ಉದಯರಶ್ಮಿ ದಿನಪತ್ರಿಕೆ
ವಿಜಯಪುರ : ಸಾರ್ವಜನಿಕ ಶಿಕ್ಷಣ ಇಲಾಖೆ ವಿಜಯಪುರ, ಜಿಲ್ಲಾಡಳಿತ ಹಾಗೂ ಕಪಿಲ್ ಶಾಲೆ ಸಂಯುಕ್ತ ಆಶ್ರಯದಲ್ಲಿ ನಡೆದ ವಿಜಯಪುರ ನಗರ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ೧೭ ವರ್ಷದ ಬಾಲಕರ ಕಬಡ್ಡಿ ಪಂದ್ಯಾವಳಿಯಲ್ಲಿ ಅಭಿನವ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಈ ಸಮಯದಲ್ಲಿ ತಾಲೂಕ ದೈಹಿಕ ಶಿಕ್ಷಣಾಧಿಕಾರಿ ಬಿರಾದಾರ, ಅಭಿನವ ವಿದ್ಯಾಸಂಸ್ಥೆಯ ಅಧ್ಯಕ್ಷ ಮೋಹನ್ ದಳವಾಯಿ, ಆಡಳಿತ ಅಧಿಕಾರಿ ಪರಶುರಾಮ ಸಿದ್ದಾಪೂರ, ದೈಹಿಕ ಶಿಕ್ಷಕರು ಹಾಗೂ ತಂಡದ ತರಬೇತಿದಾರ ಚನ್ನಪ್ಪ ಸೈದಾಪೂರ, ತಂಡದ ನಾಯಕ ಸಾಗರ ಕೊಡಗರೆ, ಬಸವರಾಜ ಬೇನೂರ, ಮಕಾನದಾರ ಸರ್, ರಮೇಶ ಪಾಟೀಲ್, ಒಡೆಯರ್ ಸರ್, ಇನ್ನಿತರರು ಉಪಸ್ಥಿತರಿದ್ದರು.

