Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಉದಯರಶ್ಮಿ ಇಂದಿನ ದಿನಪತ್ರಿಕೆ ಏಪ್ರಿಲ್ 19, 2026

ಸರ್ಕಾರಿ ಯೋಜನೆಗಳಿಂದ ಬದುಕು ರೂಪಿಸಿಕೊಳ್ಳಿ :ಇಂಡಿ

ನಮ್ಮ ಪರಂಪರೆ ಸಂರಕ್ಷಿಸುವ ಜವಾಬ್ದಾರಿ ನಮ್ಮದು :ಡಾ.ಮಯೂರ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಸಿಂದಗಿ ಪುರಸಭೆ ಅಧ್ಯಕ್ಷ ಪಟ್ಟದ ಮಾಲೆ ಯಾರ ಕೊರಳಿಗೆ?
(ರಾಜ್ಯ ) ಜಿಲ್ಲೆ

ಸಿಂದಗಿ ಪುರಸಭೆ ಅಧ್ಯಕ್ಷ ಪಟ್ಟದ ಮಾಲೆ ಯಾರ ಕೊರಳಿಗೆ?

By Updated:No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

– ಮಹಾಂತೇಶ ನೂಲಾನವರ
ಸಿಂದಗಿ: ಹಲವು ತಿಂಗಳುಗಳಿಂದ ಇಂಡಿ ಉಪ ವಿಭಾಗಾಧಿಕಾರಿ ಅಬೀದ್ ಗದ್ಯಾಳ ಅವರು ಆಡಳಿತಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಸಿಂದಗಿ ಪುರಸಭೆಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಸ್ಥಾನಕ್ಕೆ ಮೀಸಲು ಪ್ರಕಟ ಮಾಡಿ ಸರ್ಕಾರ ಆದೇಶ ಹೋರಡಿಸಿದೆ. ಪುರಸಭೆಗೆ ಮೀಸಲು ಪ್ರಕಟವಾಗುತ್ತಿದಂತೆ ಬಿಜೆಪಿ3, ಜೆಡಿಎಸ್6, ಪಕ್ಷೇತರ3, ಕಾಂಗ್ರೆಸ್11 ಸದಸ್ಯರಲ್ಲಿ ಯಾರಾಗ್ತಾರೆ ಅಧ್ಯಕ್ಷ ಎಂಬ ಕೂತೂಹಲ ಸಾರ್ವಜನಿಕರಲ್ಲಿ ಮೂಡಿದೆ.
ಪಟ್ಟಣದ ಮುಂದಿನ ಅವಧಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಸ್ಥಾನಕ್ಕೆ ಮೀಸಲು ಪ್ರಕಟಗೋಳುತ್ತಿದಂತೆ ಸದಸ್ಯರ ನಡುವೆ ಹಲವಾರು ಹೊಂದಾಣಿಕೆಯ ಮಾತುಕತೆಗಳು ಪ್ರಾರಂಭಗೊಂಡಿವೆ. ಅಧ್ಯಕ್ಷ ಮತ್ತು ಉಪಾಧ್ಯಕ್ಷ ಎರಡು ಇತರೆ ಮೀಸಲಾತಿ ಪ್ರಕಟಗೊಂಡಿರುವುದರಿಂದ 23 ಸದಸ್ಯರಿಗೂ ಅಧ್ಯಕ್ಷರಾಗುವ ಅವಕಾಶವಿದೆ. ಬಲಾ-ಬಲ ನೋಡಿದರೆ ಜೆಡಿಎಸ್ ನ 6 ಸದಸ್ಯರಲ್ಲಿ ಮಾಜಿ ಅಧ್ಯಕ್ಷ ಡಾ.ಶಾಂತವೀರ ಮನಗೂಳಿ ಹಾಗೂ ಶಾಂತವೀರ ಬಿರಾದಾರ ಇವರ ಮಧ್ಯ ಪ್ರಬಲ ಪೈಪೋಟಿ ನಡೆಯುತ್ತಿದ್ದು, ಶಾಸಕ ಅಶೋಕ ಮನಗೂಳಿ ಅವರು ತಮ್ಮ ತಮ್ಮನಿಗೆ ಬೆಂಬಲ ಸೂಚಿಸುತ್ತಾರೋ ಅಥವಾ ಅಳಿಯನಿಗೆ ಬೆಂಬಲಿಸುತ್ತಾರೋ ಎಂಬುದು ಕುತೂಹಲವಾಗಿದೆ.
ಇದರ ಮಧ್ಯ ಶಾಸಕರ ಆಪ್ತರಾದ ವಾರ್ಡ್ ನಂ 10ರ ಬಣಜಿಗ ಸಮಾಜದ ಸದಸ್ಯೆ ಪಾರ್ವತಿ ಗುರಪ್ಪ ದುರ್ಗಿ ಅವರೇ ಸುಮಾರು ದಿನಗಳಿಂದ ಹಲವಾರು ಜನರಲ್ಲಿ ಮುಂದಿನ ಅಧ್ಯಕ್ಷರು ಎಂಬ ಮಾತು ಹರಿದಾಡುತ್ತಿತ್ತು.
ಇನ್ನೋರ್ವ ಪುರಸಭೆ ಸದಸ್ಯ ಸಂದೀಪ ಚೌರ ಶಾಸಕರೊಂದಿಗೆ ಚುನಾವಣೆಯಲ್ಲಿ ಪ್ರಬಲವಾಗಿ ನಿಂತಿದ್ದು, ಇತರೆ ವರ್ಗದ ಮೀಸಲಾತಿಯಲ್ಲಿ ದಲಿತರನ್ನು ಅಧ್ಯಕ್ಷರಾಗಿಸಿ. ಮಾಜಿ ಶಾಸಕ ರಮೇಶ ಭೂಸನೂರ ಅವರು ಚುನಾವಣೆ ಸಂದರ್ಭದಲ್ಲಿ ತಾಪಂ ಇತರೆ ವರ್ಗದ ಮಿಸಲಾತಿಯಲ್ಲಿ ದಲಿತ ಸಮಾಜದ ಗುಂಡು ಮೇಲಿನಮನಿ ಅವರಿಗೆ ಅಧ್ಯಕ್ಷ ಮಾಡಿರುವುದು ನನ್ನ ಕೊಡುಗೆ ಎಂದು ದಲಿತ ಸಮಾಜದ ಓಟು ಕೇಳುವುದು ಕಂಡು ಬಂದಿತ್ತು. ಆದರೂ ದಲಿತರು ಪ್ರಬಲವಾಗಿ ಕಾಂಗ್ರೆಸ್ ಬೆಂಬಲಿಸಿದ್ದರು. ಹೀಗಾಗಿ ಶಾಸಕರ ನಡೆ ಇತ್ತ ವಾಲಿದರೂ ಅಚ್ಚರಿಯಿಲ್ಲ.
ಈಗಾಗಲೇ ಶಾಸಕ ಮನಗೂಳಿ ನೇತೃತ್ವದಲ್ಲಿ ಒಂದು ಸುತ್ತಿನ ಸಭೆ ನಡೆದಿದ್ದು, ಪುರಸಭೆ ಸದಸ್ಯರಾದ ಭೀಮಾ ಕಲಾಲ, ಬಾಷಾಸಾಬಾ ತಾಂಬೋಳಿ, ರಾಜಣ್ಣ ನಾರಾಯಣಕರ, ಹಣಮಂತ‌ ಸುಣಗಾರ, ಬಸವರಾಜ ಯರನಾಳ, ಗೋಲ್ಲಾಳ ಬಂಕಲಗಿ, ಹಾಸೀಂ ಆಳಂದ, ಶ್ರೀಶೈಲ ಭೀರಗೊಂಡ, ಶಾಂತವೀರ ಮನಗೂಳಿ, ಶಾಂತವೀರ ಬಿರಾದಾರ, ಸಂದೀಪ್ ಚೌರ ಹಾಗೂ ಪ್ರತಿನಿಧಿಗಳಾದ ಶರಣಪ್ಪ ಸುಲ್ಪಿ, ವಿರೇಶ ದುರ್ಗಿ, ಆನಂದ ಡೋಣುರ, ಅಬೀದ ಮುಲ್ಲಾ, ನಾಯ್ಕೋಡಿ, ಹಣಮಂತ ಸುಣಗಾರ ಹಾಗೂ ಶಾಂತವೀರ ಮನಗೂಳಿ ಅಧ್ಯಕ್ಷರಾಗುವ ಅಭಿಲಾಷೆ ವ್ಯಕ್ತಪಡಿಸಿದ್ದಾರೆ.
ನನಗೆ ಹಿಂದೆಯೂ ಅಧ್ಯಕ್ಷನಾಗಬೇಕಿತ್ತು ಆದರೆ ಆಗಲಿಲ್ಲ. ಈ ಬಾರಿಯಾದರು ನನಗೆ ಅವಕಾಶ ನೀಡಿ ಎಂದು ಶಾಂತವೀರ ಬಿರಾದಾರ ಮನವಿ ಮಾಡಿಕೊಂಡಿದ್ದಾರೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.
ಸೆ.09ರಂದು ಚುನಾವಣೆ ಜರುಗಲಿದೆ. ಯಾರಾಗುವರು ಪುರಸಭೆಯ ಮುಂದಿನ ಪುರಪುತ್ರ ಎಂಬುದು ಸಾರ್ವಜನಿಕ ಮನದಲ್ಲಿ ಮನೆಮಾಡಿದೆ.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಉದಯರಶ್ಮಿ ಇಂದಿನ ದಿನಪತ್ರಿಕೆ ಏಪ್ರಿಲ್ 19, 2026

ಸರ್ಕಾರಿ ಯೋಜನೆಗಳಿಂದ ಬದುಕು ರೂಪಿಸಿಕೊಳ್ಳಿ :ಇಂಡಿ

ನಮ್ಮ ಪರಂಪರೆ ಸಂರಕ್ಷಿಸುವ ಜವಾಬ್ದಾರಿ ನಮ್ಮದು :ಡಾ.ಮಯೂರ

ವಿಜಯಪುರ ಲೋಕಾಯುಕ್ತ ಬಲೆಗೆ ಸರ್ಕಾರಿ ಸಿಬ್ಬಂದಿ!

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಉದಯರಶ್ಮಿ ಇಂದಿನ ದಿನಪತ್ರಿಕೆ ಏಪ್ರಿಲ್ 19, 2026
    In ದಿನಪತ್ರಿಕೆ
  • ಸರ್ಕಾರಿ ಯೋಜನೆಗಳಿಂದ ಬದುಕು ರೂಪಿಸಿಕೊಳ್ಳಿ :ಇಂಡಿ
    In (ರಾಜ್ಯ ) ಜಿಲ್ಲೆ
  • ನಮ್ಮ ಪರಂಪರೆ ಸಂರಕ್ಷಿಸುವ ಜವಾಬ್ದಾರಿ ನಮ್ಮದು :ಡಾ.ಮಯೂರ
    In (ರಾಜ್ಯ ) ಜಿಲ್ಲೆ
  • ವಿಜಯಪುರ ಲೋಕಾಯುಕ್ತ ಬಲೆಗೆ ಸರ್ಕಾರಿ ಸಿಬ್ಬಂದಿ!
    In (ರಾಜ್ಯ ) ಜಿಲ್ಲೆ
  • ನಮ್ಮ ನಿಸ್ವಾರ್ಥ ಸತ್ಕಾರ್ಯಗಳು ನಮ್ಮನ್ನು ಕಾಪಾಡುತ್ತವೆ :ಡಾ.ಗೀತಾ
    In (ರಾಜ್ಯ ) ಜಿಲ್ಲೆ
  • ಏ.೨೪ಕ್ಕೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ
    In (ರಾಜ್ಯ ) ಜಿಲ್ಲೆ
  • ಪ್ರತಿಷ್ಠಿತ ಶಾಲೆ ಪ್ರವೇಶಕ್ಕೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನ
    In (ರಾಜ್ಯ ) ಜಿಲ್ಲೆ
  • ಏ.೨೨ರಂದು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ
    In (ರಾಜ್ಯ ) ಜಿಲ್ಲೆ
  • ಏ.೨೨ರಿಂದ ಸಿಇಟಿ ಪ್ರರೀಕ್ಷೆ: ಸುಸೂತ್ರ ನಡೆಸಲು ಎಡಿಸಿ ಸೂಚನೆ
    In (ರಾಜ್ಯ ) ಜಿಲ್ಲೆ
  • ಹ್ಯಾಂಡ್ ಪೋಸ್ಟ್ ಟು ಕೋಟೆ ಜೋಡಿ ರಸ್ತೆ- ಹೈಟೆಕ್ ಪಾರ‍್ಕ್ ನಿರ‍್ಮಾಣ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.