ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಸಾರ್ವಜನಿಕ ಶಿಕ್ಷಣ ಇಲಾಖೆ ವಿಜಯಪುರ, ಜಿಲ್ಲಾಡಳಿತ ಹಾಗೂ ಕಪಿಲ್ ಶಾಲೆ ಸಂಯುಕ್ತ ಆಶ್ರಯದಲ್ಲಿ ನಡೆದ ವಿಜಯಪುರ ನಗರ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ೧೭ ವರ್ಷದ ಬಾಲಕಿಯರ ಕಬಡ್ಡಿ ಪಂದ್ಯಾವಳಿಯಲ್ಲಿ ಶ್ರೀ ರೇವಣಸಿದ್ದೇಶ್ವರ ಪ್ರಾಥಮಿಕ ಮತ್ತು ಪ್ರೌಢಶಾಲೆ, ಆದರ್ಶ ನಗರ, ವಿಜಯಪುರ ಈ ಶಾಲೆಯು ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದೆ.
ಈ ಸಮಯದಲ್ಲಿ ತಾಲೂಕ ದೈಹಿಕ ಶಿಕ್ಷಣಾಧಿಕಾರಿ ಬಿರಾದಾರ, ಗ್ರಾಮೀಣ ವಿಕಾಸ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು, ಆಡಳಿತ ಅಧಿಕಾರಿ ಪರಶುರಾಮ ಸಿದ್ದಾಪೂರ, ದೈಹಿಕ ಶಿಕ್ಷಕ ಒಡೆಯರ್, ತಂಡ ತರಬೇತಿದಾರ ಚನ್ನಪ್ಪ ಸೈದಾಪೂರ, ತಂಡದ ನಾಯಕಿ ರಕ್ಷಿತಾ ಅಂಬಿಗೇರ, ಬಸವರಾಜ ಬೇನೂರ, ಬಂಗಾರೆಪ್ಪ ಒಡೆಯರ್, ಮಕಾನದಾರ ಸರ್, ರಮೇಶ ಪಾಟೀಲ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

