ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ದಲಿತರು ಮತ್ತು ದಲಿತ ಹೆಣ್ಣುಮಕ್ಕಳ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ಮಾಜಿ ಸಚಿವ ಹಾಗೂ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಶಾಸಕ ಮುನಿರತ್ನ ಅವರನ್ನು ಸರ್ಕಾರ ತ್ವರಿತವಾಗಿ ಬಂಧಿಸಿದಕ್ಕೆ ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷ ರಮೇಶ್ ಗುಬ್ಬೇವಾಡ ರಾಜ್ಯಸರ್ಕಾರಕ್ಕೆ ಅಭಿನಂದನೆಗಳನ್ನು ಸಲ್ಲಿಸಿದರು.
ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಬಿಬಿಎಂಪಿ ಗುತ್ತೇದಾರ ಚಲುವರಾಜ ಅವರಿಗೆ ಬಿಜೆಪಿ ಶಾಸಕ ಮುನಿರತ್ನ ಅವರು ಹಣವನ್ನು ನೀಡುವಂತೆ ಒತ್ತಾಯಿಸಿದ್ದಾರೆ. ಹಣವನ್ನು ನೀಡಲು ನನ್ನ ಹತ್ತಿರ ಇಲ್ಲ ಅಂದಾಗ ನಿಮ್ಮ ಹೆಣ್ಣು ಮಕ್ಕಳನ್ನು ನಿನ್ನ ಹೆಂಡತಿಯನ್ನು ತಂದು ಬಿಡು ಎಂದಿದ್ದು ನಾಗರಿಕ ಸಮಾಜ ತಲೆ ತಗ್ಗಿಸುವಂತ ವಿಚಾರ, ಆದ್ದರಿಂದ ಇಂತಹ ನೀಚ ಪ್ರವೃತ್ತಿ ಹಾಗೂ ಜಾತಿ ನಿಂದಕರಿಗೆ ಕಠಿಣ ಶಿಕ್ಷೆ ಆಗಬೇಕು ಹಾಗು ಇಂತವರಿಗೆ ಕಠಿಣ ಶಿಕ್ಷೆ ಆಗುತ್ತೆ ಅನ್ನುವದು ಕರ್ನಾಟಕದಿಂದಲೇ ಇಡಿ ದೇಶಕ್ಕೆ ಸಂದೇಶ ಹೋಗಬೇಕು ಎಂದು ಹೇಳಿದರು
ಸಂಸ್ಕಾರ ಸಂಸ್ಕೃತಿ ಬಗ್ಗೆ ಮಾತನಾಡುವ ಬಿಜೆಪಿ ನಾಯಕರು ತಮ್ಮದೇ ಪಕ್ಷದ ಶಾಸಕರ ಮಾತುಗಳ ಸಾಕ್ಷಿ ನಿಮ್ಮ ಪಕ್ಷದ ಸಂಸ್ಕೃತಿ ಎಂತಹದು ಎಂದು ತಿಳಿಯಲು.
ಹಿಂದೂಗಳು ನಾವೆಲ್ಲ ಒಂದು ಎನ್ನುವದು ಕೇವಲ ಚುನಾವಣೆ ಸಮಯದಲ್ಲಿ ನೆನಪಿರುತ್ತದೆ ಎಂದು ಕಾಣಿಸುತ್ತದೆ ಬಿಜೆಪಿ ಯವರಿಗೆ ಚುನಾವಣೆ ಮುಗಿದ ಕೂಡಲೇ ದಲಿತರು ಶೋಷಿತರನ್ನು ಹಿಂದುವಾಗಿ ಮನುಷ್ಯನಾಗಿ ತಮ್ಮಂತೆ ಅವರು ಮನುಷ್ಯರು ಎನ್ನುವ ಮನಸ್ಥಿತಿ ಬಿಜೆಪಿಗರಿಗೆ ಇಲ್ಲ ಮನುವಾದಿ ಸಂಸ್ಕೃತಿ ಬಿಜೆಪಿಯವರದ್ದಾಗಿದೆ ಎಂದು ಹೇಳಿದರು
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಮಾಧ್ಯಮ ವಕ್ತಾರ ಸಂಜೀವ ಚವ್ಹಾಣ ಎಲ್ಲರನ್ನೂ ಸ್ವಾಗತಿಸಿ, ಶಾಸಕ ಮುನಿರತ್ನ ಅವರಿಗೆ ಕಠಿಣ ಶಿಕ್ಷೆ ಆಗಬೇಕು ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ
ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದ ಪದಾಧಿಕಾರಿಗಳಾದ
ಸಿದ್ದು ತೋಟದ
ರಾಜು ಪವಾರ್, ಕೃಷ್ಣಾ ಲಮಾಣಿ,
ಯುವರಾಜ ಭಜಂತ್ರಿ, ರಾಘವೇಂದ್ರ ವಡವಡಗಿ, ಬಾಬು ಗುಡಮಿ,ಸತೀಶ್ ದೂಡಮನಿ, ಪರಶುರಾಮ ಪಾರನ್ನವರ, ವಿಠ್ಠಲ ಸಂದಿಮನಿ ಉಪಸ್ಥಿತರಿದ್ದರು.

