ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಕೇಂದ್ರ ಸರ್ಕಾರ ಬಲವಂತವಾಗಿ ಹಿಂದಿ ಹೇರಿಕೆ ಮಾಡುತ್ತಿದೆ ಎಂದು ಆರೋಪಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಶನಿವಾರ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಕಪ್ಪು ಬಾವುಟ ಪ್ರದರ್ಶಿಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.
ಕರವೇ ರಾಜ್ಯ ಘಟಕದ ಸಂಘಟನಾ ಕಾರ್ಯದರ್ಶಿ ಅಶೋಕ ಹಾರಿವಾಳ ಮಾತನಾಡಿ, ದೇಶದಲ್ಲಿನ ವಿವಿಧ ಭಾಷೆಗಳು ತನ್ನದೇಯಾದ ವಿಶಿಷ್ಟ ಸ್ಥಾನಮಾನ ಹೊಂದಿವೆ. ಪ್ರತಿಯೊಂದು ಭಾಷೆ ಬೆಳವಣಿಗೆಗೆ ತನ್ನದೇಯಾದ ಇತಿಹಾಸವಿದೆ. ಕೇಂದ್ರ ಸರ್ಕಾರ ಹಿಂದಿ ಭಾಷೆ ದಿವಸ, ಹಿಂದಿ ಸಪ್ತಾಹದಂತಹ ಕಾರ್ಯಕ್ರಮಗಳ ಮೂಲಕ ಹಿಂದಿ ಭಾಷೆ ಹೆರಿಕೆ ಮಾಡಲು ಮುಂದಾಗುತ್ತಿರುವುದನ್ನು ಕರವೇ ಬಲವಾಗಿ ಖಂಡಿಸುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಹಾಂತೇಶ ಚಕ್ರವರ್ತಿ, ಮಹಾಂತೇಶ ಗಿಡ್ಡಪ್ಪಗೋಳ, ರವಿ ವಡ್ಡರ, ರವಿ ಗೊಳಸಂಗಿ, ಹಣಮಂತ ಟಕ್ಕಳಕಿ, ರಾಜು ಬೇಲಿ, ಅಸ್ಲಂ ಹಳ್ಳಿ, ವೀರೇಶ ಭಂಡಾರಿ, ಅನಿಲ ಕುಶಾಲಕರ, ರಫಿಕ ಜೈನಾಪುರ, ಗಣೇಶ ವಾಲಿಕಾರ, ಮಲ್ಲು ಗುಂಡಣ್ಣವರ ಇದ್ದರು.

