ಉದಯರಶ್ಮಿ ದಿನಪತ್ರಿಕೆ
ಇಂಡಿ: ನಗರ ಸೇರಿದಂತೆ ತಾಲೂಕಿನಲ್ಲಿ ಹನುಮಾನ ಭಕ್ತರು ಶ್ರದ್ದೆ ಮತ್ತು ಭಕ್ತಿಯಿಂದ ಹನುಮ ಜಯಂತಿ ಆಚರಿಸಿದರು.
ನಗರದ ಹಿರೇಇಂಡಿ, ಮಹಾವೀರ ವೃತ್ತದಲ್ಲಿರುವ ಅಗಸಿ ಹನುಮಾನ ಮಂದಿರ, ಕೆಈಬಿ ಹನುಮಾನ ದೇವಸ್ಥಾನ, ಪಂಚಾಯತ ರಾಜ ಆವರಣದಲ್ಲಿರುವ ಹನುಮಾನ ಮಂದಿರ, ಆರೋಗ್ಯ ಇಲಾಖೆಯಲ್ಲಿರುವ ಹನುಮಾನ ಮಂದಿರ,ಮಲ್ಲಿಕಾರ್ಜುನ ದೇವಸ್ಥಾನ , ಸಿಂದಗಿ ರಸ್ತೆ ಸೇರಿದಂತೆ ಇತರೆ ಎಲ್ಲ ಕಡೆಗೂ ಹನುಮ ಜಯಂತಿ ಆಚರಿಸಲಾಯಿತು.
ದೇಶಪಾಂಡೆ ತಾಂಡಾ, ಸಾಲೋಟಗಿ ಗ್ರಾಮದ ಮೂರು ಕಡೆ, ಆಳೂರ, ಇಂಗಳಗಿ ಅಗರಖೇಡ ಸೇರಿದಂತೆ ತಾಲೂಕಿನ ಅನೇಕ ಕಡೆ ಹನುಮ ಜಯಂತಿ ಆಚರಿಸಲಾಯಿತು.
ಎಲ್ಲ ಕಡೆ ಬೆಳಗ್ಗೆ ಆರತಿ, ಅಭಿಷೇಕ, ಪೂಜೆ ಅಲಂಕಾರ ಪಾಲಕಿ ಮೆರವಣೆಗೆ , ತೊಟ್ಟಿಲು ಹಾಕುವ ಕಾರ್ಯಕ್ರಮ ಜೊತೆಗೆ ಅನ್ನ ಪ್ರಸಾದ ವಿತರಣೆ ನಡೆಯಿತು.

