ಮುದ್ದೇಬಿಹಾಳ: ಪತ್ರಿಕಾ ವಿತರಕರು ಮಳೆ, ಗಾಳಿ, ಚಳಿ ಎನ್ನದೇ ದಿನನಿತ್ಯ ತಮ್ಮ ಕರ್ತವ್ಯದಲ್ಲಿ ತೊಡಗಿದ್ದರಿಂದಲೇ ಇಂದು ಪತ್ರಿಕೆಗಳು ಜೀವಂತವಾಗಿವೆ ಎಂದು ಕಾನಿಪ ಸಂಘದ ಹಿರಿಯ ಸದಸ್ಯ ಎಚ್.ಆರ್.ಬಾಗವಾನ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ವಿಶ್ವ ಪತ್ರಿಕಾ ವಿತರಕರ ದಿನಾಚರಣೆ ಕುರಿತು ಹಮ್ಮಿಕೊಳ್ಳಲಾಗಿದ್ದ ಪತ್ರಿಕಾ ವಿತರಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಪತ್ರಿಕಾ ವಿತರಕರು ತಮ್ಮ ನಿತ್ಯದ ಕಾರ್ಯದಲ್ಲಿ ತೊಡಗದಿದ್ದರೆ ಇಂದು ವರದಿಗಾರರು ಸುದ್ದಿ ಬರೆಯುವದು ಮಾತ್ರವಲ್ಲದೇ ಪತ್ರಿಕೆಗಳನ್ನು ಮನೆಗಳಿಗೆ ತಲುಪಿಸುವ ಸಂದರ್ಭ ಎದುರಾಗುತ್ತಿತ್ತು. ಸಧ್ಯ ಪತ್ರಿಕಾ ವಿತರಕರಿಗೂ ಹಲವು ಸೌಲಭ್ಯಗಳನ್ನು ಸರ್ಕಾರ ನೀಡುತ್ತಿದ್ದು ಅವುಗಳ ಸದ್ಬಳಕೆ ಮಾಡಿಕೊಳ್ಳುವಂತೆ ಸಲಹೆ ನೀಡಿದರು.
ಸದಸ್ಯ ಚೇತನ ಶಿವಶಿಂಪಿ ವಕೀಲರು ಮಾತನಾಡಿ, ಪತ್ರಿಕೆ ವಿತರಕರು ಪತ್ರಿಕೆಯ ಜೀವಾಳ. ಪ್ರತಿ ದಿನ ನಸುಕಿನ ಜಾವ ಬೇಗ ಬಂದು ಪತ್ರಿಕೆಗಳನ್ನು ಹೊಂದಿಸಿಕೊಂಡು ಮನೆ ಮನೆಗೆ ತಲುಪಿಸುವ ಕಾಯಕ ನಿಷ್ಟೆಯನ್ನು ಸ್ಮರಿಸುವೆ. ವರದಿಗಾರರಾದ ನಾವು ವಿತರಕರ ಮೇಲೆ ಭಾರ ಹಾಕಿ ನಮ್ಮ ಕಾರ್ಯಗಳಲ್ಲಿ ತೊಡಗಿದರೆ, ವಿತರಕರು ನಮ್ಮ ನಂಬಿಕೆಗೆ ಧಕ್ಕೆ ಬಾರದಂತೆ ಸರಿಯಾಗಿ ಪತ್ರಿಕೆಗಳನ್ನು ವಿತರಣೆ ಮಾಡುತ್ತಿರುವದರಿಂದಲೇ ೫ಜಿ ಯುಗದಲ್ಲೂ ಪತ್ರಿಕೆಗಳು ತಮ್ಮ ಮೌಲ್ಯ ಕಳೆದುಕೊಂಡಿಲ್ಲ ಎಂದರು.
ಮತ್ತೋರ್ವ ಸದಸ್ಯ ಪುಂಡಲೀಕ ಮುರಾಳ, ರಾಜ್ಯ ಕಾರ್ಯಕಾರಿಣಿ ಸದಸ್ಯ ಡಿ.ಬಿ.ವಡವಡಗಿ ಮಾತನಾಡಿದರು.
ವಿವಿಧ ಪತ್ರಿಕೆಗಳ ವಿತರಕರಾದ ಮಲ್ಲು ಬಾಗೇವಾಡಿ, ಸುರೇಶ ಆಲೂರ, ಸದ್ದಾಂ ನದಾಫ, ಸಿಕಂದರ ನದಾಫ, ಶ್ರೀಶೈಲ ಹೆಬ್ಬಾಳ, ಶಂಕರ ನಾಯಕಮಕ್ಕಳ ಇವರುಗಳನ್ನ ಸಿಹಿ ತಿನ್ನಿಸಿ ಸನ್ಮಾನಿಸಿ ಗೌರವಿಸಲಾಯಿತು. ಸಂಘದ ಅಧ್ಯಕ್ಷ ಮುತ್ತಣ್ಣ ವಡವಡಗಿ ಅಧ್ಯಕ್ಷತೆ ವಹಿಸಿದ್ದರು.
ಸಿದ್ದು ಚಲವಾದಿ, ಮಕಬುಲ ಬನ್ನೆಟ್ಟಿ, ಲಾಡ್ಲೇಮಶಾಕ ನದಾಫ, ಬಸವರಾಜ ಕುಂಬಾರ, ಕೃಷ್ಣ ಕುಂಬಾರ ಇದ್ದರು.
ಸಂಘದ ಪ್ರ.ಕಾರ್ಯದರ್ಶಿ ರವಿ ನಂದೆಪ್ಪನವರ ಕಾರ್ಯಕ್ರಮವನ್ನು ನಿರ್ವಹಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

