೂ ನಿವೃತ್ತ ಶಿಕ್ಷಕರ ಸನ್ಮಾನ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು.ಶಿಕ್ಷಕರು ತಾವು ಪಡೆಯುವ ಸಂಬಳಕ್ಕೆ ನ್ಯಾಯಯುತವಾಗಿ ವಿದ್ಯಾರ್ಥಿಗಳನ್ನು ತಯಾರಿಸಬೇಕು. ಶಿಕ್ಷಣವನ್ನು ವ್ಯಾಪಾರವಾಗಿಸಿಕೊಳ್ಳಬಾರದು. ಶಿಕ್ಷಕರಾದವರು ಗರ್ವದಿಂದಿರಬಾರದು. ಶಿಕ್ಷಕರು ಗರ್ವದಿಂದ ಇದ್ದಲ್ಲಿ ವಿದ್ಯಾರ್ಥಿಗಳು ಸಹ ಗರ್ವದಿಂದ ನಡೆದುಕೊಳ್ಳುತ್ತಾರೆ ಎಂದರು.ವಿಶೇಷ ಉಪನ್ಯಾಸಕರಾಗಿ ಆಗಮಿಸಿದ್ದ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ವಿಷ್ಣು ಶಿಂಧೆ ಮಾತನಾಡಿ, ಶಿಕ್ಷಕರಾದವರು ಕಳೆದ ವರ್ಷದಿಂದ ಈ ವರ್ಷಕ್ಕೆ ನಾವು ನೀಡುತ್ತಿರುವ…
ಸಿಂದಗಿ ಪಟ್ಟಣದ ವಿವಿಧ ಶಾಲೆಗಳಲ್ಲಿ ಶಿಕ್ಷಕರ ದಿನ ಆಚರಣೆ ಸಿಂದಗಿ: ಬರಿ ಅಂಕ ಗಳಿಕೆಯ ಪ್ರತಿಷ್ಠೆಗಾಗಿ ಮಕ್ಕಳನ್ನು ತಯಾರು ಮಾಡದೇ ವಿದ್ಯಾರ್ಥಿಗಳನ್ನು ಸಂಸ್ಕಾರಯುತರನ್ನಾಗಿ ಮಾಡುವುದು ಅತೀ ಅಗತ್ಯ ಎಂದು ದೈಹಿಕ ನಿರ್ದೇಶಕ ಡಾ.ರವಿ ಗೋಲಾ ಹೇಳಿದರು.ಪಟ್ಟಣದ ರಾಂಪುರ ರಸ್ತೆಯಲ್ಲಿರುವ ಶ್ರೀ ಸಮರ್ಥ ವಿದ್ಯಾ ವಿಕಾಸ ಸಂಸ್ಥೆಯ ಪ್ರೇರಣಾ ಶಿಶುನಿಕೇತನ, ವಿದ್ಯಾನಿಕೇತನ, ಪ್ರೇರಣಾ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆ ಇವುಗಳ ಸಹಯೋಗದಲ್ಲಿ ಹಮ್ಮಿಕೊಂಡ ಶಿಕ್ಷಕರ ದಿನಾಚರಣೆ ಮತ್ತು ನಿವೃತ್ತ ಶಿಕ್ಷಕರ ಗೌರವ ಸಮರ್ಪಣಾ ಹಾಗೂ ಗುರು ನಮನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ದೀಪದ ಬೆಳಕಿನಂತೆ ನಿಮ್ಮ ಬದುಕು ಉಜ್ವಲವಾಗಲಿ, ಹಿರಿಯರ ಆಶಯ ಕಿರಿಯರಿಗೆ ವರವಾಗಲಿ. ಪರೀಕ್ಷೆಯಲ್ಲಿ ಸತತ ಸಾಧನೆಯ ಗುರಿ ಶಿಖರಕ್ಕೆರಲಿ. ಈ ಹೊನ್ನ ಬೆಳಕು ಪ್ರತಿಯೊಬ್ಬರಿಗೂ ಆಸರೆಯಾಗಿ ಬಾಳು ಹಸನಾಗಲಿ. ಕುಲಕರ್ಣಿ ಸಹೋದರರ ಈ ಸಾಧನೆ ಅನನ್ಯ ಎಂದು ಶ್ಲಾಘಸಿದರು.ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಪ್ರಾಚಾರ್ಯ ಭೀಮನಗೌಡ ಸಿಂಗನಳ್ಳಿ ಮಾತನಾಡಿ, ಸಮಾಜದಲ್ಲಿ ಗುರು ಶಿಲ್ಪಿಯಂತೆ, ಸಮಾಜದಲ್ಲಿ…
Udayarashmi kannada daily newspaper
ಮುದ್ದೇಬಿಹಾಳ: ಪತ್ರಿಕಾ ವಿತರಕರು ಮಳೆ, ಗಾಳಿ, ಚಳಿ ಎನ್ನದೇ ದಿನನಿತ್ಯ ತಮ್ಮ ಕರ್ತವ್ಯದಲ್ಲಿ ತೊಡಗಿದ್ದರಿಂದಲೇ ಇಂದು ಪತ್ರಿಕೆಗಳು ಜೀವಂತವಾಗಿವೆ ಎಂದು ಕಾನಿಪ ಸಂಘದ ಹಿರಿಯ ಸದಸ್ಯ ಎಚ್.ಆರ್.ಬಾಗವಾನ ಹೇಳಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ವಿಶ್ವ ಪತ್ರಿಕಾ ವಿತರಕರ ದಿನಾಚರಣೆ ಕುರಿತು ಹಮ್ಮಿಕೊಳ್ಳಲಾಗಿದ್ದ ಪತ್ರಿಕಾ ವಿತರಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.ಪತ್ರಿಕಾ ವಿತರಕರು ತಮ್ಮ ನಿತ್ಯದ ಕಾರ್ಯದಲ್ಲಿ ತೊಡಗದಿದ್ದರೆ ಇಂದು ವರದಿಗಾರರು ಸುದ್ದಿ ಬರೆಯುವದು ಮಾತ್ರವಲ್ಲದೇ ಪತ್ರಿಕೆಗಳನ್ನು ಮನೆಗಳಿಗೆ ತಲುಪಿಸುವ ಸಂದರ್ಭ ಎದುರಾಗುತ್ತಿತ್ತು. ಸಧ್ಯ ಪತ್ರಿಕಾ ವಿತರಕರಿಗೂ ಹಲವು ಸೌಲಭ್ಯಗಳನ್ನು ಸರ್ಕಾರ ನೀಡುತ್ತಿದ್ದು ಅವುಗಳ ಸದ್ಬಳಕೆ ಮಾಡಿಕೊಳ್ಳುವಂತೆ ಸಲಹೆ ನೀಡಿದರು.ಸದಸ್ಯ ಚೇತನ ಶಿವಶಿಂಪಿ ವಕೀಲರು ಮಾತನಾಡಿ, ಪತ್ರಿಕೆ ವಿತರಕರು ಪತ್ರಿಕೆಯ ಜೀವಾಳ. ಪ್ರತಿ ದಿನ ನಸುಕಿನ ಜಾವ ಬೇಗ ಬಂದು ಪತ್ರಿಕೆಗಳನ್ನು ಹೊಂದಿಸಿಕೊಂಡು ಮನೆ ಮನೆಗೆ ತಲುಪಿಸುವ ಕಾಯಕ ನಿಷ್ಟೆಯನ್ನು ಸ್ಮರಿಸುವೆ. ವರದಿಗಾರರಾದ ನಾವು ವಿತರಕರ ಮೇಲೆ ಭಾರ ಹಾಕಿ ನಮ್ಮ ಕಾರ್ಯಗಳಲ್ಲಿ ತೊಡಗಿದರೆ, ವಿತರಕರು…
ಶಿಕ್ಷಕರ ದಿನಾಚರಣೆಯಲ್ಲಿ ಶಾಸಕ ಯಶವಂತರಾಯಗೌಡ ಪಾಟೀಲ ಅಭಿಮತ ಇಂಡಿ: ಇಡೀ ಪ್ರಪಂಚದಲ್ಲಿ ಶಿಕ್ಷಕರು ಭವ್ಯ ಪರಂಪರೆಯ ಇತಿಹಾಸ ಹೊಂದಿರುವ ಸಮೂಹ. ಆದ್ದರಿಂದಲೇ ಶಿಕ್ಷಕರು ಜಗತ್ತಿನಲ್ಲಿ ವಿಶೇಷ ಗೌರವಕ್ಕೆ ಪಾತ್ರರಾಗಿದ್ದಾರೆ. ಓರ್ವ ಶಿಕ್ಷಕ ರಾಷ್ಟ್ರದ ಪ್ರಥಮ ಪ್ರಜೆಯಾಗಿ ಕಂಡಿದ್ದು ಭಾರತದಲ್ಲಿ ಮಾತ್ರ. ಆದರೆ ಈ ಶಿಕ್ಷಕರನ್ನು ದೇವ ಎಂದು ಕಾಣುವ ವಿಶೇಷತೆ ನಮ್ಮ ಭಾಗದಲ್ಲಿ ಮಾತ್ರ ಕಾಣುತ್ತೆವೆ. ವಿದ್ಯಾರ್ಥಿ ಭವಿಷ್ಯ ಬೆಳಗಿಸುವ ಜವಬ್ದಾರಿ ಶಿಕ್ಷಕರ ಮೇಲಿದೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿ ಕಛೇರಿಯ ಗುರುಭವನದಲ್ಲಿ ಜಿ.ಪಂ ಶಾಲಾ ಶಿಕ್ಷಣ ಇಲಾಖೆ ವಿಜಯಪುರ, ತಾಲೂಕು ಆಡಳಿತ ಹಾಗೂ ತಾಲೂಕು ಕ್ಷೇತ್ರ ಶಿಕ್ಷಣ ಅಧಿಕಾರಿ ಮತ್ತು ಕ್ಷೇತ್ರ ಸಮನ್ವಯಾಧಿಕಾರಿ ಸಹಯೋಗದಲ್ಲಿ ನಡೆದ ಭಾರತ ರತ್ನ ಡಾ. ಎಸ್ ರಾಧಾ ಕೃಷ್ಣನ್ ರವರ ಜನ್ಮದಿನೋತ್ಸವದ ಕಾರ್ಯಕ್ರಮ ಅಧ್ಯಕ್ಷತೆವಹಿಸಿ, ಉದ್ಘಾಟಿಸಿ ಅವರು ಮಾತನಾಡಿದರು. ತಾಲೂಕಿನ ಜನತೆ ಅಥರ್ಗಾ ರೇವಣಸಿದ್ದರನ್ನು ಮತ್ತು ನಿಂಬಾಳದ ರಾನಡೆ ಮಹಾರಾಜರನ್ನು ದೇವರೆಂದು ಪೂಜಿಸುವ ಸಂಸ್ಕೃತಿ ನಮ್ಮದು. ಶಿಕ್ಷಕ, ಗುರು ಬರಿದಾಗದ…
ಸಿಂದಗಿ: ಪ್ರಾಥಮಿಕ ಶಿಕ್ಷಣ ಎನ್ನುವುದು ಜೀವನದ ಬುನಾದಿ ಇಂತಹ ವ್ಯಕ್ತಿತ್ವ ರೂಪಿಸುವದು ಶಿಕ್ಷಕರ ಪಾತ್ರ ಹಿರಿದ್ದಾದದ್ದು, ಶಿಕ್ಷಕರು ನೀಡುವ ಶಿಕ್ಷಣ ಜೀವನದುದ್ದಕ್ಕೂ ಮರೆಯದಂತಹ ಸಂಬಂಧ ಬೆಳೆಸುತ್ತಾರೆ. ನಮ್ಮ ಜೀವನದ ರೂಪರೇಶೆಗಳನ್ನು ರೂಪಿಸಿದ ಶಿಕ್ಷಕರಿಗೆ ಗೌರವಿಸುವ ಕಾರ್ಯ ಶ್ಲಾಘನೀಯ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.ಪಟ್ಟಣದ ಗುಂದಗಿ ಪಂಕ್ಷನ್ ಹಾಲ್‌ನಲ್ಲಿ ಜಿಪಂ, ಸಾರ್ವಜನಿಕ ಶಿಕ್ಷಣ ಇಲಾಖೆ ವಿಜಯಪುರ ಹಾಗೂ ತಾಲೂಕು ಆಡಳೀತ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಮತ್ತು ಕ್ಷೇತ್ರ ಸಮನ್ವಯಾಧಿಕಾರಿ ಕಾರ್ಯಾಲಯ ಹಾಗೂ ಶಿಕ್ಷಕರ ದಿನೋತ್ಸವ ಸಮಿತಿ ಹಮ್ಮಿಕೊಂಡ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಜನ್ಮದಿನೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆಯಬೇಕಾದರೆ ಅವರಿಗೆ ಮೂಲಭೂತ ಸೌಕರ್ಯಗಳನ್ನು ನೀಡಿದ್ದಾಗ ಮಾತ್ರ ಶಿಕ್ಷಣ ಮಟ್ಟ ಸುಧಾರಣೆ ಕಾಣಲು ಸಾದ್ಯ ಕಾರಣ ನಮ್ಮ ಅವಧಿಯಲ್ಲಿ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಿಗೆ ಹೆಚ್ಚಿನ ಆದ್ಯತೆ ನೀಡಿ ಆಡಳಿತ ನಡೆಸುತ್ತೇನೆ ಎಂದು ತಿಳಿಸಿದರು.ಆಲಮೇಲ ವೀರಕ್ತಮಠದ ಜಗದೇವ ಮಲ್ಲಿಬೊಮ್ಮಯ್ಯ ಮಹಾಸ್ವಾಮಿಗಳು ಸಾನಿದ್ಯ ವಹಿಸಿ ಮಾತನಾಡಿದರು.ಇದೇ ಸಂದರ್ಭದಲ್ಲಿ ಶಿಕ್ಷಕರ ದಿನೋತ್ಸವ ಸಮಿತಿ…
– ಬಸವರಾಜ ನಂದಿಹಾಳಬಸವನಬಾಗೇವಾಡಿ: ನಾಡಿನಲ್ಲಿ ಶ್ರಾವಣ ಮಾಸದ ಮುಗಿದು ಭಾದ್ರಪದ ಮಾಸ ಆರಂಭವಾಗುತ್ತಿದ್ದಂತೆ ತಾಲೂಕಿನಲ್ಲಿ ಗಣೇಶ ಚತುರ್ಥಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲು ಜನರು ಅಗತ್ಯ ಸಿದ್ಧತೆಯಲ್ಲಿ ತೊಡಗಿಸಿಕೊಂಡಿರುವುದು ಕಂಡುಬರುತ್ತಿದೆ.ಪಟ್ಟಣ ಸೇರಿದಂತೆ ತಾಲೂಕಿನಲ್ಲಿ ಸಾರ್ವಜನಿಕವಾಗಿ ಪ್ರತಿಷ್ಠಾಪಿಸುವ ಜಾಗೆಯನ್ನು ಸ್ವಚ್ಛಗೊಳಿಸುವದು. ಮಂಟಪ ಹಾಕಲು ಬೇಕಾದ ತಯಾರಿ, ಸಿದ್ಧತೆ ಭರದಿಂದ ಸಾಗಿದೆ. ಒಂದು ದಿನ ಕಳೆದರೆ ಸಾಕು ಶನಿವಾರವೇ ಗಣೇಶ ಚತುರ್ಥಿ ಹಬ್ಬ ಇರುವುದರಿಂದಾಗಿ ಗಣಪತಿ ಮೂರ್ತಿಗಳ ತಯಾರಕರು ಈಗಾಗಲೇ ಮೂರ್ತಿಗಳಿಗೆ ಅಂತಿಮ ಸ್ಪರ್ಶ ನೀಡುತ್ತಿದ್ದಾರೆ. ಕೆಲವು ಮೂರ್ತಿಗಳು ಸಿದ್ದಗೊಂಡಿವೆ. ಗಣಪತಿ ಮೂರ್ತಿಗಳ ಖರೀದಿಸುವ ಗ್ರಾಹಕರ ನಿರೀಕ್ಷೆಯಲ್ಲಿ ಕಾಯುತ್ತಿದ್ದಾರೆ.ಹಬ್ಬಕ್ಕೆ ಅಗತ್ಯವಿರುವ ಮಂಟಪಗಳ ಅಲಂಕಾರಿಕ ವಸ್ತುಗಳು, ವಿವಿಧ ವಿನ್ಯಾಸದ ಅಲಂಕಾರಿಕ ವಿದ್ಯುತ್ದೀಪಗಳು ಸೇರಿದಂತೆ ವಿವಿಧ ವಸ್ತುಗಳು ಮಾರುಕಟ್ಟೆ ಲಗ್ಗೆ ಇಟ್ಟಿವೆ. ಜನರು ತಮಗೆ ಬೇಕಾದ ವಸ್ತುಗಳನ್ನು ಖರೀದಿಸುವಲ್ಲಿ ನಿರತರಾಗಿದ್ದಾರೆ. ಗಣೇಶ ಚತುರ್ಥಿಯಂದು ಈ ವಸ್ತುಗಳ ಮಾರಾಟ ಭರಾಟೆ ಜೋರಾಗುತ್ತದೆ.ಪಟ್ಟಣ ಸೇರಿದಂತೆ ಮನಗೂಳಿ, ಮುತ್ತಗಿ ಸೇರಿದಂತೆ ವಿವಿಧೆಡೆಗಳಲ್ಲಿ ಕೆಲವರು ಮಣ್ಣಿನ ಗಣಪತಿ ಮೂರ್ತಿಗಳನ್ನು ಕಳೆದ ಒಂದೂವರೆ ತಿಂಗಳಿಂದ ತಯಾರಿಯಲ್ಲಿ…
ಬಸವನಬಾಗೇವಾಡಿ: ಭಗವಂತ ನಮಗೆ ನೀಡಿದ ಹುದ್ದೆಯಲ್ಲಿ ಯಾವುದೇ ಮುಖವಾಡ ಧರಿಸದೇ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುವ ಮೂಲಕ ಆ ಹುದ್ದೆಗೆ ನ್ಯಾಯ ಒದಗಿಸಿದರೆ ಅದರಲ್ಲಿ ನಾವು ಖಂಡಿತ ಯಶಸ್ಸು ಸಾಧಿಸಬಹುದು ಎಂದು ಧಾರವಾಡ ವಾಣಿಜ್ಯ ತೆರಿಗೆ ಇಲಾಖೆಯ ಉಪಆಯುಕ್ತ ಶಂಕರ ಬೆಳ್ಳುಬ್ಬಿ ಹೇಳಿದರು.ಪಟ್ಟಣದ ಬಸವ ಭವನದಲ್ಲಿ ತಾಲೂಕಾಡಳಿತ, ಕ್ಷೇತ್ರಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಸಹಯೋಗದಲ್ಲಿ ಗುರುವಾರ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಹಾಗೂ ನಿವೃತ್ತ ಶಿಕ್ಷಕರ ಸನ್ಮಾನ ಸಮಾರಂಭದಲ್ಲಿ ಉಪನ್ಯಾಸ ನೀಡಿ ಮಾತನಾಡಿದ ಅವರು, ನಾವು ಯಾವುದೇ ಹುದ್ದೆಯಲ್ಲಿ ಕಾರ್ಯನಿರ್ವಹಿಸಿದರೂ ಆ ಹುದ್ದೆಗೆ ಮೋಸವಾಗದಂತೆ ಕಾರ್ಯ ಮಾಡುವುದು ಬಹು ಮುಖ್ಯ. ಶಿಕ್ಷಕ ಬಾಂಧವರ ಮೇಲೆ ಸಮಾಜದ ನಿರೀಕ್ಷೆ ಬಹಳಷ್ಟಿದೆ. ಶಿಕ್ಷಕರಲ್ಲಿರುವ ಅದ್ಭುತ ಶಕ್ತಿಯಿಂದಾಗಿ ಮಕ್ಕಳು ರಾಷ್ಟ್ರಪತಿ, ಪ್ರಧಾನಿ ಹುದ್ದೆ, ಮುಖ್ಯಮಂತ್ರಿ ಹುದ್ದೆ ಸೇರಿದಂತೆ ಯಾವುದೇ ಹುದ್ದೆಗಳನ್ನು ಪಡೆದುಕೊಳ್ಳಬಹುದು. ಎಲ್ಲ ವೃತ್ತಿಗಿಂತಲೂ ಶಿಕ್ಷಕ ವೃತ್ತಿಯಲ್ಲಿ ಸಂತೃಪ್ತಿ ಸಿಗುತ್ತದೆ. ಶಿಕ್ಷಕರಿಗೆ ಸಮಾಜ ಸುಧಾರಣೆ ಮಾಡುವ ಶಕ್ತಿಯಿದೆ. ಶಿಕ್ಷಕರು ಕೇವಲ ಬಿಲ್-ಬೆಲ್ಗಾಗಿ ಕಾರ್ಯನಿರ್ವಹಿಸುವಂತಾಗಬಾರದು. ಮಕ್ಕಳ ಭವಿಷ್ಯವನ್ನು ರೂಪಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುವಂತಾಗಬೇಕೆಂದರು.ತಹಸೀಲ್ದಾರ…
