Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲಾಡಳಿತದ ವತಿಯಿಂದ ಇದೇ ಅಕ್ಟೋಬರ್ ೨ರಂದು ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ ಶಾಸ್ತ್ರೀ ಅವರ ಜಯಂತಿ ಕಾರ್ಯಕ್ರಮವನ್ನು ಅತ್ಯಂತ ಅರ್ಥಪೂರ್ಣವಾಗಿ ಅಚ್ಚುಕಟ್ಟಾಗಿ ಆಯೋಜಿಸಲು ನಿರ್ಧರಿಸಲಾಯಿತು.ಶನಿವಾರ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ ಶಾಸ್ತ್ರಿ ಜಯಂತಿಯ ಪೂರ್ವಭಾವಿ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು.ಸಾರ್ವಜನಿಕರಿಗೆ ಮಹಾತ್ಮ ಗಾಂಧೀಜಿಯವರ ಬದುಕು, ಆದರ್ಶ ಹಾಗೂ ಅವರ ಜೀವನ ಸಂದೇಶದ ಅರಿವು ಮೂಡಿಸುವ ನಿಟ್ಟಿನಲ್ಲಿ ಅಕ್ಟೋಬರ್ ೧ ರಂದು ಬೆಳಗ್ಗೆ ೬.೩೦ಕ್ಕೆ ಸೈನಿಕ ಶಾಲೆಯ ಎದುರಿಗೆ ಇರುವ ಲಾಲ್ ಬಹದೂರ ಶಾಸ್ತಿç ಪುತ್ಥಳಿಯಿಂದ ಅಲ್ಲಾಪೂರ ಓಣಿಯವರೆಗೆ ಸೈಕಲ್ ಜಾಥಾ ಕಾರ್ಯಕ್ರಮ ಹಾಗೂ ಅಲ್ಲಾಪೂರ ಓಣಿ ಹಾಗೂ ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ, ಅಕ್ಟೋಬರ್ ೨ರಂದು ಬೆಳಿಗ್ಗೆ ೬.೩೦ಕ್ಕೆ ತೊರವಿಯಲ್ಲಿ ಸ್ವಚ್ಚತಾ ಹಾಗೂ ಶ್ರಮದಾನ ಕಾರ್ಯಕ್ರಮ ಹಮ್ಮಿಕೊಳ್ಳಲು ನಿರ್ಧರಿಸಲಾಯಿತು. ಜಿಲ್ಲೆಯ ವಿವಿಧ ಇಲಾಖೆಯ ಅಧಿಕಾರಿ, ಸಿಬ್ಬಂದಿ, ವಿವಿಧ ಸಂಘ…

Read More

ಉದಯರಶ್ಮಿ ದಿನಪತ್ರಿಕೆ ಚಡಚಣ: ಪಟ್ಟಣದ ಸಂಗಮೇಶ್ವರ ಪದವಿ ಪೂರ್ವ ಮಹಾವಿದ್ಯಾಲಯದ ಎನ್, ಎಸ್, ಎಸ್ ಘಟಕ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಚಡಚಣ ಇವರ ಸಹಯೋಗದೊಂದಿಗೆ ಶ್ರೀ ಸಂಗಮೇಶ್ವರ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಶುಕ್ರವಾರದಂದು ರಾಷ್ಟ್ರೀಯ ಪೋಷಣಾ ಅಭಿಯಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.ಚಡಚಣ ತಾಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸಾಹೇಬಗೌಡ ಜುಂಜರವಾಡ ಮಾತನಾಡಿ, ಪೋಷಕಾಂಶಗಳ ಬಗ್ಗೆ ಹೆಚ್ಚಿನ ಗಮನ ಹರಿಸುವ ಮೂಲಕ ತಮ್ಮ ಆರೋಗ್ಯ ಕಾಪಾಡಿಕೊಳ್ಳ ಬೇಕು ಎಂದರು.ಮುಖ್ಯ ಅತಿಥಿ ತಾಲೂಕಿನ ಶಿಶು ಅಭಿವೃದ್ಧಿ ಯೋಜನೆಯ ಹಿರಿಯ ಮೇಲ್ವಚಾರಕಿ ಶ್ರೀಮತಿ ಎನ್. ಆರ್. ಬಿರಾದಾರ ಅವರು ಮಾತನಾಡಿ, ಆರೋಗ್ಯಕಾರಿ ಹಾಗೂ ಪೋಷಕಾಂಶಗಳಿರುವಂತಹ ಆಹಾರ ಕ್ರಮವು ನಮ್ಮ ಆರೋಗ್ಯಕ್ಕೆ ಅತೀ ಅಗತ್ಯ, ಅದನ್ನು ನಾವು ದಿನನಿತ್ಯ ರೂಡಿಸಿಕೊಳ್ಳಬೇಕು ಎಂದರು.ಅಧ್ಯಕ್ಷತೆಯನ್ನು ಮಹಾವಿದ್ಯಾಲಯದ ಪ್ರಾಚಾರ್ಯರಾದ ಎಮ್.ವಿ. ಕಟಗೇರಿ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಶ್ರೀ ಸಂಗಮೇಶ್ವರ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಎಸ್. ಎಸ್.ಚೋರಗಿ ಭಾಗವಹಿಸಿದ್ದರು.ಕಾರ್ಯಕ್ರಮದಲ್ಲಿ ಎನ್ . ಎಸ್.ಎಸ್. ಅಧಿಕಾರಿಗಳಾದ ಎಚ್‌.ಎಸ್. ಮಕಾನದಾರ,…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ತೃತೀಯ ಲಿಂಗದವರು ಸಮಾಜದ ಮುಖ್ಯವಾಹಿನಿಗೆ ಬರಲು ಶಿಕ್ಷಣ ಮತ್ತು ಕೌಶಲ್ಯ ಆಧಾರಿತ ತರಬೇತಿಯನ್ನು ಪಡೆದುಕೊಳ್ಳಬೇಕೆಂದು ಮೌಲ್ಯಮಾಪನ ಕುಲಸಚಿವ ಪ್ರೊ.ಎಚ್.ಎಂ.ಚಂದ್ರಶೇಖರ್ ಹೇಳಿದರು.ಇಲ್ಲಿಯ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಡಾ.ಬಿ.ಆರ್. ಅಂಬೇಡ್ಕರ್ ಸಭಾ ಭವನದಲ್ಲಿ ಡಾ.ರೂಪಾ.ಕ.ನಾಯಕೋಡಿ ಅವರ ಐಸಿಎಸ್‌ಎಸ್‌ಆರ್ ಪಿ.ಡಿ.ಎಫ್ ಸಂಶೋಧನೆ ಅಂಗವಾಗಿ ನವಸ್ಪೂರ್ತಿ ಸರಕಾರೇತರ ಸಂಘದ ಸಹಯೋಗದಲ್ಲಿ ಗುರುವಾರ ಹಮ್ಮಿಕೊಂಡಿದ್ದ ೧೦೦ ಜನ ತೃತಿಯ ಲಿಂಗದವರ “ಒಂದು ದಿನದ ಕೌಶಲ್ಯ ಆಧಾರಿತ ತರಬೇತಿಯನ್ನು” ಉದ್ಘಾಟಿಸಿ ಅವರು ಮಾತನಾಡಿದರು.ಮುಖ್ಯಅತಿಥಿಗಳಾಗಿದ್ದ ನಿಪ್ಪಾಣಿಯ ಕೆ.ಎಲ್.ಇ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಬಿ.ಬಿ. ಪೋಲಿಸಪಾಟೀಲ್ ಅವರು, ಮೂಢನಂಬಿಕೆಗಳಿಂದ ಹೊರಬಂದು ಶಿಕ್ಷಣ ಮತ್ತು ಕೌಶಲ್ಯ ಆಧಾರಿತ ತರಬೇತಿಯನ್ನು ಪಡೆದುಕೊಂಡಾಗ ಮಾತ್ರ ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.ಈ ಸಂದರ್ಭದಲ್ಲಿ ನವಸ್ಪೂರ್ತಿ ಸರಕಾರೇತರ ಸಂಸ್ಥೆಯ ನಿರ್ದೇಶಕ ಶೆಬ್ಬೀರ ಕಾಗಜಕೊಟಿ, ರುಢಸೆಟ್ ಸಂಸ್ಥೆ ನಿರ್ದೇಶಕ ಮುತ್ತಣ್ಣಾ ಧನಗಾರ, ಪ್ರೊ.ಬಿ.ಎಲ್.ಲಕ್ಕಣ್ಣನವರ, ಪ್ರೊ.ವೆಂಕೋಬಾ ನಾರಾಯಣ್ಣಪ್ಪ, ಪ್ರೊ.ವಿಷ್ಟು ಶಿಂದೆ, ಪ್ರೊ.ಅಶೋಕ ಸುರಪುರ, ಉಪಸ್ಥಿತರಿದ್ದರು.ಡಾ.ರೂಪಾ ನಾಯ್ಕೋಡಿ ಸ್ವಾಗತಿಸಿದರು. ಸಂಶೋಧನಾ ವಿಧ್ಯಾರ್ಥಿನಿ ಪದ್ಮಾವತಿ ಯತಗಲ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಹೆಣ್ಣು ಮಗುವನ್ನು ಸಂರಕ್ಷಿಸಿ, ಪೋಷಣೆ ಮಾಡಿ ಸುಶಿಕ್ಷಿತರನ್ನಾಗಿ ಮಾಡಿದರೆ ಲಿಂಗಾಧಾರಿತ ತಾರತಮ್ಯ ಹೋಗಲಾಡಿಸಲು ಸಾಧ್ಯ ಎಂದು ಅಂಗನವಾಡಿ ಕೇಂದ್ರದ ಹಿರಿಯ ಮೇಲ್ವಿಚಾರಕಿ ಪ್ರಮೀಳಾ ಕುಂದಗೋಳ ಹೇಳಿದರು.ಅವರು ಶನಿವಾರದಂದು ತಾಲೂಕಿನ ನಾಗಠಾಣ ಗ್ರಾಮದ ಅಂಗನವಾಡಿ ಕೇಂದ್ರ-5 ರಲ್ಲಿ ಗ್ರಾಮ ಪಂಚಾಯಿತಿ, ಆರೋಗ್ಯ-ಶಿಕ್ಷಣ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ವಿಜಯಪುರ ಇವರ ಸಹಯೋಗದಲ್ಲಿ ಪಾಲಕರ ಸಭೆ,ಪೋಷಣ್ ಮಾಸಾಚಾರಣೆ, ‘ಹೆಣ್ಣು ಮಗುವನ್ನು ರಕ್ಷಿಸಿ, ಹೆಣ್ಣು ಮಗುವನ್ನು ಓದಿಸಿ’ ಅಭಿಯಾನವನ್ನುಉದ್ಘಾಟಿಸಿ ಮಾತನಾಡಿದರು.ಹೆಣ್ಣು ಮಕ್ಕಳನ್ನು ಸಬಲೀಕರಣ ಮಾಡುವದೇ ಬೇಟಿ ಬಚಾವೊ,ಬೇಟಿ ಪಡಾವೋ ಯೋಜನೆ ಉದ್ದೇಶವಾಗಿದೆ ಎಂದು ಹೇಳಿದರು.ಹಿರಿಯ ಮೇಲ್ವಿಚಾರಕಿ ಪವಿತ್ರಾ ಪತ್ತಾರ ಮಾತನಾಡಿ,ಗರ್ಭಿಣಿಯರು, ಶಿಶುವಿನ ಬೆಳವಣಿಗೆ ಕುಂಠಿತ, ತೂಕ ಕೊರತೆ, ರಕ್ತಹೀನತೆ, ಕಡಿಮೆ ತೂಕದ ಶಿಶು ಸೇರಿದಂತೆ ಅಪೌಷ್ಟಿಕತೆ ಸಮಸ್ಯೆಯಿಂದ ಬಳಲುತ್ತಿರುವವರನ್ನು ಹೊರಕ್ಕೆ ತರಲು ಪೋಷಣ ಅಭಿಯಾನ ಪರಿಣಾಮಕಾರಿಯಾಗಿದೆ ಎಂದು ಹೇಳಿದರು.ಶಿಕ್ಷಕ ಸಂತೋಷ ಬಂಡೆ ಸಸಿಗೆ ನೀರುಣಿಸಿ ಮಾತನಾಡಿ,ಗಂಡು, ಹೆಣ್ಣಿನ ಅನುಪಾತ ಅವಲೋಕಿಸಿ ನಾವು ಎಚ್ಚೆತ್ತುಕೊಳ್ಳಬೇಕಿದೆ. ತನಗೆ ಗಂಡು ಮಗು ಬೇಕು ಎಂಬ ಆಸೆ…

Read More

ಸಿಎಂ ಆದ ಮೇಲೆ ಸಿದ್ದರಾಮಯ್ಯ ಹಿಟ್ಲರ್ ರೀತಿ ವರ್ತನೆ | ಅಲ್ಪಸಂಖ್ಯಾತರ ಓಲೈಕೆಗಾಗಿ ಪ್ರಜಾತಂತ್ರದ ಕಗ್ಗೊಲೆ | ಸಚಿವೆ ಶೋಭಾ ಆರೋಪ ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಇದೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾದ ಮೇಲೆ ಹಿಟ್ಲರ್ ಆಗಿದ್ದಾರೆ. ಬಿಜೆಪಿಯ ಸಂಸದರು ಮತ್ತು ಶಾಸಕರ ಮೇಲೆ ಎಫ್‍ಐಆರ್‌ಗಳು ದಾಖಲಾಗುತ್ತಿವೆ. ರಾಜ್ಯದ ಇತಿಹಾಸದಲ್ಲಿ ಮೊದಲ ಬಾರಿಗೆ ವಿಪಕ್ಷದ ನಾಯಕ ಹಾಗೂ ಕೇಂದ್ರದ ಸಚಿವರ ಮೇಲೆ ಎಫ್‍ಐಆರ್ ದಾಖಲಿಸಿದ್ದಾರೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕಿಡಿ ಕಾರಿದ್ದಾರೆ.ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೊಲೀಸ್ ಅಧಿಕಾರಿ ಪರಶುರಾಮ ಆತ್ಮಹತ್ಯೆ ಮಾಡಿಕೊಂಡಿದ್ದರೂ ಕಾಂಗ್ರೆಸ್ ಶಾಸಕರ ಮೇಲೆ ಕ್ರಮ ಆಗಲಿಲ್ಲ. ಮಾಜಿ ಸಚಿವ ನಾಗೇಂದ್ರ ಹಗರಣದಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ. ಆದರೆ ಎಸ್ಐಟಿ ಚಾರ್ಜ್​​ಶೀಟ್​​ನಲ್ಲಿ ಅವರ ಹೆಸರೇ ಇಲ್ಲ. ರಾಜ್ಯವನ್ನು ಏನು ಮಾಡಲು ಹೊರಟಿದ್ದೀರಿ ಸಿದ್ದರಾಮಯ್ಯನವರೇ ಎಂದು ಶೋಭಾ ಪ್ರಶ್ನಿಸಿದರು.ಕರ್ನಾಟಕವನ್ನು ನೀವೇನು ಮಾಡಲು ಹೊರಟಿದ್ದೀರಿ? ನಾಗಮಂಗಲದಲ್ಲಿ ಘಟನೆ ನಡೆಯಿತು. ಇತಿಹಾಸದಲ್ಲಿ ಮೊದಲ ಬಾರಿಗೆ ಕರ್ನಾಟಕದಲ್ಲಿ ಗಣೇಶ ಚತುರ್ಥಿಯ ಸಂದರ್ಭದಲ್ಲಿ ಗಣೇಶನನ್ನು…

Read More

ವಿಜಯಪುರದಲ್ಲಿ ಸಂಸ್ಕೃತಿ ಹಾಗೂ ಸ್ಚಚ್ಚತೆ ಸಂಗಮದ ಜಿಲ್ಲಾ ಯುವ ಮಹೋತ್ಸವ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಆರೋಗ್ಯ ಜೀವನದ ಭಾಗ್ಯ, ಸ್ವಚ್ಚತೆ ಆರೋಗ್ಯದ ಬಾಗಿಲು ಎಂದು ನವದೆಹಲಿಯ ಲಾಡಲಿ ಫೌಂಡೇಶನ್ ರಾಷ್ಟ್ರೀಯ ಸಲಹೆಗಾರ ಡಾ.ಜಾವೀದ ಜಮಾದಾರ ಹೇಳಿದರು.ನಗರದ ಡಾ.ಬಿ.ಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಸ್ಟ್ಯಾಂಡರ್ಡ್ ಚಾರ್ಟೆಡ್ ಸಿಎಸ್ ಆರ್ ಯೋಜನೆಯ ಪ್ರಾಯೋಜಕತ್ವ ಹಾಗೂ ನವದೆಹಲಿ ಲಾಡಲಿ ಫೌಂಡೇಶನ್, ಜಿಲ್ಲಾಡಳಿತ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಜಿಲ್ಲಾ ಯುವ ಮಹೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸ್ವಚ್ಚತೆ ಆರೋಗ್ಯದ ಬೀಗದ ಕೈ ಇದ್ದಂತೆ, ಹೀಗಾಗಿ ಸ್ವಚ್ಚತೆ ಅರಿವು ಮೂಡಿಸಲು ಲಾಡಲಿ ಫೌಂಡೇಶನ್ ೧೦೦ ಜಿಲ್ಲೆಗಳಲ್ಲಿ ಈ ಮಹೋತ್ಸವ ಆಯೋಜಿಸಿದೆ, ಸಂಸ್ಕತಿ ಹಾಗೂ ಸ್ವಚ್ಚತೆ ನಮ್ಮ ಜೀವನದ ಭಾಗವಾಗಬೇಕು, ಹೀಗಾಗಿ ನಮ್ಮ ದೇಶದ ಭವ್ಯ ಸಂಸ್ಕೃತಿ ಪ್ರತಿಬಿಂಬಿಸುವ ಕಾರ್ಯಕ್ರಮದ ಮೂಲಕ ಸ್ವಚ್ಚತೆಯ ಬಗ್ಗೆ ೧೦೦ ಜಿಲ್ಲೆಗಳಲ್ಲಿ ಯುವ ಮಹೋತ್ಸವ ಆಯೋಜಿಸಲಾಗುತ್ತಿದೆ, ವಿಜಯಪುರ ಜಿಲ್ಲೆಯಲ್ಲಿ ಈ ಕಾರ್ಯಕ್ರಮಕ್ಕೆ ವಿದ್ಯುಕ್ತ ಚಾಲನೆ ದೊರಕಿದೆ ಎಂದರು.ಸಮಾಜ ಸೇವೆಯ ಭಾಗವಾಗಿ ಪ್ರತಿಷ್ಠಾನ ವತಿಯಿಂದ ಈಗಾಗಲೇ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲೆಯ ಇಂಡಿ ಪಟ್ಟಣದ ರೈಲ್ವೆ ನಿಲ್ದಾಣದ ಹತ್ತಿರ ಗುರುವಾರ ನಡೆದ ಅಪಘಾತದಲ್ಲಿ 13 ಜನರಿಗೆ ಗಾಯಗೊಂಡಿದ್ದರು. ಇವರನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿತ್ತು. ಇವರಲ್ಲಿ ನಾಲ್ವರಿಗೆ ಗಂಭೀರ ಗಾಯಗಳಾಗಿದ್ದವು. ಅದರಲ್ಲಿ ಈಗ ಇಬ್ಬರು ಸಾವನ್ನಪ್ಪಿದ್ದಾರೆ.ವಿಜಯಪುರ ಆಸ್ಪತ್ರೆಗೆ ರವಾನಿಸಲಾಗಿದ್ದ ಆಕಾಶ ಚವ್ಹಾಣ ಹಾಗೂ ರವಿ ಚವ್ಹಾಣ ಮೃತಪಟ್ಟಿದ್ದಾರೆ. ಇನ್ನೂ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ವಿಜಯಪುರ ಎಸ್ಪಿ ಹೃಷಿಕೇಶ್ ಸೋನಾವಣೆ ತಿಳಿಸಿದ್ದಾರೆ.ಸರಣಿ ಅಪಘಾತದಲ್ಲಿ ಸುರೇಖಾ ಚವ್ಹಾಣ, ಶೀರುಪವಾರ, ಶಂಕರ ಪವಾರ, ಇಂದು ಪವಾರ, ಮಾಧವಿ ಪವಾರ, ಮಾಯಾ ಪವಾರ, ಮಧು ಪವಾರ, ಲಕ್ಷ್ಮೀ ಪವಾರ, ಸವಿತಾ ಚವ್ಹಾಣ, ಮಲ್ಲಿ ಶಂಕರ ಪವಾರ, ಸತ್ಯಬಾಯಿ ಶಂಕರ ಪವಾರ, ರಾಜವೀರ ಶಂಕರ ಪವಾರ ಗಾಯಗೊಂಡವರು. ಎಲ್ಲರೂ ಇಂಡಿಯವರೇ ಆಗಿದ್ದಾರೆ. ಸ್ಥಳಕ್ಕೆ ಎಸ್.ಪಿ ಋಷಿಕೇಶ ಸೋನವನೆ, ಡಿ.ವೈ.ಎಸ್.ಪಿ ಜಗದೀಶ ಎಚ್.ಎಸ್., ಸಿಪಿಐ ರತನಕುಮಾರ ಜಿರಗಿಹಾಳ, ಮಲ್ಲಿಕಾರ್ಜುನ ದಪ್ಪಿನ ಭೇಟಿ ನೀಡಿಪರಿಶೀಲಿಸಿದ್ದಾರೆ.

Read More

ಮಲಘಾಣ: ತಂದೆತಾಯಿ ಸ್ಮರಣಾರ್ಥ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಬಸವನಬಾಗೇವಾಡಿ ತಾಲ್ಲೂಕಿನ ಮಲಘಾಣದ ನಿವೃತ್ತ ಶಿಕ್ಷಕ‌ ಲಿಂಗೈಕ್ಯ ಹಣಮಂತಗೌಡ ತಿಮ್ಮನಗೌಡ ಬಿರಾದಾರ ಹಾಗೂ ಅವರ ಧರ್ಮಪತ್ನಿ ಲಿಂ. ಕಸ್ತೂರಿ ಅವರ ಸ್ಮರಣಾರ್ಥ ಶಿಕ್ಷಣಪ್ರೇಮಿಗಳಾಗಿರುವ ಅವರ ಮೂವರು ಮಕ್ಕಳು ಕಳೆದ 6 ವರ್ಷಗಳಿಂದ ಗ್ರಾಮದ ಬಡ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ನೀಡುವ ಪರಂಪರೆ ಮುಂದುವರೆಸಿಕೊಂಡು ಬಂದಿದ್ದು ಪ್ರೇರಣೀಯ ಸೇವೆಗೈಯುತ್ತಿದ್ದಾರೆ ಎಂದು ನಿವೃತ್ತ ಶಿಕ್ಷಕ ಎಸ್.ಎಸ್.ಗರಸಂಗಿ ಶ್ಲಾಘನೆ ವ್ಯಕ್ತಪಡಿಸಿದರು. ಮಲಘಾಣದ ಆರಾಧ್ಯದೈವ ಸದ್ಗುರು ಸದಾನಂದ ಶಿವಯೋಗಿಗಳ 52 ನೇ ಪುಣ್ಯಾರಾಧನೆ ಹಾಗೂ ಜಾತ್ರೋತ್ಸವ ನಿಮಿತ್ತ ಶುಕ್ರವಾರ ಶಿವಯೋಗಾಶ್ರಮದಲ್ಲಿ ಜರುಗಿದ ಧರ್ಮಸಭೆಯಲ್ಲಿ ಪ್ರತಿಭಾನ್ವಿತ ಮಕ್ಕಳಿಗೆ ಪ್ರೋತ್ಸಾಹಧನ ವಿತರಿಸುವ ವೇಳೆ ಅವರು ಮಾತನಾಡಿದರು.ನಿವೃತ್ತ ಶಿಕ್ಷಕ ಲಿಂ. ಹಣಮಂತಗೌಡ ತಿಮ್ಮನಗೌಡ ಬಿರಾದಾರ ಶಿಕ್ಷಕರಾಗಿದ್ದರೂ ಜೀವನದಲ್ಲಿ ಕಷ್ಟಪಟ್ಟು ಅವರ ಮೂವರು ಮಕ್ಕಳಾದ ಡಾ.ಮಹಾಂತೇಶ ಬಿರಾದಾರ, ಪಾಂಡುರಂಗ ಬಿರಾದಾರ ಹಾಗೂ ಡಾ.ವಾಸಂತಿ ಪಾಟೀಲ್ ಅವರಿಗೆ ನೈತಿಕ, ಮೌಲ್ಯಯುತ ಶಿಕ್ಷಣ ನೀಡಿ ಇಂದು ಎಲ್ಲರೂ ನೌಕರಸ್ಥರಾಗಿ ಉನ್ನತ ಸ್ಥಾನಮಾನದಲ್ಲಿದ್ದಾರೆ. ಸದ್ಯ ಮೂವರು…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಗ್ರಾಮ ಪಂಚಾಯತಿ ಪಿಡಿಓ ಹಾಗೂ ಪಂಚಾಯತ ಅಧ್ಯಕ್ಷ ಮಗನ ಜಾತಿನಿಂದನೆ ಮಾಡಿ ಗೂಂಡಾಗಿರಿ ಮಾಡಿರುವ ಅಧಿಕಾರಿ ಮತ್ತು ಅಧ್ಯಕ್ಷೆಯನ್ನು ಅಮಾನತ್ತು ಮಾಡಬೇಕೆಂದು ಒತ್ತಾಯಿಸಿ ಪರಿಶಿಷ್ಟ ಜಾತಿ ಸಂಘಟನೆ ವತಿಯಿಂದ ಅಪರ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿ ಅವರಿಗೆ ಮನವಿ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ಸೇವಾಲಾಲ ಸೇನೆಯ ಜಿಲ್ಲಾಧ್ಯಕ್ಷ ಸುರೇಶ ಚವ್ಹಾಣ ಮಾತನಾಡಿ, ಮುಳಸಾವಳಗಿ ಗ್ರಾಪಂ ಸದಸ್ಯರಾಜು ಮೋತಿಲಾಲ ರಾಠೋಡ ಇವರಿಗೆ ಮುಳಸಾವಳಗಿ ಪಿಡಿಓ ಗೊಲ್ಲಾಳಪ್ಪಾ ಕನ್ನೊಳ್ಳಿ ಹಾಗೂ ಗ್ರಾಮ ಪಂಚಾಯತಿ ಅಧ್ಯಕ್ಷೆಯ ಮಗ ಗುರುರಾಜ ಶಾಂತಪ್ಪ ಅಕ್ಕಳವಾಡಿ ಇವರು ಜಾತಿ ನಿಂದನೆ ಮಾಡಿ ತಾಲೂಕು ಪಂಚಾಯತಿ ಕಾರ್ಯನಿರ್ವಹಕ ಅಧಿಕಾರಿ ಮುಂದೆಯೇ ಹೊಡಿ-ಬಡಿ ಮಾಡಿದ್ದು ಈಗಾಗಲೇ ಅದು ಪ್ರಕರಣ ದಾಖಲಾಗಿದೆ. ಆದ್ದರಿಂದ ಸದರಿ ಜನಪ್ರತಿನಿಧಿಯ ಮೇಲೆ ಹಲ್ಲೆ ಮಾಡಿ ಜಾತಿನಿಂದನೆ ಮಾಡಿರುವಂತಹ ಗೊಲ್ಲಾಳಪ್ಪ ಕನ್ನೊಳ್ಳಿ ಪಿಡಿಓ ಹಾಗೂ ತನ್ನ ಅಧಿಕಾರ ದುರ್ಬಳಕೆ ಮಾಡಿ ತನ್ನ ಮಗನ ಕೈಯಲ್ಲಿ ಅಧಿಕಾರ ನಡೆಸಿರುವಂತಹ ಗ್ರಾಪಂ ಅಧ್ಯಕ್ಷೆಯ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.ಸೂಕ್ತ…

Read More

ಉದಯರಶ್ಮಿ ದಿನಪತ್ರಿಕೆ ಚಿಮ್ಮಡ: ಸಮಾಜಕ್ಕೆ ಆರೋಗ್ಯಪೂರ್ಣ ತಾಯಿ , ಮಗುವನ್ನು ನೀಡುವ ನಿಟ್ಟಿನಲ್ಲಿ ಸರಕಾರ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದ್ದು ಅವುಗಳ ಸದುಪಯೋಗ ಪಡೆದುಕೊಂಡು ಆರೋಗ್ಯವಂತರಾಗಬೇಕೆಂದು ಗ್ರಾ.ಪಂ. ಅಭಿವೃದ್ದಿ ಅಧಿಕಾರಿ ಶಿವಾನಂದ ಬಿರಾದರ ಹೇಳಿದರು.ಗ್ರಾಮದ ಶ್ರೀ ಬನಶಂಕರಿದೇವಿ ಕಲ್ಯಾಣ ಮಂಟಪದಲ್ಲಿ ಗುರುವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ತಾಲೂಕು ಆಡಳಿತ, ತಾಲುಕಾ ಪಂಚಾಯತ್, ಶಿಶು ಅಭಿವೃದ್ದಿ ಯೋಜನಾ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ಪೋಷಣ್ ಅಭಿಯಾನ ಯೋಜನೆಯಡಿ ಹಮ್ಮಿಕೊಂಡ “ಪೋಷಣ್ ಮಾಸಾಚರಣೆ” ಕಾರ್ಯಕ್ರಮದ ಉದ್ಘಾಟಣೆ ನೆರವೇರಿಸಿ ಮಾತನಾಡಿದ ಅವರು, ಈ ಹಿಂದೆ ಹೆರಿಗೆ ಸಮಯದಲ್ಲಿ ತಾಯಿ ಅಥವಾ ಮಗು ಸಾವನ್ನಪ್ಪುವ ಪ್ರಕರಣ ಹೆಚ್ಚುತಿದ್ದವು ಈಗ ಮಹಿಳೆ ಗರ್ಭವತಿಯಾದಾಗಿನಿಂದ ಜನಿಸಿದ ಮಗು ಪ್ರೌಢಾವಸ್ತೆ ತಲುಪುವವರೆಗೂ ಸರಕಾರ ಪ್ರತೀ ಹಂತದಲ್ಲಿ ಮೊಟ್ಟೆ, ಹಾಲು ಸೇರಿದಂತೆ ಪೋಷಕಾಂಶಯುಕ್ತ ಆಹಾರ ನೀಡುತ್ತಿದೆ ಅಲ್ಲದೇ ಕಾಲಕಾಲಕ್ಕೆ ಪರೀಕ್ಷೆ ಮಾರ್ಗದರ್ಶನ ನೀಡುತಿದ್ದು ಇದರಿಂದ ಆಹಾರ ಕೊರತೆಯ ಮರಣ ಪ್ರಮಾಣ ಕಡಿಮೆಯಾಗಿದೆ ಎಂದರು.ಶಿಕ್ಷಣ ಇಲಾಖೆಯ ಸಿಆರ್‌ಸಿ ಶ್ರೀಮತಿ ಗದ್ರಾಕ್ಷಾಯಿಣಿ ಮಂಡಿ ಮಾತನಾಡಿ…

Read More