Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಆಮ್ ಆದ್ಮಿ ಪಾರ್ಟಿ ವಿಜಯಪುರ ಜಿಲ್ಲಾಧ್ಯಕ್ಷ ಭೋಗೇಶ್ ಸೋಲಾಪುರ್ ಆಗ್ರಹ *ಉದಯರಶ್ಮಿ ದಿನಪತ್ರಿಕೆ ವಿಜಯಪುರ: ‘ಸತ್ಯಮೇವ ಜಯತೆ’ ಎನ್ನುವುದು ಮತ್ತೆ ಸಾಬೀತಾಗಿದೆ. ಅರವಿಂದ್ ಕೇಜ್ರಿವಾಲ್ ಅವರ ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಿದ್ದು, ಬಿಜೆಪಿಯ ನಿರಂಕುಶ ಆಡಳಿತ, ಸರ್ವಾಧಿಕಾರಿ ವರ್ತನೆಗೆ ಸುಪ್ರೀಂಕೋರ್ಟ್ ಛೀಮಾರಿ ಹಾಕಿದೆ. ಸಿಬಿಐ ಬಳಸಿಕೊಂಡು ಸುಳ್ಳು ಆರೋಪ ಮಾಡಿ ಅರವಿಂದ್ ಕೇಜ್ರಿವಾಲ್ ಅವರನ್ನು ಬಂಧಿಸಿದ್ದ ಕೇಂದ್ರ ಗೃಹಸಚಿವ ಅಮಿತ್ ಶಾ ಕೂಡಲೇ ರಾಜೀನಾಮೆ ಕೊಡಬೇಕು ಎಂದು ಆಮ್ ಆದ್ಮಿ ಪಾರ್ಟಿ ವಿಜಯಪುರ ಜಿಲ್ಲಾಧ್ಯಕ್ಷ ಭೋಗೇಶ್ ಸೋಲಾಪುರ್ ಆಗ್ರಹಿಸಿದ್ದಾರೆ.ಆಮ್ ಆದ್ಮಿ ಪಾರ್ಟಿ ಸಂಚಾಲಕ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಸುಪ್ರೀಂ ಕೋರ್ಟ್ ಜಾಮೀನು ಮಂಜೂರು ಮಾಡಿದ ಹಿನ್ನಲೆಯಲ್ಲಿ ಸುಕ್ರವಾರ ನಗರದ ಪಕ್ಷದ ಕಚೇರಿಯಲ್ಲಿ ಸಂಭ್ರಮಾಚರಣೆ ನಡೆಸಿದ ಸಂದರ್ಭದಲ್ಲಿ ಮಾತನಾಡಿದ ಭೋಗೇಶ್ ಸೋಲಾಪುರ್ ಅವರು, ಸುಪ್ರೀಂ ಕೋರ್ಟ್‌ನಲ್ಲಿ ಸತ್ಯಕ್ಕೆ ಗೆಲುವು ಸಿಕ್ಕಿದೆ. ಪ್ರಾಮಾಣಿಕತೆಗೆ ಎಂದೂ ಸೋಲಿಲ್ಲ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ ಎಂದರು.ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಸಿಬಿಐ ಸಂಸ್ಥೆಯನ್ನು ಪಂಜರದ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಈ ದೇಶದ ಯಾರೊಬ್ಬರು ಹಸಿವಿನಿಂದ ಸಾಯಬಾರದು ಎಂದು ಅನ್ನಭಾಗ್ಯ ಯೋಜನೆಯನ್ನು ತಂದಿದ್ದಾರೆ. ಆದರೆ ಆಹೇರಿ(ಜ) ಗ್ರಾಮದ ದಿನಸಿ ಹಂಚುವ ವಿತರಕರು ಫಲಾನುಭವಿಗಳಿಂದ ಹೆಬ್ಬೆಟ್ಟು ಒತ್ತಿಸಿಕೊಂಡು ಮುಂದಿನ ತಿಂಗಳ ಬನ್ನಿ ಎಂದು ೨-೩ ತಿಂಗಳಿನಿಂದ ದಿನಸಿ ಕೊಡದೇ ಮುಂದೆ ಹಾಕುತ್ತಿದ್ದಾರೆ. ಹೆಚ್ಚಿಗೆ ಕೇಳಿದರೆ ನಿಮ್ಮ ರೇಷನ್ ಕಾರ್ಡ ರದ್ದು ಪಡಿಸುವುದಾಗಿ ಹೇಳಿರುತ್ತಾರೆ. ಕಾರಣ ಇವರ ವಿತರಣಾ ಲೈಸನ್ಸ್ ರದ್ದು ಮಾಡಿ ಬೇರೆಯವರಿಗೆ ವಹಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಆಹಾರ, ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಜಿಲ್ಲಾ ವ್ಯವಸ್ಥಾಪಕ ವಿನಯಕುಮಾರ ಪಾಟೀಲ ಅವರಿಗೆ ಮನವಿ ಸಲ್ಲಿಸಿದರು.ಈ ವೇಳೆ ರೈತ ಸಂಘದ ತಾಲೂಕಾ ಅಧ್ಯಕ್ಷ ಮಹಾದೇವಪ್ಪ ತೇಲಿ, ಆಹೇರಿ ಗ್ರಾಮದ ರೈತ ಸಂಘದ ಅಧ್ಯಕ್ಷ ಆತ್ಮಾನಂದ ಭೈರೋಡಗಿ ಮಾತನಾಡಿ, ಈ ವಿತರಕರು ಪ್ರತಿ ತಿಂಗಳು ೮೦-೧೦೦ ಜನರಿಗೆ ರೇಷನ್ ಖಾಲಿ ಆಗಿದೆ, ಮೇಲಿನಿಂದಲೇ ಕಡಿಮೆ ಕಳುಹಿಸಿದ್ದಾರೆ, ಮುಂದಿನ ತಿಂಗಳು ಬನ್ನಿ…
ಬಸವನಬಾಗೇವಾಡಿ: ಪಟ್ಟಣದ ವೀರಭದ್ರೇಶ್ವರ ನಗರದ ನಿವಾಸಿ ಕಂದಾಯ ಇಲಾಖೆ ನಿವೃತ್ತ ನೌಕರ ಸಾಹೇಬಗೌಡ ನಿಂಗಪ್ಪ ನಂದಿಹಾಳ(76) ಶುಕ್ರವಾರ ಬೆಳಗ್ಗೆ ನಿಧನರಾದರು.ಮೃತರಿಗೆ ಪತ್ನಿ, ಪತ್ರಕರ್ತ ಬಸವರಾಜ ನಂದಿಹಾಳ ಸೇರಿ ಇಬ್ಬರು ಪುತ್ರರು, ಓರ್ವ ಪುತ್ರಿ ಸೇರಿದಂತೆ ಅಪಾರ ಬಂಧು-ಬಳಗವನ್ನು ಆಗಲಿದ್ದಾರೆ.
ವಿಜಯಪುರ: ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಕಪಿಲ್ ಶಾಲೆಯ ಸಂಯುಕ್ತ ಆಶ್ರಯದಲ್ಲಿ ನಡೆದ ಪ್ರೌಢಶಾಲೆಗಳ ಮೇಲಾಟದ ಸ್ಪರ್ಧೆಗಳಲ್ಲಿ ಬಸವರಾಜ್ ಕರಡಿ ೩೦೦೦ ಮೀಟರ್ ಓಟ ಪ್ರಥಮ ೧೫೦೦ ಮೀಟರ್ ಓಟ ಪ್ರಥಮ ಹಾಗೂ ೧೦೦ ಮೀಟರ್ ಓಟದಲ್ಲಿ ದ್ವೀತಿಯ ಸ್ಥಾನ ಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾನೆ.ವಿದ್ಯಾರ್ಥಿ ಸಾಧನೆಗೆ ಬಿ ಎಲ್ ಡಿ ಇ ಸಂಸ್ಥೆಯ ಅದ್ಯಕ್ಷರು ಹಾಗೂ ಕರ್ನಾಟಕ ರಾಜ್ಯದ ಬೃಹತ್ ಮದ್ಯಮ ಕೈಗಾರಿಕಾ ಸಚಿವ ಡಾ.ಎಂ ಬಿ ಪಾಟೀಲ ಹಾಗೂ ಆಡಳಿತಾಧಿಕಾರಿ ಆಯ್ ಎಸ್ ಕಾಳಪ್ಪನವರ. ಉಪ, ಪ್ರಾಂಶುಪಾಲ, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಅಭಿನಂದಿಸಿದ್ದಾರೆ ಎಂದು ದೈಹಿಕ ಶಿಕ್ಷಣ ಶಿಕ್ಷಕ ಕೆ ವಿ ಒಡೆಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ
ಉದಯರಶ್ಮಿ ದಿನಪತ್ರಿಕೆ ವಿಜಯಪುರ : ಸಾರ್ವಜನಿಕ ಶಿಕ್ಷಣ ಇಲಾಖೆ ವಿಜಯಪುರ, ಜಿಲ್ಲಾಡಳಿತ ಹಾಗೂ ಕಪಿಲ್ ಶಾಲೆ ಸಂಯುಕ್ತ ಆಶ್ರಯದಲ್ಲಿ ನಡೆದ ವಿಜಯಪುರ ನಗರ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ೧೭ ವರ್ಷದ ಬಾಲಕರ ಕಬಡ್ಡಿ ಪಂದ್ಯಾವಳಿಯಲ್ಲಿ ಅಭಿನವ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.ಈ ಸಮಯದಲ್ಲಿ ತಾಲೂಕ ದೈಹಿಕ ಶಿಕ್ಷಣಾಧಿಕಾರಿ ಬಿರಾದಾರ, ಅಭಿನವ ವಿದ್ಯಾಸಂಸ್ಥೆಯ ಅಧ್ಯಕ್ಷ ಮೋಹನ್ ದಳವಾಯಿ, ಆಡಳಿತ ಅಧಿಕಾರಿ ಪರಶುರಾಮ ಸಿದ್ದಾಪೂರ, ದೈಹಿಕ ಶಿಕ್ಷಕರು ಹಾಗೂ ತಂಡದ ತರಬೇತಿದಾರ ಚನ್ನಪ್ಪ ಸೈದಾಪೂರ, ತಂಡದ ನಾಯಕ ಸಾಗರ ಕೊಡಗರೆ, ಬಸವರಾಜ ಬೇನೂರ, ಮಕಾನದಾರ ಸರ್, ರಮೇಶ ಪಾಟೀಲ್, ಒಡೆಯರ್ ಸರ್, ಇನ್ನಿತರರು ಉಪಸ್ಥಿತರಿದ್ದರು.
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಸಾರ್ವಜನಿಕ ಶಿಕ್ಷಣ ಇಲಾಖೆ ವಿಜಯಪುರ, ಜಿಲ್ಲಾಡಳಿತ ಹಾಗೂ ಕಪಿಲ್ ಶಾಲೆ ಸಂಯುಕ್ತ ಆಶ್ರಯದಲ್ಲಿ ನಡೆದ ವಿಜಯಪುರ ನಗರ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ೧೭ ವರ್ಷದ ಬಾಲಕಿಯರ ಕಬಡ್ಡಿ ಪಂದ್ಯಾವಳಿಯಲ್ಲಿ ಶ್ರೀ ರೇವಣಸಿದ್ದೇಶ್ವರ ಪ್ರಾಥಮಿಕ ಮತ್ತು ಪ್ರೌಢಶಾಲೆ, ಆದರ್ಶ ನಗರ, ವಿಜಯಪುರ ಈ ಶಾಲೆಯು ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದೆ.ಈ ಸಮಯದಲ್ಲಿ ತಾಲೂಕ ದೈಹಿಕ ಶಿಕ್ಷಣಾಧಿಕಾರಿ ಬಿರಾದಾರ, ಗ್ರಾಮೀಣ ವಿಕಾಸ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು, ಆಡಳಿತ ಅಧಿಕಾರಿ ಪರಶುರಾಮ ಸಿದ್ದಾಪೂರ, ದೈಹಿಕ ಶಿಕ್ಷಕ ಒಡೆಯರ್, ತಂಡ ತರಬೇತಿದಾರ ಚನ್ನಪ್ಪ ಸೈದಾಪೂರ, ತಂಡದ ನಾಯಕಿ ರಕ್ಷಿತಾ ಅಂಬಿಗೇರ, ಬಸವರಾಜ ಬೇನೂರ, ಬಂಗಾರೆಪ್ಪ ಒಡೆಯರ್, ಮಕಾನದಾರ ಸರ್, ರಮೇಶ ಪಾಟೀಲ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
– ವೀಣಾ ಹೇಮಂತ್ ಗೌಡ ಪಾಟೀಲ್,ಮುಂಡರಗಿ – ಗದಗ ಕುರುವಂಶದ ಧೃತರಾಷ್ಟ್ರನ ಮಕ್ಕಳು 100 ಜನ ಕೌರವರು ಮತ್ತು ಪಾಂಡು ಮಹಾರಾಜನ ಐದು ಜನ ಮಕ್ಕಳಾದ ಪಾಂಡವರ ನಡುವೆ ನಡೆದ ಕುರುಕ್ಷೇತ್ರ ಯುದ್ಧ, ಮಹಾಭಾರತದ ಕಥೆ ನಮಗೆಲ್ಲಾ ಗೊತ್ತಿದೆಯಷ್ಟೇ. ಇದರಲ್ಲಿ ಬರುವ ಹಲವಾರು ಪಾತ್ರಗಳು ನಮ್ಮಲ್ಲಿಯೂ ಮನೆ ಮಾಡಿವೆ ಎಂದರೆ ನಾವು ನಂಬಲೇಬೇಕು. ಅದು ಹೇಗೆ ಅಂತೀರಾ?ನೂರು ಜನ ಕೌರವ ಪುತ್ರರು ನಮ್ಮಲ್ಲಿರುವ ನೂರಾರು ಋಣಾತ್ಮಕ ವಿಷಯಗಳ ಚಿಂತನೆಗಳು. ಸಿಟ್ಟು, ಸೆಡವು, ಕಷ್ಟ,ಅಸಹನೆ, ಅಸಮಾಧಾನ, ಅತೃಪ್ತಿ, ಅವಿಶ್ವಾಸ, ಅಸಂತೋಷ, ಕುಹಕತೆ ವಿದ್ರೋಹ ಹೀಗೆ ಹತ್ತು ಹಲವು ಋಣಾತ್ಮಕ ವಿಷಯಗಳನ್ನು ನಾವು ಹೊಂದಿರುತ್ತೇವೆ.ನಮ್ಮ ದೇಹದಲ್ಲಿರುವ ಮೆದುಳು ಅಂಧ ಕುರು ಮಹಾರಾಜ ದೃತರಾಷ್ಟ್ರನಿದ್ದಂತೆ.ಅದಕ್ಕೆ ಕಣ್ಣು ಕಿವಿ ಸ್ಪರ್ಶ ಯಾವುದು ಇರುವುದಿಲ್ಲ… ಕೇವಲ ಗ್ರಹಿಕೆಯನ್ನು ಮಾತ್ರ ಹೊಂದಿರುವ ದೃತರಾಷ್ಟ್ರ ನಂತಹ ಮೆದುಳನ್ನು ಈ ನೂರಾರು ಋಣಾತ್ಮಕ ವಿಷಯಗಳು ನಮ್ಮಲ್ಲಿನ ಶಕ್ತಿಯನ್ನು ಬಸಿದು ಹೋಗುವಂತೆ ಹಿಂಡಿ ಹಿಪ್ಪೆ ಮಾಡುತ್ತವೆ, ಮಾನಸಿಕವಾಗಿ ದೈಹಿಕವಾಗಿ ನಮ್ಮನ್ನು ಕುಗ್ಗಿಸುತ್ತವೆ. ಋಣಾತ್ಮಕ ವಿಷಯಗಳ…
Udayarashmi kannada daily newspaper
ಸ್ಲಂ ಅಭಿವೃದ್ಧಿ ಸಮಿತಿ ಒಕ್ಕೂಟ ಮತ್ತು ವಿಜಯಪುರ ಜನ ವೇದಿಕೆ ನೇತೃತ್ವದಲ್ಲಿ ಪ್ರತಿಭಟನೆ ಉದಯರಶ್ಮಿ ದಿನಪತ್ರಿಕೆ. ವಿಜಯಪುರ: ಸ್ಲಂ ಘೋಷಣೆ, ಮನೆಗಳ ಹಕ್ಕು ಪತ್ರ ವಿತರಣೆ ಮಾಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ನಗರದ ಸ್ಲಂ ನಿವಾಸಿಗಳು ಬಿಜಾಪುರ ನಗರ ಸ್ಲಂ ಅಭಿವೃದ್ಧಿ ಸಮಿತಿ ಒಕ್ಕೂಟ ಮತ್ತು ವಿಜಯಪುರ ಜನ ವೇದಿಕೆ (ಸಿ.ಸಿ.ಎಫ್.ಎಫ್) ನೇತೃತ್ವದಲ್ಲಿ ಗುರುವಾರ ಇಲ್ಲಿನ ಮನಗೂಳಿ ರಸ್ತೆಯಲ್ಲಿರುವ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಕಚೇರಿ ಆವರಣದಲ್ಲಿ ಒಂದು ದಿನದ ಸಾಂಕೇತಿಕ ಧರಣಿ ನಡೆಸಿದರು.ನಗರದ ಕೊಳಗೇರಿ ಪ್ರದೇಶದಲ್ಲಿ ಸ್ಲಂ ಅಭಿವೃದ್ಧಿ ಕಾರ್ಯಗಳು ಬಹಳ ವಿಳಂಬವಾಗಿ ನಡೆಯುತ್ತಿವೆ. ಈ ಕಾರ್ಯ ತ್ವರಿತಗತಿಯಲ್ಲಿ ನಡೆಯಬೇಕು. ಸ್ಲಂ ನಿವಾಸಿಗಳಿಗೆ ಆದಷ್ಟು ಬೇಗ ಮನೆಗಳ ಹಕ್ಕುಪತ್ರ ನೀಡಬೇಕು ಎಂದು ಧರಣಿನಿರತರು ಒಕ್ಕೊರಲಿನಿಂದ ಆಗ್ರಹಿಸಿದರು.ಕೆಲಹೊತ್ತಿನ ನಂತರ ಕೊಳಗೇರಿ ಅಭಿವೃದ್ಧಿ ಮಂಡಳಿ ವಿಜಯಪುರ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಶಿವಾನಂದ ರಾಠೋಡ ಅವರು ಧರಣಿ ಸ್ಥಳಕ್ಕೆ ಆಗಮಿಸಿ, ಧರಣಿ ನಿರತ ಸ್ಲಂ ನಿವಾಸಿಗಳ ಸಮಸ್ಯೆಗಳ ಸಮಸ್ಯೆಗಳನ್ನು ಶಾಂತಚಿತ್ತದಿಂದ…
ಕಲಬುರಗಿ ಮನೀಷ ಮ್ಯಾನ್ ಪವರ್ ಏಜೆನ್ಸಿ ಮೇಲೆ ಕ್ರಮಕ್ಕೆ ಆಗ್ರಹ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಬಾಕಿ ವೇತನ ಪಾವತಿಸಲು, ಸಿಬ್ಬಂದಿ ಕಡಿತ ಮಾಡಿದ ಆದೇಶ ವಾಪಸು ಪಡೆಯಲು, ಸಮಯಕ್ಕೆ ಸರಿಯಾಗಿ ವೇತನ ಪಾವತಿಸಲಾರದ ಮನೀಷ ಮ್ಯಾನ್ ಪಾವರ್, ಕಲಬುರಗಿ ಇವರ ಮೇಲೆ ಶಿಸ್ತಿನಕ್ರಮ ಜರುಗಿಸುವಂತೆ ಒತ್ತಾಯಿಸಿ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಇವರಿಗೆ ರಾಜ್ಯ ಸರಕಾರಿ ಹಾಸ್ಟೇಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘದ ವತಿಯಿಂದ ಮನವಿ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ಭೀಮಶೆಟ್ಟಿ ಯಂಪಳ್ಳಿ ರಾಜ್ಯಾಧ್ಯಕ್ಷರು ಮಾತನಾಡಿ, ಜಿಲ್ಲೆಯಲ್ಲಿರುವ ಸಮಾಜ ಕಲ್ಯಾಣ ಇಲಾಖೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ, ಕ್ರೈಸ್ ವಸತಿ ನಿಲಯಗಳಲ್ಲಿ ದುಡಿಯುತ್ತಿರುವ ಹೊರಗುತ್ತಿಗೆ ನೌಕರರ ಬಾಕಿ ವೇತನ ಪಾವತಿಸದೆ ಇರುವದರಿಂದ ನೌಕರರು ಅತ್ಯಂತ ಸಂಕಷ್ಟದಲ್ಲಿ ಒದ್ದಾಡುತ್ತಿದ್ದಾರೆ. ಅಲ್ಲದೇ ಸಿಬ್ಬಂದಿ ಕಡಿತ ಮಾಡಿರುವದರಿಂದ ಕೆಲಸದ ಹೊರೆ ಹೆಚ್ಚಾಗಿ ಅನಾರೋಗ್ಯದಿಂದ ನೌಕರರು ಬಳಲುವಂತಾಗಿದೆ. ಅಲ್ಲದೆ ಕ್ರೈಸ್ ವಸತಿನಿಲಯಗಳ ವೇತನಕ್ಕಾಗಿ ಅನುದಾನವಿದ್ದರು ಕೂಡಾ ಮನೀಷ ಮ್ಯಾನ್ ಪಾವರ್ ನಿರ್ಲಕ್ಷತನದಿಂದ ವೇತನ…
