Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಕಾಲಾಯ ತಸ್ಮೈ ನಮಃ

ಸ್ವಲ್ಪ ಸಮಯ ಸಿಕ್ಕರೂ ಸಾಕು ಅದು ರಸಮಯ

ಬಿಳಿಜೋಳ ಮತ್ತು ಕಣಿಕೆಗೆ ಹೆಚ್ಚಿದ ಬೇಡಿಕೆ :ಸಾಗಣೆ ಜೋರು

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಬಿಳಿಜೋಳ ಮತ್ತು ಕಣಿಕೆಗೆ ಹೆಚ್ಚಿದ ಬೇಡಿಕೆ :ಸಾಗಣೆ ಜೋರು
(ರಾಜ್ಯ ) ಜಿಲ್ಲೆ

ಬಿಳಿಜೋಳ ಮತ್ತು ಕಣಿಕೆಗೆ ಹೆಚ್ಚಿದ ಬೇಡಿಕೆ :ಸಾಗಣೆ ಜೋರು

By Updated:No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಉದಯರಶ್ಮಿ ದಿನಪತ್ರಿಕೆ

ವರದಿ: ಸಿದ್ರಾಮ್ ಎಮ್ ಇಟ್ಟಿ
ಜಮಖಂಡಿ: ಬಾಗಲಕೋಟೆ ಜಿಲ್ಲೆಯಲ್ಲಿ ಕಳೆದ ಎರಡ್ಮೂರು ತಿಂಗಳು ಕಬ್ಬಿನ ಟ್ರ್ಯಾಕ್ಟರ್ ಗಳ ಓಡಾಟ ಜೋರಾಗಿತ್ತು ಆದ್ರೆ ಈಗ ಕಾರ್ಖಾನೆಗಳೆಲ್ಲ ಬಂದಾಗಿ ಕಬ್ಬಿನ ಟ್ರ್ಯಾಕ್ಟರ್ ಗಳ ಓಡಾಟ ಬಂದಾಗಿದ್ದು ಸಧ್ಯ ಎಲ್ಲೆಡೆ ಜೋಳದ ಕಣಿಕೆ ಹೊತ್ತ ಟ್ರ್ಯಾಕ್ಟರ್‌ಗಳ ಓಡಾಟ ಹೆಚ್ಚಾಗಿದೆ. ಕಬ್ಬಿನ ಟ್ರ್ಯಾಕ್ಟರ್‌ಗಳು ಸಕ್ಕರೆ ಕಾರ್ಖಾನೆಗಳತ್ತ ಮುಖಮಾಡುತ್ತಿದ್ದವು, ಕಣಿಕೆ ಹೊತ್ತ ವಾಹನಗಳು ಒಣಬೇಸಾಯ ಪ್ರದೇಶಗಳಿಂದ ಕಬ್ಬು ಬೆಳೆ ಪ್ರದೇಶಗಳತ್ತ ಹೋಗುತ್ತಿವೆ.
ನೆರೆ ರಾಜ್ಯಕ್ಕೂ ಸಾಗಣೆ : ಬಾಗಲಕೋಟೆˌ ಹುನಗುಂದ, ಬಾದಾಮಿ ಮತ್ತು ವಿಜಯಪೂರ ಜಿಲ್ಲೆಯ ಬಹುತೇಕ ತಾಲೂಕುಗಳ ಭಾಗದಲ್ಲಿ ಬೆಳೆದ ಬಿಳಿಜೋಳದ ಕಣಿಕೆ ಬೀಳಗಿ, ಮುಧೋಳ ಮತ್ತು ಜಮಖಂಡಿ ತಾಲೂಕಿನ ಗ್ರಾಮಗಳಿಗೆ ಬರುತ್ತಿದೆ. ಅಷ್ಟಾದರೆ ಪರವಾಗಿಲ್ಲ. ಬಾಗಲಕೋಟೆ ಮತ್ತು ವಿಜಯಪೂರ ಜಿಲ್ಲೆಯ ಕಣಿಕೆ ಅಕ್ಕಪಕ್ಕದ ಜಿಲ್ಲೆ ಮತ್ತು ನೆರೆಯ ಮಹಾರಾಷ್ಟ್ರಕ್ಕೂ ಸಾಗಣೆ ಆಗುತ್ತಿದೆ. ರಾಜ್ಯ ಹೆದ್ದಾರಿಗಳ ಮೇಲೆ ಕಣಿಕೆ ಸಾಗಣೆ ಜೋರಾಗಿದೆ. ಟ್ರ್ಯಾಕ್ಟರ್ ಟೇಲರ್ˌ ಲಾರಿˌ ಚಕ್ಕಡಿಯಲ್ಲೂ ಕಣಿಕೆ ಸಾಗಣೆ ದೃಶ್ಯ ಕಾಣಬಹುದಾಗಿದೆ.
ಹೆಚ್ಚಿದ ಬೇಡಿಕೆ: ಬಾಗಲಕೋಟೆ ಜಿಲ್ಲೆಯ ಮುಧೋಳ, ಬೀಳಗಿ ಹಾಗೂ ಜಮಖಂಡಿ ತಾಲೂಕುಗಳಲ್ಲಿನ ರೈತರು ಹೆಚ್ಚಾಗಿ ಕಬ್ಬನ್ನೇ ಬೆಳೆಯುತ್ತಿರುವುದರಿಂದ ಜಾನುವಾರುಗಳಿಗೆ ಅಗತ್ಯವಾಗಿ ಬೇಕಿರುವ ಬಿಳಿಜೋಳ ಕಣಿಕೆಯನ್ನು ಒಣಬೇಸಾಯ ಪ್ರದೇಶದಿಂದಲೇ ಪಡೆದುಕೊಳ್ಳಬೇಕಾಗಿದೆ. ಜಾನುವಾರುಗಳಿಗೆ ಹಸಿರು ಹುಲ್ಲು ಈ ಪ್ರದೇಶದಲ್ಲಿ ಸಾಕಷ್ಟು ಲಭ್ಯವಿದ್ದರೂ ಜೋಳದ ಕಣಿಕೆಯ ಅಗತ್ಯವೂ ಸಾಕಷ್ಟಿದೆ. ಹಾಗಾಗಿ ಈ ಭಾಗದಲ್ಲಿನ ರೈತರು ಕಣಿಕೆ ಖರೀದಿಸುವ ಅನಿವಾರ್ಯತೆ ಸೃಷ್ಠಿಯಾಗಿದೆ.
7-10 ಸಾವಿರ ರೂಪಾಯಿ : ಜೋಳ ಬೆಳೆಯುವ ಪ್ರದೇಶ ವರ್ಷದಿಂದ ವರ್ಷಕ್ಕೆ ಕಡಿಮೆ ಆಗಿ ನೀರಾವರಿ ವ್ಯಾಪ್ತಿ ಹೆಚ್ಚುತ್ತಿದೆ. ಪರಿಣಾಮವಾಗಿ ಬಿಳಿಜೋಳ ಮತ್ತು ಕಣಿಕೆ ಎಲ್ಲಿಲ್ಲದ ಬೇಡಿಕೆ ಪಡೆದುಕೊಂಡಿವೆ.
ಪಕ್ಕದ ವಿಜಯಪೂರ ಜಿಲ್ಲೆಯ ಬಬಲೇಶ್ವರ ತಾಲೂಕಿನ ನಾನಾ ಹಳ್ಳಿಗಳ ಭಾಗದ ಜೋಳದ ಕಣಿಕೆಗೆ ಎಲ್ಲಿಲ್ಲದ ಬೇಡಿಕೆ ಇದೆ. ಇಲ್ಲಿನ ಕಣಿಕೆಯ ರುಚಿ ಇತರ ಭಾಗಗಗಳಿಗಿಂತ ಚೆನ್ನಾಗಿರುತ್ತದೆ ಎನ್ನುವುದು ರೈತರ ಅಭಿಪ್ರಾಯವಾಗಿದೆ. ಹಾಗಾಗಿ ಇಲ್ಲಿನ ಪ್ರತಿ ಟ್ರ್ಯಾಕ್ಟರ್ ಕಣಿಕೆ 7 ಸಾವಿರದಿಂದ 10 ಸಾವಿರ ರೂಪಾಯಿಗಳಿದ್ದು, ಒಂದು ಚಕ್ಕಡಿಗೆ ಕನಿಷ್ಠ 2500 ರಿಂದ 3 ಸಾವಿರ ರೂಪಾಯಿ ಇದೆ. 5 ಮಾರು ಉದ್ದ ಮತ್ತು 2 ಮಾರು ಅಗಲದ ಬಣಿವೆಗಳಿಗೆ 25 ಸಾವಿರದಿಂದ 30 ಸಾವಿರಗಳವರೆಗೆ ಬೆಲೆ ಇದೆ. ಆಗಷ್ಟ ವೇಳೆಗೆ ಈ ಬೆಲೆ 40ರಿಂದ 50 ಸಾವಿರ ರೂ.ಗಳ ವರೆಗೂ ತಲುಪಲಿದೆ ಎನ್ನುವುದು ರೈತರ ನಿರೀಕ್ಷೆ.

ನೀರಾವರಿ ಹೆಚ್ಚಳ ಪರಿಣಾಮ

ಮಾರುಕಟ್ಟೆಯಲ್ಲಿ ಜೋಳ ಸಿಕ್ಕರೂ ಅದರ ಕಣಿಕೆ ಸಿಗುವುದು ಕಷ್ಟವಾಗಿದೆ. ಜೋಳ ಬೆಳೆಯುವ ಬಹುತೇಕ ರೈತರು ತಮ್ಮ ಜಾನುವಾರುಗಳಿಗಾಗಿಯೇ ಕಣಿಕೆ ಬೇಕಾಗುತ್ತದೆ ಎಂದು ಬಣಿವೆ ಒಟ್ಟುತ್ತಾರೆ. ಹೆಚ್ಚಾದ ಕಣಿಕೆಯನ್ನು ಮಾತ್ರ ಮಾರಾಟ ಮಾಡುತ್ತಾರೆ. ಹಾಗಾಗಿ ಬಿಳಿಜೋಳದ ಕಣಿಕೆಗೆ ಎಲ್ಲಿಲ್ಲದ ಬೇಡಿಕೆ ಬಂದಿದೆ. ಇಂತಹುದೇ ಸ್ಥಿತಿ ಉತ್ತರ ಕರ್ನಾಟಕದ ಇತರ ಭಾಗಗಳಲ್ಲೂ ಇದೆ. ಕಾರಣವಿಷ್ಟೇ ರೈತರು ಒಣಬೇಸಾಯ ಬಿಟ್ಟು ನೀರಾವರಿಯತ್ತ ಚಿತ್ತ ಹರಿಸಿದ್ದರ ಫಲವಾಗಿ ನೀರಾವರಿ ಪ್ರದೇಶದ ರೈತರು ಕಣಿಕೆಗಾಗಿ ಪರದಾಡಬೇಕಾಗಿದೆ.

ಕೋಟ್

“ನಮ್ಮ ಭಾಗದಲ್ಲಿ ಇಲ್ಲಿಯವರೆಗೂ ಕಬ್ಬು ಕಟಾವು ಜೋರಾಗಿತ್ತು ಅದರಿಂದ ಕಬ್ಬಿನ ಮೇಲಿನ ಹಸಿರು ಮೇವು ಸಿಗುತ್ತಿತ್ತು ಆದರೆ ಬೀರು ಬೆಸಿಗೆಯ ಪರಿಣಾಮ ಮುಂಬರುವ ದಿನಗಳಲ್ಲಿ ಮೇವಿನ ಕೊರತೆ ಆಗಬಾರದೆಂಬ ಮುನ್ನೆಚ್ಚರಿಕೆಯಿಂದ ದೂರದ ಜೋಳದ ಕಣಿಕೆ ಕರಿದಿಸುತ್ತಿದ್ದೆವೆ.”

– ಸಂಗಮೇಶ ಕೋಹಳ್ಳ
ಆಲಗೂರ ಗ್ರಾಮದ ಯುವ ರೈತ

BIJAPUR NEWS bjp public public news Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಕಾಲಾಯ ತಸ್ಮೈ ನಮಃ

ಸ್ವಲ್ಪ ಸಮಯ ಸಿಕ್ಕರೂ ಸಾಕು ಅದು ರಸಮಯ

ಏ.4 ರಂದು ನಿರಂತರ ವೈದ್ಯಕೀಯ ಶಿಕ್ಷಣ ಮತ್ತು ಕಾರ್ಯಾಗಾರ

ಯತ್ನಾಳ ಆಪ್ತ ನಂದು ಗಡಗಿ ಬಿಜೆಪಿ ಸೇರ್ಪಡೆ

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಕಾಲಾಯ ತಸ್ಮೈ ನಮಃ
    In ಭಾವರಶ್ಮಿ
  • ಸ್ವಲ್ಪ ಸಮಯ ಸಿಕ್ಕರೂ ಸಾಕು ಅದು ರಸಮಯ
    In ವಿಶೇಷ ಲೇಖನ
  • ಬಿಳಿಜೋಳ ಮತ್ತು ಕಣಿಕೆಗೆ ಹೆಚ್ಚಿದ ಬೇಡಿಕೆ :ಸಾಗಣೆ ಜೋರು
    In (ರಾಜ್ಯ ) ಜಿಲ್ಲೆ
  • ಏ.4 ರಂದು ನಿರಂತರ ವೈದ್ಯಕೀಯ ಶಿಕ್ಷಣ ಮತ್ತು ಕಾರ್ಯಾಗಾರ
    In (ರಾಜ್ಯ ) ಜಿಲ್ಲೆ
  • ಯತ್ನಾಳ ಆಪ್ತ ನಂದು ಗಡಗಿ ಬಿಜೆಪಿ ಸೇರ್ಪಡೆ
    In (ರಾಜ್ಯ ) ಜಿಲ್ಲೆ
  • ಚಿದಂಬರ ಸೇವಾ ಸಮಿತಿಯಿಂದ ಹನುಮಾನ ಜಯಂತಿ ಆಚರಣೆ
    In (ರಾಜ್ಯ ) ಜಿಲ್ಲೆ
  • ಮಕ್ಕಳಿಗೆ ಅಡಿಪಾಯದ ಶಿಕ್ಷಣ ಬಹಳ ಮುಖ್ಯ :ಶಂಕರಗೌಡ
    In (ರಾಜ್ಯ ) ಜಿಲ್ಲೆ
  • ತಾಪಮಾನ ಹಿನ್ನೆಲೆ ಬದಲಾದ ಸರ್ಕಾರಿ ಕಚೇರಿ ಸಮಯ
    In (ರಾಜ್ಯ ) ಜಿಲ್ಲೆ
  • ಹಿಂಗಾರು ಹಂಗಾಮಿಗೆ ಏ.೭ ವರೆಗೆ ಕಾಲುವೆ ಜಾಲಕ್ಕೆ ನೀರು
    In (ರಾಜ್ಯ ) ಜಿಲ್ಲೆ
  • ವಜ್ರಹನುಮಾನ ದೇಗುಲದಲ್ಲಿ ಹನುಮಾನ ಜಯಂತಿ ಆಚರಣೆ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.