Author: editor.udayarashmi@gmail.com

ಪೊಲೀಸ್ ಠಾಣೆಯಲ್ಲೇ ಸ್ವಾಮೀಜಿಯ ಮೇಲೆ ಹಲ್ಲೆ ಪ್ರಕರಣ | ಭೀಮ್ ರಾಜ್ಯ ದಲಿತ್ ಸೇವಾ ಸಮಿತಿ (ರಿ) ವಿಜಯಪುರ ಜಿಲ್ಲಾಧ್ಯಕ್ಷ ನಾಗರಾಜ ಕಬಾಡೆ ಒತ್ತಾಯ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಚಿತ್ರದುರ್ಗ ಜಿಲ್ಲೆಯ ಐಮಂಗಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶ್ರೀ ಹರಳಯ್ಯ ಸ್ವಾಮೀಜಿಯವರ ಮೇಲೆ ನಡೆದಿರುವ ಮಾರಣಾಂತಿಕ ಹಲ್ಲೆ ಹಾಗೂ ನಂತರ ಪೊಲೀಸ್ ಠಾಣೆಯೊಳಗೆ ನುಗ್ಗಿ ಮತ್ತೊಮ್ಮೆ ಕೊಲೆ ಯತ್ನ ನಡೆಸಿರುವ ಘಟನೆ ಅತ್ಯಂತ ಖಂಡನೀಯವಾಗಿದ್ದು, ರಾಜ್ಯದ ಕಾನೂನು ಸುವ್ಯವಸ್ಥೆಯ ಮೇಲೆ ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿದೆ ಎಂದು ಭೀಮ್ ರಾಜ್ಯ ದಲಿತ್ ಸೇವಾ ಸಮಿತಿ (ರಿ) ವಿಜಯಪುರ ಜಿಲ್ಲಾಧ್ಯಕ್ಷ ನಾಗರಾಜ ಕಬಾಡೆ ತಿಳಿಸಿದ್ದಾರೆ.ಈ ಕುರಿತು ಪ್ರಕಟಣೆ ನೀಡಿರುವ ಅವರು, ಪೊಲೀಸ್ ಠಾಣೆಯಂತಹ ಸುರಕ್ಷಿತ ಸ್ಥಳದಲ್ಲಿಯೇ ಒಬ್ಬ ಧಾರ್ಮಿಕ ಮುಖಂಡರ ಜೀವಕ್ಕೆ ಅಪಾಯ ಉಂಟಾಗಿರುವುದು ಪೊಲೀಸ್ ಇಲಾಖೆಯ ಕಾರ್ಯವೈಖರಿಯ ವೈಫಲ್ಯವನ್ನು ತೋರಿಸುತ್ತದೆ. ಸಾರ್ವಜನಿಕರ ರಕ್ಷಣೆಯ ಹೊಣೆ ಹೊತ್ತಿರುವ ಇಲಾಖೆಯ ಮೇಲಿನ ಜನರ ವಿಶ್ವಾಸಕ್ಕೆ ಧಕ್ಕೆಯುಂಟಾಗುವಂತಹ ಘಟನೆ ಇದಾಗಿದ್ದು, ರಾಜ್ಯದ ಕಾನೂನು ಸುವ್ಯವಸ್ಥೆಗೆ ಕಪ್ಪುಚುಕ್ಕೆಯಾಗಿದೆ ಎಂದು…

Read More

ಉದಯರಶ್ಮಿ ದಿನಪತ್ರಿಕೆ ಚಡಚಣ: ಪಟ್ಟಣದ ತಾಲೂಕು ತಹಶೀಲ್ದಾರ ಕಾರ್ಯಾಲಯದ ಸಭಾ ಭವನದಲ್ಲಿ ಗುರುವಾರದಂದು ‘ವಿಶೇಷ ಚೇತನರ’ ಕುಂದು ಕೊರತೆ ಸಭೆಯನ್ನು ಇದೇ ಮೊದಲ ಬಾರಿಗೆ ಆಯೋಜಿಸಲಾಗಿತ್ತು ಈ ಸಂದರ್ಭದಲ್ಲಿ ಅವರು ವಿಶೇಷ ಚೇತನರ ಸಮಸ್ಯೆಗಳನ್ನು ಆಲಿಸಿ ಅಧಿಕಾರಿಗಳಿಗೆ ಕಾರ್ಯಾಗಾರವನ್ನು ಆಯೋಜಿಸುವಂತೆ ಸೂಚಿಸಿದರು.ವಿಶೇಷ ಚೇತನರ ಅಧಿನಿಯಮ ೧೯೯೫ರ ಕಾಯಿದೆಯಡಿ ವಿಶೇಷ ಚೇತನರಿಗೆ ನೀಡಬೇಕಾದ ಸೌಲಭ್ಯಗಳು, ಅನುದಾನ ಮೀಸಲು ಬಳಕೆ, ಸಬಲೀಕರಣಕ್ಕೆ ತಗೆದುಕೊಳ್ಳಬೇಕಾದ ಕ್ರಮಗಳ ಕುರಿತು ಸ್ಪಷ್ಟವಾಗಿ ತಿಳಿಸಿದೆ. ಆದರೆ, ಕಾಯಿದೆ ಕುರಿತು ಬಹುತೇಕ ಎಲ್ಲ ಅಧಿಕಾರಿಗಳಿಗೆ ಅರಿವಿಲ್ಲದಿರುವುದು ಕಂಡು ಬಂದಿದೆ. ಅನುದಾನದಲ್ಲಿ ಶೇ ೫ರಷ್ಟನ್ನು ವಿಶೇಷ ಚೇತನರ ಸಬಲೀಕರಣಕ್ಕೆ ಮೀಸಲಿಡಬೇಕು. ಕ್ರಿಯಾ ಯೋಜನೆ ರೂಪಿಸಿ ಅನುದಾನವನ್ನು ಸದ್ಬಳಕೆ ಮಾಡಿಕೊಡಬೇಕು ಎಂದು ಎಂಆರ್‌ಡಬ್ಲೂ ಚಂದ್ರಕಾಂತ ಸೂರ್ಯಗಾಂವರವರು ಹೇಳಿದರು.ಬೇಡಿಕೆಗಳು: ಸಭೆಯಲ್ಲಿ ವಿಶೇಷ ಚೇತನರು ಅಧಿಕಾರಿಗಳ ವಿರುದ್ಧ ದೂರುಗಳ ಸುರಿಮಳೆಗೈದು ತಾವು ಅನುಭವಿಸುತ್ತಿರುವ ಸಂಕಷ್ಟಗಳ ಕುರಿತು ಅಳಲು ತೋಡಿಕೊಂಡರು.ಮೂರು ತಿಂಗಳಿಗೊಮ್ಮೆ ತಾಲೂಕು ಮಟ್ಟದಲ್ಲಿ ವಿಶೇಷ ಚೇತನರ ಕುಂದು ಕೊರತೆ ಸಭೆ ಆಯೀಜಿಸಬೇಕು. ವಿಶೇಷ ಚೇತನರ ಯುಡಿಐಡಿ ಕಾರ್ಡ…

Read More

ಉದಯರಶ್ಮಿ ದಿನಪತ್ರಿಕೆ ಎಚ್ ಡಿ ಕೋಟೆ: ಹಳೆ ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ನಮ್ಮ ಕಾಂಗ್ರೆಸ್ ಸರ್ಕಾರ ಮುಜರಾಯಿ ಇಲಾಖೆ ವತಿಯಿಂದ 100 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಿದೆ. ಅದರಲ್ಲಿ ಇತಿಹಾಸ ಪ್ರಸಿದ್ಧ ಶ್ರೀ ರಾಮಲಿಂಗೇಶ್ವರ ದೇವಸ್ಥಾನ ಜೀರ್ಣೋದ್ಧಾರಕ್ಕೆ ಒಂದು ಕೋಟಿ 4 ಲಕ್ಷ ಅನುದಾನ ಬಿಡುಗಡೆಯಾಗಿದ್ದು, ಶೀಘ್ರದಲ್ಲೇ ಕಾಮಗಾರಿ ಶುರುವಾಗಲಿದೆ ಎಂದು ಶಾಸಕ ಅನಿಲ್ ಚಿಕ್ಕಮಾದು ಹೇಳಿದರು.ತಾಲೂಕಿನ ಹೆಚ್ ಮಟಕೆರೆ ಗ್ರಾಮದಲ್ಲಿ ಶ್ರೀ ರಾಮಲಿಂಗೇಶ್ವರ ದೇವಸ್ಥಾನ ಜೀರ್ಣೋದ್ಧಾರಕ್ಕೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಶಾಸಕ ಅನಿಲ್ ಚಿಕ್ಕಮಾದು ಅವರು, ಶ್ರೀ ರಾಮಲಿಂಗೇಶ್ವರ ದೇವಸ್ಥಾನ ಸುತ್ತಮುತ್ತ ಕಾಂಪೌಂಡ್, ನೆಲೆಹಾಸಿಗೆ ಮತ್ತು ಸೋರಿಕೆ ತಡೆತಟ್ಟುವಂತೆ ಚಪ್ಪಡಿ ಕಲ್ಲು ಹಾಕುವುದಕ್ಕೆ ಗುದ್ದಲಿ ಪೂಜೆ ನೆರವೇರಿಸಿದ್ದೇನೆ. ಮೈಸೂರು-ಮಾನಂದವಾಡಿ ಮುಖ್ಯರಸ್ತೆಯಿಂದ ದೇವಸ್ಥಾನದವರೆಗೆ ರಸ್ತೆ ನಿರ್ಮಾಣಕ್ಕೆ ಮನವಿ ಮಾಡಿದ್ದೀರಿ. ಮುಂದಿನ ದಿನಗಳಲ್ಲಿ ರಸ್ತೆ ದುರಸ್ತಿಗೆ ಪ್ರಾಮಾಣಿಕ ಕೆಲಸ ಮಾಡುತ್ತೇನೆ. ಹಂತ ಹಂತವಾಗಿ ನಿಮ್ಮ ಎಲ್ಲ ಬೇಡಿಕೆ ಈಡೇರಿಸುತ್ತೇನೆ ಎಂದು ಭರವಸೆ ನೀಡಿದರು.ಹೆಚ್ ಮಟಕೆರೆ ಗ್ರಾಮದಲ್ಲಿ ಯಾವುದೇ ಜಾತಿ, ಧರ್ಮ, ಭೇದಭಾವ…

Read More

ಮತದಾರರ ಪಟ್ಟಿ ಪರಿಷ್ಕರಣೆ | ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಡಾ.ಆನಂದ ಕೆ. ಹೇಳಿಕೆ ಉದಯರಶ್ಮಿ ದಿನಪತ್ರಿಕೆ ​ವಿಜಯಪುರ: ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಜಿಲ್ಲೆಯಲ್ಲಿ ನಡೆಯುತ್ತಿರುವ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ-೨೦೨೬ ರ ಅಂಗವಾಗಿ ಶೇ.೧೦೦ ರಷ್ಟು ಮನೆ ಮನೆ ಭೇಟಿ ನೀಡಿ ಮತ್ತು ಗಣಕೀಕರಣ ಪ್ರಕ್ರಿಯೆಯನ್ನು ತ್ವರಿತಗೊಳಿಸಲು ಜುಲೈ ೧೧ ಮತ್ತು ೧೨ ರಂದು ಜಿಲ್ಲಾದ್ಯಂತ ವಿಶೇಷ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳಾದ ಜಿಲ್ಲಾಧಿಕಾರಿ ಡಾ.ಆನಂದ ಕೆ. ಅವರು ತಿಳಿಸಿದ್ದಾರೆ.ಯಾವುದೇ ಅರ್ಹ ಮತದಾರರು ಮತದಾನದ ಹಕ್ಕಿನಿಂದ ವಂಚಿತರಾಗಬಾರದು ಹಾಗೂ ಯಾವುದೇ ಅನರ್ಹ ಮತದಾರರು ಸೇರ್ಪಡೆಯಾಗಬಾರದು ಎಂಬ ಧೈಯದೊಂದಿಗೆ “SIಖ-೨೦೨೬ ಇಚಿಡಿಟಥಿ ಖeಚಿಛಿh ಚಿಟಿಜ ೧೦೦% ಆigiಣisಚಿಣioಟಿ ಅಚಿmಠಿಚಿigಟಿ” ಅನ್ನು ಹಮ್ಮಿಕೊಳ್ಳಲಾಗಿದೆ.​ಈ ವಿಶೇಷ ಅಭಿಯಾನ ದಿನಗಳಂದು ಜಿಲ್ಲೆಯ ಎಲ್ಲಾ ಮತಗಟ್ಟೆ ಅಧಿಕಾರಿಗಳು (ಬಿಎಲ್‌ಓ) ಬೆಳಿಗ್ಗೆ ೮:೩೦ ಗಂಟೆಯಿಂದಲೇ ಕಡ್ಡಾಯವಾಗಿ ಮನೆ-ಮನೆಗೆ ಭೇಟಿ ನೀಡಿ ಎನ್ಯೂಮರೇಷನ್ ಗಣತಿ ನಮೂನೆಗಳನ್ನು ವಿತರಿಸಲಿದ್ದಾರೆ. ದಿನಗೂಲಿ ಕಾರ್ಮಿಕರು, ಕಾರ್ಖಾನೆ ಕಾರ್ಮಿಕರು, ಸರ್ಕಾರಿ ಹಾಗೂ ಖಾಸಗಿ…

Read More

ಸಿದ್ಧರಾಮಯ್ಯ ವಿರುದ್ಧ ಗುಡುಗಿದ ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಡಿ.ಲಕ್ಷ್ಮಿನಾರಾಯಣ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಕಿಂಚಿತ್ತೂ ಅಭಿವೃದ್ಧಿ ಕಾರ್ಯ ಅನುಷ್ಠಾನಗೊಳಿಸದೇ ಕಾಂಗ್ರೆಸ್ ಹಾಗೂ ಸಿದ್ಧರಾಮಯ್ಯ ಅವರು ಹಿಂದುಳಿದ ವರ್ಗಗಳ ಶ್ರೇಯೋಭಿವೃದ್ಧಿಯ ಕಗ್ಗೊಲೆ ಮಾಡಿದ್ದಾರೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಡಿ. ಲಕ್ಷ್ಮೀನಾರಾಯಣ ಅಸಮಾಧಾನ ಹೊರಹಾಕಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಧುಸೂಧನ ನಾಯಕ ಅವರು ನೀಡಿರುವ ವರದಿಯನ್ನು ಗೌಪ್ಯವಾಗಿ ಇರಿಸಿದೇ ಅದನ್ನು ಸದನದಲ್ಲಿ ಮಂಡನೆ ಮಾಡಲೇಬೇಕು, ಅದರ ಸಮಗ್ರ ಚರ್ಚೆಗೊಳಪಡಿಸಬೇಕು, ಇಲ್ಲವಾದರೆ ಹಿಂದುಳಿದ ವರ್ಗಗಳಿಗೆ ನ್ಯಾಯ ಒದಗಿಸುವ ದೃಷ್ಟಿಯಿಂದ ವಿಧಾನಸಭೆಗೆ ಮುತ್ತಿಗೆ ಹಾಕಲು ನಾವು ಹಿಂದೇಟು ಹಾಕುವುದಿಲ್ಲ, ಕೂಡಲೇ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಿಂದುಳಿದ ವರ್ಗಕ್ಕೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು.ಹಿಂದುಳಿದ ವರ್ಗಗಳು ಕಾಂಗ್ರೆಸ್ ಅವಧಿಯಲ್ಲಿ ತತ್ತರಿಸಿ ಹೋಗಿವೆ, ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ ಆಯೋಗದ ವರದಿಯನ್ನು ಸ್ವೀಕರಿಸಲೇ ಇಲ್ಲ, ಹಿಂದುಳಿದ ವರ್ಗಗಳಿಗೆ ನ್ಯಾಯ ಒದಗಿಸುವುದಾಗಿ ಹೇಳಿ ಅಧಿಕಾರ ನಡೆಸಿದ ಸಿದ್ಧರಾಮಯ್ಯ ಅಧಿಕಾರದಲ್ಲಿದ್ದಾಗ ಹಿಂದುಳಿದ ವರ್ಗಗಳ ಬಗ್ಗೆ ಚಕಾರ…

Read More

ಲೇಖನ- ಮ.ನಾ.ಉಡುಪಹಿರಿಯ ಸಾಹಿತಿಮಂಡ್ಯ ) ಉದಯರಶ್ಮಿ ದಿನಪತ್ರಿಕೆ ಪಶ್ಚಿಮ ಘಟ್ಟದ ಮಡಿಲಲ್ಲಿ ನೆಲೆಸಿರುವ ಆಗುಂಬೆ ಕೇವಲ ಒಂದು ಘಾಟಿ ರಸ್ತೆಯಲ್ಲ, ಅದು ಒಂದು ಜೀವಂತ ಪ್ರಯೋಗಾಲಯ.ಕರ್ನಾಟಕದ ಚಿರಾಪುಂಜಿ ಎಂದೇ ಕರೆಯಲ್ಪಡುವ ಈ ಪ್ರದೇಶ ವರ್ಷಕ್ಕೆ 7000 ಮಿ.ಮೀ ಗಿಂತ ಹೆಚ್ಚು ಮಳೆ ಪಡೆಯುವ, ಯುನೆಸ್ಕೋ ವಿಶ್ವ ಪಾರಂಪರಿಕ ತಾಣದ ಭಾಗವಾಗಿರುವ ಅತ್ಯಂತ ಸೂಕ್ಷ್ಮ ಜೈವಿಕ ವಲಯ. ಇಲ್ಲಿ ಪ್ರಸ್ತಾಪವಾಗಿರುವ 13 ಕಿ.ಮೀ ಉದ್ದದ ಸುರಂಗ ಮಾರ್ಗ – ಮೇಗರವಳ್ಳಿ (ಶಿವಮೊಗ್ಗ) ಯಿಂದ ಸೋಮೇಶ್ವರ (ಉಡುಪಿ) ವರೆಗೆ, ರಾಷ್ಟ್ರೀಯ ಹೆದ್ದಾರಿ 169A ನಲ್ಲಿ – ಇದು ಅಭಿವೃದ್ಧಿಯ ಹೆಸರಿನಲ್ಲಿ ಮಾಡುವ ಆತ್ಮಹತ್ಯಾ ಪ್ರಯತ್ನವಾಗಿದೆ.”ಶೃಂಗೇರಿಗೆ ರೈಲು ಆಗುಂಬೆಗೆ ಟನಲ್ ರಸ್ತೆ ವರವಲ್ಲ, ಶಾಪ” ಈ ಮಾತು ನೂರು ಪ್ರತಿಶತ ಸತ್ಯ. ಏಕೆ ಎಂದು ವಿಜ್ಞಾನದ ಕಣ್ಣಿನಿಂದ ನೋಡೋಣ. 1. ಭೂವೈಜ್ಞಾನಿಕ ಆತ್ಮಹತ್ಯೆ: ಘಟ್ಟವನ್ನು ಕೊರೆದರೆ ಏನಾಗುತ್ತದೆ?ಪಶ್ಚಿಮ ಘಟ್ಟಗಳು ಸಹ್ಯಾದ್ರಿ ಪರ್ವತ ಶ್ರೇಣಿಯ ಲ್ಯಾಟರೈಟ್ ಮತ್ತು ಆರ್ಕಿಯನ್ ಶಿಲೆಗಳಿಂದ ಕೂಡಿದೆ. ಇವು ಗಟ್ಟಿಯಾಗಿ ಕಂಡರೂ ಒಳಗೆ…

Read More

ಭಾವರಶ್ಮಿ ಲೇಖನ- ಮಲ್ಲಪ್ಪ. ಸಿ. ಖೊದ್ನಾಪೂರ (ತಿಕೋಟಾ)ವಿಜಯಪುರ ಉದಯರಶ್ಮಿ ದಿನಪತ್ರಿಕೆ ಶ್ರೇಷ್ಠ ವಿಜ್ಞಾನಿ ಅಲ್ಬರ್ಟ ಐನಸ್ಟೀನ್ ಅವರು, “ಐiಜಿe is ಟiಞe ಡಿiಜiಟಿg ಚಿ biಛಿಥಿಛಿಟe. ಖಿo ಞeeಠಿ ಥಿouಡಿ bಚಿಟಚಿಟಿಛಿe, ಥಿou musಣ ಞeeಠಿ moviಟಿg” ಎಂದು ಹೇಳಿದ್ದಾರೆ. ಜೀವನವೆಂದರೆ ಅದೊಂದು ಬದುಕಿನ ವ್ಯಾಪಾರದ ಸಂತೆ. ಜೀವನ ಜೀವಿಸುವುದು ಮುಖ್ಯವಲ್ಲ. ನಾವು ಈ ರೀತಿ ಬದುಕು ನಡೆಸುತ್ತೇವೆ ಎಂಬುದು ಮುಖ್ಯ. ಜೀವನ ಎಂದರೆ ಒಂದು ಸಾಗರವಿದ್ದಂತೆ. ಅಲ್ಲಿ ಸವಾಲೆಂಬ ಅಲೆಗಳನ್ನು ದಾಟಿ ದಡ ಸೇರುವವನು ಮಾತ್ರ ಯಶಸ್ವಿಯಾಗುತ್ತಾನೆ. ನಮ್ಮ ಜೀವನದಲ್ಲಿ ಈಗ ಏನು ಇದೆಯೋ ಅದು ನನ್ನ ಪಾಲಿನ ಪಂಚಾಮೃತ ಅಥವಾ ಮಹಾಪ್ರಸಾದವೆಂದು ಸ್ವೀಕರಿಸುವ ಮನೋಭಾವ ನಮ್ಮಲ್ಲಿರಬೇಕು. ಅಂದಾಗ ಮಾತ್ರ ಆ ಜೀವನ ಅರ್ಥಪೂರ್ಣ ಮತ್ತು ನೆಮ್ಮದಿಯುಕ್ತ ಆಗಿರಲು ಸಾಧ್ಯ. ಸದಾ ಸಿಗಲಾರದ ವಸ್ತುವಿಗಾಗಿ ಅಥವಾ ಈಡೇರದ ಅಸೆಗಾಗಿ ಅದೇಷ್ಟೋ ಜನರು ಕೊರಗುತ್ತಾ, ದುಃಖಿತರಾಗಿ ತಮ್ಮ ಜೀವನವನ್ನೇ ವೃಥಾ ಹಾಳು ಮಾಡಿಕೊಳ್ಳುತ್ತಾರೆ. ಶ್ರೀಮಂತರನ್ನು ಕಂಡು ಅವರಂತೆ ನಮಗೂ ಮನೆ, ಹಣ,…

Read More

ಉದಯರಶ್ಮಿ ದಿನಪತ್ರಿಕೆ ಇಂಡಿ: ತಾಲೂಕಿನ ಬಬಲಾದ ಗ್ರಾಮದ ಸರಕಾರಿ ಮತ್ತು ಕ್ಷೇಮ ಕೇಂದದ ಸರಕಾರಿ ವೈದ್ಯರ ಕೋಣೆಗೆ ಸದಾ ಬೀಗ ಹಾಕಿರುತ್ತದೆ.ಇಲ್ಲಿ ನಾಲ್ಕು ಜನ ಸಿಬ್ಬಂದಿ ಇದ್ದಾರೆ. ಒಬ್ಬರು ವೈದ್ಯರು, ಒಬ್ಬರು ಸಮುದಾಯ ಆರೋಗ್ಯ ಅಧಿಕಾರಿ ಒಬ್ಬರು ಡಿ.ದರ್ಜೆ ನೌಕರರು ಮತ್ತು ಒಬ್ಬರು ಸ್ಟಾಫ್ ನರ್ಸ.ಸ್ಟಾಫ್ ನರ್ಸ ಹಿರೇಮಠ ರವರು ಮಾತ್ರ ಆಸ್ಪತ್ರೆಯಲ್ಲಿ ಇರುತ್ತಾರೆ. ಉಳಿದವರು ಇರುವದಿಲ್ಲ. ಆಗೊಮ್ಮೆ ಈಗೊಮ್ಮೆ ಬರುತ್ತಾರೆ ಎಂಬುದು ಗ್ರಾಮಸ್ಥರ ವಾದ.ಇಲ್ಲಿ ಕೇವಲ ಸ್ಟಾಫ್ ನರ್ಸರವರು ಜ್ವರ, ಕೆಮ್ಮು ನೆಗಡಿ, ಸಂಡಾಸ ಮಾತ್ರ ಔಷಧಿ ನೀಡುತ್ತಾರೆ. ಸಿರಿಯಸ್ ರೋಗಿ ಬಂದರೆ ಅವರಿಗೆ ಮಂಚಗಳಿಲ್ಲ, ಸರಿಯಾದ ಉಪಕರಣಗಳಿಲ್ಲ ಮತ್ತು ಔಷದೋಪಚಾರ ಇರುವದಿಲ್ಲ. ಇನ್ನೂ ಗರ್ಭೀಣಿಯರು ಹೆರಿಗೆಗೆ ಇಂಡಿ ವಿಜಯಪುರ ಅಥವಾ ಸೋಲಾಪುರಕ್ಕೆ ಹೋಗಬೇಕು.ಸುಸಜ್ಜಿತ ಆಸ್ಪತ್ರೆ ಇದೆ, ಆದರೆ ಸರಿಯಾದ ವ್ಯವಸ್ಥೆ ಇಲ್ಲ ಎಂಬುದು ಗ್ರಾಮಸ್ಥರ ವಾದ. “ಇಲ್ಲಿಯ ವೈದ್ಯರಿಗೆ ಹೊರ್ತಿಗೆ ನಿಯೋಜನೆ ಮಾಡಿದ್ದಾರೆ. ಅದನ್ನು ರದ್ದು ಮಾಡಿ ಮತ್ತೆ ಅವರಿಗೆ ಬಬಲಾದಕ್ಕೆ ನಿಯೋಜಿಸಲಾಗುತ್ತಿದೆ.” – ಆರ್.ಎಸ್.ಇಂಗಳೆಪ್ರಭಾರಿ ತಾಲೂಕಾ ವೈದ್ಯಾಧಿಕಾರಿಗಳು,…

Read More

ಉದಯರಶ್ಮಿ ದಿನಪತ್ರಿಕೆ ಆಲಮಟ್ಟಿ: ಕೃಷ್ಣಾ ಮೇಲ್ದಂಡೆ ಯೋಜನೆ (ಯು.ಕೆ.ಪಿ.) ಅಡಿ ಕೆಲಸ ಮಾಡುತ್ತಿರುವ ಭೂಮಾಪಕರ ವರ್ಗಾವಣೆಯನ್ನು ರದ್ದುಪಡಿಸಬೇಕೆಂದು ಅಖಂಡ ಕರ್ನಾಟಕ ರೈತ ಸಂಘ ಆಗ್ರಹಿಸಿದೆ.ಯು.ಕೆ.ಪಿ.ಯಲ್ಲಿ ಕಳೆದ ೧೫ ವರ್ಷಗಳಿಂದ ಭೂಮಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದವರನ್ನು ಸರ್ಕಾರ ಇತ್ತೀಚೆಗೆ ವರ್ಗಾವಣೆ ಮಾಡಿದೆ. ಇದರಿಂದ ರೈತರಿಗೆ ಪರಿಹಾರ ವಿತರಣೆ ಸೇರಿದಂತೆ ಇನ್ನಿತರ ಕೆಲಸಗಳಿಗೆ ತೊಂದರೆಯಾಗಲಿದೆ ಎಂದು ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ.ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ನೇತೃತ್ವದಲ್ಲಿ ಬಾಗಲಕೋಟ ನವನಗರದಲ್ಲಿರುವ ಪುನರ್ವಸತಿ, ಪುನರ್ನಿರ್ಮಾಣ ಮತ್ತು ಭೂಸ್ವಾಧೀನ (ಕ್ರ.ಮ.ಯೋ.) ಪದನಿಮಿತ್ಯ ಸರ್ಕಾರದ ಕಾರ್ಯದರ್ಶಿಗಳು ಹಾಗೂ ಜಲಸಂಪನ್ಮೂಲ ಸಚಿವರಿಗೆ ಬರೆದ ಪತ್ರವನ್ನು ಗುರುವಾರ ಕೃಷ್ಣಾ ಮೇಲ್ದಂಡೆ ಯೋಜನೆಯ ವ್ಯವಸ್ಥಾಪಕ ವಿ.ಪಿ. ಹಡ್ಲಗೇರ್ ಅವರಿಗೆ ಸಲ್ಲಿಸಲಾಯಿತು.ಈ ವೇಳೆ ಮಾತನಾಡಿದ ಅರವಿಂದ ಕುಲಕರ್ಣಿ, “ವಿಜಯಪುರ ಮತ್ತು ಬಾಗಲಕೋಟ ಜಿಲ್ಲೆಯ ಯು.ಕೆ.ಪಿ. ಅಡಿಯಲ್ಲಿ ಭೂಮಿ ಕಳೆದುಕೊಂಡ ರೈತರಿಗೆ ಜೀವನಾಧಾರವೇ ನಷ್ಟವಾಗಿದೆ. ಜೆ.ಎಂ.ಸಿ. ಸರ್ವೇ, ಭೂಸ್ವಾಧೀನ ಪ್ರಕ್ರಿಯೆ, ಪರಿಹಾರ ಪಾವತಿ, ಪುನರ್ವಸತಿ ಸೇರಿ ಹಲವು ಕಾಮಗಾರಿಗಳು ಬಾಕಿ ಇವೆ. ಈ ಹಂತದಲ್ಲಿ ಅನುಭವಿ ಭೂಮಾಪಕರನ್ನು…

Read More

ನೀರು ಹರಿಸದಿದ್ದರೆ ಉಗ್ರ ಹೋರಾಟ | ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ ಎಚ್ಚರಿಕೆ ಉದಯರಶ್ಮಿ ದಿನಪತ್ರಿಕೆ ಆಲಮಟ್ಟಿ: ಮುಂಗಾರು ಮಳೆ ವಿಳಂಬವಾಗಿರುವ ಹಿನ್ನೆಲೆಯಲ್ಲಿ ರೈತರ ಬೆಳೆಗಳು ಒಣಗುತ್ತಿದ್ದು, ತುರ್ತಾಗಿ ಜುಲೈ ೧೪ರೊಳಗೆ ಜಿಲ್ಲೆಯ ಪ್ರಮುಖ ಏತ ನೀರಾವರಿ ಯೋಜನೆಗಳಿಗೆ ನೀರು ಹರಿಸಬೇಕು ಎಂದು ಮಾಜಿ ಸಚಿವ ಹಾಗೂ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಎಸ್.ಕೆ. ಬೆಳ್ಳುಬ್ಬಿ ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.ಈ ಕುರಿತು ನೀರಾವರಿ ನಿಗಮದ ಮುಖ್ಯ ಅಭಿಯಂತರರಿಗೆ ಮನವಿ ಸಲ್ಲಿಸಿರುವ ಅವರು, ಮುಳವಾಡ, ಚಿಮ್ಮಲಗಿ, ಗುತ್ತಿ ಬಸವಣ್ಣ ಏತ ನೀರಾವರಿ ಯೋಜನೆಗಳು ಹಾಗೂ ಆಲಮಟ್ಟಿ ಎಡ ಮತ್ತು ಬಲದಂಡೆಯ ಲಿಫ್ಟ್ ನೀರಾವರಿ ಯೋಜನೆಗಳನ್ನು ಕೂಡಲೇ ಕಾರ್ಯಾರಂಭಗೊಳಿಸುವಂತೆ ಸೂಚಿಸಿದ್ದಾರೆ.ಮನವಿ ಬಳಿಕ ಮಾತನಾಡಿದ ಬೆಳ್ಳುಬ್ಬಿ, “ಮಳೆಯ ಕೊರತೆಯಿಂದ ರೈತರು ಹಾಕಿರುವ ಬೆಳೆಗಳು ಒಣಗುವ ಹಂತ ತಲುಪಿವೆ. ಬೆಳೆ ನಷ್ಟದ ಜೊತೆಗೆ ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೂ ತೀವ್ರ ಸಮಸ್ಯೆಯಾಗುವ ಆತಂಕವಿದೆ. ಮಹಾಪೂರದ ನೀರು ಲಭ್ಯವಾದ ಕೂಡಲೇ ಯಾವುದೇ ವಿಳಂಬ ಮಾಡದೆ ಈ ಯೋಜನೆಗಳಿಗೆ ನೀರು ಹರಿಸಿ…

Read More