Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಬಿ.ಎಲ್.ಡಿ.ಇ ಸಂಸ್ಥೆಯ ಎಸ್.ಬಿ ಕಲಾ ಮತ್ತು ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಮ್ಮ ದೇಶದ ಪ್ರಜಾಪ್ರಭುತ್ವ ಬೃಹತ್ತಾಗಿದ್ದು ಅದರ ಆಶಯದಂತೆ ನಾವು ಬದುಕಬೇಕಾಗಿದೆ. ಸಂವಿಧಾನದ ಆಶಯಗಳಾದ ಸಮಾನತೆ, ಸ್ವಾತಂತ್ರ್ಯ ಹಾಗೂ ಭಾತೃತ್ವದ ಆದರ್ಶಗಳನ್ನು ಜನರಲ್ಲಿ ಗಟ್ಟಿಗೊಳಿಸುವಲ್ಲಿ ಈ ಕಾರ್ಯಕ್ರಮ ನಿಜಕ್ಕೂ ಶ್ಲಾಘನೀಯ ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ.ಆರ್.ಎಂ.ಮಿರ್ದೆ ಹೇಳಿದರು.ನಗರದ ಬಿ.ಎಲ್.ಡಿ.ಈ ಸಂಸ್ಥೆಯ ಎಸ್.ಬಿ ಕಲಾ ಮತ್ತು ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಅಂಗವಾಗಿ ಮಹಾವಿದ್ಯಾಲಯದ ಆವರಣದಲ್ಲಿ ಬೃಹತ್ ಮಾನವ ಸರಪಳಿ ಕಾರ್ಯಕ್ರಮವನ್ನು ಜರುಗಿತು. ಈ ಸಂದರ್ಭದಲ್ಲಿ ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ.ಆರ್.ಎಂ.ಮಿರ್ದೆ ಸಂವಿಧಾನದ ಪ್ರಸ್ತಾವನೆ ಓದಿದರು. ಮಾನವ ಸರಪಳಿಯಲ್ಲಿ ಕೈ ಕೈ ಹಿಡಿದು ನಿಂತು ನಂತರ ತಮ್ಮ ಎರಡು ಕೈಗಳನ್ನು ಮೇಲಕೆತ್ತಿ ಜೈ ಹಿಂದ, ಜೈ ಕರ್ನಾಟಕ ಎಂದು ಘೋಷಣೆ ಕೂಗಿ ಸರಪಳಿ ಕಳಚಲಾಯಿತು.ಈ ವೇಳೆಯಲ್ಲಿ ಶಿಕ್ಷಣ ಶಾಸ್ತ್ರ ವಿಭಾಗ ಉಪನ್ಯಾಸಕ ಪ್ರೊ.ಸಿ.ಎನ್.ಕುನ್ನೂರ ಮಾತನಾಡಿ, ನಮ್ಮ ಭಾರತ ದೇಶ ಬೃಹತ್ತಾದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹೊಂದಿರುವಂಥದ್ದು ಅದರ ಆಶಯದಂತೆ ಇಂದು…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ದಲಿತರು ಮತ್ತು ದಲಿತ ಹೆಣ್ಣುಮಕ್ಕಳ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ಮಾಜಿ ಸಚಿವ ಹಾಗೂ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಶಾಸಕ ಮುನಿರತ್ನ ಅವರನ್ನು ಸರ್ಕಾರ ತ್ವರಿತವಾಗಿ ಬಂಧಿಸಿದಕ್ಕೆ ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷ ರಮೇಶ್ ಗುಬ್ಬೇವಾಡ ರಾಜ್ಯಸರ್ಕಾರಕ್ಕೆ ಅಭಿನಂದನೆಗಳನ್ನು ಸಲ್ಲಿಸಿದರು.ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.ಬಿಬಿಎಂಪಿ ಗುತ್ತೇದಾರ ಚಲುವರಾಜ ಅವರಿಗೆ ಬಿಜೆಪಿ ಶಾಸಕ ಮುನಿರತ್ನ ಅವರು ಹಣವನ್ನು ನೀಡುವಂತೆ ಒತ್ತಾಯಿಸಿದ್ದಾರೆ. ಹಣವನ್ನು ನೀಡಲು ನನ್ನ ಹತ್ತಿರ ಇಲ್ಲ ಅಂದಾಗ ನಿಮ್ಮ ಹೆಣ್ಣು ಮಕ್ಕಳನ್ನು ನಿನ್ನ ಹೆಂಡತಿಯನ್ನು ತಂದು ಬಿಡು ಎಂದಿದ್ದು ನಾಗರಿಕ ಸಮಾಜ ತಲೆ ತಗ್ಗಿಸುವಂತ ವಿಚಾರ, ಆದ್ದರಿಂದ ಇಂತಹ ನೀಚ ಪ್ರವೃತ್ತಿ ಹಾಗೂ ಜಾತಿ ನಿಂದಕರಿಗೆ ಕಠಿಣ ಶಿಕ್ಷೆ ಆಗಬೇಕು ಹಾಗು ಇಂತವರಿಗೆ ಕಠಿಣ ಶಿಕ್ಷೆ ಆಗುತ್ತೆ ಅನ್ನುವದು ಕರ್ನಾಟಕದಿಂದಲೇ ಇಡಿ ದೇಶಕ್ಕೆ ಸಂದೇಶ ಹೋಗಬೇಕು ಎಂದು ಹೇಳಿದರುಸಂಸ್ಕಾರ ಸಂಸ್ಕೃತಿ ಬಗ್ಗೆ ಮಾತನಾಡುವ ಬಿಜೆಪಿ ನಾಯಕರು ತಮ್ಮದೇ ಪಕ್ಷದ ಶಾಸಕರ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲೆಯಲ್ಲಿ ಇರುವ ಒಟ್ಟು ೧೦ ಸಕ್ಕರೆ ಕಾರ್ಖಾನೆಗಳಿಂದ ಮಾಲಿನ್ಯ ನಿಯಂತ್ರಣ ಕಾಯದೆಗಳನ್ನು ಗಾಳಿಗೆ ತೂರಿ ನೀರು ತ್ಯಾಜ್ಯವನ್ನು ಸಮೀಪದಲ್ಲಿಯ ಜಲಮೂಲಗಳಾದ ನದಿ, ಹಳ್ಳ, ಕೆರೆಗಳಿಗೆ ಯಾವುದೇ ಮುನ್ನೆಚರಿಕಾ ಕ್ರಮ ಕೈಗೊಳ್ಳದೇ ಹರಿಬಿಟ್ಟ ಕಾರಣದಿಂದಾಗಿ ನೀರು ವಿಷಯುಕ್ತವಾಗಿ ಅನೇಕ ಸಾವು ನೋವುಗಳಿಗೆ ಕಾರಣವಾಗುತ್ತಿದ್ದು, ಈ ಕುರಿತು ಕಠಿಣ ಕ್ರಮ ಕೈಗೊಳ್ಳಬೇಕು. ಅಂತಹ ಕಾರ್ಖಾನೆಯನ್ನು ಈ ವರ್ಷ ಪ್ರಾರಂಭಕ್ಕೆ ಅನುಮತಿ ನೀಡಬಾರದು ಎಂದು ಆಗ್ರಹಿಸಿ ಮಾಲಿನ್ಯ ನಿಯಂತ್ರಣ ಅಧಿಕಾರಿ ಎಂ.ಎ.ಮಣಿಯಾರ ಅವರಿಗೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಶುಕ್ರವಾರ ಮನವಿ ಸಲ್ಲಿಸಲಾಯಿತು.ಈ ವೇಳೆ ಜಿಲ್ಲಾಧ್ಯಕ್ಷ ಸಂಗಮೇಶ ಸಗರ ಮಾತನಾಡಿ, ಕಳೆದ ವರ್ಷ ಯರಗಲ್ ಬಾಲಾಜಿ ಸಕ್ಕರೆ ಕಾರ್ಖಾನೆಯಿಂದ ತ್ಯಾಜ್ಯವನ್ನು ನದಿಗೆ ಹರೆಸಿ ಕಾರ್ಖಾನೆಯವರೆ ಡಂಗುರ ಸಾರಿ ನದಿ ನೀರನ್ನು ಯಾರು ಬಳಸಬೇಡಿ, ಅದರಲ್ಲಿ ಕಾರ್ಖಾನೆಯ ತ್ಯಾಜ್ಯ(ವಿಷ) ಬಿಟ್ಟಿರುವುದಾಗಿ ಪತ್ರಿಕೆಗೆಗೂ ಹೇಳಿದ್ದಾರೆ, ಅಷ್ಟರಲ್ಲಿಯೇ ನದಿಯಲ್ಲಿಯ ಲಕ್ಷಾಂತರ ಮೀನುಗಳ ಮಾರಣ ಹೋಮ ಆಗಿರುವುದು ಇಡೀ ಮಾನವ ಕುಲವೇ…
ಉದಯರಶ್ಮಿ ದಿನಪತ್ರಿಕೆ ಇಂಡಿ: ಹಳ್ಳಿಗರ ಆರೋಗ್ಯ ಜವಾಬ್ದಾರಿ ಗ್ರಾಮ ಪಂಚಾಯತಗೆ ಇದೆ ಎಂದು ಆರೋಗ್ಯ ತರಬೇತಿ ಕಾರ್ಯಕ್ರಮಉದ್ಘಾಟಿಸಿ ಗ್ರಾ.ಪಂ ಅಧ್ಯಕ್ಷೆ ಆಸ್ಮಾ ರಜಾಕ ಚಿಕ್ಕಗಸಿ ಹೇಳಿದರುತಾಲ್ಲೂಕಿನ ತಾಂಬಾ ಗ್ರಾ.ಪಂ ಕಾರ್ಯಾಲಯದಲ್ಲಿ ಆರೋಗ್ಯ ತರಬೇತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಉದ್ಘಾಟಿಸಿ ಮಾತನಾಡಿದರು.ಗ್ರಾಮದ ಜನರ ಆರೋಗ್ಯ ಅತೀವ ಮುಖ್ಯ. ಅದಕ್ಕೆ ಸ್ಥಳೀಯ ಸಂಘ ಸಂಸ್ಥೆ ಹಾಗೂ ಧಾರ್ಮಿಕ ಮುಖಂಡರು ಸಲಹೆ ಸಹಕಾರ ಮುಖ್ಯ ಎಂದು ಹೇಳಿದರು.ಆರೋಗ್ಯ ಇಲಾಖೆ ಶಿಕ್ಷಣಾಧಿಕಾರಿ ವೈ. ಎಂ ಪೂಜಾರ ಮಾತನಾಡಿ ಅವರು, ಆರೋಗ್ಯ ಮತ್ತು ಅಭಿವೃದ್ಧಿ ಪಂಚಾಯತ್ ಬೆಂಬಲದೊಂದಿಗೆ ಕ್ರಿಯಾಯೋಜನೆ ಸಿದ್ದಪಡಿಸಲು ಅನುಷ್ಠಾನಗೊಳಿಸಲು ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಆರೋಗ್ಯ ಇಲಾಖೆ ಸಹಭಾಗಿತ್ವದಲ್ಲಿ ನಡೆಯುತ್ತಿದೆ. ಸಿದ್ದಪಡಿಸಿದ ಕ್ರಿಯಾ ಯೋಜನೆದಂತೆ ಆರೋಗ್ಯ ಮತ್ತು ನೀರು ನೈರ್ಮಲ್ಯ, ಕ್ಷಯ ಮುಕ್ತ ಗ್ರಾಮ, ಬಿಪಿ ಶುಗರ್ ಸ್ಕ್ರೀನಿಂಗ್ ಕ್ಯಾಂಪ್, ಅಪೌಷ್ಟಿಕತೆ ಮತ್ತು ರಕ್ತ ಹೀನತೆ ಮುಕ್ತ, ಬಾಲ್ಯ ವಿವಾಹ ಸೇರಿದಂತೆ ಅನೇಕ ವಿಚಾರಗಳು ಕುರಿತು ತರಬೇತಿ ನೀಡಿ ಮಾತನಾಡಿದರು.ಈ…
ಸ್ವಾಮಿ ವಿವೇಕಾನಂದ ಸೇನೆಯ ಶ್ರೀ ಗಜಾನನ ಮಹಾಮಂಡಳದಿಂದ ಗಣೇಶ ವಿಸರ್ಜನಾ ಮೆರವಣಿಗೆ ಉದ್ಘಾಟನೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಹಿಂದುಗಳ ಪವಿತ್ರ ಹಬ್ಬವಾದ ಗಣಪತಿ ವಿಸರ್ಜನೆ ಮೆರವಣಿಯನ್ನು ಸಹಿಸುವ ಶಕ್ತಿ ಕೆಲವರಿಗೆ ಇಲ್ಲ. ಇಲ್ಲಿ ಮೋದಿ ಮತ್ತು ಯೋಗಿ ಇರುವವರೆಗೂ ನೀವಿಲ್ಲಿ ಬಾಲ ಬಿಚ್ಚಲಾಗಲ್ಲ. ಇಲ್ಲಿ ಇರಬೇಕೆಂದರೇ ಚಂದಾಗಿ ಇರಬೇಕು ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ದೇಶ ವಿರೋಧಿ, ಧರ್ಮ ವಿರೋಧಿಗಳಿಗೆ ಎಚ್ಚರಿಕೆ ನೀಡಿದರು.ನಗರದ ಶ್ರೀ ಸಿದ್ದೇಶ್ವರ ದೇವಸ್ಥಾನ ಮುಂಭಾಗದ ಸರ್ದಾರ ವಲ್ಲಭಬಾಯಿ ಪಟೇಲ್ ವೇದಿಕೆಯಲ್ಲಿ ಸ್ವಾಮಿ ವಿವೇಕಾನಂದ ಸೇನೆಯ ಶ್ರೀ ಗಜಾನನ ಮಹಾಮಂಡಳದ ವತಿಯಿಂದ ಹಮ್ಮಿಕೊಂಡಿದ್ದ 7ನೇ ದಿನ ಗಣೇಶ ವಿಸರ್ಜನಾ ಮೆರವಣಿಗೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಇನ್ನು ಮುಂದೆ ನಾವೆಲ್ಲ ಒಂದಾಗಿರಬೇಕು. ಗಣಪತಿ ಪ್ರತಿಷ್ಠಾಪನೆಗೆ ಪರವಾನಗಿ ಇಲ್ಲದೆ ಇಡುವಂತ ಹಾಗೂ ಗಣಪತಿ ಮೇಲೆ ಕಲ್ಲು ಹಾಕಿದರೆ ಅವರ ಮೇಲೆ ಬುಲ್ಡೋಜರ್ ಹಾಕೋ ಮುಖ್ಯಮಂತ್ರಿ ಬೇಕು. ಇದು ಶಿವಾಜಿ ಮಹಾರಾಜರ ನೆಲವಿದು. ಯಾರಿಗೂ ಹೆದರುವ ಅವಶ್ಯಕತೆಯಿಲ್ಲ. ನಾವು ವಿಜಯಪುರದಲ್ಲಿ ಆವಾಜ್…
ಉದಯರಶ್ಮಿ ದಿನಪತ್ರಿಕೆ ಬಬಲೇಶ್ವರ: ತಾಲ್ಲೂಕಿನ ಜೈನಾಪುರ ಸರ್ಕಾರಿ ಪ್ರೌಢ ಶಾಲೆಯ ವಿಧ್ಯಾರ್ಥಿಗಳಿಗೆ ಬೆಳ್ಳುಬ್ಬಿಯ ಮಳೆ ಮಲ್ಲೇಶ್ವರ ಗ್ರಾಮೀಣ ಅಭಿವೃದ್ಧಿ ಸೇವಾ ಸಂಸ್ಥೆಯ ವತಿಯಿಂದ ಎಲ್ಲ ವಿಧ್ಯಾರ್ಥಿಗಳಿಗೆ ಶನಿವಾರ ಕಲಿಕಾ ಸಾಮಗ್ರಿಗಳ ವಿತರಣೆ ಮಾಡಿ ಬಡ ಮಕ್ಕಳ ಕಲಿಕೆಗೆ ಪ್ರೋತ್ಸಾಹಿಸಿದರು.ಸಂಸ್ಥೆಯ ಉಪಾಧ್ಯಕ್ಷ ಸಿದರಾಯ ಹೊಸಮನಿ ಮಾತನಾಡಿ ಮಕ್ಕಳ ಅಭಿವೃದ್ಧಿಗಾಗಿ ನಮ್ಮ ಗ್ರಾಮೀಣಾಭಿವೃದ್ಧಿ ಸಂಸ್ಥೆಯು ಮಮದಾಪೂರ ವಲಯ ಮಟ್ಟದಲ್ಲಿ ಅನೇಕ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದ್ದು, ಬಡ ಮಕ್ಕಳ ಕಲಿಕೆಗೆ ಅಗತ್ಯ ಕಲಿಕಾ ಸಾಮಗ್ರಿ ವಿತರಿಸುತ್ತಾ ಮಕ್ಕಳ ಕಲಿಕೆಗೆ ಅನೂಕೂಲ ಮಾಡಿಕೊಡುತ್ತಿದ್ದೇವೆ ಎಂದರು.ಶಾಲೆಯ ಮುಖ್ಯೋಪಾಧ್ಯಾಯ ಅಶೋಕ ಅವಟಿ ಮಾತನಾಡಿ ಸರ್ಕಾರಿ ಶಾಲೆಯಲ್ಲಿ ಓದುವ ಬಡ ಮಕ್ಕಳಿಗೆ ಈ ಸೇವಾ ಸಂಸ್ಥೆ ಎಲ್ಲ ಸಹಕಾರ ನೀಡಿ ಮಕ್ಕಳ ಕಲಿಕೆಗೆ ಉತ್ತೇಜನ ನೀಡುತ್ತಿದೆ. ಈ ಸಂಸ್ಥೆ ಇನ್ನೂ ಹೆಚ್ಚು ಅಭಿವೃದ್ಧಿ ಹೊಂದಲಿ ಎಂದು ಸೇವಾ ಸಂಸ್ಥೆಯ ಎಲ್ಲ ಸದಸ್ಯರಿಗೆ ಅಭಿನಂದನೆ ಸಲ್ಲಿಸಿದರು.ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ಶಿವಾನಂದ ಚನಗೊಂಡ, ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ಸದಾನಂದ ಮಂಟೂರ, ಶಾಲಾ ಶಿಕ್ಷಕರು,…
ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ಪ್ರತಿಯೊಬ್ಬರೂ ವೈಯಕ್ತಿಕ ಸ್ವಚ್ಛತೆ ಹಾಗೂ ಮನೆಯ ಸುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದರೊಂದಿಗೆ ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛವಾಗಿಟ್ಟುಕೊಂಡರೆ ಆರೋಗ್ಯಯುತ ಸಮಾಜ ನಿರ್ಮಾಣವಾಗುತ್ತದೆ ಎಂದು ಸ್ಥಳೀಯ ವಿರಕ್ತಮಠದ ಸಿದ್ಧಲಿಂಗ ಸ್ವಾಮೀಜಿ ಹೇಳಿದರು.ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಪುರಸಭೆ ಶನಿವಾರ ಹಮ್ಮಿಕೊಂಡಿದ್ದ ಸ್ವಚ್ಛತೆಯೇ ಸೇವೆ ಜಾಗೃತಿ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಇಲ್ಲಿನ ಪುರಸಭೆ ಪೌರಕಾರ್ಮಿಕರು ಪ್ರತಿ ಮನೆಗಳ ಕಸ ಸಂಗ್ರಹಿಸುವುದರೊಂದಿಗೆ ಸಾರ್ವಜನಿಕ ಸ್ಥಳಗಳಲ್ಲಿ ಕಸವನ್ನು ಸಂಗ್ರಹಿಸುವ ಮೂಲಕ ಪಟ್ಟಣದ ಸ್ವಚ್ಛತೆಗೆ ಶ್ರಮಿಸುತ್ತಿದ್ದಾರೆ. ಅವರೊಂದಿಗೆ ಜನರು ಸಹಕರಿಸಿ ಕೈಜೋಡಿಸಿದಾಗ ಸುಂದರ ಪಟ್ಟಣವನ್ನಾಗಿಸಬಹುದು. ನಮ್ಮ ಸ್ವಭಾವ, ಸಂಸ್ಕಾರ ಸ್ವಚ್ಛವಾಗಿದ್ದಾಗ ಸ್ವಚ್ಛತೆಯ ಮಹತ್ವ ತಿಳಿದುಕೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿದರು.ಪುರಸಭೆ ಸದಸ್ಯೆ ಜಗದೇವಿ ಗುಂಡಳ್ಳಿ , ಅಶೋಕ ಹಾರಿವಾಳ ಮಾತನಾಡಿ, ಸ್ವಚ್ಛತೆ ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಬೇಕು ಎಂದು ಹೇಳಿದರು.ಪುರಸಭೆ ಮುಖ್ಯಾಧಿಕಾರಿ ಎಚ್.ಎಸ್.ಚಿತ್ತರಗಿ ಮಾತನಾಡಿ, ಸ್ವಚ್ಛತೆಯ ಮಹತ್ವ ತಿಳಿಸಿಕೊಡುವುದಕ್ಕಾಗಿ ಮಾನವ ಸರಪಳಿ, ಶಾಲಾ ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಸ್ಪರ್ಧೆ, ತ್ಯಾಜ್ಯ ವಸ್ತುಗಳಿಂದ ತಯಾರಿಸಿದ ವಸ್ತುಗಳ ಪ್ರದರ್ಶನ, ಬೀದಿ ನಾಟಕ…
ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ಕೇಂದ್ರ ಸರ್ಕಾರ ಬಲವಂತವಾಗಿ ಹಿಂದಿ ಹೇರಿಕೆ ಮಾಡುತ್ತಿದೆ ಎಂದು ಆರೋಪಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಶನಿವಾರ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಕಪ್ಪು ಬಾವುಟ ಪ್ರದರ್ಶಿಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.ಕರವೇ ರಾಜ್ಯ ಘಟಕದ ಸಂಘಟನಾ ಕಾರ್ಯದರ್ಶಿ ಅಶೋಕ ಹಾರಿವಾಳ ಮಾತನಾಡಿ, ದೇಶದಲ್ಲಿನ ವಿವಿಧ ಭಾಷೆಗಳು ತನ್ನದೇಯಾದ ವಿಶಿಷ್ಟ ಸ್ಥಾನಮಾನ ಹೊಂದಿವೆ. ಪ್ರತಿಯೊಂದು ಭಾಷೆ ಬೆಳವಣಿಗೆಗೆ ತನ್ನದೇಯಾದ ಇತಿಹಾಸವಿದೆ. ಕೇಂದ್ರ ಸರ್ಕಾರ ಹಿಂದಿ ಭಾಷೆ ದಿವಸ, ಹಿಂದಿ ಸಪ್ತಾಹದಂತಹ ಕಾರ್ಯಕ್ರಮಗಳ ಮೂಲಕ ಹಿಂದಿ ಭಾಷೆ ಹೆರಿಕೆ ಮಾಡಲು ಮುಂದಾಗುತ್ತಿರುವುದನ್ನು ಕರವೇ ಬಲವಾಗಿ ಖಂಡಿಸುತ್ತದೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಮಹಾಂತೇಶ ಚಕ್ರವರ್ತಿ, ಮಹಾಂತೇಶ ಗಿಡ್ಡಪ್ಪಗೋಳ, ರವಿ ವಡ್ಡರ, ರವಿ ಗೊಳಸಂಗಿ, ಹಣಮಂತ ಟಕ್ಕಳಕಿ, ರಾಜು ಬೇಲಿ, ಅಸ್ಲಂ ಹಳ್ಳಿ, ವೀರೇಶ ಭಂಡಾರಿ, ಅನಿಲ ಕುಶಾಲಕರ, ರಫಿಕ ಜೈನಾಪುರ, ಗಣೇಶ ವಾಲಿಕಾರ, ಮಲ್ಲು ಗುಂಡಣ್ಣವರ ಇದ್ದರು.
ಉದಯರಶ್ಮಿ ದಿನಪತ್ರಿಕೆ ಇಂಡಿ: ರೇವಣಸಿದ್ದೇಶ್ವರ ಏತ ನೀರಾವರಿ ಯೋಜನೆಗೆ ಕಾಂಗ್ರೆಸ್ ಸರಕಾರ ಹಣ ಬಿಡುಗಡೆ ಮಾಡಿದ್ದರೆ ದಾಖಲೆ ಬಿಡುಗಡೆ ಮಾಡಲಿ, ಬಿಜೆಪಿ ಅವಧಿಯಲ್ಲಿನ ಎಷ್ಟು ಕಾಮಗಾರಿಗಳನ್ನು ಶಾಸಕ ಯಶವಂತರಾಯಗೌಡ ಪಾಟೀಲ ಉದ್ಘಾಟಿಸಿಲ್ಲವೇ..?ಲೋಕಾರ್ಪಣೆಗೊಳಿಸಿಲ್ಲವೇ..? ಕೇಂದ್ರ ಸರಕಾರದ ಹಲವಾರು ಯೋಜನೆಗಳ ಕಾಮಗಾರಿ ಪೂಜೆ ಸಹ ಶಾಸಕರೆ ಮಾಡಿದ್ದಾರೆ. ಅದಕ್ಕೆ ಸಂಸದರ ತ್ಯಾಗ ಭಾವನೆ ಕಾರಣ. ಆದರೆ ಚಿಕ್ಕ ಪುಟ್ಟ ವಿಷಯಗಳಿಗೆ ರಾಜಕಾರಣ ಮಾಡುತ್ತಿರುವುದು ಕಾಂಗ್ರೆಸ್ ಮುಖಂಡರ ಹಾಗೂ ಶಾಸಕರ ನಡೆ ಜನರಿಗೆ ಅರ್ಥವಾಗುತ್ತಿದೆ ಎಂದು ಬಿಜೆಪಿ ಮಂಡಳ ಅಧ್ಯಕ್ಷ ಮಲ್ಲಿಕಾರ್ಜುನ ಕಿವಡೆ ಕೈ ಮುಖಂಡರ ವಿರುದ್ಧ ಆರೋಪಿಸಿ, ಕಿಡಿಕಾರಿದರು.ಅವರು ಶುಕ್ರವಾರ ಪಟ್ಟಣದ ಶಾಂತೇಶ್ವರ ಮಂಗಲ ಕಾರ್ಯಾಲಯದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.ಕೇಂದ್ರ ಸರ್ಕಾರದ ಯೋಜನೆಗಳ ಕಾಮಗಾರಿಗಳ ಭೂಮಿ ಪೂಜೆಯನ್ನು ಸಹ ತಾವೇ ಮಾಡುವ ಶಾಸಕರಿಗೆ ರಾಷ್ಟ್ರೀಯ ಹೆದ್ದಾರಿ ರಸ್ತೆ ಕಾಮಗಾರಿ ಭೂಮಿ ಪೂಜೆಯನ್ನು ಸಂಸದರಿಂದ ಮಾಡಿಸಿ ಜನರಿಗೆ ಬಿಜೆಪಿಯ ಕಾರ್ಯ ಎಂದು ಗೊತ್ತಾಗುವಂತೆ ಮಾಡಿದ್ದು ಹೊಟ್ಟೆಯಲ್ಲಿ ಬೆಂಕಿ ಬಿದ್ದಂತಾಗಿದೆ ಹೀಗಾಗಿ ಸರ್ಕಾರಿ ಕಾರ್ಯಕ್ರಮದಲ್ಲಿ ಸಂಸದರ ಬಗ್ಗೆ…
ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಕ್ಯಾಂಟರ್ ಗೂಡ್ಸ್ ಮತ್ತು ಟಂ,ಟಂ ವಾಹನಗಳ ಮಧ್ಯೆ ಅಪಘಾತ ಸಂಭವಿಸಿ ಟಂ,ಟಂ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ತಾಲೂಕಿನ ಕವಡಿಮಟ್ಟಿ-ಹಿರೇಮುರಾಳ ಗ್ರಾಮಗಳ ಮಧ್ಯೆ ಶನಿವಾರ ಮದ್ಯಾಹ್ನ ಸಂಭವಿಸಿದೆ.ಮೃತ ದುರ್ದೈವಿಯನ್ನು ಕರೆಪ್ಪ ನಾಲತವಾಡ(೪೮) ಎಂದು ಗುರುತಿಸಲಾಗಿದೆ. ಮೂಲತಃ ಚವನಭಾವಿ ಗ್ರಾಮದ ಕರೆಪ್ಪ ತಮ್ಮೂರಲ್ಲಿ ಕಿರಾಣಿ ಅಂಗಡಿಯೊಂದರ ಮಾಲೀಕನಾಗಿದ್ದ. ತನ್ನ ಅಂಗಡಿಗೆ ಸರಕು ತರಲು ಪಟ್ಟಣಕ್ಕೆ ಅಟೋ ಮೂಲಕ ಬಂದಿದ್ದು, ಎಲ್ಲ ಸರಕನ್ನು ಖರೀದಿಸಿ ಮರಳುವಾಗ ಮಾರ್ಗ ಮಧ್ಯೆ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ.ಘಟನೆಯಲ್ಲಿ ಚವನಭಾವಿ ಗ್ರಾಮದ ಆಟೋ ಚಾಲಕ ಯಮನಪ್ಪ ಜಗಂಡಬಾವಿ ಈತನಿಗೂ ಗಂಭೀರ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ಪಿಎಸ್‌ಐ ಸಂಜೀವ ತಿಪರೆಡ್ಡಿ ಭೇಟಿ ನೀಡಿ ಕಾನೂನು ಕ್ರಮ ಕೈಗೊಂಡಿದ್ದಾರೆ.ಮೃತನಿಗೆ ಪತ್ನಿ, ಪುತ್ರಿ, ಈರ್ವರು ಪುತ್ರರು ಇದ್ದು ಮನೆಯ ಒಡೆಯನನ್ನು ಕಳೆದುಕೊಂಡು ಕಣ್ಣೀರಿಡುತ್ತಿದ್ದಾರೆ.ಎಫ್‌ಐಆರ್ ದಾಖಲು :ಕ್ಯಾಂಟರ್ ವಾಹನ ಚಾಲಕ ವಾಹನವನ್ನು ನಾತವಾಡ ಕಡೆಯಿಂದ ಅತೀ ವೇಗವಾಗಿ ನಿರ್ಲಕ್ಷತನದಿಂದ ಚಲಾಯಿಸಿ ಟಂ,ಟಂ ಗೆ ಹಾಯಿಸಿದ್ದು ಅದರಲ್ಲಿ ಪ್ರಯಾಣಿಸುತ್ತಿದ್ದ…
