ಸ್ವಾಮಿ ವಿವೇಕಾನಂದ ಸೇನೆಯ ಶ್ರೀ ಗಜಾನನ ಮಹಾಮಂಡಳದಿಂದ ಗಣೇಶ ವಿಸರ್ಜನಾ ಮೆರವಣಿಗೆ ಉದ್ಘಾಟನೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಹಿಂದುಗಳ ಪವಿತ್ರ ಹಬ್ಬವಾದ ಗಣಪತಿ ವಿಸರ್ಜನೆ ಮೆರವಣಿಯನ್ನು ಸಹಿಸುವ ಶಕ್ತಿ ಕೆಲವರಿಗೆ ಇಲ್ಲ. ಇಲ್ಲಿ ಮೋದಿ ಮತ್ತು ಯೋಗಿ ಇರುವವರೆಗೂ ನೀವಿಲ್ಲಿ ಬಾಲ ಬಿಚ್ಚಲಾಗಲ್ಲ. ಇಲ್ಲಿ ಇರಬೇಕೆಂದರೇ ಚಂದಾಗಿ ಇರಬೇಕು ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ದೇಶ ವಿರೋಧಿ, ಧರ್ಮ ವಿರೋಧಿಗಳಿಗೆ ಎಚ್ಚರಿಕೆ ನೀಡಿದರು.
ನಗರದ ಶ್ರೀ ಸಿದ್ದೇಶ್ವರ ದೇವಸ್ಥಾನ ಮುಂಭಾಗದ ಸರ್ದಾರ ವಲ್ಲಭಬಾಯಿ ಪಟೇಲ್ ವೇದಿಕೆಯಲ್ಲಿ ಸ್ವಾಮಿ ವಿವೇಕಾನಂದ ಸೇನೆಯ ಶ್ರೀ ಗಜಾನನ ಮಹಾಮಂಡಳದ ವತಿಯಿಂದ ಹಮ್ಮಿಕೊಂಡಿದ್ದ 7ನೇ ದಿನ ಗಣೇಶ ವಿಸರ್ಜನಾ ಮೆರವಣಿಗೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಇನ್ನು ಮುಂದೆ ನಾವೆಲ್ಲ ಒಂದಾಗಿರಬೇಕು. ಗಣಪತಿ ಪ್ರತಿಷ್ಠಾಪನೆಗೆ ಪರವಾನಗಿ ಇಲ್ಲದೆ ಇಡುವಂತ ಹಾಗೂ ಗಣಪತಿ ಮೇಲೆ ಕಲ್ಲು ಹಾಕಿದರೆ ಅವರ ಮೇಲೆ ಬುಲ್ಡೋಜರ್ ಹಾಕೋ ಮುಖ್ಯಮಂತ್ರಿ ಬೇಕು. ಇದು ಶಿವಾಜಿ ಮಹಾರಾಜರ ನೆಲವಿದು. ಯಾರಿಗೂ ಹೆದರುವ ಅವಶ್ಯಕತೆಯಿಲ್ಲ. ನಾವು ವಿಜಯಪುರದಲ್ಲಿ ಆವಾಜ್ ಹಾಕಿದ್ದಕ್ಕೆ ಇಡೀ ಕರ್ನಾಟಕದಲ್ಲಿ ಡಿಜೆ ಹಾಕುವಂತಾಯಿತು. ಹಿಂದೆ ಬನಾಯೇಂಗೆ ಮಂದಿರ ಹಾಡನ್ನು ನಿಷೇಧ ಮಾಡಿದ್ದನ್ನು ಬಿಡಲಿಲ್ಲ, ಹೀಗಾಗಿ ರಾಮಮಂದಿರ ಹಾಡಿನ ನಿಷೇಧ ತೆರವಾಯಿತು ಎಂದು ಹೇಳಿದರು.
ನಾಗಮಂಗಲದಲ್ಲಿ ಗಣೇಶ ಉತ್ಸವದಲ್ಲಿ ನಡೆದ ಘಟನೆ ಗಮನಿಸಿದರೆ, ಈ ಸರ್ಕಾರ ಬಹಳ ದಿನ ಬದುಕಲ್ಲ. ಕರ್ನಾಟಕದಲ್ಲಿ ಮುಂದಿನ ದಿನಗಳಲ್ಲಿ ನಾವೇ ಬರುತ್ತೇವೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ನನ್ನನ್ನು ಸೋಲಿಸಲು ತಂತ್ರ ಮಾಡಿದರು. ಕೆಲವರು ಚುನಾವಣೆ ಹೆಸರಲ್ಲಿ ಕಾರು ತೆಗೆದುಕೊಂಡರು, ಜಮೀನಿನಲ್ಲಿ ಬೋರವೆಲ್ಲ ಹಾಕಿಸಿದರು. ನಕಲಿ ಮತದಾನ ಮಾಡಿದ್ದೇನೆಂದು ಆರೋಪಿಸಿ ನ್ಯಾಯಲಯದ ಮೊರೆ ಹೋಗಿ, ತಾನೇ ದಂಡ ಹಾಕಿಸಿಕೊಂಡರು ಎಂದು ವಾಗ್ದಾಳಿ ನಡೆಸಿದರು.
ಸ್ವಾಮಿ ವಿವೇಕಾನಂದ ಸೇನೆಯ ರಾಜ್ಯಾಧ್ಯಕ್ಷ ರಾಘವ್ ಅಣ್ಣಿಗೇರಿ ಮಾತನಾಡಿದರು.
ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಪರಶುರಾಮಸಿಂಗ್ ರಜಪುತ, ಗೂಳಪ್ಪ ಶಟಗಾರ, ಸಿದ್ದೇಶ್ವರ ಸಂಸ್ಥೆ ಉಪಾಧ್ಯಕ್ಷ ಸಂಗನಬಸಪ್ಪ ಸಜ್ಜನ, ಸಿದ್ದೇಶ್ವರ ಬ್ಯಾಂಕ್ ನಿರ್ದೇಶಕ ಗುರು ಗಚ್ಚಿನಮಠ, ಮಹಾನಗರ ಪಾಲಿಕೆ ಸದಸ್ಯರಾದ ರಾಜಶೇಖರ ಮಗಿಮಠ, ಎಂ.ಎಸ್.ಕರಡಿ, ರಾಜಶೇಖರ ಕುರಿಯವರ, ಬಿಜೆಪಿ ನಗರ ಮಂಡಲ ಅಧ್ಯಕ್ಷ ಶಂಕರ ಹೂಗಾರ, ಗಜಾನನ ಮಹಾಮಂಡಳದ ಅಧ್ಯಕ್ಷ ಸಂದೀಪ ಪಂಗಡವಾಲೆ, ಉಪಾಧ್ಯಕ್ಷ ಪ್ರಶಾಂತ ದೇಸಾಯಿ, ಪ್ರಧಾನಕಾರ್ಯದರ್ಶಿಗಳಾದ ಸಚೀನ ಬಡಾವಣೆ, ಸಂತೋಷ ತೆಲಸಂಗ, ರವಿ ಅಗಸರ, ಶಿವು ಬಜಂತ್ರಿ, ಮನೋಜ ಸುರಪುರ, ಮುಖಂಡರಾದ ಸಂತೋಷ ಪಾಟೀಲ, ವಿಠ್ಠಲ ನಡುವಿನಕೇರಿ, ಬಾಬು ಶಿರಶ್ಯಾಡ, ರಾಜಶೇಖರ ಬಜಂತ್ರಿ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.
ಶುಕ್ರವಾರ ಸಂಜೆ ಆರಂಭಗೊಂಡ 7ನೇ ದಿನದ ಗಣೇಶ ವಿಸರ್ಜನಾ ಮೆರವಣಿಗೆ ಶನಿವಾರ ಬೆಳಿಗ್ಗೆ 7 ಗಂಟೆವರೆಗೂ ನಗರದ ವಿವಿಧ ಬಡಾವಣೆ, ಕಾಲೊನಿಗಳ ಗಣೇಶ ಮೂರ್ತಿಗಳು ಸಾಲು ಸಾಲಾಗಿ ಡಿಜೆ ಹಾಗೂ ನೃತ್ಯ ಸಡಗರ ಸಂಭ್ರಮದೊಂದಿಗೆ ಸಿದ್ದೇಶ್ವರ ದೇವಸ್ಥಾನ ಎದುರು ಆಗಮಿಸಿದವು. ಪ್ರತಿ ಗಜಾನನ ಮಂಡಳಿಗಳ ಅಧ್ಯಕ್ಷರಿಗೆ ಸ್ವಾಮಿ ವಿವೇಕಾನಂದ ಸೇನೆಯ ಶ್ರೀ ಗಜಾನನ ಮಹಾಮಂಡಳದಿಂದ ಕೇಸರಿ ಶಾಲು ಹೊದಿಸಿ, ಹಿಂದೂಗಳ ಪವಿತ್ರ ಗ್ರಂಥ ಭಗವದ್ಗೀತೆ ಪುಸ್ತಕ ನೀಡಿ ಸತ್ಕರಿಸಲಾಯಿತು.
“ಮುಂದಿನ ದಿನಗಳಲ್ಲಿ ಸಬ್ ಕಾ ಸಾತ್ ಸಬ್ ಕಾ ವಿಕಾಸ್ ಬದಲಾಗಿ ಹಿಂದುವೋಂಕೆ ಸಾತ್, ಹಿಂದೂವೋಂಕೆ ವಿಕಾಸ್ ಎಂದು ನಾವು ಮಾಡುತ್ತೇವೆ. ನಾವೇಲ್ಲ ಗಟ್ಟಿ ಇದ್ದೇವೆ.”
– ಬಸನಗೌಡ ಪಾಟೀಲ ಯತ್ನಾಳ
ಶಾಸಕರು, ವಿಜಯಪುರ

